ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 74 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಸನ್ಮಾನ್ಯ ಡಾ ಎಚ್ ಎಸ್ ವಿ ಅವರ ಅಭ್ಯಾಸ ೧೧ ಶಿವಕೋಟ್ಯಾಚಾರ್ಯರ ವಡ್ಡಾರಾಧನೆ
gopinatha's picture
ಬೆಳ್ಳಾಲ ಗೋಪೀನಾಥ ರಾವ್
22
May
2011
ಲೇಖನ

ಸನ್ಮಾನ್ಯ ಡಾ ಎಚ್ ಎಸ್ ವಿ ಅವರ ಅಭ್ಯಾಸ ೧೧ ಶಿವಕೋಟ್ಯಾಚಾರ್ಯರ ವಡ್ಡಾರಾಧನೆ
 

ಅಭ್ಯಾಸದ ಮಾರ್ಗದರ್ಶಕ ಶ್ರೀ ರಾಜಶೇಖರ ಮಾಲೂರರ ಮನೆ "ಪ್ರಥಾ" ದಲ್ಲಿ, ಒಂದು...

ಪ್ರತಿಕ್ರಿಯೆಗಳು: 0
ಹಿಟ್ಸ್ : 339
ಕಿತ್ತಾಡೋರ ಕಂಡು ನಗುತ್ತಿದೆ ಪ್ರೀತಿ...
Chamaraj's picture
ಚಾಮರಾಜ ಸವಡಿ
14
Feb
2010
ಬ್ಲಾಗ್ ಬರಹ

ಮನಸ್ಸು ಖಾಲಿಯಾಯ್ತು ಅಂತ ಅನ್ನಿಸಿದಾಗೆಲ್ಲ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ.

ಕಂಪ್ಯೂಟರುಗಳಿಲ್ಲದ, ಖಾಸಗಿ ಚಾನೆಲ್‌ಗಳಿಲ್ಲದ, ಮೊಬೈಲುಗಳಿಲ್ಲದ...

ಪ್ರತಿಕ್ರಿಯೆಗಳು: 22
ಹಿಟ್ಸ್ : 1,500
ಬದಲಾಗುವ ಬಣ್ಣಗಳು
hamsanandi's picture
ಹಂಸಾನಂದಿ
09
Dec
2010
ಬ್ಲಾಗ್ ಬರಹ

ಹೊತ್ತಿಗೆ ತಕ್ಕ ಹಾಗೆ ಬಣ್ಣ ಬದಲಿಸೋ ಜನರನ್ನ ದಿನ ನಿತ್ಯ ನೋಡ್ತಾನೇ ಇರ್ತೀವಿ. ಇನ್ನು ಗೋಸುಂಬೆ ಅಂತಹ ಬಣ್ಣ ಬದಲಿಸೋ ಪ್ರಾಣಿಗಳನ್ನೂ ನೋಡಿದೀವಿ. ಆದ್ರೆ ನಾನು ಹೇಳ್ತಾ ಇರೋ...

ಪ್ರತಿಕ್ರಿಯೆಗಳು: 10
ಹಿಟ್ಸ್ : 933
ಮಳೆಗಾಲದ ಒಂದು ಸಂಜೆ - ಪ್ರಬಂಧ
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
16
Aug
2011
ಬ್ಲಾಗ್ ಬರಹ

 

 

ಮಳೆಗಾಲದ ಆ ಸಂಜೆ ಅಪೂರ್ವವಾಗಿತ್ತು. ಅಪೂರ್ವ...

ಪ್ರತಿಕ್ರಿಯೆಗಳು: 8
ಹಿಟ್ಸ್ : 444
ಬದುಕಿನ ಗೆಲುವಿನ ಬಾಗಿಲು ಪ್ರಜ್ನೆ
addoor's picture
ಅಡ್ಡೂರು ಕೃಷ್ಣ ರಾವ್
13
Jan
2012
ಲೇಖನ

ಬಸ್‍ನಲ್ಲಿ ಅಥವಾ ರೈಲಿನಲ್ಲಿ ಪಕ್ಕದವರು ಬಿಸ್ಕಿಟ್ ಕೊಡುತ್ತಾರೆ. ಅದನ್ನು ತಿಂದ ನಂತರ ಎಚ್ಚರ ತಪ್ಪುತ್ತದೆ. ಎಚ್ಚರವಾದಾಗ ನಮ್ಮ ವಾಚ್, ಬಂಗಾರದ ಉಂಗುರ, ಚೈನ್, ಪರ್ಸ್, ಸೂಟ್‍...

ಪ್ರತಿಕ್ರಿಯೆಗಳು: 4
ಹಿಟ್ಸ್ : 159
ನಾದಲೀಲೆ: ಬೇಂದ್ರೆ ಕಾವ್ಯ ವಾಚನ ಕಾರ್ಯಕ್ರಮದ ವರದಿ
hisushrutha's picture
Sushrutha Dodderi
27
Nov
2006
ಪುಟ
'ದೀಪದ ಮಲ್ಲಿ' ಎಂಬ ನನ್ನ ಪದ್ಯದಲ್ಲಿ 'ಮೌನ'ದ ಮಾತು ಬರುತ್ತದೆ. ಆ ದೀಪದ ಮಲ್ಲಿ ನನ್ನ ಹತ್ತಿರಿರುವ ಒಂದು ಗೊಂಬೆ; ಶಿವಮೊಗ್ಗದಲ್ಲಿ ಒಬ್ಬರು ಅದನ್ನು ನನಗೆ ಕೊಟ್ಟರು. ಕೈಯಲ್ಲಿ ಒಂದು...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,619
ಕನ್ನಡಿಗನಾಗಿ ಹೆಮ್ಮೆ...
prakashaka's picture
ಪ್ರಕಾಶ್ ಶೆಟ್ಟಿ ಉಳೆಪಾಡಿ
07
Nov
2005
ಪುಟ
ಕನ್ನಡ ಭಾಷೆಯ ಬಗ್ಗೆ ಸುಮಾರು ೨೦೦೦ ವರ್ಷದ ಇತಿಹಾಸವುಳ್ಳ ಭಾರತದ ಮೂರನೇ ಅತೀ ಪ್ರಾಚೀನ ಭಾಷೆ ಕನ್ನಡ (ಸಂಸ್ಕೃತ ಮತ್ತು ತಮಿಳಿನ ನಂತರದ ಸ್ಥಾನ) ವೈಜ್ಞಾನಿಕವಾಗಿಯೂ...
ಪ್ರತಿಕ್ರಿಯೆಗಳು: 1
ಹಿಟ್ಸ್ : 2,059
ಆಂಡ್ರಾಯ್ಡ್ ಮತ್ತು ಕನ್ನಡ
hpn's picture
ಹರಿ ಪ್ರಸಾದ್ ನಾಡಿಗ್
02
Dec
2011
ಲೇಖನ

ಇತ್ತೀಚೆಗೆ ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳು ಬಹಳ ಜನಪ್ರಿಯವಾಗುತ್ತಿವೆ. ಕೈಗೆಟುಕುವ ಬೆಲೆಯಲ್ಲಿ ಆಂಡ್ರಾಯ್ಡ್ ಫೋನುಗಳು ಲಭ್ಯವಾಗುತ್ತಿರುವಂತೆ ಹೆಚ್ಚಿನ ಜನ ಇದನ್ನೇ...

ಪ್ರತಿಕ್ರಿಯೆಗಳು: 11
ಹಿಟ್ಸ್ : 363
ಕಡವ ಶಂಭು ಶರ್ಮ (೮-೮-೧೮೯೫ – ೩-೫-೧೯೬೪)
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
28
Jan
2006
ಪುಟ
ಈ ತಿಂಗಳು ಪುತ್ತೂರಿನ ಕಾರ್ಯಕ್ರಮವೊಂದಕ್ಕೆ ಹೋದಾಗ ಈ ಹಿರಿಯರ ಬಗ್ಗೆ ತಿಳಿಯುವ, ಅವರ ಕೃತಿಯೊಂದನ್ನು ಪಡೆಯುವ ಅವಕಾಶ ಲಭಿಸಿತು. ಪುತ್ತೂರಿನ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,357
Switzerland, ಭೂಲೋಕದ ಸ್ವರ್ಗ
abdul's picture
ಅಬ್ದುಲ್ ಲತೀಫ್ ಸಯ್ಯದ್
06
Feb
2011
ಲೇಖನ

 Switzerland. ಭೂಮಿಯ ಮೇಲಿನ ಸ್ವರ್ಗ ಮಾತ್ರವಲ್ಲ ಸ್ವರ್ಗ ನವವಿವಾಹಿತ ಶ್ರೀಮಂತ ಜೋಡಿಗಳ ಮಧುಚಂದ್ರ ದ ತಾಣ...

ಪ್ರತಿಕ್ರಿಯೆಗಳು: 5
ಹಿಟ್ಸ್ : 732

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಪ್ರೊ. ನಿಸಾರ್ ಅವರೊಡನೆ ಕಳೆದ ಹೊತ್ತು-ನೆನಪಿನ ಖಜಾನೆಗೆ ಮತ್ತೊಂದು ಅಣಿಮುತ್ತು

ಪ್ರೊ. ನಿಸಾರ್ ಅವರೊಡನೆ ಕಳೆದ ಹೊತ್ತು-ನೆನಪಿನ ಖಜಾನೆಗೆ ಮತ್ತೊಂದು ಅಣಿಮುತ್ತು

 

ಈ ನೆನಪಿನ ಖಜಾನೆ ನಮೆಲ್ಲರ ಬಳಿಯೂ ಇದೆ. ಅದರಲ್ಲಿನ ಸ್ವತ್ತು ನೋವು ಹಂಚಿದಾಗ ಕಮ್ಮಿ ಆಗುತ್ತೆ, ಸಂತಸ, ಸ್ವ-ಅನುಭಗಳ, ಮುದ ನೀಡುವ ಅದೆಷ್ಟೋ ವಿಷಯಗಳು ಹಂಚಿದಲ್ಲಿ ಹೆಚ್ಚುತ್ತಾ ಹೋಗುತ್ತೆ. ಅಷ್ಟೇ ಅಲ್ಲ ಅದು ನಮ್ಮ ನೆನಪಿನ ಖಜಾನೆಯಲಿ ಕೂಡುತ್ತಾ ಹೋಗುತ್ತೆ. ನನ್ನೀ  ಖಜಾನೆಯ ಇತ್ತೀಚೆಗೆ ಕೂಡಿದ್ದು ಪ್ರೊ. ನಿಸಾರ್ ಅಹಮದ್, ಸಾಹಿತಿ ಜಯಂತ್-ಸ್ಮಿತಾ ದಂಪತಿಗಳು, ದಟ್ಸ್ ಕನ್ನಡ ಸಂಪಾದಕ ಶ್ಯಾಮ್. ಇವರೆಲ್ಲರೂ ನವೆಂಬರ್ ೬ ಹಾಗೂ ೭ ರಂದು ಸಿಂಗಪುರದಲ್ಲಿ ಕರ್ನಾಟಕವೈಭವದ ಸಾಹಿತ್ಯ-ಸಂಸ್ಕೃತಿಯ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ಅತಿಥೇಯರು.

ಜೋಗದ ಸಿರಿಯ ಬೆಳಕನ್ನು ನಾಡಿನಾದ್ಯಂತ ಬೆಳಗಿದ ನಿತ್ಯೋತ್ಸವದ ಕವಿ ಎಂದೇ ಹೆಸರಾದ ಫ್ರೊ. ನಿಸಾರ್ ಅವರು ತಮ್ಮ ಕವನಗಳ ಮೂಲಕ ಎಲ್ಲರಿಗೂ ಚಿರಪಚಿತರೇ. ಓದಿದವನೇ ಬಲ್ಲ ಅವರ ಕವನಗಳ ಸೊಗಡನ್ನು. ಕವಿ, ಸಾಹಿತಿ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ, ಕವನಗಳ ಬಗ್ಗೆ ನಾನರಿಯೆ. "ಅನಿಸುತಿದೆ ಯಾಕೋ ಇಂದು" ಮಾತ್ರ ಗೊತ್ತಿತ್ತು. ಸಂಪಾದಕ ಶ್ಯಾಮ್ ನನ್ನ ಬರಹಕ್ಕೆ ಪ್ರೋತ್ಸಾಹವನಿತ್ತವರು, ವರುಷಗಳಿಂದ ಪರಿಚಿತರು. ಪ್ರೊ. ನಿಸಾರ್, ಜಯಂತ್-ದಂಪತಿಗಳು ಹಾಗೂ ಶ್ಯಾಮ್ ಅವರೊಡನೆ ಕೆಲ ಸಮಯ  ಕಳೆವ ಸದವಕಾಶ ದೊರಕಿತು. "ಕನಸು ನನಸಾದಂತೆ" ಎಂದಾಯಿತು ನನ್ನ ಸ್ಥಿತಿ.

ಸಿಂಗಪುರದ ಸ್ವಚ್ಚತೆ, ವಾಹನ-ಸೌಕರ್ಯ, ಶಿಸ್ತು, ಹಸಿರಿನ ವನಸಿರಿ ಕಂಡು ಕೌತುಕಗೊಂಡರು ಪ್ರೊ.ನಿಸಾರ್. ಸೆಂತೋಸಾದಲ್ಲಿನ ಅಕ್ವೇರಿಯಂ‍ನಲ್ಲಿ ವಿಶಿಷ್ಟ ಜಲಚರ ಸಂಗ್ರಹಾಲಯ ಕಂಡು ಬೆರಗಾದರೆಲ್ಲರೂ, ಪ್ರೊ. ಫಾಸಿಲ್ಸ್‍ಗಳ ಬಗ್ಗೆ ಬಹಳಷ್ಟು ಮಾಹಿತಿ ನೀಡಿದರು. ಬರ್ಡ್‍ಪಾರ್ಕಿನಲಿ ವೈವಿಧ್ಯಮಯ ಪಕ್ಷಿಗಳ ಕಂಡು, ಅವುಗಳ ಕಲರವ, ಬಣ್ಣ, ಹಸಿರಿನ ನಿಸರ್ಗ ಪರಿಸರದಲಿ ಒಂದಾದರು. ಚಿಕ್ಕ ಚೊಕ್ಕದಾದ ನಾಡಿನಲಿ ಪ್ರವಾಸಿಗರಿಗೆ ಇರುವ ಸವಲತ್ತುಗಳನ್ನು ಕಂಡು ಬಹಳಷ್ಟು ಬಾರಿ "ನಮ್ಮೂರಲ್ಲೂ ಎಲ್ಲಾ ಇದೆ ಯಾಕೆ ಹೀಗೆ ಮಾಡಬಾರದು, ಇವರನ್ನು ನೋಡಿ ಕಲಿಯಬಾರದು, ಶ್ರೀಸಾಮಾನ್ಯನಿಗೆ ಸೌಲಭ್ಯಗಳನ್ನು ಕಲ್ಪಿಸಬಾರದು ಎಂದು ಹಲುಬಿದರು ಕೂಡ. ಪ್ರೊ.ನಿಸಾರರ ಎಪ್ಪತ್ತೈದರ ಹರೆಯದಲೂ-ಇಪ್ಪತ್ತೈದರ ಕುತೂಹಲ, ವಿಷಯ ಸಂಗ್ರಹಣೆ, ವಿಶ್ಲೇಷಣೆ, ಚೈತನ್ಯ ಕಣ್ಣೆದುರಿನಲಿ ಕಂಡಾಗ "ಬಿಡುವಿರದ ದುಡಿತದಲಿ ಬಲಿಯಾಗದಿರಲಿ ಬದುಕು" ಎಂದ ಮೇಷ್ಟ್ರ ಕಳಕಳಿ ಅರ್ಥವಾಯಿತು. ಈ ಕವಿ ಬದುಕನ್ನು ಪ್ರೀತಿಸಿ ಬದುಕೇ ಬರಹವಾದವರು ಎಂಬುದರ ಅರಿವಾಯಿತು. He is so full of Life ಈ ಉದ್ಗಾರ ನನ್ನಲ್ಲಿ ಹೊರಟಿದ್ದಂತೂ ಸತ್ಯ. ಕವನ, ಸಾಹಿತ್ಯ, ಜೀವನಗಳ ಬಗ್ಗೆ ನನ್ನ ಮನದಲಿ ಎದ್ದಿದ್ದ, ಏಳುತಿದ್ದ ಬಹುತೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು ನಿಸಾರ್, ಜಯಂತ್-ದಂಪತಿಗಳು, ಶ್ಯಾಮ್ ಅವರೊಡನೆ ಕಳೆದ ಹೊತ್ತು. ಬಂದಿದ್ದ ಅತಿಥೇಯರೆಲ್ಲರೂ ಅವರವರ ಕ್ಷೇತ್ರದಲಿ ಹೆಸರು ಮಾಡಿದವರು, ಜನಪ್ರಿಯರು. ನಾವು ನಮ್ಮವರು ಎಂಬಂತಿರದೆ ಎಲ್ಲರೂ ನಮ್ಮವರು ಎಂಬ ಮನೋಭಾವ ಹೊಂದಿದವರು. ನಮ್ಮ ಹಾಗೂ ಅವರಲ್ಲಿನ ಸಮಾನಾಂತರ ಅಭಿರುಚಿ, ಸಾಹಿತ್ಯಾಸಕ್ತಿ, ಮಾಹಿತಿ, ಜೀವನದ ಅನುಭವಗಳ-ಆಗುಹೋಗುಗಳ ಹಂಚಿಕೆ, ಮನೋಭಾವ ನಮ್ಮೆಲ್ಲರನ್ನೂ ಆತ್ಮೀಯತೆಯ ಬಂಧನದಲಿ ಒಂದಾಗಿಸಿತು.

ನನ್ನ ನಿಸಾರ್ ಕವನಗಳ ನಂಟು: ೭೦ರ ದಶಕದಲಿ ಆಗತಾನೇ ಕ್ಯಾಸೆಟ್ ಕಾಲಿಟ್ಟಿತ್ತು. ಅನಂತ ವಾಣಿಯಲಿ ನಿತ್ಯೋತ್ಸವ ಮನೆ ಮಾತಾಗಿತ್ತು.  ಶಾಲಾ ದಿನಗಳಿಂದಲೂ ಕೆ.ಎಸ್.ನ. ನಿಸಾರ್ ಅವರ ಕವನಗಳು ಮನ ಮುಟ್ಟಿತ್ತು. ನನ್ನೊಂದಿಗೆ ಪ್ರೊ. ನಿಸಾರ್ ಅವರ ಕವನಗಳು ಎಂಬುದಕ್ಕೆ ಅವರ ನಿತ್ಯೋತ್ಸವ ಶಾಲೆಯ ನಿತ್ಯ ಪ್ರಾರ್ಥನೆ "ಸ್ವಾಮಿದೇವನೆ ಲೋಕಪಾಲನೆ" ಯಂತೆ, ಶಾಲೆಯ ಪ್ರತಿಯೊಂದು ಸಮಾರಂಭಗಳಲಿ ಖಾಯಂ. ಕಾಲೇಜಿನ ಕಡೆಯ ಬೆಂಚಿನಲಿ ಕೂತು ಕಾದಂಬರಿ ಓದುತ್ತಾ,  ಮೇಷ್ಟ್ರು ನನ್ನತ್ತ ನೋಡಿದಾಗ ಅರ್ಥವಾದಂತೆ ತಲೆ ಆಡಿಸಿದ್ರೆ ಏನ್ರೀ ಎಲ್ಲಕ್ಕೂ ಕುರಿತರ ತಲೆ ಆಡಿಸುತ್ತೀರಲ್ಲಾ ಹೋಗ್ಲಿ ನಿಸಾರ್ ಅವರ ಕುರಿಗಳು ಸಾರ್ ಕುರಿಗಳು ಓದಿ ಎಂದು ಅದೆಷ್ಟು ಬಾರಿ ಉಗಿಸಿಕೊಂಡಿದ್ದೇನೋ ಲೆಕ್ಕವಿಲ್ಲ. ಇದೀಗ ತಲೆ ಆಡಿಸುವುದು ಅಭ್ಯಾಸ ಬಲ ಆಗಿಹೋಗಿದೆ. ಖಂಡಿತವಾಗಿ ಕನಸಿನಲ್ಲೂ ಎಣಿಸಿರಲಿಲ್ಲ  "ಕುರಿಗಳು ಸಾರ್" ರಚಿಸಿದ ಕವಿಯೊಡನೆ ನಾಲ್ಕಾರು ಮಾತು ಆಡುವೆನೆಂದು.

ಯೌವನದಲಿ, ದಾಂಪತ್ಯದಲಿ ಅದೆಷ್ಟೋ ಬಾರಿ ನನ್ನವ ಊರಿಗೆ ಹೋದಾಗ "ಮತ್ತದೇ ಸಂಜೆ....ನೀನಿಲ್ಲದೆ ಬಿಮ್ಮೆನುತಿದೆ ರಮ್ಯೋದ್ಯಾನ" ಅನುಭವ ಆಗುವುದಂತೂ ಸತ್ಯ.  ಈಗಂತೂ ಬಿಡಿ, ನಾವು ಕೆಲವೊಂದು ಆಚಾರ-ವಿಚಾರಗಳನ್ನು ಬಿಡಲಾಗದೆ, ಹೊಸದನ್ನು ರ‍ೂಢಿ ಮಾಡಿಕೊಳ್ಳಲಾಗದೆ " ಅಲ್ಲೂ-ಇಲ್ಲ-ಇಲ್ಲೂ ಸಲ್ಲ ಈ ಎಡಬಿಡಂಗಿ" ಆದಾಗ ನಿಸಾರ್ ಅವರ ಅಮ್ಮ, ಆಚಾರ ಮತ್ತು ನಾನು" ನನ್ನಂಥವರಿಗಾಗೇ ಬರೆದದ್ದೇನೋ ಎನಿಸುವುದು. "ರಾಮನ್ ಸತ್ತ ಸುದ್ದಿ"ಯಲ್ಲಿನ ನೋವು ಕಣ್ಣೀರು ತರಿಸಿತ್ತು ಕೂಡ. ನನ್ನೀ ಅನುಭವಗಳು ನಿಮ್ಮಲ್ಲೂ ಆಗಿರಬಹುದು.

ಏಕೆಂದರೆ ಕವಿಯೊಬ್ಬ ತನ್ನಲ್ಲಿರುವ ಭಾವನೆಗಳನ್ನು ಕಾವ್ಯದ ಮೂಲಕ ಹೊರಗೆಡವುತ್ತಾನೆ. ಆದರೆ ಈ ಕಾವ್ಯ ತಲುಪುವುದು ಓದುವುದರಲ್ಲಿ ಆಸಕ್ತಿಯಿರುವ ಕೆಲವೇ ಕೆಲವು ಮಂದಿಗೆ ಮಾತ್ರ. ಶ್ರೀಯುತರಾದ ಬೇಂದ್ರೆ, ಕುವೆಂಪು, ಅಡಿಗ, ಕೆ.ಎಸ್.ನ, ನಿಸಾರ್, ಲಕ್ಷ್ಮೀನಾರಾಯಣ ಭಟ್ಟರುಗಳ ಬಹುತೇಕ ಕವನಗಳು ಹತ್ತಿರವಾಗುವುದು ನಮ್ಮ ಭಾವನೆಗಳೊಡನೆ ನೇರ ಸ್ಪಂದಿಸುವುದು. ಅದಕ್ಕಾಗೇ ಅನಿಸುವುದು ಕವನಗಳು ನಮ್ಮೊಟ್ಟಿಗೇ ಬೆಳೆಯುತ್ತಾ ನಮ್ಮ ಭಾವನೆಗಳಲಿ ಒಂದಾಗಿ ನಮಗಾಗೇ ಬರೆದಂತೆ ಅನಿಸುತ್ತದೆ. ಬಹಳಷ್ಟು ಕವನಗಳು ಮನದಾಳದಲಿ ನಿಲ್ಲುವುದು.

ಪ್ರೊ. ಅವರನು ಬೀಳ್ಕೊಡುವಾಗ ನೆನಪಾದದ್ದು ಪ್ರೊ. ನಿಸಾರೇ ಬರೆದ ಈ ಕವನದ ಸಾಲುಗಳು "ಎಂಥೆಂಥ ಜೀವಗಳು ಬಾಳಿ ಬೆಳಗಿದವಿಲ್ಲಿ, ಶ್ರೀಗಂಧ ಬೆಳೆವಂಥ ನಾಡಿನಲ್ಲಿ; ಹೊನ್ನಂಥ ಭಾವಗಳು ಆಳಿ ಮೊಳಗಿದವಿಲ್ಲಿ ಸಿರಿವಂತ ನೆಲದೊಡಲ ಹಾಡಿನಲ್ಲಿ".

 

No votes yet
559 ಹಿಟ್ಸ್

ಪ್ರತಿಕ್ರಿಯೆಗಳು

manju787's picture
06
Jan
2011
9:29

ನಮಗಿಷ್ಟವಾದ ಕವನ ಬರೆದ ಕವಿಯೊಡನೆ ಕೊ೦ಚ ಕಾಲ ಕುಳಿತು ಮಾತಾಡುವುದು ನಿಜಕ್ಕೂ ರೋಮಾ೦ಚಕ ಅನುಭವ, ಆ ಅನುಭವ ನಿಮ್ಮದಾಯಿತಲ್ಲ, ಪುಣ್ಯವ೦ತರು ನೀವು! ನಿಸಾರರೊಡನೆ, ದೊಡ್ಡರ೦ಗೇಗೌಡರೊಡನೆ ಕೆಲ ಹೊತ್ತಾದರೂ ಮನ ಬಿಚ್ಚಿ ಮಾತಾಡುವ ಆಸೆ ನನ್ನಲ್ಲೂ ಇದೆ. ಭಾವ ತು೦ಬಿ ನಿಸಾರರು ಬರೆದ ಗೀತೆಗಳಿಗೆ ಅವರೇ ಸಾಟಿ, ಬೇರೆ ಹೋಲಿಕೆಯಿಲ್ಲ.

tvsrinivas41's picture
06
Jan
2011
9:42

ಕನ್ನಡದ ಅಧ್ಯಾಪಕರಲ್ಲದಿದ್ದರೂ, ಕನ್ನಡ ಸಾಹಿತಿಯಾಗಿ ಮೆರೆದು, ಕನ್ನಡ ಸಾಹಿತ್ಯದ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ ನಿಸಾರರ ಬಗ್ಗೆ ಬಹಳ ಸುಂದರವಾಗಿ ಬರೆದಿದ್ದೀರಿ. ಅವರೊಡನೆ ಕಾಲ ಕಳೆದ ನೀವೇ ಧನ್ಯರು

ಗುರುದೇವ ದಯಾ ಕರೊ ದೀನ ಜನೆ

rasikathe's picture
07
Jan
2011
1:08

ಚೆನ್ನಾಗಿದೆ ವಾಣಿಯವರೆ,
ನಿಸ್ಸಾರ್ ಅವರ ಗೀತೆಗಳು ಪ್ರತಿಸಾರಿ ಕೇಳಿದಾಗ್ಲೂ ನನಗೆ ಹೊಸರೀತಿಯ ಸಂತೋಷ ವಾಗುತ್ತೆ.
ಅವರ ಹೊಸ ಆಲ್ಬಮ್ ಹಾಡುಗಳು " ಸುರಮೋಹನ...." ಹಾಡುಗಳೂ ಬಲು ಮಧುರ....
~ಮೀನಾ

asuhegde's picture
07
Jan
2011
9:47

ಸುಂದರ, ನನ್ನಲ್ಲಿ (ಮಾನವ ಸಹಜ) ಹೊಟ್ಟೆಕಿಚ್ಚು ಮೂಡಿಸಲೆತ್ನಿಸಿದ ಬರಹ.
ಹೊಟ್ಟೆಕಿಚ್ಚು ಏಕೆಂದರೆ, ಈ ರೀತಿ ಸುಲಲಿತವಾಗಿ ಬರೆಯಲು ನನಗೆ ಆಗುವುದಿಲ್ಲವಲ್ಲಾ ಎನ್ನುವುದಕ್ಕೆ ಮತ್ತು ಕವಿಗಳನ್ನು ಹತ್ತಿರದಲ್ಲಿ ಭೇಟಿಯಾಗಿ ಮಾತನಾಡಿಸುವ ಸೌಭಾಗ್ಯ ನಿಮಗಷ್ಟೇ ದೊರಕಿತಲ್ಲಾ ಎಂದು.
:)

bhalle's picture
07
Jan
2011
5:33

ಸೊಗಸಾದ ಬರಹ ವಾಣಿಯವರೆ.

raghumuliya's picture
07
Jan
2011
9:23

ಓದಿ ಧನ್ಯತೆ ಆವರಿಸಿದೆ ನನ್ನನ್ನೂ.
ಕುರಿಗಳು ಸಾರ್ --ಸಾರ್ವಕಾಲಿಕ ಸತ್ಯವಾಗಿ,ನಿತ್ಯನೂತನವಾಗಿ ಉಳಿದಿರುವುದು ನಿಜಜೀವನದ ವಿಪರ್ಯಾಸ.

nagarathnavinayakajoshi's picture
12
Jan
2011
5:46

ಬಹಳ ಸುಂದರವಾದ ಅನುಭವ.ವಾಣಿಯವರೇ ಪ್ರೇಮದ ಅಂತರಾಳದಲ್ಲಿ ಹುದುಗಿದ ಅಧ್ಯಾತ್ಮಿಕತೆಯ ಸೊಬಗನ್ನು, ನಿರ್ಮಲ ಪ್ರೇಮದೊರತೆಯನ್ನು ಬಿಂಬಿಸಿದ ಅಸಾಧಾರಣ ವ್ಯಕ್ತಿಯ ದರ್ಶನ ಧನ್ಯ ದಿನ,ಧನ್ಯ ಜನ.