ಇತ್ತೀಚೆಗೆ "ಸಂಪದಿಗ" ಮಿತ್ರರೊಬ್ಬರು ಕನ್ನಡದ ಕಾದಂಬರಿ ಪಿತಾಮಹರೆನಿಸಿದ ಅ.ನ.ಕೃ. ರವರ ಸಂಧ್ಯಾರಾಗದ ಬಗ್ಗೆ ಬರೆಯುತ್ತಾ 'ಬೀchi'ಯವರ ಬಗ್ಗೆ ಪ್ರಸ್ತಾಪಿಸಿದ್ದರು. ಅವರನ್ನು ಕರ್ನಾಟಕದ ಬರ್ನಾರ್ಡ ಷಾ ಎಂದು ಅವರು ಅಭಿವರ್ಣಿಸಿದ್ದರು. ಇಂಥಹ 'ಬೀchi'ಯವರು ನನ್ನ ತವರು ಜಿಲ್ಲೆಯಾದ ಬಳ್ಳಾರಿಗೆ ಸೇರಿದವರು ಹಾಗಾಗಿ ಹೆಮ್ಮೆಯಿಂದ ಅವರ ಬಗ್ಗೆ ನನಗೆ ತಿಳಿದ ಒಂದೆರಡು ಒಂದೆರಡು ಮಾತುಗಳನ್ನು ಇಲ್ಲಿ ಬರೆಯಬೇಕೆನಿಸುತ್ತದೆ. 'ಬೀchi'ಯವರ ಮೆನೆಮಾತು ತೆಲುಗಾಗಿದ್ದರೆ ಅವರ ಶ್ರೀಮತಿಯವರದು ಕನ್ನಡ. ಅವರಿಬ್ಬರೂ ಒಮ್ಮೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಶ್ರೀಮತಿಯವರು ಅ.ನ.ಕೃ. ರವರ ಸಂಧ್ಯಾರಾಗ ಕಾದಂಬರಿಯನ್ನು ಓದುವುದರಲ್ಲಿ ಮಗ್ನರಾಗಿದ್ದರಂತೆ. 'ಬೀchi'ಯವರೂ ಕೂಡ ಕುತೂಹಲಕ್ಕೆ ಅದರಲ್ಲಿ ಅಂಥಾದ್ದೇನಿದೆಯೆಂದು ಅದನ್ನೋದಲು ಕೈಗೆತ್ತಿಕೊಂಡರಂತೆ. ಆದರೆ ಪುಸ್ತಕವನ್ನು ಓದಲು ಷುರು ಮಾಡಿದವರು ಮುಗಿಯುವವರೆಗೆ ಅದನ್ನು ಕೆಳಗಿಡಲಿಲ್ಲವಂತೆ. ಅದನ್ನು ಓದಿ ಮುಗಿಸಿದ ಮೇಲೆ, ಕನ್ನಡದಲ್ಲಿ ಇಷ್ಟೊಂದು ಅದ್ಬುತವಾಗಿ ಬರೆಯಬಹುದೇ ಎಂದು ಆಶ್ಚರ್ಯಗೊಂಡು, ತಾವು ಕೂಡ ಕನ್ನಡದಲ್ಲೇ ಬರೆಯಲು ಆರಂಭಿಸಿ ಕನ್ನಡಕ್ಕೆ ಒಂದು ವಿಶಿಷ್ಠ ಶೈಲಿಯ ಬರವಣಿಗೆಯನ್ನು ಪರಿಚಯಿಸಿಕೊಟ್ಟರು ಮತ್ತು ಮುಂದೆ "ಹಾಸ್ಯ ಬ್ರಹ್ಮ"ರೆಂಬ ಖ್ಯಾತಿಗಳಿಸಿದರು. ಮಾತನಾಡುವಾಗ ಕನ್ನಡದೊಡನೆ ಇಂಗ್ಲೀಷ್ ಪದಗಳನ್ನು ಬಳಸುವ ಗೀಳು ಆಗಲೂ ಅಂದರೆ ೬೦-೭೦ರ ದಶಕದಲ್ಲಿಯೂ ಇತ್ತು. ಹಾಗಾಗಿ ವಿಡಂಬನಾತ್ಮಕವಾಗಿ ತಮ್ಮ ಹೆಸರನ್ನು ಅರ್ಧ ಕನ್ನಡ ಮತ್ತು ಅರ್ಧ ಇಂಗ್ಲೀಷ್‍ನಲ್ಲಿ ಬರೆದುಕೊಳ್ಳುತ್ತಾ ಅವರು 'ಬೀchi'ಯಾದರು. 'ಬೀಚಿ' ಎನ್ನುವುದು ಭೀಮಸೇನರಾವ್ ಎಂಬ ಅವರ ಹೆಸರಿನ ಸಂಕ್ಷಿಪ್ತ ರೂಪ. ಅವರ ಪೂರ್ಣ ಹೆಸರು ರಾಯಸಂ ಭೀಮಸೇನರಾವ್.
ಅವರು ಬರೆದ 'ಬೆಳ್ಳಿ ತಿಮ್ಮ ನೂರೆಂಟು ಹೇಳಿದ' ಮತ್ತು 'ಬ್ರಹ್ಮಚಾರಿಯ ಮಗ' ನನ್ನ ಮೆಚ್ಚಿನ ಕೃತಿಗಳು. ನನಗೆ ನೆನಪಿರುವ ಅವರ ಕೆಲವೊಂದು ಹಾಸ್ಯದ ತುಣುಕುಗಳನ್ನು "ಸಂಪದಿಗರೊಂದಿಗೆ ಹಂಚಿಕೊಳ್ಳುವ ಒಂದು ಪ್ರಯತ್ನವಾಗಿ ಬೀchi ಜೋಕುಗಳ ಮಾಲಿಕೆಯನ್ನು ಪ್ರಾರಂಭಿಸಬೇಕೆಂದು ಕೊಂಡಿದ್ದೇನೆ. ಅದರ ಮೊದಲ ಪ್ರಯತ್ನವಾಗಿ ಕೆಳಗಿನ ಒಂದು ಜೋಕು.
ಶಾಲೆಗೆ ಹೇಗೆ ಮುಟ್ಟಿದ ?
ಒಮ್ಮೆ ತಿಮ್ಮ ಶಾಲೆಗೆ ಬಹಳ ತಡವಾಗಿ ಹೋದ. ಗುರುಗಳು, "ಏಕೋ ತಿಮ್ಮ ಶಾಲೆಗೆ ಲೇಟು?". ತಿಮ್ಮ, "ಹೌದು ಗುರುಗಳೆ ಲೇಟಾಯ್ತು". ಆದೇ ಯಾಕೆ ಲೇಟಾಯ್ತು ಎಂಬುದು ಗುರುಗಳ ಮರು ಪ್ರಶ್ನೆ. ಏನಿಲ್ಲಾ ಗುರುಗಳೇ ನಿನ್ನೆ ನಮ್ಮ ಮನೆ ಹತ್ತಿರ ಭಾರಿ ಮಳೆಯಾಗಿ ರಸ್ತೆಯೆಲ್ಲೆಲ್ಲಾ ಕೆಸರೋ ಕೆಸರು. ಒಂದು ಹೆಜ್ಜೆ ಮುಂದೆ ಇಟ್ರೆ, ಜಾರಿ ಎರಡು ಹೆಜ್ಜೆ ಹಿಂದೆ ಹೋಗ್ತಿದ್ದೆ; ಹಾಗಾಗಿ ಶಾಲೆಗೆ ಬರೋದು ತಡವಾಯ್ತು. ಆದರೆ ಗುರುಗಳು ಬಿಡಬೇಕಲ್ಲ, "ಒಂದು ಹೆಜ್ಜೆ ಮುಂದೆ ಇಟ್ರೆ ಎರಡು ಹೆಜ್ಜೆ ಹಿಂದೆ ಹೋಗ್ತಿದ್ದೀಯಲ್ಲ, ಹಾಗಾದ್ರೆ ಶಾಲೆಗೆ ಹ್ಯಾಗ್ ಬಂದೆ?" ತಿಮ್ಮನ ಉತ್ತರ ಸಿದ್ದವಿತ್ತು, "ಅದಕ್ಕೇ ಗುರುಗಳೇ ಶಾಲೆ ಕಡೆಗೆ ಬೆನ್ನು ಮಾಡಿ ಮನೆ ಕಡೆ ಹೆಜ್ಜೆ ಹಾಕ್ತಿದ್ದೆ". ಆಲ್ಲಿಗೆ ತಿಂಮ್ಮನ ಗುರುಗಳು ಸುಸ್ತೋ, ಸುಸ್ತು!!!
ಬೀchi ಯವರ ಮತ್ತೊಂದು ಜೋಕನ್ನು ಕೊಡುತ್ತಿದ್ದೇನೆ (ಮಡಿವಂತರ ಕ್ಷಮೆ ಕೋರಿ!)
ಸಾಹಿತಿಗಳೊಬ್ಬರು, ತಮ್ಮ ವಿಶ್ವವಿದ್ಯಾಲಯದಲ್ಲಿ ನಡೆಯುವ ಸಿಂಡಿಕೇಟ್ ಸದಸ್ಯತ್ವಕ್ಕೆ ಹಾಗು ಅದೇ ಕಾಲಕ್ಕೆ ನಡೆಯುತ್ತಿದ್ದ ಶಿಕ್ಷಕರ ಸಂಘದ ಪದಾಧಿಕಾರಿಗಳ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಹಿನ್ನಲೆಯಲ್ಲಿ ಅವರು ಬೀchiಯವರಿಗೊಂದು ಪತ್ರ ಬರೆದು ನಾನು ಎರಡಕ್ಕೂ ನಿಂತಿದ್ದೇನೆ, ತಮ್ಮ ಬೆಂಬಲವನ್ನು ನನಗೆ ಕೊಡಿ ಎಂದು ಪತ್ರ ಮುಖೇನ ತಿಳಿಸಿದರು. ಇವರ ಬಗ್ಗೆ ಅಷ್ಟೊಂದು ಒಳ್ಳೆ ಅಭಿಪ್ರಾಯವಿರದಿದ್ದ ಬೀchiಯವರು ಹೀಗೆ ಉತ್ತರಿಸಿದರು. "ಒಂದಕ್ಕೆ ನಿಂತವರನ್ನು ನೋಡಿದ್ದೇನೆ, ಆದರೆ ಎರಡಕ್ಕೆ ನಿಂತವರನ್ನು ನೋಡಿಲ್ಲ!"
'ಬೀchi'ಯವರ ಜೋಕುಗಳು
September 24, 2011 - 8:45pm
ಸರಣಿ:
ಲೇಖನ ವರ್ಗ (Category):
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: 'ಬೀchi'ಯವರ ಜೋಕುಗಳು
ಶ್ರೀದರ್
ಎರಡು ಜೋಕು ಚೆನ್ನಾಗಿವೆ ಮುಂದಿನ ಜೋಕ್ ಗಳನ್ನು ಹಾಕುವು ಮುನ್ನ ಗಮನಿಸಿ
ಒಮ್ಮೆ ನಕ್ಕು ಬಿಡಿ ೫
ಒಮ್ಮೆ ನಕ್ಕು ಬಿಡಿ ೬
ಒಮ್ಮೆ ನಕ್ಕು ಬಿಡಿ ೭
ಉ: 'ಬೀchi'ಯವರ ಜೋಕುಗಳು
ಪಾರ್ಥ ಸರ್,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ನೀವು ಕೊಟ್ಟ ಮೂರು ಜೋಕುಗಳನ್ನು ನೋಡಿದೆ ಅವು ನನಗೆ ಗೊತ್ತಿಲ್ಲದ ಜೋಕುಗಳು. ನಿಜಕ್ಕೂ ಚೆನ್ನಾಗಿವೆ ಅದಕ್ಕೇ ಅಲ್ಲವೇ ಸಾರ್ ಅವರು "ಹಾಸ್ಯ ಬ್ರಹ್ಮ" ಅ0ತಾ ಪ್ರಖ್ಯಾತರಾದದ್ದು.
ಉ: 'ಬೀchi'ಯವರ ಜೋಕುಗಳು
ಬ0ಡ್ರೀ ಯವರಿಗೆ ಧನ್ಯವಾದಗಳೂ,ಬೀchi, ಯವರ ಜೊಕುಗಳು ತು0ಬಾ ಅರ್ಥ ಗರ್ಭಿತ ವಾಗಿವೆ.
ಉ: 'ಬೀchi'ಯವರ ಜೋಕುಗಳು
ನಿಜ ಶ್ರೀನಿವಾಸ್ ಅವರೇ, ಬೀchiಯವರ ಜೋಕುಗಳ ಮೇಲ್ನೋಟಕ್ಕೆ ಒಂದು ರೀತಿ ಕಂಡರೆ ಅಂತಾರಾಳದಲ್ಲಿ ಅದಕ್ಕೇ ಬೇರೆ ರೀತಿಯ ಅರ್ಥವಿರುತ್ತದೆ.
ಉ: 'ಬೀchi'ಯವರ ಜೋಕುಗಳು
ಬೀಚಿಯವರನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು, ಅವರು ನಿಜಕ್ಕೂ ಕಚಗುಳಿ ಇಡಿಸುವ ಹಾಸ್ಯಬ್ರಹ್ಮರು.
ಉ: 'ಬೀchi'ಯವರ ಜೋಕುಗಳು
ಸಂಪದದಲ್ಲಿ ಹಾಸ್ಯದ ತುಣುಕುಗಳು ಕಡಿಮೆಯೆನಿಸಿದವು; ಆ ನಿಟ್ಟಿನಲ್ಲಿ ಯೋಚಿಸಿದಾಗ ಬೀchiಯವರ ಬಗ್ಗೆ ಪ್ರತ್ಯೇಕವಾಗಿ ಯಾವುದೇ ವಿಷಯಗಳಿಲ್ಲದಿರುವುದು ಕಂಡು ಬಂತು. ಹಾಗಾಗಿ ಈ ದಿಶೆಯಲ್ಲಿ ಒಂದು ಪ್ರಯತ್ನವಿದು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮಂಜಣ್ಣ.
ಉ: 'ಬೀchi'ಯವರ ಜೋಕುಗಳು
ಶ್ರೀಧರರವರೆ,
ಬೀಚಿಯವರ ಬಗೆಗಿನ ಮಾಹಿತಿ ಹಾಗೂ ಹಾಸ್ಯ ಸನ್ನಿವೇಶ 'ಎರಡೂ' ತುಂಬ ಇಷ್ಟವಾದವು
ಉ: 'ಬೀchi'ಯವರ ಜೋಕುಗಳು
ಭಾಗ್ವತರೇ,
ನಿಮಗೆ ಇಷ್ಟವಾದದ್ದು ನನಗೆ ಖುಷಿಯಾಯಿತು.
ಉ: 'ಬೀchi'ಯವರ ಜೋಕುಗಳು
ಒಳ್ಳೆಯ ಮಾಲಿಕೆ ಆರಂಭಿಸಿದ್ದೀರಿ ಶ್ರೀಧರ್ ರವರೇ , ಮುಂದುವರೆಸಿ
ಉ: 'ಬೀchi'ಯವರ ಜೋಕುಗಳು
ಖಂಡಿತವಾಗಿಯೂ ಸತೀಶರೇ!
ಉ: 'ಬೀchi'ಯವರ ಜೋಕುಗಳು
ಮಾನ್ಯರೆ
ಜೋಕು ಚೆನ್ನಾಗಿವೆ
'ಬೀchi'ಯವರ ಹೆಸರಿನಲ್ಲಿ ಛಿ ಯನ್ದ ರೆ
ಉ: 'ಬೀchi'ಯವರ ಜೋಕುಗಳು
ನೀಲಾದೇವಿಯವರೇ, ನನ್ನ ಲೇಖನದ ಈ ಸಾಲುಗಳನ್ನು ಗಮನಿಸಿ:
<<<ಮಾತನಾಡುವಾಗ ಕನ್ನಡದೊಡನೆ ಇಂಗ್ಲೀಷ್ ಪದಗಳನ್ನು ಬಳಸುವ ಗೀಳು ಆಗಲೂ ಅಂದರೆ ೬೦-೭೦ರ ದಶಕದಲ್ಲಿಯೂ ಇತ್ತು. ಹಾಗಾಗಿ ವಿಡಂಬನಾತ್ಮಕವಾಗಿ ತಮ್ಮ ಹೆಸರನ್ನು ಅರ್ಧ ಕನ್ನಡ ಮತ್ತು ಅರ್ಧ ಇಂಗ್ಲೀಷ್‍ನಲ್ಲಿ ಬರೆದುಕೊಳ್ಳುತ್ತಾ ಅವರು 'ಬೀchi'ಯಾದರು. 'ಬೀಚಿ' ಎನ್ನುವುದು ಭೀಮಸೇನರಾವ್ ಎಂಬ ಅವರ ಹೆಸರಿನ ಸಂಕ್ಷಿಪ್ತ ರೂಪ.>>>>>
ನಾವು ಸಾಮಾನ್ಯವಾಗಿ ಮಾತನಾಡುವಾಗ ಉದ್ದನೆಯ ಹೆಸರಿನ ವ್ಯಕ್ತಿಯನ್ನು ಸಂಕ್ಷಿಪ್ತವಾಗಿ ಕರೆಯುತ್ತೇವೆ. ಉದಾಹರಣೆಗೆ ಮಂಜುನಾಥ ಅಂತಾ ಇದ್ದರೆ ಮಂಜ್ಯಾ, ಬಸವರಾಜ್ ಅಂತಾ ಇದ್ದರೆ ಬಸ್ಯಾ, ಎನ್ನುವುದು ಧಾರವಾಡ ಕಡೆಯ ಶೈಲಿ. ಹಾಗೆಯೇ ಬಳ್ಳಾರಿಗರ ಆಡು ಮಾತಿನ ಶೈಲಿಯಲ್ಲಿ ಭೀಮಸೇನರಾವ್- ಸಂಕ್ಷಿಪ್ತ ರೂಪ "ಬೀಚಿ"ಯಾಗಿ ರೂಪಾಂತರಗೊಂಡಿದೆ. ಇನ್ನು ಅರ್ಧ ಕನ್ನಡ ಅರ್ಧ ಇಂಗ್ಲೀಷಿನಲ್ಲಿ ತಮ್ಮ ಹೆಸರನ್ನು ಬರೆದುಕೊಳ್ಳುವ ವಿಷಯವನ್ನು ನನ್ನ ಲೇಖನದ ಮೇಲಿನ ವಾಕ್ಯದಲ್ಲಿ ತಿಳಿಸಿದ್ದೇನೆ.
ನಿಮ್ಮ ಉತ್ತೇಜನಾ ಪೂರ್ವಕ ನುಡಿಗಳಿಗೆ ಧನ್ಯವಾದಗಳು.
ಉ: 'ಬೀchi'ಯವರ ಜೋಕುಗಳು
:))))))
ಉ: 'ಬೀchi'ಯವರ ಜೋಕುಗಳು
ಗೋಪಾಲ್ ಅವರೇ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಉ: 'ಬೀchi'ಯವರ ಜೋಕುಗಳು
ಮಾನ್ಯರೆ ಧನ್ಯವಾದಗಳು
ಉ: 'ಬೀchi'ಯವರ ಜೋಕುಗಳು
[ "ಒಂದಕ್ಕೆ ನಿಂತವರನ್ನು ನೋಡಿದ್ದೇನೆ, ಆದರೆ ಎರಡಕ್ಕೆ ನಿಂತವರನ್ನು ನೋಡಿಲ್ಲ!"] ಕಲ್ಪನೆಯೇ ನಗು ಬರಿಸುತ್ತದೆ!
ಉ: 'ಬೀchi'ಯವರ ಜೋಕುಗಳು
ಬೀchiಯವರ ಪಂಚ್ ಅಂದ್ರೆ ಅದೇ ಸರ್!
ಉ: 'ಬೀchi'ಯವರ ಜೋಕುಗಳು
ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ
ಬಳ್ಳಾರಿಯ ಗಣಿ ಗದ್ದಲದ ನಡುವೆ ಶ್ರೀ ಬೀಚಿಯವರ ಮೂಲಕ ಬಳ್ಳಾರಿಯನ್ನು ನೆನೆಸಿರುವುದು ಗೌರವಾರ್ಹ, ಅವರ ಹಾಸ್ಯಗಳು ಎಂತಹವರನ್ನೂ ದಿನದ ಜಂಜಾಟಗಳಿಂದ ಹೊರತರುವುದು. ಒಳ್ಳೆಯ ಪ್ರಯತ್ನ. ಶುಭ ಹಾರೈಸುವೆ. -ಸುಮಾ
ಉ: 'ಬೀchi'ಯವರ ಜೋಕುಗಳು
ನಿಮ್ಮ ಹಾರೈಕೆಗೆ ಧನ್ಯವಾದಗಳು ಸುಮಾರವರೆ.