ಬೇಕು _ ಸಾಕುಗಳು
ಕವನ
ಎನ್ನಯ ದೇಹ ಶ್ಹುಭ್ರಗೊಳ್ಳಲು ಸಾಬುನು ಬೇಕು
ಅಂತರಂಗ ಶ್ಹುದ್ಧಿಗೈಯಲು ನಿನ್ನಯ ನಾಮೋದಕವೇ ಸಾಕು
ಸ್ಪಷ್ಟ ಕಾಣಲು ಕಣ್ಣಿಗೆ ಕನ್ನಡಕ ಬೇಕು
ಭವ್ಯ ರೂಪ ಗೋಚರಿಸಲು ನಿನ್ನಯ ಧ್ಯಾನವೇ ಸಾಕು
ಕಲ್ಲು ಮುಳ್ಳು ತಾಗದಿರಲು ಪಾದಕೆ ಪಾದರಕ್ಷೆ ಬೇಕು
ಕಷ್ತ ಕಾರ್ಪಣ್ಯದಿಂದ ಪಾರಾಗಲು ನಿನ್ನಯ ಶ್ಹ್ರೀರಕ್ಷೆಯೇ ಸಾಕು
ಮಳೆ ಸುಡು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಕೊಡೆ ಬೇಕು
ದು:ಖ ದುಮ್ಮನಗಳಿಂದ ಬಚಾವಾಗಲು ನಿನ್ನಯ ಕ್ಱುಪಾಕಟಾಕ್ಷವೇ ಸಾಕು
ಕಾಯಿಲೆ ವಾಸಿಯಾಗಲು ಔಷಧೋಪಚಾರ ಬೇಕು
ನೊಂದ ಮನಕೆ ಮುದ ನೀಡಲು ನಿನ್ನಯ ಅಭಯ ಹಸ್ತವೇ ಸಾಕು
ಬಾಳಲಿ ಇನ್ನೇನು ಬೇಕು
ನಿನ್ನೊಲುಮೆ ಒಂದೇ ಸಾಕು
ಇದುವೇ ಎನ್ನಯ ಸಾಕು_ ಬೇಕುಗಳು
ರಚನೆ : ಜೈವಂತ ಎಸ್. ಗಾಂಜೇಕರ
ಚಿತ್ರ್
- Log in to post comments