25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪ್ರಸವ ವೇದನೆ

August 14, 2012 - 6:09pm
Jayanth Ramachar

ತಿಂಗಳುಗಳಿಂದ ಪ್ರಸವ ವೇದನೆಯಿಂದ

ನರಳಾಡುತ್ತಿದ್ದ ಮೇಘಗಳಿಗೆ ಪ್ರಸವದ

ಸಮಯ ಸನಿಹವಾಯಿತೆಂದೆನಿಸಿದೆ..

 

ಎರಡು ತಿಂಗಳ ಮುಂಚೆಯೇ

ದಿನಗಳು ತುಂಬಿದ್ದರೂ ಹಡೆಯಲಿಲ್ಲ

ನೀನು ಮಳೆ ಎಂಬ ಕೂಸನು 

 

ಭಯವಿತ್ತೆ ನಿನಗೆ ನಿನ್ನ ಕೂಸನು

ಯಾರೂ ಮುದ್ದಿಸುವುದಿಲ್ಲವೆಂದು?

ಯಾರೂ ಸಂಭ್ರಮಿಸುವುದಿಲ್ಲವೆಂದು?

 

ನೋಡಿದಿರಾ ಓ ಮೇಘಗಳೇ

ನಿಮ್ಮ ಮಗುವನು ನಾವು ಹೇಗೆ

ಮುದ್ದಿಸುವೆವೆಂದು, ಸಂಭ್ರಮಿಸುವೆವೆಂದು.... 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by gurudutt_r on
ಮಳೆಯ ಪುಳಕ ಎಲ್ಲರಿಗು ಇಷ್ಟ..ಈ ಬಾರಿ ಮಳೆ ಕಮ್ಮಿ. ಹಾಗಾಗಿ ಮೇಘಗಳು ಇನ್ನಷ್ಟು ಹೆತ್ತು ನಮ್ಮ ಲೋಕಕ್ಕೆ ಪಾವನಿಯನ್ನು ಸುರಿಸಲಿ. ನಗರಗಳಲ್ಲಿ ಬೇಡವಾದರೂ ಸರಿಯೇ...ಉತ್ತಿ ಬಿತ್ತಿ ಕಾದಿರುವ ನಮ್ಮ ಅನ್ನದಾತನಿರುವ ಕಡೆಗೆ. ಬಹಳ ಸರಳ ವಿಚಾರ ನಿಮ್ಮ ಕವನ, ಪ್ರಸ್ತುತ ಕೂಡ. ಧನ್ಯವಾದಗಳು..!

Submitted by Jayanth Ramachar on
ನಿಜ ಗುರುದತ್ ಅವರೇ ನಗರ ಪ್ರದೇಶಕ್ಕಿ೦ತ ಹಳ್ಳಿಗಳಲ್ಲಿ ಮಳೆಯಾಗಬೇಕಿದೆ. ಮೆಚ್ಚುಗೆಗೆ ಧನ್ಯವಾದಗಳು.

Submitted by venkatb83 on
ನೋಡಿದಿರಾ ಓ ಮೇಘಗಳೇ ನಿಮ್ಮ ಮಗುವನು ನಾವು ಹೇಗೆ ಮುದ್ದಿಸುವೆವೆಂದು, ಸಂಭ್ರಮಿಸುವೆವೆಂದು.... ======================== ಸಖತ್..... ಮಾರಾಯ್ರ್ರೆ... \|/

Submitted by veena wadki on
ಕವನ ಚೆನ್ನಾಗಿದೆ , ಅಭಿನಂದನೆಗಳು. ಈ ಮಗು ಹುಟ್ಟಿದ ಸಂಭ್ರಮ ಎಲ್ಲೆಡೆ ಹರಡಲೆಂದು ಆಶಿಸುತ್ತೇನೆ.