ಪುರಾಣೇತಿಹಾಸಗಳ ಯುಗ

ಪುರಾಣೇತಿಹಾಸಗಳ ಯುಗ

ಕವನ

 

ಎಷ್ಟೊಂದು ವಿಚಿತ್ರ 

ಈ ಪುರಾಣೇತಿಹಾಸಗಳ ಯುಗ 

 

ಭರತನನು ಜಯಿಸಿದ ಬಾಹುಬಲಿ

ಜೀವನದ ನಶ್ವರತೆಯನಿರಿತು 

ಎಲ್ಲವನು ಕಳಚಿ ಗೊಮ್ಮಟನಾದ 

 

ಇಂದ್ರ ಪದವಿಯ ಗೆದ್ದ ನಹುಷ 

ಇಂದ್ರನರಸಿ ಶಚಿದೇವಿಯನೆ ಬಯಸಿದ 

 

ಜಗದ ಸಾವು ನೋವು ಕಂಡ ಸಿದ್ಧಾರ್ಥ 

ರಾಜ ಪದವಿಯ ತ್ಯಜಿಸಿ ಬುದ್ಧನಾದ 

 

ಭೋಗ ಲಾಲಸೆ ತ್ಯಜಿಸದ ಯಯಾತಿ

ಮಗ ಪುರುವಿನ ತಾರುಣ್ಯವನು ಪಡೆದ 

 

ತಂದೆ ಶಂತನುವಿನ ಸುಖಕ್ಕಾಗಿ

ಭೀಷ್ಮ ಆಜನ್ಮ ಬ್ರಹ್ಮಚಾರಿಯಾಗುಳಿದ

 

ಪುರಾಣೇತಿಹಾಸಗಳ ತುಂಬ 

ತ್ಯಾಗ ಭೋಗ ಲಾಲಸೆಗಳ ಕಥಾನಕಗಳೆ

Comments