ಆಕಳು ಬೇನೆ ಬಿದ್ದಾಗ!
ತಿಮ್ಮನ ಹಸುವಿಗೊಮ್ಮೆ ಒಂದು ರೀತಿಯ ಖಾಯಿಲೆ ಬಂದಿತ್ತು; ಅದಕ್ಕೇನು ಮಾಡಬೇಕೆಂದು ತಿಳಿಯಲು ಅವನು ಪಶುವೈದ್ಯರ ಬಳಿಗೆ ಹೋದ. ತಿಮ್ಮ , "ಸ್ವಾಮಿ ನಮ್ಮ ಆಕಳು ನಿನ್ನೆಯಿಂದ ಹುಲ್ಲು ಮೇಯುತ್ತಿಲ್ಲಾ, ನೀರು ಸಹಾ ಸರಿಯಾಗಿ ಕುಡಿಯುತ್ತಿಲ್ಲಾ" ಎಂದೆಲ್ಲಾ ಮುಂತಾಗಿ ತನ್ನ ಹಸುವಿನ ಬೇನೆಯ ಬಗ್ಗೆ ತಿಳಿಸಿದ. ರೋಗದ ಗುಣ ಲಕ್ಷಣಗಳನ್ನು ತಿಮ್ಮನಿಂದ ಕೇಳಿ ತಿಳಿದುಕೊಂಡ ವೈದ್ಯರು ಅವನಿಗೆ ಹೇಳಿದರು, " ನಾನು ನಿನಗೊಂದು ಮಾತ್ರೆಯನ್ನು ಕೊಡುತ್ತೇನೆ, ಅದನ್ನು ಹಸುವಿಗೆ ನುಂಗಿಸಿದರೆ ಅದರ ಕಾಯಿಲೆ ವಾಸಿಯಾಗುತ್ತೆ". ಆದರೆ ಹಸುವಿಗೆ ಮಾತ್ರೆಯನ್ನು ನುಂಗಿಸುವ ಕ್ರಮ ಹೇಗೆಂದು ಪುನಃ ಪಶುವೈದ್ಯರನ್ನು ಕೇಳಿದ ತಿಮ್ಮ. ಆಗ ಅವರೆಂದರು, "ಮಾತ್ರೆಯನ್ನು *ಗೊಟ್ಟದಲ್ಲಿಟ್ಟು, ಗೊಟ್ಟವನ್ನು ಹಸುವಿನ ಬಾಯಿಯಲ್ಲಿ ಇಡು, ನಂತರ ನಿನ್ನ ಬಾಯಿಂದ ಜೋರಾಗಿ ಗಾಳಿಯನ್ನು ಊದು, ಆಗ ಮಾತ್ರೆ ಸೀದಾ ಹಸುವಿನ ಹೊಟ್ಟೆ ಸೇರುತ್ತದೆ". ಸರೆ ಎಂದು ತಲೆಯಾಡಿಸಿದ ತಿಮ್ಮ. ಸ್ವಲ್ಪ ಹೊತ್ತಿನಲ್ಲೇ ಗಾಭರಿಯಾಗಿ ತಿರುಗಿ ಓಡೋಡಿ ಬಂದ ತಿಮ್ಮನನ್ನು ಕಂಡು ಕಾರಣವೇನೆಂದು ಪಶುವೈದ್ಯರು ಕೇಳಿದರು. ತಿಮ್ಮನೆಂದ, "ಸ್ವಾಮಿ, ನನಗಿಂತಲೂ ಹಸುವೇ ಜೋರಾಗಿ ಗಾಳಿ ಊದಿಬಿಟ್ಟಿತು!!!!!"
(*ಗೊಟ್ಟವೆಂದರೆ ನಮ್ಮ ಬಳ್ಳಾರಿಯ ಆಡು ಭಾಷೆಯಲ್ಲಿ ಬೊಂಬಿನ ಕೊಳವೆ)
ದೇಶದ ಸಮಸ್ಯೆಗೆ ಪರಿಹಾರ....?!!
ಗುರುಗಳು ತಮ್ಮ ಶಿಷ್ಯ ತಿಮ್ಮನನ್ನು ಪ್ರಶ್ನಿಸಿದರು ನಮ್ಮ ದೇಶದ ಸಮಸ್ಯೆಗಳಿಗೆಲ್ಲಾ ಏನು ಕಾರಣ? "ನಮ್ಮ ರಾಜಕೀಯ ನೇತಾರರು", ಉತ್ತರಿಸಿದ ತಿಮ್ಮ. "ಸರಿ, ಈ ಸಮಸ್ಯೆಗೆ ಪರಿಹಾರವೇನಾದರು ಇದೆಯಾ?" ಕೇಳಿದರು ಗುರುಗಳು. "ಬಹಳ ಸರಳ ಉಪಾಯವಿದೆ ಗುರುಗಳೆ" ಹೇಳಿದ ತಿಮ್ಮ. ಆದೇನೆಂದು ಬೊಗಳು ಎಂದರು ಗುರುಗಳು."ಏನಿಲ್ಲಾ ಗುರುಗಳೆ, ನಮ್ಮ ನೇತಾರರೆನ್ನೆಲ್ಲಾ ಮೂರು ಬಾರಿ ನೀರಿನಲ್ಲಿ ಅದ್ದಿ ಎರಡು ಸಾರಿ ಮಾತ್ರ ಹೊರಗೆ ತೆಗೆಯಬೇಕು" ಥಟ್ಟನೆ ಹೇಳಿದ ತಿಂಮ್ಮ ಬ್ರಹ್ಮ.
(ಈ ಜೋಕನ್ನು ರವಿಯವರು ಬರೆದ "ಒಂದು ಭಯಾನಕ ಜೋಕ್" ಗೆ ಪ್ರತಿಕ್ರಿಯೆಯಾಗಿ ಬರೆದಿದ್ದೆ. ಆದರೆ ಇದು ಬೀchiಯವರ ಜೋಕಾಗಿದ್ದರಿಂದ ಇದನ್ನು ಪುನಃ ಕೊಡುತ್ತಿದ್ದೇನೆ)









ಪ್ರತಿಕ್ರಿಯೆಗಳು
ಉ: ಬೀchi ಜೋಕುಗಳು (೨)
ರಾಜಕೀಯ ವಿಡ0ಬನೆಯ ಜೊಕ್ ತುಮ್ಬಾ ಮೀನಿ0ಗ್ ಫುಲ್ಲ್ ಆಗಿದೆ ಬ0ಡ್ರಿ ಯವರೆ ನಮ್ಗೆ ಬೀ-chi ಯವರ ಬಗ್ಗೆ ಆಗು ಅವರ ಸಾಹಿತ್ಯ ದ ಬಗ್ಗೆ ಮತಷ್ಟು ತಿಳಸಿ.
ಉ: ಬೀchi ಜೋಕುಗಳು (೨)
ನಿಜ ಶ್ರೀನಿವಾಸ್ ರಾಜಕೀಯ ನೇತಾರರ ಜೋಕ್ ನನಗೂ ತುಂಬಾ ಇಷ್ಟವಾದ ಜೋಕ್. ಬೀchiಯವರ ಒಂದು ಸಂಕ್ಷಿಪ್ತ ಪರಿಚಯವನ್ನು ಈ ಮಾಲಿಕೆಯ ಮೊದಲನೇ ಲೇಖನದಲ್ಲಿ ಕೊಟ್ಟಿದ್ದೇನೆ.
ಉ: ಬೀchi ಜೋಕುಗಳು (೨)
ಎರಡು ಹಾಸ್ಯಗಳು ಚನ್ನಾಗಿದೆ, ಮೊದಲನೆಯದನ್ನ ನರಸಿಂಹರಾಜು ಅವರು ಒಂದು ಚಿತ್ರದಲ್ಲಿ (ಹೆಸರು ಜ್ಞಾಪಕವಿಲ್ಲ) ಅಳವಡಿಸಿಕೊಂಡಿದ್ದಾರೆ .
ಉ: ಬೀchi ಜೋಕುಗಳು (೨)
ಹೊಸ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು, ಸತೀಶ್.
ಉ: ಬೀchi ಜೋಕುಗಳು (೨)
ಎರಡನೆ ಜೋಕ್ ಓದಿದಾಗ, ಬೀ ಚಿ ಯವರು ರಾಜಕಾರಣಿಯ ಬಗ್ಗೆ ಬರೆದಿದ್ದ ಮತ್ತೊಂದು ಹಾಸ್ಯ ಪ್ರಸಂಗ ನೆನಪಾಯ್ತು.
ರಾಜಕಾರಣಿಯೊಬ್ಬ ಭೀಮರಾಯರ ಬಳಿ ಬಂದು ಹೇಳುತ್ತಾನೆ
`ನೋಡ್ರಿ ಸರ ನಾನು ಈ ಬಾರಿ ಒಮ್ಮೆಗೆ ಎರಡು ಕ್ಷೇತ್ರದಿಂದ ಸ್ಪರ್ದಿಸಿದ್ದೇನೆ, ಹೇಗೆ ನಾವು` - ಅಂದನಂತೆ
ಅದಕ್ಕೆ ರಾಯಸಂ ಭೀಮಸೇನ ರಾಯರು ತಮ್ಮದೆ ಆದ ರೀತಿಯಲ್ಲಿ ಪ್ರಶಂಸೆ ವ್ಯಕ್ತ ಪಡಿಸಿದ್ದು -
`ಹೌದೇನ್ರಿ ಮಂದಿ ಒಂದಕ್ಕೆ ನಿಂತಿದ್ದು ಕೇಳಿದಿನ್ರಿ, ಎರ್ಡಾಕ್ಕೆ ನಿಂತಿದ್ದು ಕೇಳಿರ್ಲಿಲ್ಲ ನೋಡ್ರಿ`
ಚೆನ್ನಾಗಿದೆ ಶ್ರೀಧರ್ ಅವ್ರೆ
-ಧನ್ಯವಾದಗಳು
-ರಾಮಮೋಹನ
ಉ: ಬೀchi ಜೋಕುಗಳು (೨)
ರಾಮ ಮೋಹನ್ ಸರ್,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ರಾಜಕಾರಣಿಗಳ ಬಗ್ಗೆ ನೀವು ಕೊಟ್ಟಿರುವ ಜೋಕೇ ಸರಿಯಿರಬಹುದು. ಅದನ್ನು ನಾನು ಬೇರೊಂದು ವಿಧದಲ್ಲಿ ಕೇಳಿದ್ದೆ ಅದನ್ನೇ ಈ ಲೇಖನ ಮಾಲಿಕೆಯ ಮೊದಲನೆ ಕಂತಿನಲ್ಲಿ ಬರೆದಿದ್ದೇನೆ.
ಉ: ಬೀchi ಜೋಕುಗಳು (೨)
ಶ್ರೀಧರ್ ಸಾರ್, ತಮ್ಮ ಮೊದಲ ಕಂತನ್ನು ಆಮೇಲೆ ಓದಿದೆ, ಅದು ತಿಳಿಯದೆ ಮೊದಲ ಕಂತಾಗಿ ಈ ಲೇಖನವನ್ನು ಓದಿ,
ಈ ಪ್ರತಿಕ್ರಿಯೆ ನೀಡಿದೆ, ಭಹುಷಃ ತಮ್ಮ ವ್ಯಾಖ್ಯಾನವೆ ಸರಿ ಇರಬಹುದು - ಕಾರಣ ನಾನು, ರಾಜಕಾರಣಿಯ ಬಗ್ಗೆ ಅವರು
ಈ ರೀತಿ ಹೇಳಿದ್ದರೆಂಬುದನ್ನು ಒಂದು ಹಾಸ್ಯ ಧಾರೆಯಲ್ಲಿ ಕೇಳಿದ್ದು.
ಮುಂದುವರೆಯಲಿ...
-ರಾಮಮೋಹನ
ಉ: ಬೀchi ಜೋಕುಗಳು (೨)
ರಾಮಮೋಹನ್ ಸಾರ್,
ಸಂದರ್ಭ ಏನೇ ಆಗಿರಲಿ ಆ ರೀತಿ ವಿಶಿಷ್ಠವಾಗಿ ಉತ್ತರಿಸ ಬಲ್ಲವರು ಬೀchiಯವರೊಬ್ಬರೇ ಎನ್ನುವುದರಲ್ಲಿ ಎರಡು ಮಾತಿಲ್ಲ!
ಉ: ಬೀchi ಜೋಕುಗಳು (೨)
ಅರ್ಥಗರ್ಭಿತವಾದ ಬಿಚಿಯವರ ಜೋಕುಗಳನ್ನ ಕೊಡುತ್ತಿರುವ ತಮಗೆ ಧನ್ಯವಾದಗಳು ಸರ್. ನ0ಗೆ ಅವರ ಪ್ರಿತಿಯೊ0ದು ಜೋಕು ತು0ಬಾ ಇಷ್ಟಾ ಆಗುತ್ತೆ.
ಉ: ಬೀchi ಜೋಕುಗಳು (೨)
ಬೀchiಯವರ ಜೋಕು ಮತ್ತು ಬರವಣಿಗೆಗಳೆಂದರೆ ನನಗೂ ಕೂಡ ಬಹಳ ಇಷ್ಟ ಆದ್ದರಿಂದ ಈ ಮಾಲಿಕೆಯನ್ನ ಪ್ರಾರಂಭಿಸಿದೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: ಬೀchi ಜೋಕುಗಳು (೨)
:))))
ಉ: ಬೀchi ಜೋಕುಗಳು (೨)
ಒಂದು ಕ್ಷಣ ಈ ಜೋಕುಗಳು ನಿಮ್ಮನ್ನು ನಗಿಸಿದ್ದರೆ ನಾನು ಕೃತಾರ್ಥನಾದೆ.
ಉ: ಬೀchi ಜೋಕುಗಳು (೨)
ಶ್ರೀಧರ್ ಅವ್ರೆ-
ಇದು ಹಳೆಯ ಬರಹ ಆದರೆ ಇವತ್ತು ಈಗ 'ಇಂದಿನ ಜನಪ್ರಿಯ ಪುಟಗಳು' ನಲ್ಲಿ ಇದೂ ಇತ್ತು ಅದೊಮ್ಮೆ ಬೀ ಚಿ ಜೋಕು ಗಳನ್ನ ಓದಿ ಪತಿಕ್ರಿಯಿಸಿದ್ದ ನನಗೆ ಇದೂ ನಿಮ್ಮದೇ ಇರಬಹುದು ಅಂತ ಕ್ಲಿಕ್ಕಿಸಿ ಓದಿ :())))))))
ಬೀ ಚಿ ಅವರ ಆ ಕ್ಷಣದ ಪತಿಕ್ರಿಯೆ ಅದೂ ಚಾಟಿ ಏಟಿನಂತೆ ಮತ್ತು ಹಾಸ್ಯಾತ್ಮಕವಾಗಿಯೂ ತಟ್ಟನೆ ಹೇಳುವ ರೀತಿ ಬಹು ಹಿಡಿಸಿತು..
ಮೊದಲ ಮಾತು ಎರಡನೆಯ ಜೋಕುಗಳಿಗೆ ಬಂದ ಪ್ರತಿಕ್ರಿಯೆಗಳೂ ಮುದ ನೀಡಿದವು..
ಅದರಲು ರಾಮ ಮೋಹನರು ಹೇಳಿದ ಮತ್ ಒಂದು ಜೋಕು
------------------------------------------------------------------------------------
'೧ ಕ್ಕೆ ನಿಲ್ಲೋದು ನೋಡಿದ್ದೆ -ಕೇಳಿದ್ದೆ ಆದರೆ ೨ ನ್ನು ನಿಂತೆ ಮಾಡುವುದು ' ಕೇಳಿದ್ದು ಇದೆ ಮೊದಲು:())))))))))))
------------------------------------------------------------------------------------
ಅದು ನಿಜವಾಗಿಯೂ ಸಕತ್ ಜೋಕ್ ....
ಶುಭವಾಗಲಿ...