ನೋವು-ನಲಿವು

ನೋವು-ನಲಿವು

ಕವನ

ಜನ್ಮ ನೀಡುವಾಗ ತಾಯಿಗೆ ಆದಂತ ನೋವು
ಕಂದಮ್ಮನ ದನಿ ಕೇಳಿ ಆಯಿತು ನಲಿವು

ಮೊದಲ ದಿನ ಶಾಲೆಯಲಿ ಕಂದಮ್ಮನಿಗೆ ನೋವು
ಎರಡಕ್ಷರ ಕಲಿತ ಮೇಲೆ ಸಂಭ್ರಮದ ನಲಿವು

ಕಲ್ಲು ಮುಳ್ಳಿನ ಹಾದಿ ಕಾಲಿಗೆ ತಂದ ನೋವು
ಹಾದಿ ಮುಟ್ಟಿದ ಮೇಲೆ ಮನದಲಾಯಿತು ನಲಿವು

ಹಿರಿಯರ ಬುದ್ದಿವಾದ ಮನಕೆ ಹಿರಿತದ ನೋವು
ಅದರ ಫಲ ಫಲಿಸಿದಾಗ ತಂದ ಹೆಮ್ಮೆಯ ನಲಿವು

ಸಂಗಾತಿಯ ಬರುವಿಕೆಗೆ ತಪತಪಿಸಿದಂತ ನೋವು
ಅರ್ಧಾಂಗಿಯ ಆಗಮದಿ ದಾಂಪತ್ಯದ ನಲಿವು

ಸಂಸಾರದ ಸಾಗರದಿ ಏಳು ಬೀಳಿನ ನೋವು
ಮನೆ ಮಕ್ಕಳಾ ಪ್ರೀತಿ ತರುವುದು ನಲಿವು

ವಿಭಕ್ತ ಕುಟುಂಬಗಳಿಂದ ಆಗುತ್ತಿರುವ ನೋವು
ಮತ್ತೆ ಕಾಣುವುದೆಂದೋ ವಿಭಕ್ತ ಕುಟುಂಬದ ನಲಿವು

ಸಕಲ ಜೀವ ರಾಶಿಗಳಿಗುಂಟು ಸಾವೆಂಬ ನೋವು
ಉದಯಿಸುವುದು ಮತ್ತೊಮ್ಮೆ ಹುಟ್ಟೆಂಬ ನಲಿವು
ಜಗದೊಳೆಲ್ಲರಿಗುಂಟು ನೋವು-ನಲಿವು
ಅದಕೆ ಎಲ್ಲರು ಕಾಣಿ ನೋವಲ್ಲು ನಲಿವು
ಸಕು

Comments