ಬವಣೆ

ಬವಣೆ

ಕವನ

ಕತ್ತರಿಸಿ ಅಂಟಿಸುವುದೇ ಕಸುಬು

ಎತ್ತ ನೋಡಿದರತ್ತ ಗಡುವು

ಸುತ್ತ ಮುತ್ತಲೂ ಬೆರಗು

ಅತ್ತಲೂ ಇತ್ತಲೂ ಎತ್ತೆತ್ತಲೂ ಮರೆವು

 

ತಂತ್ರಾಂಶ ಜೀವನ ಚಕ್ರಗಳು

ಮಂತ್ರಾಕ್ಷತೆಗಳಂತಹ ನುಡಿಗಟ್ಟುಗಳು

ಯಂತ್ರಾಕರ್ಷಣೆಗೊಳಗಾದ ಹೊಸ ಜೀವಗಳು

ಚಿತ್ರಾನ್ನವಾದ ತಂತ್ರಾಂಶ ಚೇತನಗಳು

 

ನಿಂತು ನೋಡದ ಅಮ್ಮ

ಕುಂತು ಮಾತನಾಡದ ಅಪ್ಪ

ಕಂತು-ಕಂತುಗಳಲಿ ಕರಗಿದ ಪ್ರೀತಿ

ಕಂತೆ-ಕಂತೆಗಳಲಿ ಕಾಣಿಸದ ನೆಮ್ಮದಿ

ಎಂತೆಂದು ಹೇಳಲಿ ನಮ್ಮ ಬವಣೆ

 

ಗಣಕಯಂತ್ರದ ಬೋಧಿ - ವೃಕ್ಷದ ಕೆಳಗೆ

ಅಣಕು ಮೂಷಿಕನ ಮುಂದೆ

ಮಣಕನಂದದಿ ಕುಳಿತು ಆಲಾಪ ಮಾಡುವ

ಮಣಕಾಲಾಪವಿದು ಕೇಳು