ಪಬ್ಲಿಕ್ಕಾಗಿ ಹುಟ್ಟು ಹಬ್ಬ

ಪಬ್ಲಿಕ್ಕಾಗಿ ಹುಟ್ಟು ಹಬ್ಬ

ನಿಮಗೆ  ನಾಗರಾಜಣ್ಣ  ಗೊತ್ತೆ?  ಇ ಲ್ಲವೆ? ಡೋಂಟ್  ವರಿ. ನನಗೂ ಗೊತ್ತಿಲ್ಲ.  ಆದರೆ    ಅವರು  ಇ ತ್ತೀಚಿಗೆ  ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.  ಹೇಗೆ ತಿಳಿಯಿತು ಎಂದಿರಾ?  ಅದೇ, ನಮ್ಮ  ಬಡಾವಣೆಯಲ್ಲಿ   ಅವರ ಚಿತ್ರ   ಇ ರುವ   ಫ್ಲೆಕ್ಞಿ ಬೊರ್ಡ್ ಗಳು  ರಾರಾಜಿಸುತ್ತಿದ್ದವು.  ಅವು  ಅವರ ಹುಟ್ಟುಹಬ್ಬಕ್ಕೆ  ಶುಭಾಶಯ ಕೋರುತ್ತಿದ್ದವು.  ಅವರಿಗೆ   ಎ ಷ್ಟು  ವರ್ಷ?  ಗೊತ್ತಿಲ್ಲ.  ಏಕೆಂದರೆ ಹುಟ್ಟುಹಬ್ಬದ ಶುಬಾಶಯಗಳು   ಎಂದಷ್ಟೇ     ಅವು  ಸಾರುತ್ತಿದ್ದವು.  ಅಂದರೆ   ಅವರಿಗೆ ತಮ್ಮ ವಯಸ್ಸನ್ನು ತಿಳಿಸಲುನಸಂಕೋಚವೆ? ಗೊತ್ತಿಲ್ಲ. ಆದರೆ ಪಬ್ಲಿಕ್ಕಾಗಿ  ಹುಟ್ಟುಹಬ್ಬ ಆಚರಿಸಿಕೊಳ್ಳಲು  ಅವರಿಗೆ ಸಂಕೋಚ   ಇದ್ದಂತಿರಲಿಲ್ಲ.  ಇರಲಿ.
 
ನಾಗರಾಜಣ್ಣನ ಕತೆ ಬಿಡಿ. ಪ್ರಶಾಂತ   ಕಲ್ಲೂರ,  ಎಂ, ಎಂ. ಸುರೇಶ, ಕಾಂತೇಗೌಡ   ಇವರನ್ನು ನೋಡಿ. ನನ್ನಂತೆ  ನಿಮಗೂ  ಅವರ ಬಗ್ಗೆ   ಏ ನೂ ಗೊತ್ತಿಲ್ಲ   ಎಂದು ನನಗೆ  ಗೊತ್ತು. ಆದರೆ  ನಾಗಣ್ಣನಂತೆ     ಇವರೂ ಸಹ  ಹುಟ್ಟುಹಬ್ಬವನ್ನು    ಅದೇ ರೀತಿ   ಆಚರಿಸಿಕೊಂಡರು.  ಅವರ ವಯಸ್ಸು ಸಹ  ತಿಳಿಯಲಾಗಲಿಲ್ಲ.  ಏಕೆಂದರೆ ಆ ವಿಷಯ  ಫ್ಲೆಕ್ಸಿಗಳಲ್ಲಿ   ಇರಲಿಲ್ಲ. ಹಾಗಾಗಿ   ಅವರ  ವಯಸ್ಸು   ಎಷ್ಟು   ಇರಬಹುದು   ಎಂದು  ನೀವೇ   ಬೇಕಾದರೆ   ಊಹಿಸಿಕೊಳ್ಳಿ.. ಆದರೆ  ಅವರ  ಹುಟ್ಟುಹಬ್ಬ ಆಚರಿಸಲಾಯಿತು   ಎಂಬುದು  ಎಲ್ಲೆಲ್ಲೂ ರಾರಾಜಿಸುತ್ತಿದ್ದ ಆ ಫ್ಲೆಕ್ಸಿ  ಬೊರ್ಡ್ಗಗಳಷ್ಟೇ  ನಿಜ.
 
ಆದರೆ ನನಗೊಂದು ಸಮಸ್ಯೆ.  ಅಂತಹ ಫ್ಲೆಕ್ಸಿ  ಬೊರ್ಡ್ಗಗಳಲ್ಲಿ ಹತ್ತು ಹಲವಾರು ಮುಖಗಳು ರಾರಾಜಿಸುತ್ತವೆ.  ಅವುಗಲಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಲುತ್ತಿರುವವರು ಯಾರು?  ಅವರಿಗೆ ಶುಭಾಶಯ ಕೋರುತ್ತಿರುವವರು ಯಾರು?  ಎಂಬುದು  ಎಷ್ಟೋ ವೇಳೆ ನನ್ನಂತಹವರಿಗೆ  ತಿಲಿಯುವುದೇ  ಇಲ್ಲ. ತಿಳಿದು   ಏನಾಗಬೇಕಿದೆ   ಎಂದಿರಾ?  ನಿಜವೇ. ಹಾಗಿದ್ದಲ್ಲಿ  ಆ ಬೋರ್ಡ್ ಹಾಕಿದ್ದಾದರೂ ಏಕೆ?  ಮತ್ತೆ ಹುಟ್ಟುಹಬ್ಬ ಆಯಿತು ಎಂದು ತಿಳಿಸುವುದಾದರೂ ಹೇಗೆ ಎಂದಿರಾ? ಗುಡ್ ಆನ್ಸರ್. ಆದರೆ ಸ್ವಾಮಿ, ನನಗೆ ಅದನ್ನು ತಿಳಿದುಕೊಂಡು ಏನು ಮಾಡಬೇಕಿದೆ? ಇದರಿಂದ ನನ್ನ ಸಾಮಾನ್ಯ ಜ್ಞಾನ, ಅಂದರೆ ಜನರಲ್ ನಾಲೆಡ್ಜ್, ಹೆಚ್ಚುವುದೇ? ಅಮಿತಾಬ್ ಬಚ್ಚನ್ನೋ, ಪುನೀತನೋ ನನಗೆ ಕರೋಡ್ ಪತಿಯಲ್ಲಿ ಇದರ ಬಗ್ಗೆ ಪ್ರಶ್ನೆ ಹಾಕುವರೆ?
 
ನನಗೆ ಇನ್ನೂ ಒಂದು ಡೌಟ್ ಇದೆ. ಅದೇನಪ್ಪಾ ಎಂದರೆ ಈ ಬೋರ್ಡ್‍ಗಳ ವ್ಯವಹಾರದ ಹಿಂದೆ ಏನಾದರೂ ಸೀಕ್ರೇಟ್ ಡೀಲ್ ಇರುವುದೇ? ಅಂದರೆ ಹೀಗೆ ಬರ್ಥ್‍ಡೇ ಆಚರಿಸಿಕೊಂಡವರಿಗೂ ಅದನ್ನು ಆಚರಿಸಿದವರಿಗೂ - ಅಂದರೆ ಬಹಿರಂಗವಾಗಿ ಶುಭ ಕೋರಿದವರಿಗೂ - ಏನಾದರೂ ಒಪ್ಪಂದ ಆಗಿರಬಹುದೆ? ನನ್ನ ಬೆನ್ನ ನೀನು ತಟ್ಟು, ನಿನ್ನ ಬೆನ್ನನ್ನು ನಾನು ನಾಳೆ ತಟ್ಟುವೆ  ಎನ್ನುವ ಡೀಲಷ್ಟೆಯೋ ಅಥವಾ ಬೇರೆ ಏನಾದರೂ ಇರಬಹುದು? ಗೊತ್ತಿಲ್ಲ. ಆದರೆ ತಿಳಿಯಲು ಆಸಕ್ತಿಯಂತೂ ಇದೆ. ಅದು ಕೆಲವು ಬಲ್ಲ ಮೂಲಗಳು  ಆಫ್ ದಿ ರಿಕಾರ್ಡ್ ಹೇಳುವಂತೆ ಅನೇಕ ವೇಳೆ ಇಂತಹ ಬೋರ್ಡ್‍ಗಳಿಗೆ ತಗಲುವ ಖರ್ಚನ್ನು ಬರ್ಥ್‍ಡೆ ಬಾಯ್ ವಹಿಸಿಕೊಂಡಿರುತ್ತಾರೆ. ಆದರೆ ಇದನ್ನು ನೇತುಹಾಕಿದ ಶ್ರೇಯಸ್ಸು ಮಾತ್ರ ಅವನ ಹಿತೈಷಿಗಳಿಗೆ ಸೇರಿರುತ್ತದೆ. ಏಕೆಂದರೆ ಆ ಬೋರ್ಡ್ ಪ್ರಕಾರ ಅವರು ತಾನೆ ಶುಭ ಹಾರೈಸುತ್ತಿರುವುದು!  ಇವನಿಗೆ ಬಿಲ್, ಅವರಿಗೆ ಕ್ರೆಡಿಟ್, ಹೀಗೇಕೆ?
 
ಈ ಬೋರ್ಡ್‍ಗಳಿಂದ ನಗರದ ಸೌಂದರ್ಯ ಹಾಳಾಗುತ್ತದೆ ಎಂದು ಅನೇಕರು ವಾದಿಸುತ್ತಾರೆ. ಇರಬಹುದು ಆದರೆ ನಗರದ ಸೌಂದರ್ಯ ಹಾಳಾಗಲು ಇದೊಂದೇ ಕಾರಣವೇ? ಇದೂ ಒಂದು ಕಾರಣ ಅಷ್ಟೆ. ಬೋರ್ಡೇನು, ಬೋರ್ಡಿನಲ್ಲಿ  ರಾರಾಜಿಸುವವರಿಂದಲೂ ನಗರ ಸೌಂದರ್ಯ ಹಾಳಾಗುತ್ತದೆ. ಹಾಳಾಗುತ್ತಿದೆ.  ಆದರೆ ಈ ಬ್ಯುಸಿನೆಸ್‍ನಿಂದ ಅನೇಕರಿಗೆ ಉದ್ಯೋಗ ಸಿಗುತ್ತಿದೆ. ಪ್ರಿಂಟರ್‍ಗಳಂತೂ ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿರುವುದನ್ನು ಖುಷಿಯಿಂದ ನೋಡುತ್ತಿದ್ದಾರೆ. ಒಂದಿನ ಕಪ್ಪು ಹಣ ಹೊರಬರಲೂ ಸಹ ಇದು ನೆರವಾಗುತ್ತದೆ. ನೋಡಿದಿರಾ ಇದರ ಒನ್ನೊಂದು ಮಗ್ಗಲು.
 
ಇದೆಲ್ಲಾ ಬಿಡಿ.  ಇದರ ಕುರಿತಾದ ಒಂದು ವಿಚಿತ್ರ ಗಮನಿಸಿದ್ದೀರಾ? ಯಾವುದೋ ಲೋಕಲ್  ನಾಯಕಿಯ ಹುಟ್ಟುಹಬ್ಬಕ್ಕೆ ಸಂಬಂಧಿಸಿದಂತೆ ಬೋರ್ಡುಗಳು ನಗರದಲ್ಲಿ ನೇತಾಡುತ್ತಿಲ್ಲ. ನಿಜ. ಹೆಂಗಸು ತನ್ನ ವಯಸ್ಸು ತಿಳಿಸಲು ಇಷ್ಟ ಪಡಳು. ಆದರೆ ನಮ್ಮ ನಾಗರಾಜಣ್ಣನಂತೆ ವಯಸ್ಸು ಹಾಕದೆ ಹುಟ್ಟುಹಬ್ಬ ಹೀಗೆ ಬೋರ್ಡುಗಳ ಮೂಲಕ ಆಚರಿಸಿಕೊಳ್ಳಬಹುದಲ್ಲವೆ? ಈಗಂತೂ ಮಹಿಳಾ ಮೀಸಲಾತಿ ಬಂದ ಮೇಲೆ ನಾಯಕಿಯರ ಸಂಖ್ಯೆ ಹೆಚ್ಚುತ್ತಿದೆ. ಅಂದಮೇಲೆ ಬೋರ್ಡುಗಳೂ ಬರಬೇಕಲ್ಲವೇ?
 
ಬೋರ್ಡು ಹಾಕಿಸಿಕೊಳ್ಳಲು ಕಂಭಗಳು ಕಾಯುತ್ತಿವೆ.