ಬಂಧಿ ...

ಬಂಧಿ ...

ಕವನ

ಮೋಡಗಳ ಜಗಳಗಳು
ಆಗಸವ ಹಿಂಡಿ, 
ಮಳೆಯ ಹನಿ
ಸೆರೆ ಜಾರಿ 
ಇಳೆಗೆ ಸೋರುತಿರೆ  .., 
ದಿಟ್ಟಿಸಿ ಆಗಸವ 
ಕಾಲದೊಳು 
ಜಾರಿದ್ದ  ನಾ, 
ದಿಶೆ 
ಬದಲಿಸಿಈಗ 
ನೇರ ನೋಡುತ್ತೇನೆ .., 
ಕೂತೂಹಲ !
ಒಂದಷ್ಟು ಹನಿಗಳು 
ಕಣ್ಣಿಗೆ ಕಾಣವು ,
ಅವಕ್ಕೆ ನಾಳೆಯ 
ರವಿ ಮೂಡುವ ಮೊದಲು 
ಇಂಗಿ ಹೋಗುವ ಆತುರ !
ಒಂದಷ್ಟಕ್ಕೆ  ,
ಹರಿಯುವ ಸೆಲೆಗಳಿಗೆ ಸೇರಿ 
ಊರೂರ ಸುತ್ತೋ ನದಿಗೆ ಆಮಿಷ ತೋರಿ .., 
ಸಾಗರಕೆ  ಜಾರಿ 
ಅನಂತವಾಗುವ 
ಬಯಕೆ ... !! 
ಮುಕ್ತ್ತಿ ಮನುಕುಲಕ್ಕೆ 
ಮೀರಿದ್ದ ??!
ಯೋಚಿಸಿ ನಾ 
ಮತ್ತೆ  ವಿರಾಗಿ .. .. 

ಇನ್ನು ಒಂದಷ್ಟು, 
 ಕಣ್ಣ 
ಮುಂದೆ ನಿಂತು 
ನನ್ನ 
ಅಣಕಿಸಿ ಮೆಲ್ಲನೆ ಇಳಿಯುತ್ತವೆ .., 
ಸ್ವಾತಂತ್ರದ ಮತಿ ಭ್ರಮಣೆ?? 
ಮೋಡದ ಹೊರಗೆ 
ಇಣುಕ್ಕಿದೆ , ಸುಖವಾಗಿ , 
ಇಳೆಯ ಮೊರೆಗೆ 
ಜಾರಿದ್ದೆ,  ಸಿರಿಯಾಗಿ , 
ಮುಕ್ತನಾದಂತೆ ಓಲಾಡುತ್ತವೆ ..!
ಇಂಗಲಾರವು , 
ತೇಲಲಾರವು , 
ನಿಂತಲ್ಲೇ ನಿಂತು 
ನಾರುತ್ತವೆ ..:
ಮಳೆಯ ಆರ್ಭಟ 
ಮುಗಿದು ರವಿಯು 
ಅರಳುತ್ತಾನೆ , 
ಸ್ವೇಚ್ಚೆಯ ಮದದಿ
ರವಿಯ ಅಣಕಿಸಿ 
ಕೆಣಕುತ್ತವೆ .., 
ಕೆಕ್ಕರಿಸಿ ನೋಡಲವ 
ಆವಿ ಹನಿಯು ..
ಮೋಡದ ಅಂಚಲ್ಲಿ 
ಮತ್ತೆ ಸೆರೆಯು ...   
ಅಂದಿನಂತೆ ಇಂದು ,
ಅಂಗಾತ ಮಲಗಿ 
ಆಗಸ ದಿಟ್ಟಿಸುತ್ತೇನೆ 
ಕಳೆದ ರಾತ್ರಿಗಳಷ್ಟ್ತೆ 
ನಕ್ಷತ್ರ ಮಿನುಗುತ್ತಿವೆ .., 
ಮೋಡಗಳು ಎಂದಿನಂತೆ 
ಮತ್ತೆ ಊರಿಂದ 
ಊರು ದಾಟುತ್ತಿವೆ ..,