19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪ್ರಳಯ ....ಒಂದಷ್ಟು ಚಿಂತನೆ.

June 11, 2012 - 10:26pm
Prakash Narasimhaiya


 
ಡಿಸೆಂಬರ್ 21, 2012 ರಂದು ಈ ಜಗತ್ತು ಮುಳುಗಲಿದೆ, ಎಲ್ಲಿ ನೋಡಿದರು ನೀರು, ಈ ಜಲಪ್ರಳಯದಲ್ಲಿ ಹಿಮಾಲಯದ ಮೌಂಟ್  ಎವೆರೆಸ್ಟ್ ಮೇಲೆ ಹರಿಯುವಷ್ಟು ಪ್ರಮಾಣದಲ್ಲಿ ನೀರು ಉಕ್ಕುತ್ತದೆ, ಎಂದು ಕೆಲವರ ಅಭಿಪ್ರಾಯ.  ಸೌರಮಂಡಲದಲ್ಲಿ ಭೂಮಿಯ ಗಾತ್ರಕ್ಕಿಂತ ಆರೆಂಟು ಪಟ್ಟು ದೊಡ್ಡದಿರುವ ದೈತ್ಯ ಗ್ರಹವೊಂದು ಭೂಮಿಯ ಮೇಲೆ ಅಪ್ಪಳಿಸಲಿದೆ ; ಭೂಮಿಯ ಗುರುತು ಸಿಗದ ಹಾಗೆ ಕಣ್ಮರೆಯಾಗುತ್ತದೆ ಎಂಬುದು ಕೆಲವರ ಅಭಿಪ್ರಾಯ.   ದೇವರ ಮತ್ತು ಸೈತಾನನ ನಡುವೆ ಕಾಳಗ ಕೊನೆಗೊಳ್ಳಲಿದೆ ಎನ್ನುವುದು ಬೈಬಲ್ ನ ಅಭಿಮತ.  ಭೂಮಿಯು ತನ್ನ ಗುರುತ್ವಾಕರ್ಷಣೆ ಕಳೆದುಕೊಂಡು ಸೂರ್ಯನ ಚಲನೆ ಅಸ್ಥವಸ್ತ ವಾಗಿ  ಭೂಮಿಯ ವಿನಾಶ ಖಂಡಿತ ಎನ್ನುವುದು ಚೀನಿಯ ಸಿದ್ಧಾಂತ.  ಇನ್ನೂ ಹೀಗೆ ಹಲವು ಹದಿನೆಂಟು ರೀತಿಯಲ್ಲಿ ಪ್ರಳಯದ ವಿವರಣೆ ನಡೆಯುತ್ತಿದೆ.
 
ಈ ವಿಚಾರವನ್ನು ಬಂಡವಾಳ ಮಾಡಿಕೊಂಡು ಹಲವಾರು ಪ್ರಚಾರ ಮಾಧ್ಯಮ ಸಂಸ್ಥೆಗಳು ಪುಸ್ತಕ, ಸಿ ಡಿ, ಡಿ ವಿ ಡಿ ಗಳನ್ನೂ ಬಿಡುಗಡೆ ಮಾಡಿ ಜನರಿಗೆ ಮತ್ತಷ್ಟು ನಡುಕ ಹುಟ್ಟಿಸಿದ್ದಾರೆ.  ವೆಬ್ ಸೈಟ್ ಗಳು ಹಲವಾರು ವಿಚಾರಗಳನ್ನು ಕಲೆಹಾಕಿ ವರ್ಣರಂಜಿತವಾಗಿ ಬಿಂಬಿಸಿದೆ. " 2012 ರ ನಂತರ ಪ್ರಪಂಚದ ಕೊನೆ " ಎಂಬ ಸಿನಿಮಾ ಕೂಡ ಬಿಡುಗಡೆಯಾಗಿದೆ. ಇವೆಲ್ಲವನ್ನೂ ಓದಿ, ನೋಡಿದ ಮೇಲೆ ಯಾರಿಗೆ ಆದರು ಹೆದರಿಕೆ ಆಗುವುದು ಸಹಜ.  ಆದರೂ, ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಇದೆಲ್ಲ ಸತ್ಯವೇ?  ಇದನ್ನು ನಂಬಬಹುದೇ?  ಎಂಬುದು ತಲೆಯಲ್ಲಿ ಸುಳಿಯುತ್ತದೆ.  ಕೆಲವರು ಇಂತಹ ವಿಚಾರ ಬಂದಾಗ " ಇವೆಲ್ಲ ಬರಿ ಡೋಂಗಿ, ಒಂದಿಷ್ಟು ಕಟ್ಟು ಕಥೆ ಕಣ್ರೀ " ಎಂದು ತೇಲಿಸಿ ಬಿಡುತ್ತಾರೆ.  ಆದರೂ,  ಜನಸಾಮಾನ್ಯರಲ್ಲಿ  ಒಂದು ರೀತಿಯ ಭ್ರಾಂತಿ  ಹುಟ್ಟುತ್ತದೆ.
 
ಇಂತಹ ಒಂದು ಸಂಧರ್ಭದಲ್ಲಿ ಭಾರತೀಯ ಕಾಲ ನಿರ್ಣಯ ಏನು ಹೇಳುತ್ತದೆ? ಸ್ವಲ್ಪ ಗಮನಿಸೋಣ.  ಸೃಷ್ಟಿಯ ಆದಿಯಿಂದ ಅಂತ್ಯದವರೆಗೆ ಕಾಲದ ವಿಸ್ತಾರ.  ಅತ್ಯಂತ ಸೂಕ್ಷ್ಮವಾದ ಅಣುವೆ ಇರಲಿ, ಅತ್ಯಂತ ಮಹತ್ತಾದ ಲೋಕವೇ ಇರಲಿ,  ಇವೆಲ್ಲವೂ ಈ ಕಾಲದ ಗಣನೆಗೆ ಒಳಪಟ್ಟಿವೆ.  ಒಂದು ಕ್ಷಣದಿಂದ ಹಿಡಿದು ಯುಗಯುಗಗಳವರೆಗೆ  ಈ ಗಣನೆ ನಿಖರವಾಗಿದೆ. ನಾವೆಲ್ಲಾ ಬಾಯಿಪಾಟ ಮಾಡಿದ ಮಗ್ಗಿಯಷ್ಟೇ ಸರಳವಾಗಿರುವ ಈ ಕಾಲ ಚಕ್ರ-- ಕ್ಷಣ, ಚುರುಕಾ, ವಿಘಳಿಗೆ, ಘಳಿಗೆ, ದಿನ, ಮಾಸ, ವರ್ಷ,ಸಂವತ್ಸರ ಮತ್ತು ಯುಗ ಹೀಗೆ ಸಾಗುತ್ತದೆ.   ಇದು ಒಂದು ಕಾಲದ ಆವರ್ತನ.   ಈ ಆವರ್ತನಗಳಿಗೆ ಯಾವುದೇ ವಸ್ತು, ವ್ಯಕ್ತಿ, ಅಥವಾ ಶಕ್ತಿ ಸಿಲುಕಿರಲಿ ಅದು ಈ ಕಾಲದೊಂದಿಗೆ ಸುತ್ತಲೇ ಬೇಕು.  ಜನನ- ಜೀವನ-ಮರಣ ಈ ಕ್ರಮಾವರ್ತನೆಗೆ ಒಳಗಾಗಲೇ ಬೇಕು.  ಅತ್ಯಲ್ಪಕಾಲ ಬದುಕುವ ಜೀವವೇ ಆಗಲಿ, ಕೋಟ್ಯಂತರ ವರ್ಷಗಳ ಕಾಲ ಬದುಕುವ ವಸ್ತು ಅಥವಾ ಜೀವವೇ ಆಗಲಿ, ಈ ಆವರ್ತನೆಯಿಂದ ಹೊರತಲ್ಲ.  ಹುಟ್ಟಿದ್ದು ಸಾಯಲೆಬೇಕೆಂಬುದು  ಸೃಷ್ಟಿಯ ನಿಯಮ. ಎಲ್ಲವು ಲಯವಾದಾಗ ಉಳಿಯುವುದು ಶೂನ್ಯ ಮಾತ್ರ- ನಿಶೂನ್ಯ.  ಇದೇ ಬಾಹ್ಯ ಅಂತಃಕರಣಗಳಿಗೆ ನಿಲುಕದ ಅಗೋಚರ ಅದಮ್ಯನಾದ ಪರಮಾತ್ಮ.
 
ಕೃತಯುಗ, ತ್ರೇತಾಯುಗ, ದ್ವಾಪರಯುಗ, ಮುಗಿಸಿ ಕಲಿಯುಗಕ್ಕೆ ಕಾಲಿರಿಸಿರುವ ನಾವು, ನಾಲ್ಕು ಪಾದವಿರುವ ಕಲಿಯುಗದ ಪ್ರಥಮಪಾದದ ಹತ್ತನೇ ಒಂದು ಭಾಗದಲ್ಲಿ ಇದ್ದೇವೆ.  ಒಂದು ಲೆಕ್ಕಾಚಾರದ ಪ್ರಕಾರ ಕಲಿಯುಗಕ್ಕೆ 4,32,000 ವರ್ಷಗಳು ಎಂದು ನಿರ್ಣಯ ಮಾಡಲಾಗಿದೆ.   ಇನ್ನು ಪ್ರಳಯದ ವಿಚಾರಕ್ಕೆ ಬಂದರೆ,  ಇನ್ನು ಕನಿಷ್ಠ 4,27, 000 ವರ್ಷಗಳು ಈ ಭೂಮಿ ಸುರಕ್ಷಿತವಾಗಿ ಇರುತ್ತದೆ.  ಶತಶತಮಾನಗಳಷ್ಟು ಹಿಂದೆ ಇದ್ದ  ಅಲ್ಲಮಪ್ರಭುಗಳ ಒಂದು ವಚನ ಇಲ್ಲಿ ಪ್ರಸ್ತುತ ವೆನಿಸುತ್ತದೆ.
 
                  ಹಿಂದೆ ಎಷ್ಟು ಪ್ರಳಯ ಹೋಯಿತೆಂದು ಅರಿಯೆ|
                  ಮುಂದೆ ಎಷ್ಟು ಪ್ರಳಯವಾಗುವುದೆಂದು ಅರಿಯೆ|
                  ತನ್ನ ಸ್ಥಿತಿಯ ತಾನರಿಯದೆಡೆ  ಅದೇ ಪ್ರಳಯವಲಾ|
                  ತನ್ನ ವಚನ ತನಗೆ ಹಗೆಯಾದೆಡೆ ಅದೇ ಪ್ರಳಯವಲಾ|
                  ಇಂತಹ ಪ್ರಳಯ ನಿನ್ನೊಳು ಉಂಟೇ ಗುಹೇಶ್ವರಾ||
 
ಈ ಹಿಂದೆ ಅದೆಷ್ಟೋ ಪ್ರಳಯಗಳು ಆಗಿಹೊಗಿವೆಯೋ ತಿಳಿಯದು, ಇನ್ನುಮುಂದೆ ಅದೆಷ್ಟು ಪ್ರಳಯ ಆಗಬಹುದು ಎಂಬುದನು ಕಲ್ಪಿಸಲು ಸಾಧ್ಯವಿಲ್ಲ.  ಸಾಧಕನಾದವನು ತನ್ನ ನಿಜವಾದ ಅಮರ ಸ್ವರೂಪವನ್ನು ಅರಿಯದೆ ಹೋದರೆ ಅದೇ ನಿಜವಾದ ಪ್ರಳಯ.   ಪ್ರಕೃತಿಯಿಂದ ಅಥವಾ ಶಕ್ತಿಯ ಮೂಲಕಾರಣದಿಂದ ಹುಟ್ಟುವಂತಹ ಎಲ್ಲವು ಕಾಣುತ್ತದೆ, ರೂಪಗೊಳ್ಳುತ್ತದೆ ಕೊನೆಗೆ ಆ ಪ್ರಕೃತಿಯಲ್ಲೇ ಪ್ರಳಯ ಹೊಂದುತ್ತದೆ.   ಆದರೆ, ಆತ್ಮತತ್ವ ಯಾವ ಕಾರಣದಿಂದಲೂ ಜನ್ಮವಾದುದಲ್ಲ, ಆದ್ದರಿಂದ ಆತ್ಮಕ್ಕ ಯಾವ ಪ್ರಳಯವೂ ಇಲ್ಲ.  ಅನಾತ್ಮವಾದ ದೇಹಾದಿಗಳಲ್ಲಿ  ನಾವುಗಳು ತಾದಾತ್ಮ ಭಾವ ತಳೆದು ಇದನ್ನೇ ನಿಜವಾದ ರೂಪವೆಂದು ಭ್ರಮಿಸುವ ಕಾರಣ ಅನಾತ್ಮನು ಹುಟ್ಟುತ್ತಾನೆ, ನಂತರ ಸಾಯುತ್ತಾನೆ.  ಇದು ಅಜ್ಞಾನ.   ಈ ಅಜ್ಞಾನವೇ ಪ್ರಳಯ.   ಜ್ಞಾನದ ಬೆಳಕಲ್ಲಿ ನಿಲ್ಲಲು, ಅಜ್ನಾನವೆಂಬ ಕತ್ತಲಿನಿಂದ ಹೊರಬರಬೇಕು.  ಆಗ ಅರಿವು ಅಮೃತವಾಗುತ್ತದೆ.  ಅಮೃತಕೆಲ್ಲಿ ಪ್ರಳಯದ ಭೀತಿ?
 
ಪ್ರಕಾಶ್  ಹೆಚ್ ಏನ್
 
( ನನ್ನ ಈ ಚಿಂತನೆಯು  ದಿನಾಂಕ 3-12-2009 ರಲ್ಲಿಹಾಸನ ಆಕಾಶವಾಣಿಯಲ್ಲಿ  ಬಿತ್ತರಗೊಂಡಿತ್ತು }

 

ಸರಣಿ: 
ಲೇಖನ ವರ್ಗ (Category): 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by pkumar on

ತಾವು ಹೇಳಿದಂತೆ ಹಿಂದೂ ಪುರಾಣದ ಪ್ರಕಾರ ಭೂಮಿಗೆ ಇನ್ನು ಸಾವಿರಾರು ವರ್ಷ ಆಯುಷ್ಯವಿದೆ.ಇದನ್ನು ಟ.ವಿ ಮಾಧ್ಯಮಗಳು ತಮ್ಮ ಟಿ ಆರ್ ಪಿ ಗಾಗಿ ಬಳಸಿಕೊಂಡು ಜನರಲ್ಲಿ ಆತಂಕ ಉಂಟು ಮಾಡುತ್ತಿವೆ.ಮಾಯನ್ ಕ್ಯಾಲೆಂಡರ್ ಪ್ರಕಾರ ಭೂಮಿಯ ಆಯುಷ್ಯ 2012ಕ್ಕೆ ಕೊನೆಗೊಂಡಿದೆ ಎಂದು ಹೇಳಲಾಗುತ್ತೆ.ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಜನರ ಭಯವನ್ನೇ ಕಥಾವಸ್ತು ಮಾಡಿಕೊಂಡು ಹಣ ಹೆಸರು ಮಾಡಿಕೊಂಡದ್ದು ಮಾತ್ರ ಬೆರಳಣಿಕೆ ಮಂದಿ.ಒಟ್ಟಿನಲ್ಲಿ ಜನರ ಮನಸ್ಸಿನಲ್ಲಿ ಅಡಗಿಕುಳಿತಿರುವ ಭಯವೆಂಬ ಭೂತಕ್ಕೆ 2012ರ ಡಿಸೆಂಬರ್ 22ನೇ ತಾರಿಖು ಉತ್ತರ ದೊರೆಯುತ್ತದೆ.
ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prakash Narasimhaiya on

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಭುಕುಮಾರ್ ರವರೆ
ಪ್ರಕಾಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by muneerahmedkumsi on

ನಿಮ್ಮ ವಿಛಾರ ಸಂಧರ್ಬೋಛಿತವಾಗಿದೆ. ಈ ಲೋಕದ ಪ್ರತಿಯೊಂದುವಸ್ತು ನಾಶವಾಗಲೆ ಬೇಕು. ಹೇಗೆ ಮರಣವು ನಿಶ್ಛಿತವೋ
ಹಾಗೇನೆ ಈವಿಶ್ವ್ಕವೂ ನಾಶವಾಗಲೇ ಬೇಕು ಅನ್ನುವುದು ಪ್ರಕ್ಱುತಿ ನೇಯಮ. ಧರ್ಮ ಮತ್ತು ವಿಜ್ನಾನ ಈಎರಡೂ ಇದನ್ನು ಸಮಾನವಾಗಿ ಪ್ರತಿಪಾದಿಸುತ್ತವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prakash Narasimhaiya on

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮುನೀರ್ ಅಹ್ಮೆದ್ ರವರೆ
ಪ್ರಕಾಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gunashekara murthy on

ಪ್ರಳಯದ ಬಗ್ಗೆ ಮನುಷ್ಯ ಏನೇ ಹೇಳಿದರೂ ಅದು ಮಿಥ್ಯಾ, ಕಾರಣ ಮನುಷ್ಯನಿಗೆ ಪ್ರಕ್ಱುತಿಯ ಬಗ್ಗೆ ಏನು ಗೊತ್ತಿದೆ ಎಂದರೂ ಏನೇ ಗೊತ್ತಿದ್ದರೂ ಪೂಜ್ಯವೇ. ತಮಿಳ್^ನಲ್ಲಿ ಒಂದು ಮಾತಿದೆ " ಕಟ್ರದು ಕೈ ಮಣ್ಣ ಅಳವು ಕಟ್ರಾದದು ಉಲಗವು 'ಎಂದು ಅಂದರೇ, ಮನುಷ್ಯ ಅರಿತದ್ದು ಬರೀ ತನ್ನ ಕೈ ಗಾತ್ರದ ಮಣ್ಣನಷ್ಟೆ ಪ್ರಂಪಂಚ ಮಣ್ಣೆಷ್ಟಿರಬಹುದು ಉಹಿಸಿ ಇವನಿಂದ ಪ್ರಕ್ಱುತಿಯ ಯಾವುದನ್ನು ಊಹಿಸಲು ಸಾಧ್ಯ್ಲವಿಲ್ಲ......ವಿಲ್ಲ‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.