August 24, 2012 - 6:07pm
ಮಗಳಿರದ ಮನೆಯೊಳಗೆ ನಗುವಿಲ್ಲ
ಎಷ್ಟು ಹಚ್ಚಿದರೂ ದೀಪ ಕತ್ತಲು ಕಳೆಯಲಿಲ್ಲ
ನನ್ನಾಕಾಶದಲಿ ನಕ್ಷತ್ರಗಳು ಹೊಳೆಯಲಿಲ್ಲ
ಅಂಗಳದ ಮಲ್ಲಿಗೆ ಬಳ್ಳಿಯೊಳು ಹೂವರಳುತಿಲ್ಲ
ಬೇಗ ಬರುವೆನೆಂದು ಹೊರಹೋದವಳು
ಮುಸ್ಸಂಜೆಯಾದರೂ ಮರಳಲಿಲ್ಲ
ಜಗವ ತಿಳಿಯದ ಮುಗುದೆಯವಳು
ಯಾವ ಗುರಿಯ ಅರಸುತಿಹಳೊ ನಿಂದು
ಕವಲು ದಾರಿಯಲಿ
ಇರಬಹುದು ರೆಕ್ಕೆ ಬಲಿತ ಹಕ್ಕಿಗೆ ಹಾರುವ ತವಕ
ಮರಿಯಿನ್ನು ಎಳೆಸೆಂದುಕೊಂಡ ಅಪ್ಪನಿಗೊ ಆತಂಕ!
ಆಕಾಶದಲಿ ಹಾರುವದರ ಆಸೆಗೆ
ಬೇಡವೆನಲು ಯಾವ ಹಕ್ಕಿದೆ ನನಗೆ?
ಇರಲಿ ಮಗಳೆ
ನಿನ್ನವಕಾಶಗಳ ಆಕಾಶ ನಿನಗೆ
ಎಚ್ಚರವಿರಲಿ ನಭದೊಳಗಿಲ್ಲ ಬರೀ ಪಾರಿವಾಳಗಳು
ಉಂಟಲ್ಲಿ ನಂಬಿಸಿ ನುಂಗುವ ರಣಹದ್ದುಗಳು
ಕ್ಷಣಿಕ ಸುಖದೊಂದಿಗೆ ಕಾಯುತ್ತಿರುತ್ತವೆ ನೋವಿನ
ನೆರಳು- ನರಳು
ಹಾರಿದ್ದು ಸಾಕೆನಿಸಿದರೆ
ಮರಳಿ ಬಾ ತವರಿಗೆ
ಕಾಯುತಿವೆ ವೃದ್ದ ಅಪ್ಪನ ಸೋತ ತೋಳುಗಳು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಬಿಟ್ಟು ಹೋದ ಮಗಳಿಗೆ
ಉ: ಬಿಟ್ಟು ಹೋದ ಮಗಳಿಗೆ
ಉ: ಬಿಟ್ಟು ಹೋದ ಮಗಳಿಗೆ
ಉ: ಬಿಟ್ಟು ಹೋದ ಮಗಳಿಗೆ
ಉ: ಬಿಟ್ಟು ಹೋದ ಮಗಳಿಗೆ
ಉ: ಬಿಟ್ಟು ಹೋದ ಮಗಳಿಗೆ
ಉ: ಬಿಟ್ಟು ಹೋದ ಮಗಳಿಗೆ
ಉ: ಬಿಟ್ಟು ಹೋದ ಮಗಳಿಗೆ
ಉ: ಬಿಟ್ಟು ಹೋದ ಮಗಳಿಗೆ
ಉ: ಬಿಟ್ಟು ಹೋದ ಮಗಳಿಗೆ
ಉ: ಬಿಟ್ಟು ಹೋದ ಮಗಳಿಗೆ
ಉ: ಬಿಟ್ಟು ಹೋದ ಮಗಳಿಗೆ