23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಗಾದೆಗೊಂದು ಗುದ್ದು

ಪ್ರೀತಿ, ವಿವಾಹ, ವಿಚ್ಛೇದನಗಳ ಖಾಯಿಲೆಗೆ ಸಾವಿನ ನಂತರದ ಬದುಕಿನಲ್ಲೂ ಮದ್ದಿಲ್ಲ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೮

May 25, 2010 - 2:46pm
anilkumar

(೩೬) ಸಾವಿನ ನಂತರ, ನಂತರದ ಬದುಕನ್ನು ಹುಡುಕುವುದೆಂದರೆ ಫಿಲ್ಮ್ ರೋಲನ್ನು ಹೊರಗೆಳೆದು ಅದರಲ್ಲಿ ಸಿನೆಮವೊಂದನ್ನು ನಿರೀಕ್ಷಿಸಿದಂತೆ.

(೩೭) ಖಾಯಿಲೆ ಸಹಜವಾದುದು. ಸಹಜ ಆರೋಗ್ಯವೆಂಬುದೊಂದು ಕೊಡುಗೆ. ಜಾಹಿರಾತುಗಳ ಒತ್ತಾಯದಿಂದ ಸಂಪಾದಿಸಿಕೊಳ್ಳುವ ’ಸದೃಢ ಆರೋಗ್ಯ’ವೇ ನಿಜವಾದ ರೋಗ!

(೩೮) ಬದುಕು ಸುಂದರ. ಆದರೆ ಷರತ್ತುಗಳು ಅನ್ವಯ. ಇರುವುದೊಂದೇ ಷರತ್ತುಃ ಅದನ್ನು ಸುಂದರವಾಗಿಸಲು ಸೌಂದರ್ಯ ಮಾಪಕವನ್ನು ಬಳಸಲೇಬೇಕಷ್ಟೇ.

(೩೯) ಪ್ರೀತಿಸುವುದೆಂದರೆ ಒಬ್ಬರನ್ನು ಇಷ್ಟಪಡುತ್ತ, ಜಗತ್ತಿನಲ್ಲಿ ಅತ್ಯುತ್ತಮವಾದುದನ್ನು ಅವರೊಬ್ಬರೇ ನೀಡುತ್ತಾರೆಂದು ನಿರೀಕ್ಷಿಸುವುದು.

ವಿಚ್ಛೇದನವೆಂದರೆ ಅವರು ನಿಮಗೇನಾಗಬೇಕು ಎಂದು ನೀವು ನಿರೀಕ್ಷಿಸಿದ್ದರೋ ಅದು ನೀವೇ ಆಗಿಬಿಡುವ ಮುನ್ನ, ಆ ನಿರೀಕ್ಷೆಯನ್ನೇ ಕೈಬಿಡುವುದು.

ಪ್ರೀತಿಯೆಂಬ ಯೋಜನೆಯ ಅಪೂರ್ಣತೆಯ ದೃಢೀಕರಣವನ್ನೇ ವಿಚ್ಛೇದನವೆನ್ನುವುದು. Read more about ಪ್ರೀತಿ, ವಿವಾಹ, ವಿಚ್ಛೇದನಗಳ ಖಾಯಿಲೆಗೆ ಸಾವಿನ ನಂತರದ ಬದುಕಿನಲ್ಲೂ ಮದ್ದಿಲ್ಲ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೮

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೧೧

May 28, 2010 - 4:16pm
anilkumar

(೫೧) ಕಾಯುವುದೆಂದರೆ ಅದೊಂದು ಹಿಂಸೆ. ಏಕೆಂದರೆ ಅದು ಬಂದಾಗ ’ಕಾಯುವ’ ದುಶ್ಚಟವೂ ಅದರೊಂದಿಗೆ ಬಂದುಬಿಡುತ್ತದೆ!

(೫೨) ಜಗತ್ತಿನ ಬಗ್ಗೆ ಎಂದಿಗೂ ಅಚ್ಚರಿಪಡಬೇಡಿ. ಅದೆಷ್ಟು ತಿಕ್ಕಲು ಎಂದು ತಿಳಿಯಬೇಕಾದರೆ ಕನ್ನಡಿ ನೋಡಿಕೊಳ್ಳಿ ಸಾಕು!

(೫೩) ’ಶೂನ್ಯ’ ಎಂಬ ನಿರಂತರವಾಗಿ ಪ್ರಸಾರವಾಗುವ, ನಿರಂತರ ಮೆಗಾಸೀರಿಯಲ್ಲಿನ ನಡುವಿನ ’ಕ್ಷಣಿಕ ವಿರಾಮವನ್ನು’ ಬದುಕು ಎನ್ನುತ್ತೇವೆ. ಈ ಸತ್ಯವನ್ನು ನಂಬಲಿಚ್ಛಿಸದವರು ದೇವರು, ತೀರ್ಥಯಾತ್ರೆ, ಮೋಕ್ಷ, ದೈಹಿಕ ವಾಂಛೆ ಮತ್ತು ಮ್ಯಾಕ್ ಡೋನಾಲ್ಡ್ ಪಿಝ್ಜ ಮುಂತಾದ ಜಾಹಿರಾತನ್ನು ಹೆಚ್ಚು ಹೆಚ್ಚು ಅನುಭವಿಸಲಿಚ್ಛಿಸುತ್ತಾರೆ.

(೫೪) ನೋವೆಂಬುದು ನೋವಿನ ಭಯದಲ್ಲಿದೆ. ಸತ್ತವರಿಗಾಗಿ ನಾವು ಅಳುತ್ತೇವೆಯೇ ಹೊರತು ಸ್ವತಃ ಅವರು ದುಃಖಿಸುವುದಿಲ್ಲ! Read more about ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೧೧

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸೋಂಬೇರಿತನವೇ ಮೌಲ್ಯವಾದಲ್ಲಿ ವಿಶ್ವವೇ ’ಒಂದು’ ಕಣ!

May 29, 2010 - 11:56pm
anilkumar

(೫೬) ಸೋಂಬೇರಿತನದಿಂದ ಬದುಕುವುದೇ ಒಂದು ಮೌಲ್ಯ! ತಟಸ್ಥವಾಗಿರುವುದೆಂದರೆ, ನಿಶ್ಚಲವಾಗಬೇಕೆಂದರೆ ಸಾಫಲ್ಯತೆಗೆ ಬೇಕಾದ ಎಲ್ಲ ವಾಂಛೆಗಳನ್ನೂ ಮೀರಿ ನಿಲ್ಲುವುದೇ ಅಲ್ಲವೆ?

(೫೭) ತನ್ನಲ್ಲಿರುವ ಕಾಲಾವಕಾಶದ ಮೌಲ್ಯವನ್ನು ಹೆಚ್ಚಿಸಿಕೊಂಡಿರುವವನನ್ನು ಬಹಳ ’ಬಿಜಿ’ ಮನುಷ್ಯ ಎನ್ನುತ್ತೇವೆ. ತನ್ನಲ್ಲಿರುವ ಕಾಲಾವಕಾಶವು ಯಾತಕ್ಕೂ ಸಾಲದೆಂಬ ಚಿಂತೆಯಲ್ಲಿಯೇ ಸಾಕಷ್ಟು ಕಾಲವನ್ನು ವ್ಯಯಿಸುವವನನ್ನು ಸೋಂಬೇರಿ ಎನ್ನುತ್ತೇವೆ.

(೫೮) ಸಾಮಾನ್ಯ ಮನುಷ್ಯನೆಂದರೆ ಇಡೀ ವಿಶ್ವವನ್ನು ಒಂದು ಮರಳ ಕಣದಂತೆ ಭಾವಿಸುವವನು. ಪ್ರತಿಭಾವಂತನೆಂದರೆ ಮರಳ ಕಣವೊಂದರಲ್ಲಿ ವಿಶ್ವವನ್ನೇ ಕಾಣುವವನು! Read more about ಸೋಂಬೇರಿತನವೇ ಮೌಲ್ಯವಾದಲ್ಲಿ ವಿಶ್ವವೇ ’ಒಂದು’ ಕಣ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೇಸರವು ಆಸಕ್ತಿಯ ಸಹವರ್ತಿಯಾದಾಗ ವಿಶ್ವವೇ ರೋಮಾಂಚನದ ಸಂವಹನವಾಗುತ್ತದೆ!

May 31, 2010 - 1:29pm
anilkumar

(೬೧) ನಾನು ಬೇಸರವನ್ನು ಕುರಿತಂತೆ ಒಂದು ಆಸಕ್ತಿಕರ ಪುಸ್ತಕವನ್ನೋದಿದೆ. ಆಸಕ್ತಿದಾಯಕ ವಿಷಯಗಳನ್ನು ಕುರಿತ ಒಂದು ಒಣಪುಸ್ತಕವು ಮನುಷ್ಯನನ್ನು ಸಿನಿಕನನ್ನಾಗಿಸುತ್ತದೆ.

(೬೨) ಪ್ರತಿಯೊಂದರಲ್ಲೂ ಆಸಕ್ತಿಯನ್ನು ಹೊಂದಬೇಕೆಂದು ಬಲ್ಲವರು ಹೇಳುತ್ತಾರೆ.ಹಾಗಿದ್ದಲ್ಲಿ ಬದುಕು ನಿಜಕ್ಕೂ ಏಕತಾನವಾಗಿಬಿಡುತ್ತದೆ. ಏಕತಾನತೆಯು ಬೇಸರದ ಮೊದಲ ಹೆಜ್ಜೆಯಲ್ಲವೆ?

(೬೩) ವಿಶ್ವವನ್ನು ಕುರಿತು ರೋಮಾಂಚನಗೊಳ್ಳಬೇಕಾದ ಅವಶ್ಯಕತೆಯಿಲ್ಲ, ಅದೂ ಸ್ವತಃ ತಾವುಗಳೇ ಅದರ ಭಾಗವಾಗಿರುವಾಗ!

(೬೪) ನಗರದ ರಸ್ತೆಗಳ ಮೇಲೆ ಓಡಿಯಾಡುವುದೆಂದರೆ ನಿಮ್ಮ ಅಕ್ಕಪಕ್ಕದ ಸವಾರರನ್ನು ಸರ್ಹವರ್ತಿಗಳೆಂದು ಭಾವಿಸದೇ ಸಂವಹಿಸುವುದು. ಅಪಾರ್ಟ್‌ಮೆಂಟ್‍ಗಳಲ್ಲಿ ಬದುಕುವುದೆಂದರೆ ಸಂವಹಿಸದೆ ಸಹವರ್ತಿಗಳನ್ನು ಹೊಂದಿರುವುದು! Read more about ಬೇಸರವು ಆಸಕ್ತಿಯ ಸಹವರ್ತಿಯಾದಾಗ ವಿಶ್ವವೇ ರೋಮಾಂಚನದ ಸಂವಹನವಾಗುತ್ತದೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇತಿಹಾಸವು ಮರುಕಳಿಸಿದಲ್ಲಿ, ಗಡ್ಡವೇ ಬುದ್ಧಿವಂತಿಕೆಯಾದಲ್ಲಿ, ಕಾಲವು ಸ್ಥಿರವಾದಲ್ಲಿ ’ಮನುಷ್ಯ’ನೆಂಬುದು ಹೆಸರಾಗುತ್ತದೆ!

June 1, 2010 - 12:20pm
anilkumar

(೬೬) ನಾನು ಇತಿಹಾಸವಾದರೆ, ನಾನು ಪುನರಾವರ್ತನೆಗೊಳ್ಳುತ್ತೇನೆ. ಪುನಃ ಪುನಃ ಹೇಳುವುದರಿಂದಾಗಿ ನಾನು ಇತಿಹಾಸವಾಗಿಬಿಡುತ್ತೇನೆ! (ಕ್ರಮಬದ್ಧವಾಗಿ ಒಳ್ಳೆಯ ಮತ್ತು ಕೆಟ್ಟ ಟೀಚರ್ ನಡುವಣ ವ್ಯತ್ಯಾಸವಿದು).

(೬೭) ಲೆಕ್ಕಾಚಾರವಾಗಿ ಬದುಕಿದಾಕ್ಷಣ ನೀನು ಗಣಿತಜ್ಞನಾಗಲಾರೆ. ವ್ಯವಸ್ಥಿತವಾಗಿ ಬದುಕಿದಾಕ್ಷಣ ತರ್ಕಶಾಸ್ತ್ರಜ್ಞನಾಗಲಾರೆ. ತರ್ಕಬದ್ಧವಾಗಿ ಬದುಕಿದಾಕ್ಷಣ ನೀನು ವಿಜ್ಞಾನಿಯಾಗಲಾರೆ. ಇದು, ಎಲ್ಲ ಗಡ್ಡಧಾರಿಗಳೂ ಬುದ್ಧಿವಂತರು ಹೇಗಾಗುವುದಿಲ್ಲವೋ ಹಾಗೆ. ಅನ್ಯಲಿಂಗೀಯರ ಕಥೆಯೇನು?

(೬೮) ಈಗ ಕಾಲವನ್ನು ಕೊಂದವರಿಗೆ ನಂತರದಲ್ಲಿ ಕಾಲಾವಕಾಶದ ಕೊರತೆಯೇ ಶಾಪವಾಗಲಿದೆ. ಸಮಯ ಎಂಬುದೊಂದು ಅಧ್ಬುತ ಪರಿಕಲ್ಪನೆ. ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ!

(೬೯) ಜೀವಂತವಾಗಿರಬೇಕು ಎಂದುಕೊಳ್ಳುವವರಿಗೆ ಕಾಲವು ಅವರ ಪರವಾಗಿರಬೇಕಾಗುತ್ತದೆ, ಕೈಯಲ್ಲಿ ಗಡಿಯಾರವಿಲ್ಲದಿದ್ದರೂ ಸಹ! Read more about ಇತಿಹಾಸವು ಮರುಕಳಿಸಿದಲ್ಲಿ, ಗಡ್ಡವೇ ಬುದ್ಧಿವಂತಿಕೆಯಾದಲ್ಲಿ, ಕಾಲವು ಸ್ಥಿರವಾದಲ್ಲಿ ’ಮನುಷ್ಯ’ನೆಂಬುದು ಹೆಸರಾಗುತ್ತದೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಉದ್ಯಾನವೆಂಬುದು ಕಾಡಿನ ಕಸದ ತೊಟ್ಟಿಯಾದರೆ ಮೃಗಾಲಯದ ಹೊರಗಿನ ಜಗವು ಸೆರೆವಾಸ!

June 1, 2010 - 10:23pm
anilkumar

(೭೧)ಬಹಳಷ್ಟು ಜನರು ನೀನು ಏನಾಗಿದ್ದೀಯೋ ಅದಕ್ಕಾಗಿ ನಿನ್ನನ್ನು ಇಷ್ಟಪಡುತ್ತಾರೆ. ಮಿಕ್ಕುಳಿದವರು ನಿನ್ನನ್ನು ಅದೇ ಕಾರಣಕ್ಕಾಗಿ ದ್ವೇಷಿಸಲು ಇಷ್ಟಪಡುತ್ತಾರೆ!

(೭೨) ಅಸ್ತಿತ್ವದಲ್ಲಿರುವ ಪ್ರತಿಯೊಂದು ಕಾಡೂ ಸಹ ಮನುಷ್ಯನ ಸೋಲಿನ ಸಂಕೇತವಾಗಿದೆ. ಅದನ್ನು ಆತ ವಸಾಹತೀಕೃತಗೊಳಿಸಲಾಗದ ಸೋಲು ಅದು!

(೭೩) ಮಿಕ್ಕುಳಿದ ಜಗವು ಮಾನವರ ಸಹಾಯದಿಂದ ಅವರುಗಳನ್ನೇ ಏಕೆ ಬಂಧಿಸಿಟ್ಟುಕೊಂಡಿದೆ ಎಂದು ಮೃಗಾಲಯದೊಳಗಿನ ಪ್ರಾಣಿಗಳು ಅಚ್ಚರಿಪಡುತ್ತವೆ. ಮತ್ತು ತಮ್ಮನ್ನು ಅದರೊಳಗಿಂದ ಏಕೆ ಬಿಡುಗಡೆಗೊಳಿಸಲಾಗಿದೆ ಎಂದೂ ಅರ್ಥವಾಗದೆ ಚಿಂತಿಸುತ್ತವೆ!

(೭೪) ಕಾಡಿನ ಕಸದ ತೊಟ್ಟಿಯನ್ನು ಉದ್ಯಾನವನ ಎನ್ನುತ್ತೇವೆ! Read more about ಉದ್ಯಾನವೆಂಬುದು ಕಾಡಿನ ಕಸದ ತೊಟ್ಟಿಯಾದರೆ ಮೃಗಾಲಯದ ಹೊರಗಿನ ಜಗವು ಸೆರೆವಾಸ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಗುವೆಂಬ ಮುತ್ಸದ್ಧಿತನದ ಧಾರಾವಾಹಿಯು ಸಾವಿನ ನಂತರ ಜೀವನದಂತೆ, ಸ್ವಾನುಭವದಿಂದ ಮಾತ್ರ ಸಾಧ್ಯ!

June 3, 2010 - 12:04pm
anilkumar

(೭೬) ಮಗುವು ಎಂತಹ ಮುತ್ಸದ್ಧಿ ಮಾನವಜೀವಿ ಎಂದರೆ, ಮತ್ತೊಂದು ಮಗುವನ್ನು ಹೊರತುಪಡಿಸಿ ಮತ್ಯಾವ ಜೀವಿಯೂ ಅದರ ನಡವಳಿಕೆಯಿಂದ ಪ್ರಭಾವಿತವಾಗದಂತೆ ನೋಡಿಕೊಳ್ಳುತ್ತದೆ!

(೭೭) ನಾನೆಂದರೆ ನೀವು ಏನೆಂದು ಭಾವಿಸಿದ್ದೀರೆಂದು ನಾನು ಭಾವಿಸಿದ್ಡೇನೋ ಅದು ನಾನಲ್ಲ!

(೭೮) ಕೆಟ್ಟ ಧಾರಾವಾಹಿಗಳು ಇರುವವರೆಗೂ ಜಾಹಿರಾತುಗಳು ಇರುತ್ತವೆ.

(೭೯) ತಮ್ಮನ್ನು ಕೊಲ್ಲಲು ಬಯಸುವವರನ್ನು ಕೊಲ್ಲುವ ಸಲುವಾಗಿ ಸೈನ್ಯಕ್ಕೆ ತೆರಿಗೆ ಮುಖೇನ ಹಣ ನೀಡುವವರನ್ನು ನಾಗರೀಕರೆನ್ನುತ್ತೇವೆ.

(೮೦) ಸಾವಿನ ನಂತರ ಏನಾಗುತ್ತದೆಂದು ತಿಳಿಯಲಿರುವ ಒಂದೇ ಒಂದು ಮಾರ್ಗವೆಂದರೆ ಅದರ ಪ್ರಾಥಮಿಕ ಅನುಭವ ಪಡೆಯುವುದಾಗಿದೆ! Read more about ಮಗುವೆಂಬ ಮುತ್ಸದ್ಧಿತನದ ಧಾರಾವಾಹಿಯು ಸಾವಿನ ನಂತರ ಜೀವನದಂತೆ, ಸ್ವಾನುಭವದಿಂದ ಮಾತ್ರ ಸಾಧ್ಯ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪ್ರೆಸ್‍ಕ್ಲಬ್ ಎಂಬುದೊಂದು ಗುಟ್ಟಾದರೆ ದೂರದರ್ಶನವು ನಿಮ್ಮನ್ನು ಹೊರತುಪಡಿಸಿದ ಸುದ್ಧಿಯಾಗುತ್ತದೆ!

June 3, 2010 - 6:17pm
anilkumar

(೮೧) ನೀವು ಎಂದೂ ಯಾರಿಗೂ ದಾಟಿಸಲಾಗದ ಗುಟ್ಟೊಂದನ್ನು ಹೇಳುವೆ. ಅರ್ಥವಾಯಿತೆ?!

(೮೨) ನಿಮ್ಮನ್ನು ಅಹ್ವಾನಿಸದ ಅಥವ ಹೊರದಬ್ಬದ, ಆದರೆ ನಿಮ್ಮ ಮನೋಭೂಮಿಕೆಯಿಂದ ಹೊರಹೋಗಲಾರದ್ದನ್ನು ಪ್ರೆಸ್‍ಕ್ಲಬ್ ಎನ್ನುತ್ತೇವೆ!

(೮೩) ಬದುಕಿಗೊಂದು ಗುರಿ ಇರಬೇಕು. ಅಸಂಗತವಾದ ಬದುಕನ್ನು ಹೇಗೆ ಎದುರಿಸಬೇಕೆಂಬ ಪರಿಹಾರ ಕಂಡುಕೊಳ್ಳುವ ಗುರಿಯಾಗಿರಬೇಕು ಅದು!

(೮೪) ನಮ್ಮ ಮನೆಯ ಆಗುಹೋಗುಗಳನ್ನು ಮಾತ್ರ ಬದಿಗಿರಿಸಿ ಜಗತ್ತಿನ ವ್ಯವಹಾರಗಳಿಗೆ ಕಣ್ತೆರೆದು ಕೂರುವ ತಂತ್ರವನ್ನು ದೂರದರ್ಶನ ಎನ್ನುತ್ತೇವೆ.

(೮೫) ನಿಮಗೇನಾದರೂ ಯಾವಾಗಲಾದರೂ ಗುಂಡು ತಗುಲಿದರೆ, ನಿಮಗೆ ಶುಭಾಶಯಗಳು! ಜಗತ್ತಿನಲ್ಲಿ ಒಬ್ಬರಾದರೂ ತಮ್ಮ ಗಮನವನ್ನು ಆಕಸ್ಮಿಕವಾಗಿಯೋ ಅಥವ ಮಾರಣಾಂತಿಕವಾಗಿಯೋ ನಿಮ್ಮೆಡೆ ’ಕೇಂದ್ರೀಕರಿಸಿದ್ದಾರೆ’ ಎಂದರ್ಥ! Read more about ಪ್ರೆಸ್‍ಕ್ಲಬ್ ಎಂಬುದೊಂದು ಗುಟ್ಟಾದರೆ ದೂರದರ್ಶನವು ನಿಮ್ಮನ್ನು ಹೊರತುಪಡಿಸಿದ ಸುದ್ಧಿಯಾಗುತ್ತದೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪ್ರಸಾದನದ ಹಿಂದಿನ ಮುಖದ ಖಿನ್ನತೆಯ ದಿನಚರಿಯನ್ನು ಕಲಾವಿದೆ ಸ್ವಾದಿಷ್ಟಗೊಳಿಸಬಲ್ಲಳು!

June 4, 2010 - 2:16am
anilkumar

(೮೬) ಪ್ರಸಾದನವನ್ನು ಮುಖಾರವಿಂದಕ್ಕೆ ಬಳಸುವುದೆಂದರೆ ಅದರ ಹಿಂದಿನ ಮುಖವನ್ನು ಅದೃಶ್ಯವಾಗಿಯೇ ಇರಿಸುವ ಬಗ್ಗೆ ತಾವು ತೃಪ್ತರಾಗಿದ್ದೀರೆಂದು ಅರ್ಥ.

(೮೭) ಚಿಂತಿಸುವುದು ಒಂದು ಖಾಯಿಲೆಯಾದಲ್ಲಿ ಅದಕ್ಕೆ ಮದ್ದು ಚಿಂತಿಸುವುದನ್ನು ನಿಲ್ಲಿಸುವುದು. ಇದನ್ನು ಕುರಿತು ಚಿಂತಿಸಿ ನೊಡಿ!

(೮೮) ದಿನಚರಿ ಬರೆಯುವುದೆಂದರೆ ನಿನ್ನೆಯ ದಿನವನ್ನು ನಾಳೆ ಮತ್ತೆ ಬದುಕುವ ಅವಕಾಶವನ್ನು ಪಡೆದುಕೊಳ್ಳುವುದು!

(೮೯) ಹೆಣ್ಣೊಬ್ಬಳು ಕಲಾವಿದೆಯಾದರೆ ಆಕೆ ಮಹಿಳಾ-’ಕಲಾವಿದೆ’ಯಾಗುತ್ತಾಳೆ. ತದ್ವಿರುದ್ಧವಾಗಿ ಗಂಡು ಕಲಾವಿದನಾದರೆ ಆತ ಕೇವಲ ’ಕಲಾವಿದ’ನಾಗುತ್ತಾನೆ. ಆ ಕಲಾವಿದನೊಳಗಿನ ಗಂಡು ಮಂಗಮಾಯವಾಗುತ್ತಾನೆ! Read more about ಪ್ರಸಾದನದ ಹಿಂದಿನ ಮುಖದ ಖಿನ್ನತೆಯ ದಿನಚರಿಯನ್ನು ಕಲಾವಿದೆ ಸ್ವಾದಿಷ್ಟಗೊಳಿಸಬಲ್ಲಳು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೇಸರವೆಂಬ ಸೋಲನ್ನು ಅಪರಿಚಿತವಾದ ಸ್ಫೂರ್ತಿಯು ಗೆಲುವನ್ನಾಗಿ ಮಾರ್ಪಡಿಸಬಲ್ಲದು

June 5, 2010 - 2:38pm
anilkumar

(೯೧) ಆಗಾಗ, ಕೆಲವೊಮ್ಮೆ, ಹಲವು ಸಲ ಮತ್ತು ಎಲ್ಲ ಕಾಲಕ್ಕೂ ನಾವು ಬೇಸರಪಡುವುದೇಕೆ? ಈ ಪ್ರಶ್ನೆಯನ್ನು ನಿರಂತರವಾಗಿ, ನಿಯಮಿತವಾಗಿ ಕೇಳಿಕೊಂಡರೆ, ಆ ಕ್ರಿಯೆಯ ಒಳಗೇ ಉತ್ತರ ಅಡಕವಾಗಿಬಿಟ್ಟಿರುತ್ತದೆ!

(೯೨) ನಾವಿಬ್ಬರೂ ಪರಸ್ಪರ ಅಪರಿಚಿತರಾದರೂ ಸಹ, ಇದನ್ನು ಸಾವಿರ ವರ್ಷದ ನಂತರ ನೀವು ಓದಿದರೂ ಸಹ, ನಮ್ಮಿಬ್ಬರ ಸಂಬಂಧವು ಹದಿನಾರು ಪದಗಳ ಹಿಂದೆ ಪ್ರಾರಂಭಗೊಂಡಿದೆ. ಹಲೋ!

(೯೩) ಸ್ಪೂರ್ತಿ ಅನ್ನುವುದರ ವ್ಯಾಖ್ಯೆ ಬರೆಯಲು ಕಾಯುತ್ತಿದ್ದೇನೆ...

(೯೪) ಸರಿಯಾಗಿ ತೊಡಗಿಸಿಕೊಳ್ಳದೆ ದೊರಕಿದ ಸಾಫಲ್ಯವು ಸೋಲು. ಅಪೂರ್ಣವಾದರೂ ಯೋಜನೆಯೊಂದರ ಮನಃಪೂರ್ವಕ ಅನುಷ್ಠಾನವೇ ಗೆಲುವು! Read more about ಬೇಸರವೆಂಬ ಸೋಲನ್ನು ಅಪರಿಚಿತವಾದ ಸ್ಫೂರ್ತಿಯು ಗೆಲುವನ್ನಾಗಿ ಮಾರ್ಪಡಿಸಬಲ್ಲದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಿವೃತ್ತಿ ದುಡಿಯಲಾಗದುದನ್ನು, ವಿಮೆಯು ಸತ್ತ ಮೇಲಿನ ಪ್ರಯೋಜನವನ್ನು, ವೈದ್ಯಕೀಯವು ಸಾಯಲೊಂದು ಕಾರಣವನ್ನು, ಅಪಘಾತವು ಬದುಕಿನ ನೋವನ್ನು ವಿವರಿಸುತ್ತವೆ

June 7, 2010 - 2:11pm
anilkumar

(೯೬) ನಿಮ್ಮನ್ನು ನೀವೇ ದೇವರೆಂದು ಭಾವಿಸಿಬಿಡುವಷ್ಟು ಶಕ್ತಿಯನ್ನು ಅಧಿಕಾರವು ನೀಡುತ್ತದೆ. ಅದು ನಿಶ್ಯಕ್ತ ದೈವದ ಪವಾಡ!

(೯೭) ಯಾರನ್ನಾದರೂ ಮತಿಹೀನರೆಂದು ಕರೆಯುವುದೇ ಮತಿಹೀನವೆಂದು ಭಾವಿಸುವುದು ಮತಿವಂತರ ಕೆಲಸ.

(೯೮) ತಂತ್ರಜ್ಞಾನವೆಂಬುದು ದೈವದ ಅದ್ಭುತ ಸೃಷ್ಟಿಯಾದ ಮನುಷ್ಯನ ವ್ಯವಹಾರಗಳಿಗೆ ಲಗ್ಗೆ ಹಾಕಿದ ಮನುಷ್ಯ ಸೃಷ್ಟಿ.

(೯೯) ಮೊದಲಿಗೆ ಮನುಷ್ಯ ದೇವರನ್ನು ಸೃಷ್ಟಿಸಿದ. ನಂತರ ಮಾನವ ತಂತ್ರಜ್ಞಾನವನ್ನು ಅನ್ವೇಷಿಸಿದ. ಆ ತಂತ್ರಜ್ಞಾನವು ದೇವರನ್ನು ಮಿಥ್ಯೆಯನ್ನಾಗಿಸಿಬಿಟ್ಟಿತು. Read more about ನಿವೃತ್ತಿ ದುಡಿಯಲಾಗದುದನ್ನು, ವಿಮೆಯು ಸತ್ತ ಮೇಲಿನ ಪ್ರಯೋಜನವನ್ನು, ವೈದ್ಯಕೀಯವು ಸಾಯಲೊಂದು ಕಾರಣವನ್ನು, ಅಪಘಾತವು ಬದುಕಿನ ನೋವನ್ನು ವಿವರಿಸುತ್ತವೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೇಂದ್ರವೂ ವೃತ್ತವಾದಾಗ ಯಾರನ್ನೂ ನಂಬದಿರುವುದೇ ಸತ್ಯ!

June 8, 2010 - 2:46pm
anilkumar

(೧೦೧) ನಾನು ವಿಶ್ವದ ಕೇಂದ್ರ. ಏಕೆಂದರೆ ಕೇಂದ್ರ ಎಂಬುದು ವೃತ್ತವೊಂದರ ಮೇಲಿನ ಚಿಕ್ಕೆಯಾಗಿದ್ದು ಆ ವೃತ್ತದ ಕೇಂದ್ರವು ಮತ್ತೆಲ್ಲಿಯೋ ಇರುತ್ತದೆ!

(೧೦೨) ಕೆಲಸಕ್ಕೆ ಬರದ ಜಾಗದಿಂದ ಪ್ರಯೋಜನವಾಗುವ ಸ್ಥಳಕ್ಕೆ ಕರೆದೊಯ್ಯುವುದನ್ನು ರಸ್ತೆ ಎನ್ನುತ್ತೇವೆ. ಅಲ್ಲಿ ಕೆಲಸ ಪೂರೈಸಿದ ನಂತರ ಮತ್ತೆ ರಸ್ತೆಯು ಅಪ್ರಯೋಜಕ ಜಾಗದಿಂದ ಪ್ರಯೋಜನದ ಸ್ಥಳಕ್ಕೆ ನಮ್ಮನ್ನು ಕರೆದುಕೊಂಡು ಬರುತ್ತದೆ. ಪ್ರತಿದಿನ ಮನೆ ಮತ್ತು ಆಫೀಸುಗಳ ನಡುವಣ ಓಡಾಟ ಅಂತಹದ್ದು.

(೧೦೩) ಆತ್ಯಂತಿಕ ಹೇಳಿಕೆಃ ಯಾರು ಏನೇ ಹೇಳಿದರೂ ನೀವು ಸ್ವತಃ ಅದನ್ನು ಯೋಚಿಸಿ, ನಂಬಿ, ಅನುಭವಿಸುವವರೆಗೂ ನಂಬಿಬಿಡಬೇಡಿ--ಈ ನನ್ನ ಉಪದೇಶವನ್ನೂ ಸಹ! Read more about ಕೇಂದ್ರವೂ ವೃತ್ತವಾದಾಗ ಯಾರನ್ನೂ ನಂಬದಿರುವುದೇ ಸತ್ಯ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಲ್ಪನೆಯ ಶತ್ರು ಕನ್ನಡಿಯಾದರೆ ಪೂರ್ಣ ವ್ಯಕ್ತಿತ್ವವು ಆಗಿಹೋದವರಲ್ಲಿ ಮಾತ್ರ ಸಾಧ್ಯ!

June 9, 2010 - 1:56pm
anilkumar

(೧೦೬) ಮಾನವನ ಕಲ್ಪನೆಯ ಶತ್ರು ಕನ್ನಡಿ! ನಾವು ಬೇರೆಯವರಿಗೆ ಹೇಗೆ ಕಾಣುತ್ತೇವೆ ಎಂಬುದನ್ನು ಅದು ತೋರಿಸದು. ನಮಗೂ ಸಹ ಅದು ನಮ್ಮನ್ನೇ ತಿರುವು ಮರುವು ಮಾಡಿ ತೋರಿಸುತ್ತದೆ.

(೧೦೭) ಯಾವ ಬಣ್ಣದ ಮಸಿಯನ್ನು ಬರವಣಿಗೆಗೆ ಬಳಸುತ್ತೇವೆಂಬುದು ಬಹಳ ಮುಖ್ಯ. ತೀರ ಅವಸರಸದಲ್ಲಿರುವಾಗ, ಚೆಕ್‍ಬುಕ್ಕನ್ನು ಕೆಂಪು ಮಸಿಯಲ್ಲಿ ಸಹಿ ಮಾಡಿ ನೋಡಿ, ತಿಳಿಯುತ್ತದೆ!

(೧೦೮) ವಾಹನವಿದ್ದಲ್ಲಿ ಮಾರ್ಗ! Read more about ಕಲ್ಪನೆಯ ಶತ್ರು ಕನ್ನಡಿಯಾದರೆ ಪೂರ್ಣ ವ್ಯಕ್ತಿತ್ವವು ಆಗಿಹೋದವರಲ್ಲಿ ಮಾತ್ರ ಸಾಧ್ಯ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೋಕ್ಷದಿಂದ ಮುಕ್ತಿಗಾಗಿ ದೈವಕ್ಕೆ ಕೃತಜ್ಞವಾಗಿರಬೇಕಾದ ಹಿಂಸೆಗೆ ಪರಿಹಾರ ಕುಡಿತ!

June 10, 2010 - 5:30pm
anilkumar

(೧೧೧) ನೀವು ಎಂದಿಗೂ ಅನುಭವಿಸಲಾಗದ ಆನಂದದ ಅತ್ಯುತ್ಕಟಾವಸ್ಥೆಯನ್ನು ’ಮೋಕ್ಷ’ ಎನ್ನುತ್ತೇವೆ. ಯಾವಾಗಲೂ ಅದನ್ನು ಬೇರೆ ಯಾರೋ ಹಿಂದಿನ ಕಾಲದಲ್ಲೇ ಅನುಭವಿಸಿದವರಾಗಿರುತ್ತಾರೆ. ಮೋಕ್ಷ ಭೂತ. ಯಾವುದೇ ಸಾಧನದಿಂದಲೂ, ಯಾವ ಕಾಲಕ್ಕೂ ದೊರಕಲಾರದಂತಿದ್ದರೂ ಅದರ ಚಟವನ್ನು ಮಾತ್ರ ಹುಟ್ಟಿಸಬಲ್ಲಂತಹ ಅಭಿಪ್ಸೆಯೇ ಮೋಕ್ಷ!

(೧೧೨) ನಿನಗೆ ನಿರಂತರ ಮರೀಚಿಕೆಯಾಗಿರುವುದನ್ನು ಮೋಕ್ಷ ಎನ್ನುತ್ತೇವೆ. ನಿನ್ನನ್ನೇ ನಿರಂತರವಾಗಿ ಅರ್ಥೈಸಿಕೊಳ್ಳಲಾಗದ ನಿನ್ನದೇ ಕಲ್ಪನೆಯನ್ನು ದೇವರೆನ್ನುತ್ತೇವೆ!

(೧೧೩) ನೀನು ಇತರರಿಗೆ ಧಾರಾಳವಾಗಿ ನೀಡಲಿಚ್ಛಿಸುವುದು, ಆದರೆ ಸ್ವತಃ ಎಂದಿಗೂ ಬಯಸದೇ ಇರುವುದನ್ನು ’ಹಿಂಸೆ’ ಎನ್ನುತ್ತೇವೆ! Read more about ಮೋಕ್ಷದಿಂದ ಮುಕ್ತಿಗಾಗಿ ದೈವಕ್ಕೆ ಕೃತಜ್ಞವಾಗಿರಬೇಕಾದ ಹಿಂಸೆಗೆ ಪರಿಹಾರ ಕುಡಿತ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಿಕ್ಸ್ಟಿ, ನೈಂಟಿಯ ’ಕಿಕ್’ ಮೀರಿದ ಸಂಪಾದನೆಯನ್ನು ಸಮಾಜ ಸೇವೆಯ ಮೋಜು ಎನ್ನುತ್ತೇವೆ!

June 12, 2010 - 11:21am
anilkumar

(೧೧೬) ಆರಡಿ ಎಂಬುದೊಂದು ಅಳತೆ. ಕೆಲವರು ಗರ್ವದಿಂದ ಆ ಅಳತೆ ಮೀರಿದಾಗ ಅಂತಹವರನ್ನು ’ಲಂಬೂ’ ಎನ್ನುತ್ತೇವೆ. ಮೊರಡಿಯೊ ಒಂದಳತೆ. ಕೆಲವರು ಅದಕ್ಕೆ ಗೌರವ ನೀಡಿ, ಅದಕ್ಕೆ ತಲೆಬಾಗಿದರೆ ಅಂತಹವರನ್ನು ’ಕುಬ್ಜ’ ಎನ್ನುತ್ತೇವೆ!

(೧೧೭) ಮುವತ್ತು, ಅರವತ್ತು ಎಂಬುದು ಕೇವಲ ಸಂಖ್ಯೆಯಲ್ಲ. ಅದನ್ನು ಮೀರಿದರೆ ದಂಡ ಗ್ಯಾರಂಟಿ--ರಸ್ತೆಯ ’ಮೇಲೆ’. ಸಿಕ್ಸ್ಟಿ, ನೈಂಟಿ ಎಂಬುದೂ ಕೇವಲ ಸಂಖ್ಯೆಗಳಲ್ಲ, ಅದನ್ನು ಮೀರಿದರೆ ಕಿಕ್ ಗ್ಯಾರಂಟಿ--ದೇಹದ ’ಒಳಗೆ’.

(೧೧೮) ಬದುಕಿನ ಅನಿಶ್ಚಿತತೆಯ ಬಗ್ಗೆ ನಾನು ಬಹಳ ನಿಶ್ಚಿಂತನಾಗಿದ್ದೇನೆ. "ನಾವೇಕೆ ಬದುಕುತ್ತೇವೆ?" ಎಂಬ ಅತ್ಯಂತ ಜಾಣ ಪ್ರಶ್ನೆಗೆ ಎಂತಹ ದಡ್ಡ ಉತ್ತರವೂ ಸಹ--ಅದು ಆಸ್ಥಾ ಛಾನಲ್ ಆಗಿದ್ದರೂ ಸರಿಯೇ, ಪ್ರಸ್ತುತವಾಗುತ್ತದೆ. ಏಕೆಂದರೆ "ತಮಾಷೆಗಾಗಿ" ಎಂಬುದೂ ಸಹ ಗಂಭೀರ ಉತ್ತರವೇ ಹೌದು!

(೧೧೯) ದುಡಿಯಲಿಕ್ಕಾಗಿ ನಾವು ಶ್ರಮಿಸುತ್ತೇವೆ. ಸಂಪಾದನೆಯ ಉದ್ದೇಶವನ್ನು ಒಳಗೊಳ್ಳದ ಶ್ರಮವನ್ನು ’ಸಮಾಜ ಸೇವೆ’ ಎನ್ನುತ್ತೇವೆ. Read more about ಸಿಕ್ಸ್ಟಿ, ನೈಂಟಿಯ ’ಕಿಕ್’ ಮೀರಿದ ಸಂಪಾದನೆಯನ್ನು ಸಮಾಜ ಸೇವೆಯ ಮೋಜು ಎನ್ನುತ್ತೇವೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೊದಲ ಮಾನವನಿರ್ಮಿತ ವಸ್ತ್ರವು ಮೊದಲ ಪ್ರಾಣಿಹಿಂಸೆಯ ಸಂಕೇತವೂ ಹೌದು!

June 14, 2010 - 1:22am
anilkumar

(೧೨೧) ಯಾರ‍ಾದರೂ ನಿಮ್ಮೆಡೆ ಗುರಿ ಇಟ್ಟಲ್ಲಿ ನೀವು ಅಜರಾಮರರಾಗುವ ಅವಕಾಶ ಪಡೆದಿರಿ ಎಂದರ್ಥ. ಕ್ಯಾಮರದಿಂದ ಗುರಿ ಇಟ್ಟಲ್ಲಿ ಒಂದು ಛಾಯಾಚಿತ್ರವಾಗಿ, ಬಂದೂಕಿನಿಂದ ಗುರಿ ಇಟ್ಟಲ್ಲಿ ’ಸ್ಮೃತಿ’ಯಾಗಿ ಅಮರರಾಗುತ್ತೀರಿ!

(೧೨೨) ನಮಗೇನೂ ಗೊತ್ತಿಲ್ಲದಿರುವುದರ ಬಗ್ಗೆ ಏನೂ ಗೊತ್ತಿಲ್ಲ ಎಂಬ ಅನುಮಾನದಿಂದ ನಾವು ಕಲಿಯುತ್ತೇವೆ. ಕಲಿಯುವುದೆಂದರೆ ಗೊತ್ತಿಲ್ಲದಿರುವುದರ ಇರುವಿಕೆಯನ್ನು ಅನ್ವೇಷಿಸುವುದೇ ಆಗಿದೆ. ಅನ್ವೇಷಿಸುವುದೆಂದರೆ ಗ್ರಹಿಕೆಗೊಂದು ಅಂಗವನ್ನು ಸೇರ್ಪಡೆ ಮಾಡಿದಂತೆಯೇ.

(೧೨೩) ಕಲಿವುದೆಂದರೆ ನಮ್ಮ ಪೂರ್ವಜರು ಏನನ್ನು ಮರೆತಿದ್ದರೆಂಬುದನ್ನು ಪುನರಾವಲೋಕನ ಮಾಡುವುದೇ ಹೊರತು ಅವರು ’ಏಕೆ’ ಮತ್ತು ’ಏನನ್ನು’ ಕಲಿತಿದ್ದರೆಂಬುದನ್ನು ಮರೆವುದಲ್ಲ!

(೧೨೪) ಮೊದಲ ವಸ್ತ್ರವನ್ನು ಧರಿಸಿದ ಕೂಡಲೆ ಮಾನವ ನಿಸರ್ಗದಿಂದ ತನ್ನನ್ನು ಬೇರ್ಪಡಿಸಿಕೊಂಡುಬಿಟ್ಟ. ತೊಡದಿದ್ದರೆ ಸಂಕೋಚವಾಗಬೇಕಿರುವುದು ಆಕೆಗೇ ಎಂದೂ ನಂಬಿಸಿಬಿಟ್ಟ! ಮೊಟ್ಟಮೊದಲ ವಸ್ತ್ರವು ಪ್ರಾಣಿಯ ಚರ್ಮವೇ. ಮತ್ತು ಅದು ಮಾನವ ಪ್ರಾಣಿಯ ಚರ್ಮವಂತೂ ಅಲ್ಲವೇ ಅಲ್ಲ. ಮೊದಲ ನೈಸರ್ಗಿಕ ವಸ್ತ್ರವು ಮಾನವ ಚರ್ಮವೇ ಆಗಿದ್ದರೂ ಸಹ, ನೈಸರ್ಗಿಕ ವಸ್ತ್ರವನ್ನು ತೊಡೆದು ಹಾಕಿದ ಮೊದಲ ಘಟನೆಯೆಂದರೆ ಮಾನವನಿರ್ಮಿತ ವಸ್ತ್ರದ ಮೊದಲ ಪ್ರಯೋಗವೆಂದೇ ಅರ್ಥ. ಅದು ಮೊದಲ ಪ್ರಾಣಿಹಿಂಸೆಯ ಸಂಕೇತವೂ ಹೌದು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪದೌಷದ, ಪದಾಂಜಲಿಯ ಲೀಲೆಯು ಮನುಷ್ಯನೆಂಬ ಕಾಲದ ಸಂಯೋಜನೆಯನ್ನು ಅನ್ಯಗ್ರಹಜೀವಿಯನ್ನಾಗಿಸೀತು!

June 15, 2010 - 9:23pm
anilkumar

(೧೨೬) ಕೆಲವು ಪದಗಳ ಬಳಕೆಯು ನಿಮ್ಮ ದೇಹವನ್ನು ವೈದ್ಯಕೀಯ ತುರ್ತುಸ್ಥಿತಿಗೊಳಪಡಿಸುತ್ತವೆ. ಉದಾಹರಣೆಗೆ "ನಾ ನಿನ್ನ ಪ್ರೀತಿಸುವೆ!" ಇನ್ನು ಕೆಲವು ಪದಗಳು ಭೂತಕಾಲದಲ್ಲಾದ ವೈದ್ಯಕೀಯ ತುರ್ತುಸ್ಥಿತಿಯನ್ನು ಪ್ರತಿಫಲಿಸುತ್ತದೆ. ಉದಾಹರಣೆಗೆ "ಶ್ರದ್ಧಾಂಜಲಿ!"

(೧೨೭) ಮಾನವ ಪಾತ್ರಧಾರಿಗಳನ್ನು ನಿರ್ದೇಶಿಸುತ್ತಿರುವ ದೈವಲೀಲೆಯನ್ನೇ ಮಾನವ ಅನುಕರಿಸುವುದನ್ನು ’ಕ್ರೀಡೆ’ ಎನ್ನುತ್ತೇವೆ.

(೧೨೮) ತಾವು ಯಾರೆಂಬುದನ್ನು ಮರೆತ ಅನ್ಯಗ್ರಹಜೀವಿಗಳನ್ನು ಮಾನವ ಜೀವಿಗಳೆನ್ನುತ್ತೇವೆ. ಇತರರು ಪರಸ್ಪರ ಅನ್ಯ ಜೀವಿಗಳು! ಆದ್ದರಿಂದಲೇ ನಾನು ಈಗ ನಿಮಗೆ ಹೇಳಿದ್ದನ್ನು ನೀವು ನಂಬಲಿಕ್ಕಿಲ್ಲ. ಈ ಇಡೀ ಕಥೆಯನ್ನು ತಿಳಿದಿದ್ದೂ ಯಾರಿಗೂ ತಿಳಿಸಲಾಗದೇ ಒದ್ದಾಡುವವನನ್ನು ದೇವರು ಎನ್ನುತ್ತೇವೆ!

(೧೨೯) ಮನುಷ್ಯ ಕಾಲದ ಸಂಯೋಜನೆ. ಕಾಲವನ್ನು ಆವರಿಸಿಕೊಂಡಿರುವ ಅವಕಾಶವನ್ನೇ ಪ್ರೇತವೆನ್ನುತ್ತೇವೆ. ಕಾಲ ಹಾಗೂ ಅವಕಾಶವನ್ನು ತನ್ನ ಅನುಪಸ್ಥಿತಿಯಲ್ಲಿ ಹಿಡಿದಿರಿಸುವ ಕ್ರಿಯೆಗೆ ದೇವರು ಎಂದು ಹೆಸರು ಕೊಟ್ಟಿದ್ದೇವೆ! Read more about ಪದೌಷದ, ಪದಾಂಜಲಿಯ ಲೀಲೆಯು ಮನುಷ್ಯನೆಂಬ ಕಾಲದ ಸಂಯೋಜನೆಯನ್ನು ಅನ್ಯಗ್ರಹಜೀವಿಯನ್ನಾಗಿಸೀತು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

’ನಿಜದ ಸೋಲೆಂಬ’ ಕಲ್ಪನೆಯ ಗೆಲುವೇ ದಂತಕಥೆ!

June 21, 2010 - 12:29am
anilkumar

(೧೩೧) ದಂತಕಥೆಗಳು ಪ್ರಕ್ಷುಬ್ಧತೆ, ನೋವು ಮತ್ತು ಹಿಂಸೆಯನ್ನು ಉದ್ದೇಶಿಸುತ್ತವೆ. ಜನರು ಅದನ್ನು ಮರೆಯುವಂತೆ ಮಾಡುವ ಮೂಲಕ ಉದ್ದೇಶಿಸಲಾಗುತ್ತದೆ ಅವುಗಳನ್ನು! ವಿಶೇಷವೆಂದರೆ ಆ ದಂತಕಥೆಗಳೊಳಗಿನ ಪಾತ್ರಧಾರಿಗಳು ಮಾತ್ರ ಇವೆಲ್ಲವನ್ನೂ ಅನುಭವಿಸಬೇಕಾಗಿ ಬರುತ್ತವಷ್ಟೇ!

(೧೩೨) ನಿಜದಲ್ಲಿ ಏನನ್ನು ಕಳೆದುಕೊಂಡಿದ್ದೇವೆಯೋ ಅದನ್ನು ಕಲ್ಪನೆಯಲ್ಲಿ ಪುನರ್-ಸಂಪಾದಿಸಿಕೊಳ್ಳಬಹುದು!

(೧೩೩) ದೇವನೇ ಸರಿಯಾದ ಅಡುಗೆಭಟ್ಟನೆಂದು ಅರಿತವರು ಇತರ ಪ್ರಾಣಿಗಳು. ಹಾಗೆ ತಯಾರಾದ ಊಟಕ್ಕೂ ಅಡುಗೆಯ ಮೂಲಕ ಮಸಾಲೆ ಸೇರಿಸಿ ಹೊಟ್ಟೆ ಕೆಡಿಸಿಕೊಂಡ ಒಂದೇ ಪ್ರಾಣಿ--ಮಾನವ!

(೧೩೪) ಸಣ್ಣದೊಂದು ತಪ್ಪು ಅಳತೆಮೀರಿ ಬೆಳೆವುದನ್ನು ಕೊಲೆ ಎನ್ನಬಹುದು. ದೇಹವೊಂದನ್ನು ಭೌತಿಕವಾಗಿ ಇಲ್ಲವಾಗಿಸುವ ಮೂಲಕ ಸಮಸ್ಯೆಯೊಂದನ್ನು ಕೊನೆಗಾಣಿಸಬಹುದೆಂಬ ಚಿಂತನೆಯ ಸಪಲ ಕ್ರಿಯೆಯೇ ಕೊಲೆ. ಚಿಂತನೆಯೊಂದರೆ ಕೊಲೆಯನ್ನು ಹಿಂಸೆ ಎಂದು ಸಾಮಾನ್ಯವಾಗಿ ಪರಿಗಣಿಸಲಾಗುವುದಿಲ್ಲ! Read more about ’ನಿಜದ ಸೋಲೆಂಬ’ ಕಲ್ಪನೆಯ ಗೆಲುವೇ ದಂತಕಥೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹುಡುಕಲೊಂದು ಭಾವನಾತ್ಮಕ ಭೂಪಟವಿಲ್ಲದಿದ್ದಲ್ಲಿ ನಮ್ಮಲ್ಲೇ ಕಳೆದುಹೋಗುತ್ತೇವೆ!

July 1, 2010 - 6:21pm
anilkumar

(೧೩೬) "ನೀನು ದೇವರೆಂಬ ನಂಬಿಕೆಯನ್ನು ಕುರಿತೇ ಹೆಚ್ಚು ಹೆಚ್ಚು ಹೇಳಿಕೆಗಳನ್ನು ಬರೆಯುತ್ತಿರುವಂತಿದೆಯಲ್ಲ?"

"ಬೇಕೆಂದರೂ ಬೇರಿನ್ಯಾವುದರ ಬಗ್ಗೆ ಬರೆಯಲು ಸಾಧ್ಯ, ಹೇಳಿ?"

(೧೩೭) ನೀನು ಅದರ ಅಳಕ್ಕೆ ಇಳಿದು ಏನನ್ನಾದರೂ ಹುಡುಕದಿದ್ದಲ್ಲಿ ಅದು ಭೂಪಟ ಹೇಗಾದೀತು? ಭೂಪಟವನ್ನೇ ಹುಡುಕದಿದ್ದಲ್ಲಿ ನಿಮ್ಮನ್ನೇ ನೀವು ಕಳೆದುಕೊಳ್ಳುವ ಸಾಧ್ಯತೆಯೂ ಇದೆ.

(೧೩೮) ನಾವು ಇನ್ನೊಬ್ಬರ ಮನೆಯನ್ನು ಹೊರಗಿನಿಂದಲೂ, ನಮ್ಮೊಬ್ಬರ ಮನೆಯನ್ನು ಒಳಗಿನಿಂದಲೂ ಗ್ರಹಿಸುತ್ತೇವೆ. ಬೇರೊಬ್ಬರಿಗೆ ನಾವು ನಮ್ಮ ಮನೆಯನ್ನು ನಮಗೆ ಹೇಗೆ ಬೇಕೋ ಹಾಗೆ ಮಾತ್ರ ತೋರಿಸುತ್ತೇವೆ. ನಾವಿಲ್ಲದ ನಮ್ಮ ಮನೆಯು ಬೇರೊಬ್ಬರಿಗೆ ತೂಗುಹಾಕಿದ ವಸ್ತ್ರದಂತೆ--ಅದು ನಮ್ಮ ವ್ಯಕ್ತಿತ್ವವನ್ನು ಅವರಿಗೆ ಲವಲೇಶವೂ ಪರಿಚಯಿಸದು!

(೧೩೯) ಯಾರಿಗಾದರೂ ಯಾರು ಬೇಕಾದರೂ ಕೊಡಬಹುದಾದ ಅತ್ಯುತ್ತಮ ಔಷದಃ ಆಶಾವಾದ! ಸೂಜಿ, ಮಾತ್ರೆ ಮತ್ತು ಶಸ್ತ್ರಚಿಕಿತ್ಸೆಗಳು ಏನಿದರೂ ಈ ಆಶಾವಾದವನ್ನು ಉತ್ತೇಜಿಸುವುದಷ್ಟೇ! Read more about ಹುಡುಕಲೊಂದು ಭಾವನಾತ್ಮಕ ಭೂಪಟವಿಲ್ಲದಿದ್ದಲ್ಲಿ ನಮ್ಮಲ್ಲೇ ಕಳೆದುಹೋಗುತ್ತೇವೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆಗುವ ಮೊದಲೇ ಘಟಿಸಿದರೆ ಕನಸು, ರಕ್ತದಾನಕ್ಕಿಂತಲೂ ದಾನಬುದ್ಧಿ ರಕ್ತದಲ್ಲಿರಲು ಸೊಗಸುಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೭

July 11, 2010 - 1:19am
anilkumar

(೧೪೧) ನೈಜಜೀವನದಲ್ಲಿ ಭೂತಕಾಲವನ್ನು ನೆನಪಿನ ಮೂಲಕ ಪುನರ‍್ಸಂಪಾದಿಸುತ್ತೇವೆ. ಘಟನೆಯೊಂದು ಉಂಟಾಗುವ ಮುನ್ನವೇ ಸ್ಮೃತಿಯ ಮೂಲಕ ಬದುಕಿಬಿಡುವುದನ್ನು ಕನಸು ಎನ್ನುತ್ತೇವೆ. ಇದು ಅಸಹಜವೆನ್ನುಸುವುದೇಕೆಂದರೆ, ನೀವುಗಳು ಇದನ್ನು ನೈಜ ಜೀವನದಲ್ಲಿ ಓದುತ್ತಿದ್ದೀರೆಂದು ಕನಸು ಕಾಣುತ್ತಿದ್ದೀರ ಅದಕ್ಕೆ!

(೧೪೨) ತಾನು ಸೃಷ್ಟಿಸಿದ ಮನುಷ್ಯ ತನ್ನನ್ನೇ ಊರ್ಜಿತಗೊಳಿಸುವ ಮುನ್ನವೂ ತಾನು ಅಸ್ತಿತ್ವದಲ್ಲಿದ್ದೆನೆಂಬ ಸತ್ಯವೇ ದೇವರಿಗೆ ತಿಳಿದಿಲ್ಲ!

(೧೪೩) ಭೌತಿಕವಾಗಿ ನಿಮ್ಮೊಂದಿಗಿಲ್ಲದವರೊಂದಿಗೆ ಮಾತನಾಡಲು ಮೊಬೈಲು ಸೌಕರ್ಯ ಮಾಡಿಕೊಡುವುದಿಲ್ಲ. ಬದಲಿಗೆ ನಿಮ್ಮ ಬೆನ್ನಿಗಂಟಿ ನಿಂತವರೊಂದಿಗೆ ಮಾತು ಕಳೆದುಕೊಳ್ಳುವಂತೆ ಮಾಡುತ್ತದದು! Read more about ಆಗುವ ಮೊದಲೇ ಘಟಿಸಿದರೆ ಕನಸು, ರಕ್ತದಾನಕ್ಕಿಂತಲೂ ದಾನಬುದ್ಧಿ ರಕ್ತದಲ್ಲಿರಲು ಸೊಗಸುಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೭

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ಅತ್ಯುತ್ತಮ ಪರಿಕರ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೮

August 12, 2010 - 4:33pm
anilkumar

(೧೪೬) ನಿಮ್ಮ ಬುದ್ಧಿಮತ್ತೆಯನ್ನು ಅಂಗವಿಹೀನವೆಂದು ಪರಿಗಣಿಸದ ಒಂದೇ ಮಾನಿಟರ್ ಎಂದರೆ ಬಳಪದ ಸಿಲೋಟು!

(೧೪೭) ದೆವ್ವದ ಬಗ್ಗೆ ಭಯ ಏಕೆಂದರೆ ನಮಗೆ ಹಣೆಯಬರಹದ ಬಗ್ಗೆ ಸಾಕಷ್ಟು ನಂಬಿಕೆ ಇಲ್ಲದಿರುವುದು!

(೧೪೮) ಆಧುನಿಕ ಮತ್ತು ಸಮಕಾಲೀನ ಬದುಕಿನ ನಡುವಣ ವ್ಯತ್ಯಾಸವೇನೆಂದರೆ, ಆಗೆಲ್ಲ ವಿಷಯಗಳ ಸಂಗ್ರಹವನ್ನು ಸುದ್ಧಿ ಎನ್ನುತ್ತಿದ್ದರು. ಈಗ ವಿಷಯಗಳನ್ನು ಸೃಷ್ಟಿಸುವುದನ್ನೇ ಸುದ್ಧಿ ಎನ್ನುತ್ತೇವೆ!

(೧೪೯) ಕಾರಿನ ಚಾಲನೆ ಮಾಡುವಾಗ ಶಿರಸ್ತ್ರಾಣ ಧರಿಸುವುದನ್ನು ಅತ್ಯುತ್ತಮ ರಕ್ಷಣಾತಂತ್ರವೆನ್ನುತ್ತೇವೆಯೇ ಹೊರತು ಅದು ನೆಮ್ಮದಿಯಲ್ಲ! Read more about ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ಅತ್ಯುತ್ತಮ ಪರಿಕರ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೮

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗಡಿಯಾರವೆಂಬ ಕಾಲವೂ ಕುರ್ಚಿಯೆಂಬ ಕೆಲಸವೂ ವಯಸ್ಸಾಗುವುದನ್ನು ದಡ್ಡತನವೆನ್ನುತ್ತವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೯

August 14, 2010 - 1:25pm
anilkumar

(೧೫೧) ಆದರೆ ಯಾರೇ ಇಬ್ಬರ ದೇಹದೊಳಗಿ ಜೈವಿಕ ಗಡಿಯಾರವೂ ಪರಸ್ಪರ ಹೋಲಿಕೆಗೆ ಒಪ್ಪಲಾರವು! ಆದರೂ ಕೈಗಡಿಯಾರವು ಎಲ್ಲರ ದೇಹಗಳನ್ನು ಗ್ರೀನ್‍ವಿಚ್ ಕಾಲಮಾನದ ಪ್ರಕಾರ ಅಳೆಯುತ್ತದೆ. ಆದ್ದರಿಂದ ಗಡಿಯಾರಕ್ಕೂ ಕಾಲನಿಗೂ ಸಂಬಂಧವಿಲ್ಲ!

(೧೫೨) ಮಾಡುತ್ತಿರುವ ಕೆಲಸಕಾರ್ಯವನ್ನು ಸ್ಥಗಿತಗೊಳಿಸಲಿರುವ ಅತ್ಯಂತ ಆಕರ್ಷಕ ವಸ್ತು ಕುರ್ಚಿ! ಕುರ್ಚಿಯ ಮೇಲೆ ಕುಳಿತು ಕೆಲಸ ಮಾಡುವುದೇ ಒಂದು ವ್ಯಂಗ್ಯೋಕ್ತಿ!

(೧೫೩) ವಯಸ್ಸಾದಂತೆ ನಾವು ಹೆಚ್ಚು ಹೆಚ್ಚು ತಪ್ಪುಗಳನ್ನೆಸಗುತ್ತೇವೆ ಎಂಬ ಅರಿವು ಮೊಡಲು ನಮಗಿರುವ ಒಂದೇ ಅವಕಾಶವೆಂದರೆ -- ನಮಗೆ ವಯಸ್ಸಾಗುವುದು! ಅಕಾಲಿಕ ಮೃತ್ಯುವನ್ನಪ್ಪುವವರಿಗೆ ಇಂತಹ ದಿವ್ಯದರ್ಶನ ಲಭ್ಯವಾಗದು. ಆದ್ದರಿಂದ ಆತ್ಮಹತ್ಯೆ ಹಾಗೂ ಕೊಲೆಯು ನಿಷಿದ್ಧ. ನಿಮಗೆ ಯಾರ ಬಗ್ಗೆಯಾದರೂ ದ್ವೇಷವಿದ್ದಲ್ಲಿ ಅವರನ್ನು ಆತ್ಮಹತ್ನೆಗೆ ದೂಡದೆ ವಯಸ್ಸಾಗಲು ಬಿಡಿ. ಮತ್ತು ಸೇಡು ತೀರಿಸಿಕೊಳ್ಳಲು ನೀವೂ ಅಲ್ಲಿಯವರೆಗೂ ಕಾಯಿರಿ!

(೧೫೪) ನಾವು ಸೋಲುಗಳೊಂದಿಗೆ ಸಫಲವಾಗಿ ಬದುಕುವ ಉಪಾಯವನ್ನು ಪ್ರೌಢವ್ಯಕ್ತಿತ್ವವೆನ್ನುತ್ತೇವೆ! Read more about ಗಡಿಯಾರವೆಂಬ ಕಾಲವೂ ಕುರ್ಚಿಯೆಂಬ ಕೆಲಸವೂ ವಯಸ್ಸಾಗುವುದನ್ನು ದಡ್ಡತನವೆನ್ನುತ್ತವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೯

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನನ್ನು ನಂಬಿ, ನಾನೆಂದೂ ಸತ್ಯ ನುಡಿಯಲಾರೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು--೩೦

August 16, 2010 - 4:02pm
anilkumar

(೧೫೬) ವಿನಯವಂತಃ ಅಸಲಿಯಾಗಿ ಚಿಂತಿಸುವ ನನ್ನ ಪ್ರತಿಭೆಯನ್ನು ನಾನು ಅನುವಂಶಿಕವಾಗಿ ಪಡೆದಿದ್ದೇನೆ ಎನ್ನಿಸುತ್ತದೆ! ದುರಹಂಕಾರಿಃ ಅನುವಂಶಿಕವಾಗಿ ನನಗೆ ಬಂದಿರುವ ಚಿಂತನೆಯ ಪ್ರತಿಭೆಯನ್ನು ಅಸಲಿಯಾಗಿ ನಾನು ಈ ಜನ್ಮದಲ್ಲೇ ರೂಢಿಸಿಕೊಂಡದ್ದು!

(೧೫೭) ನಿಮ್ಮ ಬಡ-ಹಾಸ್ಯವನ್ನು (ಪಿ.ಜೆ=ಪೂರ್ ಜೋಕ್) ಯಾರಾದರೂ ಮೆಚ್ಚಿಕೊಳ್ಳದಿದ್ದಲ್ಲಿ ಅದಕ್ಕಿರುವ ಎರಡನೇ ಕಾರಣವೆಂದರೆ ಅದರಲ್ಲಿ ಹಾಸ್ಯವು ಇಲ್ಲದಿರುವುದು! ಮೊದಲ ಕಾರಣವೆಂದರೆ ಮೆಚ್ಚದವರಲ್ಲಿರುವ ಹಾಸ್ಯಪ್ರಜ್ಞೆಯ ಕೊರತೆ!

(೧೫೮) ಅತ್ಯಂತ ಆಸಕ್ತಿಕರ ವಿಷಯವೊಂದರ ಗ್ರಹಿಕೆಯು ಅತಿ ನಿಧಾನಗತಿಯಲ್ಲಿ ಆಗುವುದನ್ನೇ ಬೇಸರವೆನ್ನುತ್ತೇವೆ! ಉದಾಹರಣೆಗೆ ಒಂದೇ ದಿನದಲ್ಲಿ ಮನುಷ್ಯನ ಆಯಸ್ಸು ಮುಗಿದುಹೋಗಿಬಿಡುವುದು!

(೧೫೯) ನನ್ನನ್ನು ನಂಬಿ, ನಾನೆಂದೂ ಸತ್ಯ ನುಡಿಯಲಾರೆ! ಕಾರಣಃ ಸತ್ಯ ಆತ್ಯಂತಿಕವಲ್ಲ! Read more about ನನ್ನನ್ನು ನಂಬಿ, ನಾನೆಂದೂ ಸತ್ಯ ನುಡಿಯಲಾರೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು--೩೦

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೇಹವನ್ನು ಅದಕ್ಕೆ ಹೊದಿಸಿದ ವಸ್ತ್ರದ ಮೊಲಕ ವ್ಯಾಖ್ಯಾನಿಸುವುದನ್ನು ಮುತ್ಸದ್ದಿತನವೆನ್ನುತ್ತೇವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೧

August 19, 2010 - 2:46pm
anilkumar

(೧೬೧) ಎಲ್ಲೆಡೆಯಿಂದ ಹೇಳಿಕೆಗಳನ್ನು ಸಂಗ್ರಹಿಸಿ, ವಿಸ್ತಾರಗೊಳಿಸುವುದನ್ನು ’ಆಧರಿತ’ ಎನ್ನುತ್ತೇವೆ.

(೧೬೨) ಸೌಂದರ್ಯವು ನೋಡುಗನ ಕಣ್ಣಿನಲ್ಲಿರುವುದಾದರೆ ಹೊರಗಿನ ಅಸ್ತಿತ್ವಗಳಾದ ಕ್ಲಿಯೋಪಾತ್ರ ಮತ್ತು ಕಲಾಕೃತಿಗಳು ಏಕಿರಬೇಕು?

(೧೬೩) ಆತ್ಯಂತಿಕ ಸತ್ಯವೆಂಬುದು ಅನಿಶ್ಚಿತ. ಸತ್ಯದ ಅನಿಶ್ಚಿತತೆಯೇ ಸತ್ಯ!

(೧೬೪) ಪರಿಪೂರ್ಣ ಅಂಗಸೌಷ್ಠವ ಇರುವವರು ಅದಕ್ಕೆ ವಸ್ತ್ರವನ್ನು ತೊಡಿಸುತ್ತಾರೆ. ಇಲ್ಲದವರು ಬಟ್ಟೆಗಳ ಒಳಗೆ ಅದನ್ನು ಬಚ್ಚಿಡುತ್ತಾರೆ. ಇದನ್ನು ಪರಿಣಾಮಕಾರಿಯಾಗಿ ಮಾಡುವವರನ್ನು ಒಳ್ಳೆಯ ವಸ್ತ್ರವಿನ್ಯಾಸ ಪ್ರಜ್ಞೆ ಇರುವವರು ಎನ್ನುತ್ತೇವೆ. ವಸ್ತ್ರದೊಂದಿಗಿನ ದೇಹದ ಸಂಬಂಧದ ಮೊಲಕವೇ ದೇಹಕ್ಕೊಂದು ವ್ಯಾಖ್ಯೆ ಸಾಧ್ಯ! Read more about ದೇಹವನ್ನು ಅದಕ್ಕೆ ಹೊದಿಸಿದ ವಸ್ತ್ರದ ಮೊಲಕ ವ್ಯಾಖ್ಯಾನಿಸುವುದನ್ನು ಮುತ್ಸದ್ದಿತನವೆನ್ನುತ್ತೇವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೧

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೨

August 22, 2010 - 12:24pm
anilkumar

(೧೬೬) ಗುರ್ತಿನ ಚೀಟಿ ಇಲ್ಲದ ನೀವು ಅಸ್ತಿತ್ವದಲ್ಲೇ ಇಲ್ಲ! ನೀವು ನೀವಾಗಿರಬೇಕಿದ್ದರೆ ನಿಮಗೊಂದು ಹೆಸರು ಇರಲೇಬೇಕು: ಒಬ್ಬ ನೆಂಟ, ಒಬ್ಬ ನಾಗರೀಕ, ಚಾಲಕ, ಕೆಲಸಗಾರ, ರೋಗಿ ಅಥವ ವೀಸಾ ಕಾರ್ಡ್ ಹೊಂದಿರುವಾತ--ಇತ್ಯಾದಿ.

(೧೬೭) ಹಳೆಯ ಶೈಲಿಯಲ್ಲಿ ಹೊಸ ವಿಷಯಗಳನ್ನು ಹೇಳುವುದನ್ನು ಜ್ಞಾನವೆನ್ನುತ್ತೇವೆ. ಹೊಸ ಶೈಲಿಯಲ್ಲಿ ಹಳೆಯ ವಿಷಯಗಳನ್ನು ಹೇಳುವುದನ್ನು ಜಾಹಿರಾತು ಎನ್ನುತ್ತೇವೆ!

(೧೬೮) ಕ್ಷಮಿಸಿಬಿಡುವುದೆಂದರೆ ಮರೆತುಬಿಡುವುದು ಎಂದರ್ಥ. ನೆನಪಿಸಿಕೊಳ್ಳುವುದು ಎಂದರೆ ಪ್ರೀತಿಸುವುದು. ಮರೆಯಬೇಕೆಂದಿರುವುದೇನೆಂದು ನೆನಪಿಟ್ಟುಕೊಳ್ಳುವುದು ಒಂದು ದುರಂತ. ನೆನಪಿಟ್ಟುಕೊಳ್ಳಬೇಕಿರುವುದನ್ನು ಮರೆತುಬಿಟ್ಟರೆ ಅದು ಹಾಸ್ಯವಾಗುತ್ತದೆ. Read more about ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೨

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೇವರೆಂದು ತನ್ನನ್ನು ತಾನು ಕರೆದುಕೊಂಡವನು ಹುಚ್ಚ ಅಥವ...:ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೩

August 30, 2010 - 4:21pm
anilkumar

(೧೬೯) ಒಬ್ಬನನ್ನು ತುಂಡುತುಂಡಾಗಿ ಕತ್ತರಿಸಿ, ನಂತರ ಅದೊಂದು ಸೃಷ್ಟಿಶೀಲ ಚಟುವಟಿಕೆ ಎಂದು ನಿರೂಪಿಸುವ ಅವಕಾಶವನ್ನು ನಿರಾಕರಿಸುವುದನ್ನು ನಿರ್ವಚನ (ಡಿಕನ್ಸ್‍ಟ್ರಕ್ಷನ್)ಎನ್ನುತ್ತೇವೆ.

(೧೭೦) ಅತಿ ಹೆಚ್ಚು ದ್ವೇಷಿಸಲ್ಪಡುವ ಪದವು ’ದೇವರು’ ಎಂಬುದೇ ಇರಬೇಕು. ಏಕೆಂದರೆ ಯಾವ ವ್ಯಕ್ತಿಯೊ ತನ್ನನ್ನು ತಾನು ಆ ಹೆಸರಿನಿಂದ ಕರೆದುಕೊಳ್ಳುವುದಿಲ್ಲ. ಹಾಗೆ ಕರೆದುಕೊಳ್ಳುವವನನ್ನು ಜನ ’ಹುಚ್ಚ’ ಅಥವ ’ಗುರೂಜಿ’ ಎಂದು ಪುನರ್-ನಾಮಕರಣ ಮಾಡಿಬಿಡುತ್ತಾರೆ!

(೧೭೧) ಚಕ್ರವರ್ತಿಗಿಂತಲೂ ದೇವರು ಬಲಹೀನ ಏಕೆಂದರೆ ಆತ ಯಾರನ್ನೂ ತನ್ನ ರಾಜ್ಯದಿಂದ ಗಡೀಪಾರು ಮಾಡಲಾರ. ಅದೇ ಚಕ್ರವರ್ತಿಗಿಂತಲೂ ಭಿಕ್ಷುಕ ಶಕ್ತಿವಂತ ಏಕೆಂದರೆ ಆತ ಏನನ್ನೂ ಕಳೆದುಕೊಳ್ಳಲಾರ! Read more about ದೇವರೆಂದು ತನ್ನನ್ನು ತಾನು ಕರೆದುಕೊಂಡವನು ಹುಚ್ಚ ಅಥವ...:ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೩

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪಾದರಕ್ಷೆಯು ಜಗತ್ತನ್ನು ಕೊಳಕು ಪಾದಗಳಿಂದ ರಕ್ಷಿಸುತ್ತವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೪

September 2, 2010 - 1:23pm
anilkumar

(೧೭೬) ಬೇಸರದ ಅತ್ಯಂತ ಆಸಕ್ತಿಕರವಾದ ವಿಷಯವೆಂದರೆ ಅದನ್ನು ಕುರಿತಾದ ಯಾವುದೇ ಆಸಕ್ತಿ ಯಾರಲ್ಲಿಯೊ ಇಲ್ಲದಿರುವುದು. ಮತ್ತು ಅದರ ತುಂಬ ಅದನ್ನು ಕುರಿತೇ ಬೇಸರ ತುಂಬಿತುಳುಕುತ್ತಿರುತ್ತದೆ!

(೧೭೭) ಪಂಚೇಂದ್ರೀಯಗಳ ಸಾಮರ್ಥ್ಯ ಮೀರಿದ ಚಟುವತಿಕೆಯಲ್ಲಿ ತೊಡಗಿಕೊಳ್ಳುವುದನ್ನು ದೆವ್ವವೆನ್ನುತ್ತೇವೆ. ಅದು ಕಡೆಗಣಿಸಿರುವ ಒಂದೇ ಅಂಶವೆಂದರೆ: ನೈತಿಕತೆ!

(೧೭೮) ಚರ್ಚಿಸುತ್ತಿರುವ ವಿಷಯವನ್ನು ಕುರಿತು ಒಂದು ಒಪ್ಪಂದಕ್ಕೆ ಬರುವುದು ಅಸಾಧ್ಯವೆಂದು ಮನವರಿಕೆ ಮಾಡಿಕೊಳ್ಳಲು ಒಂದೆಡೆ ಸೇರುವುದನ್ನು ’ಭೇಟಿ’ ಎನ್ನುತ್ತೇವೆ!

(೧೭೯) ಅಸಾಧ್ಯವೆಂದು ಗೊತ್ತಿದ್ದರೂ ಒಂದು ಜೀವಿತಾವಧಿಯಷ್ಟು ಕಾಲ ಮತ್ತೊಬ್ಬರ ಬಹುಮುಖಿ ವಿಶ್ಲೇಷಣಾ ದೃಷ್ಟಿಗೆ ನಮ್ಮನ್ನು ಒಡ್ಡಿಕೊಳ್ಳುವುದನ್ನು ವಿವಾಹಬಂಧನವೆನ್ನುತ್ತೇವೆ! Read more about ಪಾದರಕ್ಷೆಯು ಜಗತ್ತನ್ನು ಕೊಳಕು ಪಾದಗಳಿಂದ ರಕ್ಷಿಸುತ್ತವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೪

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮುಂದೊಮ್ಮೆ ನಿನ್ನ ನೆನೆದರೆ ಈ ನಡುವೆ ನಿನ್ನ ಮರೆತಿದ್ದೆ ಎಂದರ್ಥ!--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೫

September 3, 2010 - 3:38pm
anilkumar

(೧೮೧) ಅರ್ಥಹೀನವಾಗಿ ನಡೆದುಕೊಳ್ಳುವುದು ನನಗೆ ಬಹಳ ಇಷ್ಟ ಏಕೆಂದರೆ ಅದನ್ನು ರೂಢಿಸಿಕೊಳ್ಳಲು ಮೊಲಭೂತ ಪರಿಜ್ಞಾನದ ಅವಶ್ಯಕತೆಯೊ ಇರುವುದಿಲ್ಲ!

(೧೮೨) ನಾನು ಮುಂದೆಂದಾರರೂ ನಿನ್ನನ್ನು ನೆನೆಸಿಕೊಂಡಿದ್ದೇ ಅದಲ್ಲಿ ಆಶ್ಚರ್ಯಪಡುವ ಅವಶ್ಯಕತೆಯೇನಿಲ್ಲ. ಮಧ್ಯದಲ್ಲಿ ನಾನು ನಿನ್ನನ್ನು ಮರೆತುಹೋಗಿದ್ದೆ ಎಂದು ಅದರರ್ಥ!

(೧೮೩) ಅತ್ಯಂತ ಆಕರ್ಷಕ ವ್ಯಕ್ತಿಯ ವಿಳಾಸವು ಕಲ್ಪನೆಯಲ್ಲಿದೆ!

(೧೮೪) ಅಂತಿಮ ಉತ್ತರ ಹುಡುಕುತ್ತಿರುವ ನಿರಂತರ ಸೋಲುವ ಯೋಜನೆಯನ್ನು ’ಹಬ್ಬ’ ಎಂದು ವಿಂಗಡಿಸಿ, ಅದನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ! Read more about ಮುಂದೊಮ್ಮೆ ನಿನ್ನ ನೆನೆದರೆ ಈ ನಡುವೆ ನಿನ್ನ ಮರೆತಿದ್ದೆ ಎಂದರ್ಥ!--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೫

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೆಟ್ಟ ಕಲಿಕೆ ಒಳ್ಳೆಯ ಪಾಠಗಳು ಅಕ್ಷರಶಃ ಪ್ರವಚನದ ಪರ-ವಿರೋಧಿಗಳುಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೬

September 5, 2010 - 2:25pm
anilkumar

(೧೮೬) ಬೇರೇನನ್ನೋ ಮರೆಯುವ ಸಲುವಾಗಿ ದೂರದರ್ಶನವನ್ನು ನೋಡುತ್ತೇವೆ. ಅದಕ್ಕೆ ಶಿಕ್ಷೆಯಾಗಿ ಬದುಕಿನ ಮೊಲಭೂತ ಅವಶ್ಯಕತೆಗಳನ್ನು ಮರೆಸುವಂತಹ ಕಾರ್ಯಕ್ರಮಗಳನ್ನು ದೂರದರ್ಶನವು ಪ್ರಸಾರ ಮಾಡುತ್ತದೆ!

(೧೮೭) ಅತ್ಯಂತ ನಿರಾತಂಕಿತವಾಗಿ ಬದುಕನ್ನು ಸಾಗಿಸುವುದರ ಪರಿಣಾಮವೆಂದರೆ ಆತಂಕಪೂರಿತ ದುಃಖದುಮ್ಮಾನಗಳು ಕಟ್ಟಿಟ್ಟ ಬುತ್ತಿಯಂತೆ ಭವಿಷ್ಯದಿಂದ ನಮ್ಮೆಡೆಗೆ ಧುತ್ತನೆ ಪ್ರತ್ಯಕ್ಷವಾಗುತ್ತಿರುತ್ತವೆ!

(೧೮೮) ಕಾಯುವುದನ್ನು ಕಲಿಯಲಿರುವ ಒಂದೇ ಉಪಾಯವೆಂದರೆ ಕಾಯುವುದೇ ಆಗಿದೆ!

(೧೮೯) ತಿರುವುಮರೆವಾಗಿ ತೊಡಲ್ಪಟ್ಟ ಮುಖವಾಡವನ್ನು ಗಡ್ಡವೆನ್ನಬಹುದು!

(೧೯೦) ವೈರುಧ್ಯಮಯ ವಿಷಯವೇನೆಂದರೆ ನಿಜವಾದ ಪಾಠವು ಪ್ರವಚನವನ್ನು ವಿರೋಧಿಸುತ್ತದೆ. ವೈಪರೀತ್ಯವೆಂದರೆ ಕೆಟ್ಟ ಕಲಿಕೆಯು ಅದನ್ನೇ ವಿರೋಧಿಸುತ್ತದೆ! Read more about ಕೆಟ್ಟ ಕಲಿಕೆ ಒಳ್ಳೆಯ ಪಾಠಗಳು ಅಕ್ಷರಶಃ ಪ್ರವಚನದ ಪರ-ವಿರೋಧಿಗಳುಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೬

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೇವರನ್ನು ಸೃಷ್ಟಿಸಿದ ಮನುಷ್ಯ ಸೃಷ್ಟಿಯು, ದೈವಸೃಷ್ಟಿಯಾದ ಮನುಷ್ಯನಿಗಿಂತ ಮಿಗಿಲು--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೮

September 8, 2010 - 2:16pm
anilkumar

(೧೯೬) ಜಗತ್ತಿನ ಬಗ್ಗೆ ನಮಗೆ ಯಾವುದಾದರೂ ಸಮಸ್ಯೆ ಕಂಡುಬಂದಿತೆಂದರೆ ಆಗ ಜಗತ್ತು ನಮ್ಮ ತಪ್ಪುಗಳನ್ನು ನಿರಂತರವಾಗಿ ಗಮನಿಸುವುದನ್ನು ಬದಿಗಿರಿಸಿ ವಿಶ್ರಮಿಸುತ್ತಿದೆ ಎಂದರ್ಥ!

(೧೯೭) ದೂರವಾಣಿ ಸಂಖ್ಯೆಗಳನ್ನು ಪರಸ್ಪರ ಬದಲಿಸಿಕೊಳ್ಳುವುದೆಂದರೆ, ಜನರು ಪರಸ್ಪರ ಪರಿಚಯಿಸಿಕೊಳ್ಳುವುದು ಎಂದರ್ಥ. ಆದರೆ ಜನರು ಪರಸ್ಪರ ಪರಿಚಯಿಸಿಕೊಳ್ಳುವುದೆಂದರೆ ಮುಖಾಮುಖಿಯಾಗುವುದು ಎಂದೇ ಅರ್ಥ!

(೧೯೮) ಮೇಧಾವಿ ಮತ್ತು ಹುಚ್ಚರಿಬ್ಬರ ನಡುವೆ ಇರಬಹುದಾದ ಒಂದೇ ವ್ಯತ್ಯಾಸವೆಂದರೆ ಸ್ವಾಭಾವಿಕ ಪ್ರಜ್ಞೆ. ಮತ್ತೊಂದು ಒಂದೇ ವ್ಯತ್ಯಾಸವೆಂದರೆ ಅದು ಮಾನವೀಯತೆ! Read more about ದೇವರನ್ನು ಸೃಷ್ಟಿಸಿದ ಮನುಷ್ಯ ಸೃಷ್ಟಿಯು, ದೈವಸೃಷ್ಟಿಯಾದ ಮನುಷ್ಯನಿಗಿಂತ ಮಿಗಿಲು--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೮

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೇಧಾವಿ ಮತ್ತು ಮೊರ್ಖರ ನಡುವಣ ಸಾಮ್ಯತೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೯

September 9, 2010 - 12:44pm
anilkumar

(೨೦೧)ಅತ್ಯುತ್ತಮವಾದ ಹೇಳಿಕೆಯೊಂದು ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಕೆಟ್ಟ ಹೇಳಿಕೆಯೊಂದು ಜನರನ್ನು ಅಂತಹ ದೈಹಿಕಶ್ರಮದಿಂದ ಬಚಾವು ಮಾಡುತ್ತದೆ!

(೨೦೨) ಯಾರಾದರೂ ಏನಾದರೂ ಒಂದು ಸಾಧನೆ ಮಾಡಿದಾಗ ಅದರಲ್ಲಡಗಿರುವ ಸಂತಸವನ್ನು ಹಣ ಮತ್ತು ಖ್ಯಾತಿ ತಡೆಹಿಡಿದುಬಿಡುತ್ತದೆ. ಆದ್ದರಿಂದ ನಿಜವಾದ ತೃಪ್ತಿಯೆಂಬುದು ಏನನ್ನೂ ಸಾಧಿಸಲಾಗದೆ ಸೋತಾಗಲೂ ಸಂತೃಪ್ತರಾಗಿರುವುದೇ ಆಗಿದೆ!

(೨೦೩) ಮೇಧಾವಿ ಅಥವ ಮೊರ್ಖನೊಬ್ಬನೊಂದಿಗೆ ವಾದಮಾಡಿದಲ್ಲಿ ಉಂಟಾಗುವ ಒಂದೇ ತೆರನಾದ ಪರಿಣಾಮವೆಂದರೆ ಇಬ್ಬರ ಎದಿರೂ ಮೊರ್ಖರೆನಿಸಿಕೊಂಡುಬಿಡುತ್ತೇವೆ! Read more about ಮೇಧಾವಿ ಮತ್ತು ಮೊರ್ಖರ ನಡುವಣ ಸಾಮ್ಯತೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೯

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಾಡಬಾರದು ಅಂದುಕೊಂಡದ್ದನ್ನು ಮಾಡುವಾತ ’ಅನುಕೂಲಸ್ಥ’, ಮಾಡಲಾಗದುದನ್ನು ಮಾಡುವಾತ ’ಸಾಹಸಿ’--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೦

September 10, 2010 - 11:30pm
anilkumar

(೨೦೬) ಜಗತ್ತಿನೊಂದಿಗೆ ಕ್ಯಾಮರಾಗಿರುವ ಒಂದೇ ನಿರ್ದಿಷ್ಟವಾದ ವ್ಯವಹಾರವೆಂದರೆ ಅದರ ನಿರ್ದಿಷ್ಟ ಕ್ಷಣವೊಂದನ್ನು ಭಾಗಶಃವಾಗಿಯಷ್ಟೇ ಹಿಡಿದಿರಿಸುವುದು ಮತ್ತು ಅದನ್ನು ಭೂತಕಾಲಕ್ಕೆ ತಳ್ಳಿಬಿಡುವುದು. ಮಿಕ್ಕಂತೆ ಛಾಯಾಚಿತ್ರದಲ್ಲಿ ಸೆರೆಹಿಡಿಯಲಾಗದಷ್ಟು ವೇಗಗತಿಯಲ್ಲಿರುವುದನ್ನು ಮತ್ತು ಸದಾ ಭವಿಷ್ಯಕಾಲವಾಗಿಬಿಡುವುದನ್ನು ’ಜಗತ್ತು’ ಎನ್ನುತ್ತೇವೆ!

(೨೦೭) ನಾವೇನನ್ನು ಮಾಡಬಾರದು ಎಂದುಕೊಂಡಿರುತ್ತೇವೆಯೋ ಅದನ್ನು ಮಾಡಿಬಿಡುವ ವ್ಯಕ್ತಿಯನ್ನು ’ಅನುಕೂಲಸ್ಥ’ ಎನ್ನುತ್ತೇವೆ. ನಾವು ಮಾಡಲಾಗದುದನ್ನು ಮಾಡಿತೋರಿಸುವ ವ್ಯಕ್ತಿಯನ್ನಷ್ಟೇ ’ಸಾಹಸಿ’ ಎಂದು ಪರಿಗಣಿಸುವುದು.

(೨೦೮) ಬದುಕಿನ ಐಭೋಗಗಳಲ್ಲಿ ಮುಳುಗೇಳಲಾರದ ವ್ಯಕ್ತಿಯನ್ನು ಈರ್ಷ್ಯೆಯಿಂದ ನಾವು ’ಸಫಲಪೂರ್ಣವಾಗಿ ಬಾಳಿಬದುಕಿದಾತ’ ಎಂದು ಕಡೆಗಣಿಸುತ್ತೇವೆ!

(೨೦೯) ಸೋಲು ಸಫಲತೆಯ ಅಹ್ಲಾದವನ್ನು ಹೆಚ್ಚಿಸಿದರೆ ಸಾಫಲ್ಯವು ಸೋಲಿನಲ್ಲಡಗಿರುವ ನೋವನ್ನು ಮರೆತುಬಿಡುತ್ತದೆ!

(೨೧೦) ದೊರದರ್ಶನವು ಆ ಸುದ್ಧಿಯನ್ನು ಭಿತ್ತರಿಸದಿದ್ದಲ್ಲಿ ಜಗತ್ತೂ ಸಹ ಬದಲಾಗಿರುವುದೇ ಇಲ್ಲ! Read more about ಮಾಡಬಾರದು ಅಂದುಕೊಂಡದ್ದನ್ನು ಮಾಡುವಾತ ’ಅನುಕೂಲಸ್ಥ’, ಮಾಡಲಾಗದುದನ್ನು ಮಾಡುವಾತ ’ಸಾಹಸಿ’--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೦

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೊಡುಗೆಯೆಂಬುದೊಂದು ಅಳೆಯಲಾಗದ ಮಮತೆ>>ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೧

September 18, 2010 - 12:55pm
anilkumar

(೨೧೧) ಸ್ಪರ್ಧಾತ್ಮಕ ಮನೋಭಾವವಿರಿಸಿಕೊಳ್ಳಲು ಕ್ರೀಡಾಪಟುವಾಗಬೇಕಿಲ್ಲ, ನಿಖರವಾಗಿ ಬದುಕಲು ವೈದ್ಯರಾಗಬೇಕಿಲ್ಲ, ಆರೋಗ್ಯಪೂರ್ಣವಾಗಿ ಬದುಕಲು ಆಹಾರತಜ್ಞರಾಗಬೇಕಿಲ್ಲ. ಆದ್ದರಿಂದ ವೃತ್ತಿಪರನಾಗಿರುವುದಕ್ಕಿಂತಲೂ ವಿಷಯವೊಂದರ ಆಳಕ್ಕಿಳಿವುದು ಸೂಕ್ತ. ಡಾಕ್ಟರೇಟ್ ಪಡೆದವರಿಗಿಂತಲೂ ವಿದ್ವಾಂಸರಾಗಿರುವುದು ಲೇಸು!

(೨೧೨) ’ತನ್ನ ಬೋಧನೆಯನ್ನೊಂದು ಪ್ರಮೇಯವನ್ನಾಗಿಸಬೇಡಿ ಎಂಬುದನ್ನು ಬುದ್ಧ ತಿಳಿಸಿದ್ದಾನೆ’ ಎಂಬುದು ಬೌದ್ಧಧರ್ಮದ ಸಾರ! Read more about ಕೊಡುಗೆಯೆಂಬುದೊಂದು ಅಳೆಯಲಾಗದ ಮಮತೆ>>ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೧

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಾಹಸಮಯ ಸೋಲು ಹೆಚ್ಚೋ ಸೋಂಬೇರಿತನದ ಗೆಲುವೋ? -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೨

September 22, 2010 - 2:15pm
anilkumar

(೨೧೬) ಪ್ರಯಾಣವೊಂದರ ಮಧ್ಯಭಾಗದಲ್ಲಿರುವುದರ ಅರ್ಥವೇನೆಂದರೆ ಸುಸ್ತಾಗಿ ಹಿಂದಿರುಗಿಬಿಡಬೇಕೆನ್ನಿಸಿದಾಗ, ಹಾಗೆ ಮಾಡಲು ಎಷ್ಟು ಶ್ರಮ ಬೇಕೋ ಅಷ್ಟೇ ಶ್ರಮ ಸಾಕು ಅಲ್ಲಿಂದ ಮುನ್ನುಗ್ಗಿ ಪ್ರಯಾಣ ಪೂರೈಸಿಬಿಡಲು!

(೨೧೭) ಸಾಕುಪ್ರಾಣಿಗಳು ಸತ್ತಾಗ ಜನ ಅಳುವುದಕ್ಕೆ ಕಾರಣಃ ನೈಸರ್ಗಿಕ ಬದುಕಿನಿಂದ ಪ್ರಾಣಿಗಳನ್ನು ಬೇರ್ಪಡಿಸಿ, ಸಾಕುಪ್ರಾಣಿಗಳನ್ನಾಗಿ ಪರಿವರ್ತಿಸಿದ ಅಪರಾಧಕ್ಕೆ ಶಿಕ್ಷೆಯ ರೂಪದಲ್ಲಿ ಅವರಿಗೆ ದೊರಕುವ ದುಃಖ! 

(೨೧೮) ಸಾಹಸಮಯ ಸೋಲು ಸೋಂಬೇರಿತನದ ಗೆಲುವಿಗಿಂತಲೂ ಪ್ರಯೋಜನಕಾರಿ.

(೨೧೯) ತಪ್ಪು ಮಾಡುವುದು ಮನುಷ್ಯನಿಗೆ ಸಹಜ ಏಕೆಂದರೆ ತಪ್ಪಿಗೆ ಅಪರಾಧೀಭಾವವೆಂಬ ಪರಿಹಾರವನ್ನು ತನಗೆ ತಾನೇ ಸೂಚಿಸುವವನೂ ಅವನೇ! Read more about ಸಾಹಸಮಯ ಸೋಲು ಹೆಚ್ಚೋ ಸೋಂಬೇರಿತನದ ಗೆಲುವೋ? -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೨

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಾನವನೇ ಶ್ರೇಷ್ಠ ಎಂಬುದೊಂದೇ ಪ್ರಾಣಿವಾಣಿ! -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೩

September 30, 2010 - 11:15pm
anilkumar

(೨೨೧) ಸಾಂಸ್ಕೃತ್ಕ ಸಂವಾದವೆಂಬುದು ’ಸರಳ’ತೆಯನ್ನು ತೊಂದರೆಗೀಡುಮಾಡುತ್ತದೆ. ಆದರೆ ಸರಳತೆಯು ಆ ಸಾಂಸ್ಕೃತಿಕ ಸಂವಾದವನ್ನೇ ನಾಶಮಾಡಿಬಿಡುತ್ತದೆ!

(೨೨೨) ದುಃಖಿತನಾಗುವುದು ವಿಧಿನಿಯಮವಾಗಿತ್ತು ಎಂದು ಅರಿಯದೆ ವಿಧಿಯನ್ನೇ ತರ್ಕದ ತೆಕ್ಕೆಗೊಪ್ಪಿಸಿದಾಗ ಆಗುವುದೇ ನಿಜವಾದ ದುಃಖ!

(೨೨೩) ಸಾರ್ವತ್ರಿಕ ಆಗುಹೋಗುಗಳಲ್ಲಿ ತೊಡಗಿಸಿಕೊಂಡವರ ವೈಯಕ್ತಿಕ ಆಗುಹೋಗುಗಳಲ್ಲಿ ತಲೆ ತೂರಿಸುವುದೂ ಒಂದು ತೆರನಾದ ಸಾರ್ವತ್ರಿಕ ವ್ಯವಹಾರವೇ.

(೨೨೪) ಮಾನವ ಇತರ ಪ್ರಾಣಿಗಳಿಗಿಂತಲೂ ಶ್ರೇಷ್ಠ ಎಂದು ಸಾಬೀತು ಪಡಿಸುವ ಯಾವುದಾದರೂ ಒಂದು ಉದಾಹರಣೆ ನೀಡಿ, ನಾನು ಅದಕ್ಕೆ ಪ್ರತಿಯಾಗಿ ಹಲವು ಉದಾಹರಣೆಗಳನ್ನು ನೀಡುವೆ. ಏಕೆಂದರೆ ನಾವೆಲ್ಲರೂ ಮಾನವರೇ ಅಲ್ಲವೆ! Read more about ಮಾನವನೇ ಶ್ರೇಷ್ಠ ಎಂಬುದೊಂದೇ ಪ್ರಾಣಿವಾಣಿ! -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೩

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ! --ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೪

October 1, 2010 - 10:24pm
anilkumar

(೨೨೬) ನಮ್ಮ ಸಾಫಲ್ಯವು ಅನ್ಯರಿಗೂ ಒದಗುವಂತಹುದಾದರೆ, ಸಾರ್ಥಕ ಭಾವವೆಂಬುದು ನಮಗೆ ಮಾತ್ರ ಸೇರಿದ್ದು!

(೨೨೭) ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ!

(೨೨೮) ದೆವ್ವಗಳ ಪೀಡೆ ಆಕಸ್ಮಿಕ. ಆದರೆ ಜೀವಂತ ವ್ಯಕ್ತಿಗಳ ಸಾವು ನಿತ್ಯನಿರಂತರ!

(೨೨೯) ಕಾರ್ಯ-ಕಾರಣ ಸಂಬಂಧದ ಗಡಿ ದಾಟಿ ದೆವ್ವವು ಎಂದೂ ತಪ್ಪು ವಿಳಾಸವನ್ನು ತಲುಪದು!

(೨೩೦) ಅವುಗಳನ್ನು ರೂಪಿಸಿರುವ ಪ್ರಕಟಣೆಗಳು ಮತ್ತು ಅವುಗಳನ್ನು ನೆನಪಿಟ್ಟುಕೊಂಡಿರುವ ವ್ಯಕ್ತಿಗಳು ಜೀವಂತವಿರುವವರೆಗೂ ಗಾದೆಗಳು ಅಜರಾಮರ! Read more about ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ! --ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೪

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಶ್ವರವಾದಿಗಳ ಅತ್ಯುತ್ತಮ ಹಗಲುಗನಸು ಒಳ್ಳೆಯ ನಿದ್ರೆ ಮಾಡುವಲ್ಲಿದೆ -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೫

October 3, 2010 - 12:31am
anilkumar

(೨೩೧) ನಶ್ವರವಾದಿಗಳು ಹಗಲುಗನಸು ಕಾಣಬಹುದಾದ ಬದುಕಿನ ಅತ್ಯುತ್ತಮ ಗಮ್ಯವೆಂದರೆ, ಅದು ಜೀವನವಿಡೀ ಸುಖಕರವಾಗಿ ನಿದ್ರೆ ಮಾಡಬಲ್ಲ ವರ!

(೨೩೨) ನೀವು ಇಚ್ಛಿಸಿದಂತೆ ಮಾತ್ರ ತೀರ್ಪು ನೀಡಬಲ್ಲಿರಿ. ನೀವು ದ್ವೇಷಿಸುವುದನ್ನೆಂದೂ ನ್ಯಾಯವಿಚಾರಣೆಗೆ ಒಳಪಡಿಸಲಾರಿರಿ!

(೨೩೩) ನಿಮ್ಮ ಬಾಯಿಗೆ ಅತ್ಯಂತ ಹತ್ತಿರ ಬಂದೂ, ಬಾಯಿಯ ಒಳಹೊಕ್ಕು ಜೀರ್ಣಗೊಳ್ಳಲು ನಿರಾಕರಿಸುವ ಆಹಾರವನ್ನು ’ಲಿಪ್-ಸ್ಟಿಕ್’ ಎನ್ನುತ್ತಾರೆ!

(೨೩೪) ಸೌಂದರ್ಯವು ಕಾಣುವ ಕಣ್ಣಿನಲ್ಲಿದೆ ಎಂದು ಭಾವಿಸುವಾತ ತನ್ನ ಕನಸುಗಳನ್ನು ಕುರಿತು ಸಾಕಷ್ಟು ಕುರುಡಾಗಿರಬೇಕು.  Read more about ನಶ್ವರವಾದಿಗಳ ಅತ್ಯುತ್ತಮ ಹಗಲುಗನಸು ಒಳ್ಳೆಯ ನಿದ್ರೆ ಮಾಡುವಲ್ಲಿದೆ -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೫

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಿನೆಮ ವ್ಯಸನವು ಬದುಕನ್ನು ಜಾಹಿರಾತಿನ ವಿರಾಮವನ್ನಾಗಿಸಿಬಿಡುತ್ತದೆ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೬

October 3, 2010 - 3:02pm
anilkumar

(೨೩೬) ವಿಚ್ಛೇದಿತ/ತೆ ಉವಾಚ: ಸ್ವರ್ಗದಲ್ಲಿ ವಿವಾಹವು ನಡೆದರೂ ನರಕದಲ್ಲಿ ಅದು ಸಾಕಾರಗೊಳ್ಳುತ್ತದೆ. ಆದರೆ ಅದನ್ನು ಭೂಮಿ ಎಂದು ತಪ್ಪಾಗಿ ಭಾವಿಸಲಾಗುತ್ತದೆಯಷ್ಟೇ!

(೨೩೭) ನೀವು ಸಿನೆಮ-ವ್ಯಸನಿಗಳಾಗಿದ್ದಲ್ಲಿ (ಫಿಲ್ಮೊಹಾಲಿಕ್)--ಎಷ್ಟೊಂದು ಚಲನಚಿತ್ರಗಳು ಸೃಷ್ಟಿಯಾಗಿವೆಯೆಂದರೆ--ದೈನಂದಿನ ಬದುಕೆಂಬುದು ಒಂದು ಜಾಹಿರಾತಿನ ವಿರಾಮವಷ್ಟೇ ಆಗಿಬಿಡುತ್ತದೆ!

(೨೩೮) ವೃದ್ಧರಾಗುವುದೆಂಬುದು ಯೌವ್ವನದ ’ನಂತರ’ದ ಸ್ಥಿತಿಯಲ್ಲ. ಬದಲಿಗೆ ಯೌವ್ವನದ ಸೋಂಬೇರಿತನವನ್ನು ಸರಿಪಡಿಸಿಕೊಳ್ಳಲಿರುವ ಸುದೀರ್ಘ ’ಅವಕಾಶ’.

(೨೩೯) ನಶ್ವರವಾದಿ: ದೇವರಾಣೆಗೂ ಆತನನ್ನೇ ಕುರಿತು ನನ್ನಲ್ಲಿ ಸಾಕಷ್ಟು ’ಗೊಂದಲ’ವಿದೆ; ಹಾಗೂ ಈ ಅನಿರ್ದಿಷ್ಟತೆಯನ್ನು ನಶ್ವರತೆ ಎಂದು ’ನಿರ್ದಿಷ್ಟ’ವಾಗಿ ವರ್ಗೀಕರಿಸ ಬಯಸುತ್ತೇನೆ! Read more about ಸಿನೆಮ ವ್ಯಸನವು ಬದುಕನ್ನು ಜಾಹಿರಾತಿನ ವಿರಾಮವನ್ನಾಗಿಸಿಬಿಡುತ್ತದೆ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೬

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೀವೆಂದರವರೇನೆಂದು ಭಾವಿಸಿದ್ದಾರೋ ಅದರಾಚೆಗೆ ನಿಮಗವರು, ಅವರಿಗೆ ನೀವು ಇಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೭

October 4, 2010 - 7:43pm
anilkumar

(೨೪೧) ಎಲ್ಲರೂ ಸಮಾನರು ಎಂಬುದನ್ನು ಆಟವು ಒಪ್ಪದು. ಎಲ್ಲರೂ ಸಮಾನರಾಗಿರಬೇಕು ಎಂಬುದು ಮಾರ್ಕ್ಸ್-ವಾದದ ಕನಸು. ಇಂತಹ ’ಸಮಾನತೆ’ಯ ಸೃಷ್ಟಿಗಳಿಂದ ಜಾಣ ದೇವರು ಸ್ವತಃ ತನ್ನನ್ನೇ ಹೊರಗಿರಿಸಿಕೊಂಡುಬಿಟ್ಟಿದ್ದಾನೆ.

(೨೪೨) ನಿಸರ್ಗದ ವಿರುದ್ಧದ ಸೋಲುವ ಯುದ್ಧವನ್ನು ಗೆಲುವೆಂದು ಭಾವಿಸುವ ಮಾನವನ ಪ್ರಯತ್ನದ ಫಲವೇ ’ನಗರ’.

(೨೪೩) ಭೂಮಿಯ ಬೃಹತ್ ಕಸದಬುಟ್ಟಿಗಳ ಔಪಚಾರಿಕ ಹೆಸರೇ ’ನಗರೀಕರಣ’.

(೨೪೪) " ’ಅಭ್ಯಾಸವು ಬೋಧನೆಗಿಂತಲೂ ಮಿಗಿಲು’ ಎಂಬ ಈ ವಾಕ್ಯವೂ ಒಂದು ಬೋಧನೆಯೇ" ಎಂದು ಭಾವಿಸುವುದು ಒಂದು ದುರಭ್ಯಾಸವಲ್ಲವೆ?!

(೨೪೫) ನೀವು ಎಂದರೆ ಏನೆಂದು ಇತರರು ಭಾವಿಸಿದ್ದಾರೋ ಅದರ ಒಟ್ಟಾರೆ ಮೊತ್ತವೇ ನೀವು. ಆ ನಂಬಿಕೆಯಾಚಿಗೆ ಅವರ ಪಾಲಿಗೆ ನೀವಿಲ್ಲ. ಆ ನಂಬಿಕೆಯಾಚೆಗಿನ ನಿಮಗೆ ಅವರುಗಳ ಅವಶ್ಯಕತೆಯಿಲ್ಲ! Read more about ನೀವೆಂದರವರೇನೆಂದು ಭಾವಿಸಿದ್ದಾರೋ ಅದರಾಚೆಗೆ ನಿಮಗವರು, ಅವರಿಗೆ ನೀವು ಇಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೭

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೇವರು, ದೆವ್ವ ಎಂಬ ನಮ್ಮೆಲ್ಲರ ಕನಸಿನ ಕಲ್ಪನೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೮

October 10, 2010 - 12:14pm
anilkumar

(೨೪೬) ಈ ಪೃಥ್ವಿಯ ಆಚೆ ದೇವರಿಲ್ಲ. ಪಂಜು ಇಲ್ಲದೆ ಕೃತಕ ಬೆಳಕು ಹೇಗೆ ಇರುವುದಿಲ್ಲವೋ ಹಾಗೆ ಮಾನವ ಪ್ರಾಣಿ ಇಲ್ಲದೆ ದೈವವಿರದು ಎಂಬುದನ್ನು ದೇವರೂ ಒಪ್ಪುತ್ತದೆ!

(೨೪೭) ವಿಶ್ವದ ಅಳಿಸಲಾಗದ ವಿಧಿನಿಯಮವೆಂದರೆಃ ಅದಕ್ಕೊಂದು ಭವಿಷ್ಯತ್ ಕಾಲವೆಂಬುದಿದೆ. ವಿಶ್ವದ ಭಾಗವಾದ ಭೂಮಿಯ ಹಣೆಯಬರಹವನ್ನು ಮಾನವ ನಿರ್ಧರಿಸಬಲ್ಲನಾದರೆ, ಸಮಗ್ರ ವಿಶ್ವದ ಒಪ್ಪಿಗೆಯಿಂದಾಗಿ ಮಾತ್ರ ಅದು ಸಾಧ್ಯವಾಗಿದೆ!

(೨೪೮) ವಿಧಿನಿಯಮಕ್ಕೆ ಇಚ್ಛಾಪೂರ್ವಕವಾಗಿ ಶರಣಾಗುವುದು ಮೋಕ್ಷಪಡೆದವರಿಗಿರುವ ಅನಿವಾರ್ಯ ಆಯ್ಕೆ!

(೨೪೯) ನಾವು ಪ್ರಶ್ನೆಗಳನ್ನು ಕೇಳುವುದು ನಿರ್ದಿಷ್ಟ ಉತ್ತರ ಪಡೆಯಲೆಂದೇನಲ್ಲ. ಯಾವುದೇ ಉತ್ತರವನ್ನು ಕೇಳಲು ನಾವು ಈಗ ಸಿದ್ಧರಿದ್ದೇವೆ ಎಂದದರ ಅರ್ಥ! Read more about ದೇವರು, ದೆವ್ವ ಎಂಬ ನಮ್ಮೆಲ್ಲರ ಕನಸಿನ ಕಲ್ಪನೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೮

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಹತ್ವಾಕಾಂಕ್ಷೆ ಇದ್ದರೂ, ಇಲ್ಲದಿದ್ದರೂ ಕನಸು ಮಾತ್ರ ಕಾಣಲಾರಿರಿಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೯

October 13, 2010 - 11:05pm
anilkumar

(೨೫೧) ಭಿಕ್ಷುಕ ಮತ್ತು ಧನಿಕರ ನಡುವೆ ಇರುವ ಒಂದೇ ಸಾಮ್ಯತೆ ಮತ್ತು ಒಂದೇ ವ್ಯತ್ಯಾಸವು ಅವರಿಬ್ಬರ ಸಾಮಾಜಿಕ ಅಂತಸ್ತಿನಲ್ಲಿದೆ. ಅದರಲ್ಲಿ ಮೊದಲನೆಯವ ಇನ್ನೂ ಆಳಕ್ಕೆ ಇಳಿಯಲಾರ, ಎರಡನೆಯವ ಇನ್ನೂ ಮೇಲೇರುವ ಆಸೆ ತೊರೆಯಲಾರ!

(೨೫೨) ನಿಮಗೊಂದು ಮಹತ್ವಾಕಾಂಕ್ಷೆ ಇಲ್ಲದಿದ್ದಲ್ಲಿ ನೀವು ಕನಸು ಕಾಣಲಾರಿರಿ. ಮಹತ್ವಾಕಾಂಕ್ಷೆ ಇದ್ದರೂ ಕನಸು ಕಾಣಲಾರಿರಿ. ಏಕೆಂದರೆ ಆಗ ನಿಮಗೆ ನಿದ್ರೆಯೇ ಬರುವುದಿಲ್ಲವಲ್ಲ!

(೨೫೩) ಎರಡು ಸಂದರ್ಭಗಳಲ್ಲಿ ಇತರರು ನಮ್ಮನ್ನು ನಾವು ಇರುವಂತೆಯೇ ಸ್ವೀಕರಿಸಲಾರರು--(೧) ಬದುಕಿದ್ದಾಗ, "ಯಾಕಾದರೂ ಬದುಕಿದ್ದಾನೀತ" ಎನ್ನುತ್ತಾರೆ. (೨) ಸತ್ತಾಗ, "ಸಾಯಬಾರದಾಗಿತ್ತು ಈತ", ಎನ್ನುತ್ತಾರೆ! Read more about ಮಹತ್ವಾಕಾಂಕ್ಷೆ ಇದ್ದರೂ, ಇಲ್ಲದಿದ್ದರೂ ಕನಸು ಮಾತ್ರ ಕಾಣಲಾರಿರಿಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೯

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಹತ್ವಾಕಾಂಕ್ಷೆ ಇದ್ದರೂ, ಇಲ್ಲದಿದ್ದರೂ ಕನಸು ಮಾತ್ರ ಕಾಣಲಾರಿರಿಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೯

October 13, 2010 - 11:06pm
anilkumar

(೨೫೧) ಭಿಕ್ಷುಕ ಮತ್ತು ಧನಿಕರ ನಡುವೆ ಇರುವ ಒಂದೇ ಸಾಮ್ಯತೆ ಮತ್ತು ಒಂದೇ ವ್ಯತ್ಯಾಸವು ಅವರಿಬ್ಬರ ಸಾಮಾಜಿಕ ಅಂತಸ್ತಿನಲ್ಲಿದೆ. ಅದರಲ್ಲಿ ಮೊದಲನೆಯವ ಇನ್ನೂ ಆಳಕ್ಕೆ ಇಳಿಯಲಾರ, ಎರಡನೆಯವ ಇನ್ನೂ ಮೇಲೇರುವ ಆಸೆ ತೊರೆಯಲಾರ!

(೨೫೨) ನಿಮಗೊಂದು ಮಹತ್ವಾಕಾಂಕ್ಷೆ ಇಲ್ಲದಿದ್ದಲ್ಲಿ ನೀವು ಕನಸು ಕಾಣಲಾರಿರಿ. ಮಹತ್ವಾಕಾಂಕ್ಷೆ ಇದ್ದರೂ ಕನಸು ಕಾಣಲಾರಿರಿ. ಏಕೆಂದರೆ ಆಗ ನಿಮಗೆ ನಿದ್ರೆಯೇ ಬರುವುದಿಲ್ಲವಲ್ಲ!

(೨೫೩) ಎರಡು ಸಂದರ್ಭಗಳಲ್ಲಿ ಇತರರು ನಮ್ಮನ್ನು ನಾವು ಇರುವಂತೆಯೇ ಸ್ವೀಕರಿಸಲಾರರು--(೧) ಬದುಕಿದ್ದಾಗ, "ಯಾಕಾದರೂ ಬದುಕಿದ್ದಾನೀತ" ಎನ್ನುತ್ತಾರೆ. (೨) ಸತ್ತಾಗ, "ಸಾಯಬಾರದಾಗಿತ್ತು ಈತ", ಎನ್ನುತ್ತಾರೆ! Read more about ಮಹತ್ವಾಕಾಂಕ್ಷೆ ಇದ್ದರೂ, ಇಲ್ಲದಿದ್ದರೂ ಕನಸು ಮಾತ್ರ ಕಾಣಲಾರಿರಿಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೯

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎಲ್ಲಕ್ಕೂ ವಿಜ್ಞಾನದಲ್ಲಿ ಉತ್ತರವಿಲ್ಲದಿದ್ದರೂ ಎಲ್ಲದರಲ್ಲೂ ಅದು ಅದನ್ನೇ ಬೇಡುತ್ತದೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೦

October 15, 2010 - 12:01am
anilkumar

(೨೫೬) ಯಾವುದನ್ನಾದರೂ, ಏನನ್ನಾದರೂ ’ಕಾಲ’ವನ್ನಾಗಿ ಬದಲಿಸಬಹುದು. ಆದರೆ ಕಾಲವನ್ನು ಕಾಲಾತೀತವಾದ ಯಾವುದಕ್ಕೂ ಮಾರ್ಪಡಿಸಲಾಗದು. ಇದನ್ನು ಕುರಿತು ಚಿಂತಿಸಲು ಸ್ವಲ್ಪ ಕಾಲಾವಕಾಶ ಮಾಡಿಕೊಂಡು ನೋಡಿ.

(೨೫೭) ವಿಜ್ಞಾನವೆಂಬುದೊಂದು ಆಷಾಡಭೂತಿತನ. ಏಕೆಂದರೆ ಸ್ವತಃ ವಿಜ್ಞಾನದಲ್ಲಿ ಪ್ರತಿಯೊಂದಕ್ಕೂ ವಿವರಣೆ ದೊರಕದಿದ್ದರೂ ಪ್ರತಿಯೊಂದರಲ್ಲೂ ಅದು ಸೂಕ್ತ ವಿವರವನ್ನು ಒತ್ತಾಯಿಸುತ್ತಿರುತ್ತದೆ!

(೨೫೮) ಎಲ್ಲವೂ ಗುರುತ್ವಾಕರ್ಷಣೆಯಿಂದೇನೂ ಬೀಳುವುದಿಲ್ಲ. ಕೆಲವರು ಪ್ರೀತಿಯಲ್ಲಿ ಬೀಳುತ್ತಾರೆ!

(೨೫೯) ಸಿಹಿ ಸುದ್ದಿ ಏನಪ್ಪಾ ಅಂತಂದ್ರೆ ಎಲ್ಲರೂ ಒಂದಲ್ಲ ಒಂದು ದಿನ ಸಾಯುತ್ತಾರೆ. ಕೆಟ್ಟ ಸುದ್ದಿ ಏನಪ್ಪಾ ಅಂತಂದ್ರೆ ಮಿಕ್ಕವರೆಲ್ಲ ತದನಂತರ ನೂರ್ಕಾಲ ಸುಖವಾಗಿ ಬಾಳುತ್ತಾರೆ!

(೨೬೦) ಅಪಮಾನ, ಮುಖಭಂಗ, ಹಿಂಸೆ ಮತ್ತು ಕ್ರೌರ್ಯವು ಜ್ಞಾನಕ್ಕೆ ದಾರಿಗಳು! ಹೀಯಾಳಿಸಬೇಕೆಂಬ ನಿಮ್ಮಾಸೆಯನ್ನು ಅಪಮಾನ ಮಾಡಿ, ಗರ್ವದ ಮುಖಭಂಗಗೊಳಿಸಿ, ಆಸೆಯನ್ನು ಹಿಂಸಿಸಿ ಮತ್ತು ಹಿಂಜರಿಕೆಯನ್ನು ಕ್ರೌರ್ಯದ ಪಂಜಿಗಟ್ಟಿ. Read more about ಎಲ್ಲಕ್ಕೂ ವಿಜ್ಞಾನದಲ್ಲಿ ಉತ್ತರವಿಲ್ಲದಿದ್ದರೂ ಎಲ್ಲದರಲ್ಲೂ ಅದು ಅದನ್ನೇ ಬೇಡುತ್ತದೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೦

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾಳೆಗೆ ಅದು ನೆನ್ನೆಯಾಗುತ್ತದೆಂಬುದನ್ನು ಬಿಟ್ಟರೆ ಇಂದು ವಿಶೇಷವೇನೂ ಇಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೧

October 27, 2010 - 6:16pm
anilkumar

(೨೬೧) ಏನನ್ನು ಕಲಿಸಲಾಗುತ್ತದೆಯೋ ಅದು ಯಾರನ್ನೂ ಪ್ರೌಢರನ್ನಾಗಿಸದೆಂಬ ಗುಟ್ಟನ್ನು ಅನಕ್ಷರಸ್ಥರಿಂದ ಮುಚ್ಚಿಡುವ ಹುನ್ನಾರವನ್ನು ಶಿಕ್ಷಣ ಎನ್ನುತ್ತಾರೆ!

(೨೬೨) ಏನನ್ನಾದರೂ ಸಾಧಿಸಬೇಕೆಂಬ ಸುಡುವ ಬೇಗೆಯಂತಹ ತುಡಿತಕ್ಕಿಂತಲೂ ಸಿಡಿಗಳನ್ನು ಸುಡುವ ಅಭ್ಯಾಸವೇ ಇಂದು ಹೆಚ್ಚಿದೆ.

(೨೬೩) ಅತ್ಯಂತ ಶೋಷಿತವಾಗಿರುವ ದೇಹದ ಅಂಗವೆಂದರೆ ಅದು ’ಆರೋಗ್ಯಕರ ಹಲ್ಲುಗಳೇ’ ಇರಬೇಕು. ಅವು ಆಹಾರವನ್ನು ಸ್ವೀಕರಿಸಿ, ಮುರಿದು, ಬೆರೆಸಿ, ಮುಂದಕ್ಕೆ ದೂಡುತ್ತವೆ. ಸ್ವತಃ ಅವುಗಳ ’ಮೇಲೆ’ ಉಳಿದಿರಬಹುದಾದ ಯಃಕಶ್ಚಿತ್ ಊಟವನ್ನೂ ಸಹ ಕೂಡಲೇ ಅವುಗಳಿಂದ ಕಿತ್ತುಹಾಕಲಾಗಿಬಿಡುತ್ತದೆ!

(೨೬೪) ಅಹ್ಲಾದಕರ ಬದುಕನ್ನು ಬದುಕಿನ ಅಹ್ಲಾದದಿಂದ ಭಿನ್ನಗೊಳಿಸುವ ಸಾಮರ್ಥ್ಯವೇ ನಾಗರೀಕತೆಗಿರಬೇಕಾದ ಮೊದಲ ಯೋಗ್ಯತೆ! Read more about ನಾಳೆಗೆ ಅದು ನೆನ್ನೆಯಾಗುತ್ತದೆಂಬುದನ್ನು ಬಿಟ್ಟರೆ ಇಂದು ವಿಶೇಷವೇನೂ ಇಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೧

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತಿಳಿದವನ ಪದಕೋಶದಲ್ಲಿ ಅಜ್ಞಾನಿಯ ಹೆಸರು, ಎರಡನೆಯವನ ಮೊಬೈಲಿನಲ್ಲಿ ಮೊದಲನೆಯವನ ಸಂಖ್ಯೆಯೋ ಇರುವುದಿಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೨

October 28, 2010 - 2:02am
anilkumar

(೨೬೬) ಮುಗ್ಧತೆಯನ್ನು ಕುರಿತ ಅಧ್ಯಯನವೂ ಸಹ ಜ್ಞಾನವೇ!

(೨೬೭) ಲೈನ್ ಮಾರೋಃ ತಿಳಿವಳಿಕೆಯುಳ್ಳವನ ಪದಕೋಶದಲ್ಲಿ ಅಜ್ಞಾನಿ ಇರುವುದಿಲ್ಲ. ಅಜ್ಞಾನಿಯ ವಿಳಾಸಪಟ್ಟಿಯಲ್ಲಿ ಪ್ರೌಢನ ಮೊಬೈಲ್ ನಂಬರ್ ಪತ್ತೆಯಾಗುವುದಿಲ್ಲ. ಆದ್ದರಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೇಳುವುದರಲ್ಲಿ ತಪ್ಪೇನು?!

(೨೬೮) ಮಾಂಸದೊಳಗಿನ ಮಾಂಸವು ಕಾಮ. ಅದೇ ಮಾಂಸದೊಳಗೊಂದು ಲೋಹದ ಚೂರಿದ್ದರೆ ಅದು ಸಾವು ಸವರಿಹೋದ ದೇಹವೊಂದರ ಗುರುತು!

(೨೬೯) ಪಿತೃಪ್ರಾಧಾನ್ಯತೆಯು ಸ್ತ್ರೀವಾದದಿಂದ ಹುಟ್ಟಿಕೊಂಡದ್ದು. ಆ ಮುನ್ನ ಆ ಅಭ್ಯಾಸಕ್ಕೆ ಇನ್ನೂ ನಾಮಕರಣವಾಗಿರಲಿಲ್ಲವಷ್ಟೇ!

(೨೭೦) ಕಟ್ಟೆಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿ, ಗೋಜಲಿನಲ್ಲಿ ಅಂತ್ಯ ಕಾಣುವುದನ್ನು ಯುದ್ಧ ಮತ್ತು ವಿವಾಹವೆನ್ನುತ್ತೇವೆ! Read more about ತಿಳಿದವನ ಪದಕೋಶದಲ್ಲಿ ಅಜ್ಞಾನಿಯ ಹೆಸರು, ಎರಡನೆಯವನ ಮೊಬೈಲಿನಲ್ಲಿ ಮೊದಲನೆಯವನ ಸಂಖ್ಯೆಯೋ ಇರುವುದಿಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೨

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಾಯುವ ಆಸೆ ಇಲ್ಲದಿರುವುದರಿಂದಲೇ ಅದರಾಚೆಗಿನದು ಎಂದಿಗೂ ನಿಗೂಢಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೩

October 29, 2010 - 1:19am
anilkumar

(೨೭೧) ಒಮ್ಮೆಲೆ ಅತ್ಯಂತ ಸಂತಸದಿಂದಿರುವ ಮತ್ತು ದುಃಖಿತನಾಗಿರುವ ಕನಿಷ್ಠಪಕ್ಷ ಒಬ್ಬ ವ್ಯಕ್ತಿಯಾದರೂ ನನಗೆ ಗೊತ್ತುಃ ಕ್ರಮಬದ್ಧವಾಗಿ ಆ ವ್ಯಕ್ತಿ ’ಮತ್ತೊಬ್ಬರ ಪ್ರಕಾರದ’ ನೀವು ಮತ್ತು ’ನಿಮ್ಮ ಪ್ರಕಾರದ’ ನೀವು. ಇದು ತಿರುವು ಮರುವಾದರೆಷ್ಟು ಚೆನ್ನ!

(೨೭೨) "ನನಗೆ ಗೊತ್ತಿಲ್ಲ ಎಂಬುದು ನನಗೆ ತಿಳಿದಿದೆ" ಎಂಬ ಮನೋಭಾವಕ್ಕಿಂತಲೂ "ನನಗೆ ಗೊತ್ತಿದೆ ಎಂಬುದು ನನಗೆ ತಿಳಿದೇ ಇರಲಿಲ್ಲ" ಎಂಬ ಮನೋಭಾವವು ಹೆಚ್ಚೋ, ಕಡಿಮೆಯೋ ಎಂಬುದನ್ನು ನಿರ್ಧರಿಸುವುದು ಹೇಗೆ ಎಂಬುದು ನನಗೆ ಗೊತ್ತಿದೆಯೋ ಇಲ್ಲವೋ ತಿಳಿಯದಾಗಿದೆ!

(೨೭೩) ಯಾರಿಗೂ ಸಾಯುವ ಇಚ್ಛೆ ಇಲ್ಲದಿರುವುದರಿಂದಲೇ ಅದರಾಚೆ ಏನಿದೆ ಎಂಬುದು ನಮಗಿನ್ನೂ ತಿಳೀಯದಾಗಿರುವುದು!

(೨೭೪) ಎಲ್ಲರಿಗೂ ಬದುಕುವ ಆಸೆ. ಆದ್ದರಿಂದಲೇ ಅದು ಅಷ್ಟೊಂದು ಗೋಜಲಾಗಿರುವುದು. Read more about ಸಾಯುವ ಆಸೆ ಇಲ್ಲದಿರುವುದರಿಂದಲೇ ಅದರಾಚೆಗಿನದು ಎಂದಿಗೂ ನಿಗೂಢಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೩

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೆಲವರು ತುಂಬಾ ಫೋಟೋಜನಿಕ್, ಅದರಲ್ಲಿ ಮಾತ್ರ ಚೆನ್ನಾಗಿ ಕಾಣ್ತಾರೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೪

October 30, 2010 - 2:24am
anilkumar

(೨೭೬) ಕುರೂಪಿಗಳ ಛಾಯಾಚಿತ್ರಣ ಬಹಳ ಸುಲಭ. ಆಕಸ್ಮಿಕವಾಗಿ ಯಾವುದೋ ಒಂದು ಕೋನದಿಂದ ಅವರು ’ಪರವಾಗಿಲ್ಲ’ ಎಂಬಂತೆ ಕಂಡುಬರುತ್ತಾರೆ. ಆದರೆ ಸುಂದರ ಮನುಷ್ಯರಲ್ಲಿನ ’ಮನುಷ್ಯ’ರನ್ನು ಸೆರೆಹಿಡಿದುಬಿಡಬಹುದೇ ವಿನಃ ಅವರ ’ಸೌಂದರ್ಯ’ವನ್ನು ಸೆರೆಹಿಡಿದುಬಿಡಲು ಹೇಗೆ ಸಾಧ್ಯ?!

(೨೭೭) ಕೆಲವರು ತುಂಬಾ ’ಚಿತ್ರ’ವತ್ತಾಗಿರುತ್ತಾರೆ. ಅಂದರೆ ಕೇವಲ ಛಾಯಾಚಿತ್ರಗಳಲ್ಲಿ ಮಾತ್ರ ಚಂದ ಕಾಣುತ್ತಾರೆ!

(೨೭೮) ಸ್ವರ್ಗದಿಂದ ಧರೆಗಿಳಿವ ಪವಿತ್ರಜಲವು ಕೊಳಕುಜನರ ಸ್ಪರ್ಶಿಸಿ ಅಪವಿತ್ರವಾಗುವುದನ್ನು ತಪ್ಪಿಸುವ ಸಾಧನವೇ ಛತ್ರಿ!

(೨೭೯) ಮದ್ಯದಲ್ಲಿ ಹರಿವ ನದಿಗಿಂತಲೂ ಭಿನ್ನಾಭಿಪ್ರಾಯಗಳಿಂದ ಬೇರ್ಪಡಿಸಲ್ಪಟ್ಟ ಎರಡು ಬೆಟ್ಟಗಳನ್ನು ಒಂದುಗೂಡಿಸುವ ಭಾವವೇ ಸೇತುವೆ! Read more about ಕೆಲವರು ತುಂಬಾ ಫೋಟೋಜನಿಕ್, ಅದರಲ್ಲಿ ಮಾತ್ರ ಚೆನ್ನಾಗಿ ಕಾಣ್ತಾರೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೪

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಾವೆಂಬ ಪ್ರೋಗ್ರಾಮಿನ ಸ್ಕ್ರೀನ್ ಸೇವರನ್ನು ನೋವು ಎನ್ನುತ್ತೇವೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೫

November 2, 2010 - 3:51pm
anilkumar

(೨೮೧) ಸಾವು ಎಂಬ ’ಪ್ರೋಗ್ರಾಮಿನ’ ’ಸ್ಕ್ರೀನ್ ಸೇವರನ್ನು’ ನೋವು ಎನ್ನುತ್ತೇವೆ. ಭ್ರಮೆಯೆಂಬ ’ವೈರಸ್’ ಕಾಟದಿಂದಾಗಿ ನೋವನ್ನು ತಾತ್ಕಾಲಿಕವಾಗಿ ’ಹ್ಯಾಂಗ್’ ಮಾಡುವುದನ್ನು ಇಂದ್ರೀಯ ಸುಖ ಎನ್ನುತ್ತೇವೆ!

(೨೮೨) ನೈಜತೆಯ ಸಂಯಮಪೂರ್ಣ ಉತ್ಪ್ರೇಕ್ಷೆಯೇ ಫ್ಯಾಂಟಸಿ.

(೨೮೩) ಇಲ್ಲಿಯವರೆಗೂ ತೆಗೆಯಲಾಗಿರುವ ಛಾಯಾಚಿತ್ರಗಳ ಸಂಖ್ಯೆ ೧೨೩೪೫೬೭೮೯೦. ಇದನ್ನು ಅಲ್ಲಗಳೆಯುವುದಾದರೂ ಹೇಗೆ?!

(೨೮೪) ವೈರುಧ್ಯಮಯ ನಿಲುವು ತಾಳುವ ಮುನ್ನ ಚಿಂತಿಸಿಃ ಚಿಂತನೆಗೆ ವೈರುಧ್ಯಮಯ ನಿಲುವುಗಳು ಬಹಳ ಉಪಯೋಗಕಾರಿ!

(೨೮೫) ನಿಮ್ಮ ದೇಹತೂಕವನ್ನು ಕಡಿಮೆಗೊಳಿಸುವ ಅತ್ಯಂತ ಸುಲಭ ತಂತ್ರವೆಂದರೆ ನಿಮ್ಮ ಜೇಬಿನಿಂದ ಹಣ ಕಳೆದುಕೊಳ್ಳುವುದು!

  Read more about ಸಾವೆಂಬ ಪ್ರೋಗ್ರಾಮಿನ ಸ್ಕ್ರೀನ್ ಸೇವರನ್ನು ನೋವು ಎನ್ನುತ್ತೇವೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೫

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಂಬುವುದೆಂದರೆ ವಂಚಿಸುವ ಅವರ ಸಾಮರ್ಥ್ಯವನ್ನು ಕಡೆಗಣಿಸಿದಂತೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೬

November 5, 2010 - 4:09pm
anilkumar

(೨೮೬) ಬೇಸರಿಕೆಃ ಅತ್ಯಂತ ಕುತೂಹಲಕಾರಿಯಾದ ಸಿನೆಮವನ್ನು ಮತ್ತೆ ಮತ್ತೆ, ಅನವರತವಾಗಿ ವೀಕ್ಷಿಸುವುದು.

(೨೮೭) ಯೌವ್ವನವು ಮುದಿತನಕ್ಕೆ ದಾರಿಯಲ್ಲ, ಬದಲಿಗೆ ಅದರ ಆರಂಭಿಕ ಹಂತವಷ್ಟೇ! ಹೀಗಿದ್ದರೂ ಎಲ್ಲ ವಯಸ್ಕರೂ ತಮ್ಮ ಯೌವ್ವನಾವಸ್ಥೆಯ ’ಮಾಗಿದ’ ಮಾದರಿಗಳೇನಲ್ಲ!

(೨೮೮) ಕೋಟಿಗಟ್ಟಲೆ ಜನರಿದ್ದರೂ, ಎಲ್ಲರೂ ಮೊದಲೇ ಪರಿಹಾರ ಕಂಡಿರುವುದನ್ನೇ ನಿರಂತರವಾಗಿ ಹುಡುಕುತ್ತಿರುತ್ತಾರೆಃ ಯಾವುದೇ ತೆರನಾದ ನಿರ್ದಿಷ್ಟ ಉತ್ತರವೂ ಸಾಧ್ಯವಿಲ್ಲವೆಂಬುದೇ ಆ ಪರಿಹಾರ!

(೨೮೯) ಯಾರನ್ನಾದರೂ ನಂಬುವುದೆಂದರೆ ನಿಮ್ಮನ್ನು ಮೋಸಗೊಳಿಸಬಲ್ಲ ಅವರ ಸಾಮರ್ಥ್ಯವನ್ನು ಕಡೆಗಣಿಸಿದಂತೆ.

(೨೯೦) ಗುರಿ ತಲುಪುವುದೆಂದರೆ ಮೊದಲೇ ನಿರ್ಧಾರವಾದುದನ್ನು ’ತಲುಪುವುದು’. ಗಮನವನ್ನು ಸುತ್ತುವರಿದ ಭಾಗ್ಯವೆಂಬುದೇ ಅದನ್ನು ತಲುಪಲಿರುವ ವಾಹನ. ಕೇವಲ ಭಾಗ್ಯವು ನಿಮ್ಮನ್ನು ಗುರಿ ತಲುಪಿಸಿದರೂ ಅದು ನಿಮ್ಮ ಸಾಧನೆ ಎನಿಸದು, ಬರಿಯ ಗಮನವು ಭಾಗ್ಯವಂಚಿತವಾದ್ದರಿಂದಲೇ ನೀವು ತಲುಪಿದ್ದರೂ ಗುರಿ ನಿಮ್ಮಿಂದ ದೂರವಿದ್ದಂತೆನಿಸಿಬಿಡುವುದು. Read more about ನಂಬುವುದೆಂದರೆ ವಂಚಿಸುವ ಅವರ ಸಾಮರ್ಥ್ಯವನ್ನು ಕಡೆಗಣಿಸಿದಂತೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೬

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೇಜವಾಬ್ದಾರಿಯು ಅಧಿಕಾರಹೀನರದ್ದೇ ಹಕ್ಕೇನಲ್ಲವಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೭

November 6, 2010 - 9:34pm
anilkumar

(೨೯೧) ಬೃಹತ್ ವಾದವೊಂದು ಕನಿಷ್ಠ ಅವಕಾಶದಲ್ಲಿ ನೆಲೆ ನಿಂತಿರುವುದನ್ನು ’ಹೇಳಿಕೆ’ ಎನ್ನುತ್ತೇವೆ.

(೨೯೨) ನಾನು ಸುಳ್ಳನೆಂದು ನೀವು ನಿರೂಪಿಸಬಲ್ಲಿರ? ಹಾಗಿದ್ದಲ್ಲಿ ನಾವಿಬ್ಬರೂ ಎರಡು ವೈರುಧ್ಯಮಯ ಜಗತ್ತಿನಲ್ಲಿ ಬದುಕುತ್ತಿದ್ದೇವೆಂದು ’ನಾನು’ ಎಂಬುದು ನಿರೂಪಿಸಿಬಿಡಬಲ್ಲದು.

(೨೯೩) ಪ್ರಯಾಣವೆಂಬುದು ’ಆ’ ಸ್ಥಳದಿಂದ "ಈ" ಸ್ಥಳಕ್ಕೆ ಚಲಿಸುವುದಲ್ಲ. ಏಕೆಂದರೆ ಬೀಜಗಣಿತವು ಹುಟ್ಟುವ ಮುನ್ನವೂ ಜನ ಪ್ರಯಾಣ ಮಾಡುತ್ತಿದ್ದರು!

(೨೯೪) ಅಧಿಕಾರದೊಂದಿಗೆ ಜವಾಬ್ದಾರಿ ಜೊತೆಗೂಡುತ್ತದೆಂಬುದು ದಿಟ. ಆದರೆ ಬೇಜವಾಬ್ದಾರಿ ಎಂಬುದು ಅಧಿಕಾರಹೀನರದ್ದೇ ಹಕ್ಕೇನಲ್ಲವಲ್ಲ!

(೨೯೫) ಒಬ್ಬಾತ ಮಹಾನ್ ಆರ್ಥಿಕತಜ್ಞನಾಗಿದ್ದರೂ ಸಹ ಬದುಕಿನ ಸರಳ ’ಮೌಲ್ಯ’ಗಳನ್ನು ಸರಿಯಾಗಿ ಲೆಕ್ಕ ಹಾಕಲಾಗದೇ ಸೋತುಬಿಡಬಲ್ಲ!

  Read more about ಬೇಜವಾಬ್ದಾರಿಯು ಅಧಿಕಾರಹೀನರದ್ದೇ ಹಕ್ಕೇನಲ್ಲವಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೭

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಶತೃ ಎಲ್ಲವನ್ನೂ ನೆನಪಿಟ್ಟುಕೊಳ್ಳುವಾಗ, ಮಿತ್ರ ಮರೆತುದುದಕ್ಕೆ ಕ್ಷಮೆ ನಿರೀಕ್ಷಿಸುತ್ತಾನೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೮

November 17, 2010 - 12:36am
anilkumar

(೨೯೬) ತಲೆಯನ್ನು ಯಾವ ಸಂದರ್ಭದಲ್ಲಿಯಾದರೂ ನೆಲಕ್ಕೆ ಮುಟ್ಟಿಸಿಬಿಡಬಲ್ಲ ವಿನಯವನ್ನು ಬೆಳೆಸಿಕೊಂಡಾತ, ಹಾಗೆ ಮಾಡುವಾಗ ಜಗತ್ತನ್ನೇ ತಲೆಕೆಳಗು ಮಾಡಿಬಿಡಬಲ್ಲ!

(೨೯೭) ಆತನಿಗೆ/ಆಕೆಗೆ ನೀವೇನೇನೆಲ್ಲಾ ಮಾಡಿದ್ದೀರೆಂಬ ಪ್ರತಿಯೊಂದು ವಿವರವನ್ನೂ ಶತೃ ನೆನಪಿಟ್ಟುಕೊಂಡಿರುತ್ತಾನೆ/ಳೆ. ನಿಮ್ಮ ಇಂತಹದ್ದೇ ಕ್ರಿಯೆಗಳನ್ನೆಲ್ಲಾ ಮರೆತುಹೋಗಿಯೊ, ಅದಕ್ಕೆಲ್ಲ ನಿಮ್ಮಲ್ಲಿ ಕ್ಷಮೆ ನಿರೀಕ್ಷಿಸುವಾತನ ಕ್ರಿಯೆಯನ್ನು ಸ್ನೇಹವೆನ್ನುತ್ತೇವೆ.

(೨೯೮) ತನ್ನ ನಿಶ್ಯಕ್ತಿಯನ್ನು ಸಾಧ್ಯಂತವಾಗಿ ಅರಿತವನೆ ನಿಜಕ್ಕೂ ಶಕ್ತಿವಂತ.

(೨೯೯) ದಣಿವರಿಯದ ವ್ಯಕ್ತಿಃ ಯಾವಾಗ ಬೇಕಾದರೂ ಕರೆಮಾಡಿ. ನನ್ನ ಫೋನಿನಲ್ಲಿ ಬ್ಯುಸಿಟ್ಯೂನಿನ ಆಶ್ವಾಸನೆಯನ್ನು ನೀಡುತ್ತೇನೆ ನಿಮಗೆ. Read more about ಶತೃ ಎಲ್ಲವನ್ನೂ ನೆನಪಿಟ್ಟುಕೊಳ್ಳುವಾಗ, ಮಿತ್ರ ಮರೆತುದುದಕ್ಕೆ ಕ್ಷಮೆ ನಿರೀಕ್ಷಿಸುತ್ತಾನೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೮

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಿಮ್ಮ ಒಡನಾಟದಿಂದ ಚಿಂತೆಗೆ ಬೇಸರವಾಗುವುದನ್ನು ತೃಪ್ತಿ ಎನ್ನಬಹುದು--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೯

December 24, 2010 - 4:17pm
anilkumar

(೩೦೧) ಸತ್ತ ವ್ಯಕ್ತಿಗಳು ಕನಸಿನಲ್ಲಿ ಮಾತ್ರ ನಮ್ಮನ್ನು ಭೇಟಿ ಮಾಡುವುದರಿಂದ, ಎಚ್ಚರದ ಸ್ಥಿತಿಯ ಬಗ್ಗೆ ಏನೋ ಎಡವಟ್ಟಿದೆ.

(೩೦೨) ನೀವು ಎಂದಾದರೂ ನಕ್ಷತ್ರಗಳನ್ನು ನೋಡಿರುವಿರ? ಹೌದೆಂದಾದರೆ ನೀವು ಸುಳ್ಳರು, ಏಕೆಂದರೆ ನಿಮಗೆ ಕಂಡ ನಕ್ಷತ್ರಗಳಲ್ಲನೇಕವು ಈಗಾಗಲೇ ಸತ್ತು ಸ್ವರ್ಗ ಸೇರಿವೆ. ಇಲ್ಲವೆಂದಾದರೂ ನೀವು ಅನುಮಾನಿಗಳುಃ ಏಕೆಂದರೆ ನಕ್ಷತ್ರಗಳಲ್ಲಿ ಕೆಲವು ಇನ್ನೂ ಉಳಿದಿರುವ ಸಾಧ್ಯತೆ ಇದೆ!

(೩೦೩) ತೃಪ್ತಿಕರ ಭಾವವೆಂಬುದು ಖುಷಿಯಾಗಿರುವುದಲ್ಲ. ಬದಲಿಗೆ ಅದು ಎಲ್ಲ ಚಿಂತೆ, ಯೋಚನೆಗಳು ನಿಮ್ಮ ಒಡನಾಟದಿಂದ ಬೇಸರಗೊಳ್ಳುವುದೇ ಆಗಿದೆ!

(೩೦೪) ನಮ್ಮ ಐಡಿಯಗಳನ್ನು ಪರಸ್ಪರ ಬದಲಿಸಿಕೊಳ್ಳುವ? ಹೇಗಿದೆ ನನ್ನ ಐಡಿಯ? Read more about ನಿಮ್ಮ ಒಡನಾಟದಿಂದ ಚಿಂತೆಗೆ ಬೇಸರವಾಗುವುದನ್ನು ತೃಪ್ತಿ ಎನ್ನಬಹುದು--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೯

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೬೦

December 28, 2010 - 10:23am
anilkumar

( ೩೦೬) 'ದೇವರು ಕೆಲಸದ ವಿವರದಲ್ಲಿದ್ದಾನೆ' ಎಂದು  ವಾಸ್ತುಶಿಲ್ಪಿಯೊಬ್ಬ ಹೇಳಿದ್ದಾನೆ. ಆದರೆ ದೇವರ ವಿವರ ಮಾತ್ರ ಎಲ್ಲೆಡೆಯೂ ಇರುತ್ತದೆ, ಅದು ವಾಸ್ತುಶಿಲ್ಪಿವಾಗಿರಬಹುದು, ಅಲ್ಲದೆಯೂ ಇರಬಹುದು.
(೩೦೭) ಫಲಿತಾಂಶವು ಏನೇ ಆಗಿರಲಿ, ಔಷದೋಪಚಾರವೆಂಬುದು ಸಾವಿನ 'ಭಯವನ್ನೇ' ಮೀರಿನಿಲ್ಲುವ ಪರಿಣಾಮಕಾರಿ ಔಷದವಾಗಿದೆ.
(೩೦೮) ಮಾದಕ ವಸ್ತುವು ತನ್ನ ಅನುಪಸ್ಥಿತಿಯಲ್ಲಿ ಉಂಟುಮಾಡುವ ನಿರಂತರ ಸುಖದ ಭ್ರಮೆಯನ್ನೇ ಮೋಕ್ಷವೆನ್ನುತ್ತೇವೆ!
(೩೦೯) ದೀರ್ಘಾಯುಷಿಯಾಗಿರುವುದು ಎಂದರೆ ನಿಮ್ಮ ಸ್ನೇಹಿತರೆಲ್ಲ ನಿಮ್ಮ ಕಣ್ಣ ಮುಂದೆಯೇ ಸಾಯುತ್ತಾರೆ ಎಂದರ್ಥ. ಅಕಾಲಿಕ ಮೃತ್ಯುವನ್ನಪ್ಪುವುದು ಎಂದರೆ ನಿಮ್ಮ ಶತೃಗಳೆಲ್ಲರಿಂದಲೂ ಬಚಾವಾಗುವುದು ಎಂದರ್ಥ. Read more about ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೬೦

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನ್ಯಾಯದೊಳಗಿನ ತರ್ಕದಿಂದ ಕ್ಷಮೆ, ಅದರ ಬಗೆಗಿನ ಅಸಹಾಯಕತೆಯಿಂದ ಮರೆವು--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು-೬೧

January 1, 2011 - 1:15am
anilkumar

(೩೧೧) ಆದಿಭೌತಿಕದಲ್ಲಿ ನಂಬಿಕೆ ಇರಿಸುವುದೊಂದು ಪಲಾಯನವಾದ. ಸ್ವ-ಅನುಮಾನದಿಂದ ಪಲಾಯನ ಮಾಡುವ ವಾದವದು!
(೩೧೨) ಸಧೃಡವಾದ ದೇಹವನ್ನು ’ಪ್ರದರ್ಶಿಸುವುದೆಂದರೆ’ ಕಟ್ಟುಮಸ್ತಾಗಿ ಬೆಳೆಸಿದ್ದರೂ, ಸ್ವಾರ್ಥಕ್ಕಾಗಿ ಬಳಸಲಾಗದ ದೇಹದ 'ತೋರಿಕೆ'ಯನ್ನು ದಾನಮಾಡುವುದು ಎಂದರ್ಥ.
(೩೧೩) ಕ್ಷಮಿಸಿಬಿಡುವುದೆಂದರೆ  ನಮಗಾಗಿರುವ ಅನ್ಯಾಯದ ಒಳಗೇ ಒಂದು ತರ್ಕವನ್ನು ಕಾಣುವುದು. ಮರೆಯುವುದೆಂದರೆ ನಮಗಾದ ಅನ್ಯಾಯವನ್ನು ಅಸಹಾಯಕರಾಗಿ ನುಂಗಿಕೊಂಡುಬಿಡುವುದು.
(೩೧೪) ಮಹತ್ತರ ಸಾಧನೆಯೊಂದರ ಅತಿ-ಪರಿಚಿತತೆಯು ಕ್ಲೀಷೆಯಾಗಿ ಕೊನೆಗೊಳ್ಳಬಹುದು. ಆದರೆ ಕ್ಲೀಷೆ ಎಂಬುದನ್ನು ತಿರುವು ಮರೆವು ಮಾಡಲಾಗದು. ಕ್ಲೀಷೆಯೊಂದರ ಅತಿ ಪರಿಚಿತತೆಯೇ ಒಂದು ಮಹತ್ತರ ಸಾಧನೆಯಾಗಲಾಗದು! Read more about ಅನ್ಯಾಯದೊಳಗಿನ ತರ್ಕದಿಂದ ಕ್ಷಮೆ, ಅದರ ಬಗೆಗಿನ ಅಸಹಾಯಕತೆಯಿಂದ ಮರೆವು--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು-೬೧

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಾಲ್ಯವನ್ನು ಬಾಲಿಶಕ್ಕೆ ತಾಳೆಹಾಕುವುದು ಹಿರಿಯರ ಬಾಲಿಶತನಃ ಗಾದೆಗೊಂದು ಗುದ್ದು ೬೨

February 8, 2011 - 1:07pm
anilkumar

 (೩೧೬) ಬೋಧನೆಯ ಪರಿಷ್ಕೃತ ರೂಪವೇ ಕಲಿಸುವುದು. ಬೋಧಕ ಹೇಗೆ ನಡೆದುಕೊಳ್ಳಬೇಕೆಂದು ಇತರರಿಗೆ ತಿಳಿಹೇಳುತ್ತಾನೆ. ಗುರುವು ಸ್ವತಃ ತಾನೇ ಕಲಿಯುತ್ತಿರುವಂತೆ ನಡೆದುಕೊಳ್ಳುತ್ತಾನೆ. ಬೋಧಕ ಕಲಿಕೆಯ ಕಷ್ಟವನ್ನೆಂದೂ ಬೋಧಿಸುವುದಿಲ್ಲ. ಗುರು ಕಲಿಕೆಯನ್ನು ಸ್ವಾದಿಷ್ಟವಾಗಿಸುತ್ತಾನೆ. ಬೋಧಕ ಕಾಲ್ಪನಿಕ ಸ್ವರ್ಗದಿಂದಿಳಿದುಬಂದಂತೆ ಆಡಿದರೆ ಗುರುವು ನಮ್ಮೊಳಗಿನಿಂದಲೇ ಬೆಳೆದು ನಿಂತಂತೆ ತೋರುತ್ತಾನೆ.

(೩೧೭) ಕಲಿಯಬೇಕೆಂಬ ನಮ್ಮ ವಿನಮ್ರ ಮನಃಸ್ಥಿತಿಯ ಮೂಲಸತ್ಯವೇನೆಂದರೆ ನಮಗೆ ಏನೂ ಗೊತ್ತಿಲ್ಲ ಎಂಬುದು. ಇದು ಗೊತ್ತಿಲ್ಲದವರು ಅದನ್ನು ’ಎಂಥಾ ವಿನಯ!’ ಎಂದು ಉದ್ಘರಿಸಿಬಿಡುತ್ತಾರೆ! Read more about ಬಾಲ್ಯವನ್ನು ಬಾಲಿಶಕ್ಕೆ ತಾಳೆಹಾಕುವುದು ಹಿರಿಯರ ಬಾಲಿಶತನಃ ಗಾದೆಗೊಂದು ಗುದ್ದು ೬೨

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪ್ರಾಣಿಗಳ ಪ್ರವಾಸ ಅಸಾಧ್ಯವೇಕೆಂದರೆ ಅವುಗಳಿಗಿರಲೊಂದು ಮನೆಯಿರುವುದಿಲ್ಲ:ಗಾದೆಗೊಂದು ಗುದ್ದು-೬೩

February 10, 2011 - 3:58pm
anilkumar

 (೩೨೧) ಪ್ರವಾಸ ಮಾಡುವಾಗ ನಾವುಗಳು ಕಟ್ಟಡ, ಸ್ಮಾರಕ, ಚಿತ್ರಶಾಲೆ, ಅರಮನೆ, ಹೋಟೆಲ್ ಮುಂತಾದುವಕ್ಕೆ ಭೇಟಿ ನೀಡುವುದಕ್ಕೆ ಕಾರಣ ನಾವು ನಮ್ಮ ಮನೆಯಲ್ಲೇ ಇರುವ ಭಾವವನ್ನು ಪುನರ್-ಸಂಪಾದಿಸಿಕೊಳ್ಳಲಿಕ್ಕೆ!

(೩೨೨) ಕೇವನ ಮಾನವರು ಮಾತ್ರ ಪ್ರವಾಸದ ಸ್ವಾದವನ್ನು ಅನುಭವಿಸುತ್ತಾರೆ. ಇತರೆ ಪ್ರಾಣಿಗಳು ಪ್ರವಾಸ ಹೋಗುವುದಿಲ್ಲವೇಕೆಂದರೆ ಅವುಗಳಿಗೆ ಇರಲು ಮನೆಯೆಂಬುದೇ ಇರುವುದಿಲ್ಲವಲ್ಲ!

(೩೨೩) ಮಾತೆಂಬುದು ವೈಯಕ್ತಿಕದಿಂದ ಸಾರ್ವತ್ರಿಕಕ್ಕಿರುವ ಏಕದಿಕ್ಕಿನ ಪ್ರಯಾಣ. ಅದು ತನ್ನ ಜನ್ಮಸ್ಥಾನವಾದ ಮೌನಕ್ಕೆ ಎಂದೂ ಹಿಂದಿರುಗಲಾರದು. 

(೩೨೪) ಯೌವನವು ಅತಿ ಸುಂದರವಾದುದು. ಅದನ್ನು ಉಳಿಸಿಕೊಳ್ಳಲು ಅಥವ ಪುನರ್-ಸಂಪಾದಿಸಿಕೊಳ್ಳಲು ನಿರಂತರವಾಗಿ ಸೋಲುವ ಮಾಪಕವನ್ನೇ ಸೌಂದರ್ಯಮಾಪಕ ಸಾಮಗ್ರಿ ಎನ್ನುತ್ತಾರೆ. Read more about ಪ್ರಾಣಿಗಳ ಪ್ರವಾಸ ಅಸಾಧ್ಯವೇಕೆಂದರೆ ಅವುಗಳಿಗಿರಲೊಂದು ಮನೆಯಿರುವುದಿಲ್ಲ:ಗಾದೆಗೊಂದು ಗುದ್ದು-೬೩

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬದುಕೆಂಬುದು ಸಾವಿನ ಕನಸಾದರೆ, ಸಾವು ಬದುಕಿನ ಆಶಾವಾದವೆ?: ಗಾದೆಗೊಂದು ಗುದ್ದು-೬೪

February 11, 2011 - 4:02pm
anilkumar

(೩೨೬) ಮಿಕ್ಕೆಲ್ಲ ಪ್ರಾಣಿಗಳಿಗೆ ತಿಂದುದೆಲ್ಲವೂ ಭೋಜನವೇ. ಮಾನವರಿಗಾದರೆ ತಟ್ಟೆಯೊಳಗಿನದೆಲ್ಲ, ತಟ್ಟೆಯ ಒಳಗಿರುವುದು ಮಾತ್ರ ಊಟ!

(೩೨೭) ವಿಶ್ವದ ಅತ್ಯಂತ ವಿಕ್ಷಿಪ್ತ ಆಗುಹೋಗುಗಳು ಸುಮ್ಮನೆ ಕುಳಿತುಕೊಳ್ಳುವುದರಲ್ಲಿ ಅಡಕವಾಗಿದೆ.

(೩೨೮) ನಮ್ಮಲ್ಲಿಲ್ಲದ, ಆದರೆ ಇತರರು ಹೊಂದಿರುವ ಸಾಮರ್ಥ್ಯವೇ ಪ್ರತಿಭೆ! ನಮ್ಮ ಪ್ರತಿಭೆಯ ಬಗ್ಗೆ ಇತರರಿಗೆ ಲವಲೇಶದ ಸೂಚನೆಯೊ ಇಲ್ಲದಿದ್ದಲ್ಲಿ ಅದೇ ’ಗುಟ್ಟು’ ಎನ್ನಿಸಿಕೊಳ್ಳುತ್ತದೆ!

(೩೨೯) ದೈವವು ಮನುಷ್ಯರನ್ನು ಕಾಣಲಾಗದು. ಭ್ರಷ್ಟ ದೈವ ಮಾತ್ರ ಹಾಗೆ ಮಾಡಬಲ್ಲದು. ಹಾಗಾದ ಕೂಡಲೆ ಹಾಗೆ ಕಂಡುಬಂದ ಮಾನವ ಮೋಕ್ಷ ಹೊಂದಿಬಿಡುತ್ತಾನೆ. Read more about ಬದುಕೆಂಬುದು ಸಾವಿನ ಕನಸಾದರೆ, ಸಾವು ಬದುಕಿನ ಆಶಾವಾದವೆ?: ಗಾದೆಗೊಂದು ಗುದ್ದು-೬೪

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಸ್ಸು ಪಯಣ ಭೂಗೋಳ-ಪ್ರವಾಸ, ಕೆಫೆಯ ಚರ್ಚೆ ಕಾಲ-ಪ್ರವಾಸ: ಗಾದೆಗೊಂದು ಗುದ್ದು-೬೫

February 12, 2011 - 12:02pm
anilkumar

 (೩೩೧) ಅದು ಬಹಿರಂಗಗೊಂಡಾಗ ನಿನ್ನನ್ನು ಕುರಿತಾದ ಆ ವಿಷಯವನ್ನು ಸ್ವತಃ ನಿನಗೆ ನೀನೇ ಹೇಳಿಕೊಳ್ಳಲು ಸಂಕೋಚಪಡುವುದನ್ನೇ ’ಎಂಬರಾಸ್‍ಮೆಂಟ್’ ಎನ್ನುವುದು.

(೩೩೨) ಕನಸುಗಳು ತಾವೇ ತಾವಾಗಿ ಹುಟ್ಟಿಕೊಳ್ಳುತ್ತವೆ. ಸ್ವತಃ ಸರ್ವಶಕ್ತ ಚಕ್ರವರ್ತಿಯೊ ಅದನ್ನು ಸೃಷ್ಟಿಸಲಾರ!

(೩೩೩) ದುರಂತಗಳು ಮಾತ್ರ ಕಣ್ಮನಸೆಳೆವ ಸುದ್ಧಿಯಾಗುವ ಸಾಮರ್ಥ್ಯ ಹೊಂದಿರುವುದು ಸುದ್ಧಿಮಾಧ್ಯಮದ ದುರಂತ!

(೩೩೪) ನಾವು ಮೋಕ್ಷದ ತಿಕ್ಕಲು ಹತ್ತಿಸಿಕೊಂಡಿರುವವರೆಗೂ ಬದುಕಿನ ಆಹ್ಲಾದವನ್ನು ಸವಿಯಲಾರೆವು’ ಎಂಬುದೇ, ಯಾರು ಮೋಕ್ಷ ಪಡೆದವರೆಂದು ನಾವು ಭಾವಿಸಿದ್ದೇವೋ, ಅಂತಹವರ ಬೋಧನೆಯ ಸಾರ! 

(೩೩೫) ಬಸ್ಸಿನಲ್ಲಿ ಪಯಣಿಸುವುದು ಭೂಗೋಳ-ಪ್ರವಾಸವಾದರೆ ಕೆಫೆಯಲ್ಲಿ ಚರ್ಚಿಸುವುದು ಕಾಲ-ಪ್ರವಾಸ! Read more about ಬಸ್ಸು ಪಯಣ ಭೂಗೋಳ-ಪ್ರವಾಸ, ಕೆಫೆಯ ಚರ್ಚೆ ಕಾಲ-ಪ್ರವಾಸ: ಗಾದೆಗೊಂದು ಗುದ್ದು-೬೫

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಂಪ್ಯೂಟರಿನ ಕಾವ್ಯವನ್ನು ವೈರಸ್ ಎಂದು ತಪ್ಪರ್ಥ ಮಾಡಿಕೊಳ್ಳುತ್ತೇವೆ - ಗಾದೆಗೊಂದು ಗುದ್ದು ೬೭

February 21, 2011 - 1:27pm
anilkumar

 (೩೪೧) ಬದುಕಿನ ನಿಜವಾದ ಗುಟ್ಟೆಂದರೆ ಅದರಲ್ಲಿ ಗುಟ್ಟೆಂಬುದೇ ಇಲ್ಲದಿರುವುದು. ಅದು ತಿಳಿದಿದ್ದೂ ಮತ್ತೊಬ್ಬರಿಗೆ ತಿಳಿಸದವರೇ ನಿಜವಾದ ಮಾನವಾಧಿಕಾರದ ಪಾತ್ರ ವಹಿಸಿದ ಜೀವಿಗಳು.

(೩೪೨) ಕಾರ್ಯವೊಂದನ್ನು ಪೂರ್ಣಗೊಳಿಸಲಾಗದ ಎಲ್ಲ ಸೋಲುವ ಮಾರ್ಗಗಳನ್ನು ಕುರಿತ ಜ್ಞಾನವನ್ನು ಪಕ್ಕಕ್ಕೆ ಸರಿಸುವ ಕ್ರಮವೇ ಗೆಲುವು.

(೩೪೩) ಜ್ಞಾನವನ್ನು ಕುರಿತ ಹೇಗೆ? ಏನು? ಮತ್ತು ಏಕೆ? ಎಂಬ ಮೂರು ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಬೇಕಾದಂತಹವುಗಳು. ಇತರರು ನಿಮ್ಮ ಪರವಾಗಿ ಅದನ್ನು ಕೇಳಿಕೊಳ್ಳುವುದನ್ನು ಶಿಕ್ಷಣವೆನ್ನುತ್ತೇವೆ. ಇತರರು ಮತ್ತು ನೀವುಗಳು ಒಟ್ಟಾಗಿಯೂ ಈ ಮೂರನ್ನೂ ಕೇಳದಿರುವ ಉಪಾಯವೇ ಕಲಾಶಿಕ್ಷಣ. Read more about ಕಂಪ್ಯೂಟರಿನ ಕಾವ್ಯವನ್ನು ವೈರಸ್ ಎಂದು ತಪ್ಪರ್ಥ ಮಾಡಿಕೊಳ್ಳುತ್ತೇವೆ - ಗಾದೆಗೊಂದು ಗುದ್ದು ೬೭

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸೋಲೆಂಬ ಅವಕಾಶವನ್ನು ಗುರ್ತಿಸುವುದು ಪರ್ಯಾಯ ಚಿಂತನೆ -- ಗಾದೆಗೊಂದು ಗುದ್ದು

February 25, 2011 - 4:00pm
anilkumar

(೩೪೬) ’ಸೋಲು’ ಎಂಬ ಪದವನ್ನು ’ಅವಕಾಶ’ವೆಂಬ ಪದದಿಂದ ಸ್ಥಳಾಂತರಿಸುವ ಕ್ರಮವನ್ನು ಪರ್ಯಾಯ ಚಿಂತನೆ ಎನ್ನುತ್ತೇವೆ.

(೩೪೭) ನನಗೆ ದೇವರನ್ನು ತೋರಿಸಿ. ಮೊದಲಿಗೆ ಆತ ಅಸ್ಥಿತ್ವದಲ್ಲಿರುವನೋ ಹೇಗೆ ಎಂದು ವಿಚಾರಿಸುವೆ. ನಂತರ ಆತನ ಇರುವಿಕೆಯನ್ನೇ ಅನುಮಾನಿಸುವಂತಹ ನನ್ನಂತಹ ಮೂರ್ಖ ಜೀವಿಗಳನ್ನು ಸೃಷ್ಟಿಸಿದ ಆತನ ಮೂರ್ಖತನ ಎಂತಹದ್ದು ಎಂದು ವಿವರಿಸಿ ಹೇಳುವೆ.

(೩೪೮) ಕೆಲವು ಪ್ರಾಣಿಗಳು ಸಾಕುಪ್ರಾಣಿಗಳಾಗಿಬಿಡುವ ಖಾಯಿಲೆಯಿಂದ ನರಳುತ್ತವೆ. ಇದೇ ಖಾಯಿಲೆಯು ಮನುಷ್ಯರಲ್ಲಿ ಉಂಟಾದಾಗ ಅದನ್ನು ’ಸ್ಟಾಕ್‍ಹೋಮ್ ಸಿಂಡ್ರೋಮ್’ ಎನ್ನುತ್ತೇವೆ.

(೩೪೯) ಗೋಡೆಗೊಂದು ಇಟ್ಟಿಗೆ, ದೇಹಕ್ಕೊಂದು ಅಣು ಮತ್ತು ವಿಶ್ವವನ್ನು ಗ್ರಹಿಸುವ ಆಸೆ -- ಈ ಮೂರೂ ಸಹ ವಿಶಾಲ ಚಿಂತನೆಯ ಕೊರತೆಯಿಂದ ನರಳುತ್ತವೆ.   Read more about ಸೋಲೆಂಬ ಅವಕಾಶವನ್ನು ಗುರ್ತಿಸುವುದು ಪರ್ಯಾಯ ಚಿಂತನೆ -- ಗಾದೆಗೊಂದು ಗುದ್ದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೆಟ್ಟ ಅಡುಗೆಯ ಮನೆಯನ್ನು ಹೋಟೆಲ್ ಎನ್ನುತ್ತೇವೆ --ಗಾದೆಗೊಂದು ಗುದ್ದು ೬೯

March 6, 2011 - 1:08pm
anilkumar

 (೩೫೧) ಮೂಗುನತ್ತಿನ ಮೇಲಿನ ಪ್ರತಿಯೊಂದು ಬಿಂದುವೂ ಸಹ ತಾನು ಒಮ್ಮೆಯಾದರೂ ಒದ್ದೆಯಾಗಿಬಿಡುವ ಭಯ ಮತ್ತು ಸಾಧ್ಯತೆಯನ್ನು ಹೊಂದಿರುತ್ತದೆ.

(೩೫೨) ’ಪೇಜ್ ಥ್ರೀ’ಯನ್ನು ಒಳಗೊಂಡ ಪತ್ರಿಕೆಗಳ ಪ್ರತಿಪುಟದ ಸಂಖ್ಯೆಯೂ ಇಷ್ಠರಲ್ಲೇ ಪೇಜ್ ಥ್ರೀ ಆಗಿಬಿಡುವ ಸಾಧ್ಯತೆ ಮತ್ತು ಯೋಗ್ಯತೆ ಹೊಂದಿರುತ್ತದೆ.

(೩೫೩) ಪರಿಶ್ರಮವಿಲ್ಲದೆ ಬದುಕಿನ ಸ್ವಾದವನ್ನು ಅನುಭವಿಸುವ ಪ್ರಯತ್ನವೇ ಚಟ. ಚಟವಿಲ್ಲದ ಸ್ವಾಧಾನುಭವವು ವ್ಯಕ್ತಿಯನ್ನು ಪ್ರೌಢನನ್ನಾಗಿಸಿಬಿಡುತ್ತದೆ. 

(೩೫೪) ನಾನು ಏನನ್ನೂ ನಂಬಲಾರೆ ಎಂಬ ನಂಬಿಕೆಯನ್ನೂ ನಂಬಲಾರೆ.

(೩೫೫) ಕೆಟ್ಟ ಅಡುಗೆಯ ಪರಿಣಾಮವಾಗಿ ನಿಮ್ಮ ಮನೆಯಿಂದ ಹೊರಗಿರಿಸಲಾಗಿರುವ ಅಡುಗೆಮನೆಯನ್ನು ಹೋಟೆಲ್ ಎಂದು ಕರೆಯಲಾಗುತ್ತದೆ.  Read more about ಕೆಟ್ಟ ಅಡುಗೆಯ ಮನೆಯನ್ನು ಹೋಟೆಲ್ ಎನ್ನುತ್ತೇವೆ --ಗಾದೆಗೊಂದು ಗುದ್ದು ೬೯

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎಲ್ಲ ಪಯಣವೂ ಚಟದಿಂದ ದೂರವಾಗುವುದೇ - ಗಾದೆಗೊಂದು ಗುದ್ದು--೭೦

March 12, 2011 - 2:01am
anilkumar

 

(೩೫೬) ಪ್ರತಿಯೊಬ್ಬ ಸಫಲ ಗಂಡಿನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ. ಆದರೆ ಪ್ರತಿಯೊಬ್ಬ ಸಫಲ ಗಂಡೂ ಸಹ ಒಂದಕ್ಕಿಂತಲೂ ಹೆಚ್ಚಿನ ಹೆಣ್ಣಿನ ಹಿಂದೆ ಬೀಳುತ್ತಾನೆ--ನಿಜ ಜೀವನದ ಹೆಣ್ಣೊಬ್ಬಳಾದರೆ ಸಫಲತೆ ಎಂಬ ರೂಪಕದ ಹೆಣ್ಣು ಎರಡನೆಯವಳು.

(೩೫೭) ಗುಡಿಸಲುವಾಸಿಗಳು ಅರಮನೆಯಲ್ಲಿ ವಾಸಿಸುವ ಕನಸು ಕಾಣಬಲ್ಲರು. ಆದರೆ ಅರಮನೆ ವಾಸಿಗಳಿಗೆ ಅಂತಹ ಕನಸಿನ ಭಾಗ್ಯವಿಲ್ಲ.

 (೩೫೮) ಯಾರಾದರೂ ಕೈಗೊಳ್ಳಬಹುದಾದ ಒಂದೇ ಒಂದು ಪಯಣವೆಂದರೆ ಅದು ಚಟಗಳಿಂದ ದೂರ.

(೩೫೯) ನಾವು ಮರೆತುಹೋದುದನ್ನು ನೆನಪಿಸಿಕೊಳ್ಳುವುದೇಕೆಂದರೆ ಅದು ಲಾಭದ ಸೊಬಗನ್ನು ಒಳಗೊಂಡಿರಬಹುದೆಂಬ ಆಶಾವಾದದಿಂದಾಗಿ. ನಮಗೆ ನೆನಪಿರುವುದನ್ನು ಎಂದಿಗೂ ಮರೆಯಲಾಗದೇಕೆಂದರೆ ದುರಂತಗಳನ್ನು ಅದರ ಎಲ್ಲ ಸೂಕ್ಷ್ಮಗಳೊಂದಿಗೆ ಗಮನಿಸಿರುತ್ತೇವೆ, ಅದಕ್ಕೆ! Read more about ಎಲ್ಲ ಪಯಣವೂ ಚಟದಿಂದ ದೂರವಾಗುವುದೇ - ಗಾದೆಗೊಂದು ಗುದ್ದು--೭೦

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೇಧಾವಿತನವೂ ಸಹ ಮೇಧಾವಿತನವನ್ನು ಮೂರ್ಖತನವನ್ನಾಗಿಸಲಾಗದು - ಗಾದೆಗೊಂದು ಗುದ್ದು--೭೧

March 14, 2011 - 3:28pm
anilkumar

 (೩೬೧) ಪ್ರತಿಯೊಂದು ತಿರುವಿನಲ್ಲೂ ಹೊಸ ಹೊಳಹುಗಳನ್ನು ಕಂಡುಹಿಡಿಯಬಲ್ಲವರು ಚಾಲಾಕಿ ಜನ. ಆದರೆ ಮೇಧಾವಿಗಳು ತಿರುವು ತೆಗೆದುಕೊಳ್ಳುವ ಮುನ್ನವೇ ಹೊಳಹುಗಳನ್ನೇ ಹುಟ್ಟಿಹಾಕಿಬಿಟ್ಟಿರುತ್ತಾರೆ.

(೩೬೨) ಆದರ್ಶಮಯ ಆಟವೇ ಅತಿಕೆಟ್ಟ ಮ್ಯಾಚ್‍ಫಿಕ್ಸಿಂಗಿಗೆ ಅತ್ಯುತ್ತಮ ಉದಾಹರಣೆ.

(೩೬೩) ನಗರವೊಂದರ ಹಳೆಯ ಛಾಯಾಚಿತ್ರವು ಎರಡು ತರದ ಮೂರ್ಖತನವನ್ನು ಹೊಂದಿರುತ್ತವೆಃ (೧) ನಗರವು ಹೇಗೆ ಹಾಳಾಗುತ್ತಿದೆ ಎಂಬುದರ ಸೂಚನೆ ಅದರಲ್ಲಿರುತ್ತದೆ; ಮತ್ತು (೨) ಅದಕ್ಕೆ ಸ್ವತಃ ಆ ಛಾಯಾಚಿತ್ರವೇ ಸಾಕ್ಷಿಯಾಗಿಬಿಟ್ಟಿರುತ್ತದೆ! Read more about ಮೇಧಾವಿತನವೂ ಸಹ ಮೇಧಾವಿತನವನ್ನು ಮೂರ್ಖತನವನ್ನಾಗಿಸಲಾಗದು - ಗಾದೆಗೊಂದು ಗುದ್ದು--೭೧

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೆನ್ನೆ ಎಂಬುದು ಇಂದಿನ ಕಲ್ಪನೆಯಷ್ಟೇಃ ಗಾದೆಗೊಂದು ಗುದ್ದು-೭೨

March 21, 2011 - 9:07pm
anilkumar

 (೩೬೬) ’ಅಡುಗೆಮನೆ’ ಮತ್ತು ’ವಸ್ತ್ರ’ ಎಂಬ ಎರಡು ಹೆಜ್ಜೆಗಳಿಂದಾಗಿ ಮಾನವ ಪ್ರಕೃತಿಯಿಂದ ದೂರ ಸರಿದುಬಿಟ್ಟ. ಭಗವಂತ ದೊರಕಿಸಿಕೊಡುವುದೇ ನಿಜವಾದ ಅಡುಗೆ ಮತ್ತು ಆತನೇ ಸರಿಯಾದ ದರ್ಜಿ ಎಂದು ಇತರೆ ಪ್ರಾಣಿಗಳಿಗೆ ಸ್ಪಷ್ಟವಾಗಿ ತಿಳಿದಿದೆ.

(೩೬೭) ’ಆಗಿಬಿಟ್ಟಿರುವುದು’ ಆಗುತ್ತಿರುವುದರ ಒಂದು ಭಾಗವಷ್ಟೇ. ’ನೆನ್ನೆ’ ಎಂಬುದು ಇಂದಿನ ಕಲ್ಪನೆಯಷ್ಟೇ.

(೩೬೮) ಭಾಷಣವೊಂದನ್ನು ನಾವು ಕೇಳುವುದೇಕೆಂದರೆ ನಮಗಿಂತಲೂ ಆತನಿಗೆ/ಆಕೆಗೆ ಹೆಚ್ಚು ತಿಳಿದಿದೆ ಎಂಬ ಕೀಳರಿಮೆಯಿಂದಾಗಿ. ಜೊತೆಗೆ ನಮ್ಮಂತೆ ಅವರು ಸಮಸ್ಯೆಗಳನ್ನು ಪರಿಹರಿಸಬಲ್ಲರು ಎಂಬ ವಿಷಯವನ್ನು ನಾವು ನಂಬುವುದೂ ಇಲ್ಲ. Read more about ನೆನ್ನೆ ಎಂಬುದು ಇಂದಿನ ಕಲ್ಪನೆಯಷ್ಟೇಃ ಗಾದೆಗೊಂದು ಗುದ್ದು-೭೨

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸ್ವರ್ಗಸುಖಕ್ಕಾಗಿ ಸ್ವರ್ಗವಾಸಿಗಳಾಗುವುದು ನರಕವಾಸವೇ - ಗಾದೆಗೊಂದು ಗುದ್ದು--೭೩

March 24, 2011 - 12:46am
anilkumar

 (೩೭೧) ಚಟವು ವ್ಯಸನದಿಂದ ಉಂಟಾಗುತ್ತದೆ. ವ್ಯಸನವೆಂದರೆ ಅತಿಗೆ ಹೋಗುವುದು. ನೂರು ವರ್ಷಕ್ಕಿಂತಲೂ ಹೆಚ್ಚಿಗೆ ಬದುಕುವುದೆಂದರೆ ಅತಿಗೆ ಹೋಗುವುದು, ಅಂದರೆ ವ್ಯಸನಕ್ಕೆ ದಾರಿಮಾಡಿಕೊಡುವುದು. ವ್ಯಸನಕ್ಕೆ ಮೂಲ ಚಟ. ಸುದೀರ್ಘ ಜೀವನವೆಂದರೆ ಚಟದ ಸುದೀರ್ಘಾವಸ್ಥೆಯೇ ಹೌದು!

(೩೭೨) ಚಟಕ್ಕೆ ಎಂದೂ ದಾಸನಾಗದವನ ರಸಿಕತನವು ಉಪ್ಪಿಲ್ಲದ ಊಟವನ್ನು ಸುಗ್ರಾಸ ಭೋಜನಕ್ಕೆ ಹೋಲಿಸುವ ಮಟ್ಟಕ್ಕೆ ಇಳಿದುಬಿಡುತ್ತದೆ!

(೩೭೩) ಸ್ವರ್ಗಸುಖವನ್ನು ಬಹಳ ಹೊತ್ತು ನಾವು ಪಡೆಯಲಾಗುವುದಿಲ್ಲ ಏಕೆಂದರೆ ನಾವು ಸ್ವರ್ಗವಾಸಿಗಳಾದ ಕೂಡಲೆ ಅದು ನರಕಸದೃಶ್ಯವಾಗಿಬಿಡುತ್ತದೆ!

(೩೭೪) ಹೆಣ್ಣ ಕಣ್ಣ ಬಣ್ಣಿಸುವ ಕಲಾವಿದನ ಸೃಷ್ಟಿಯನ್ನೇ ಗ್ರಹಿಸಲಾಗದ ಆಕೆಯ ಅಸಹಾಯಕತೆಗೆ ಸೃಷ್ಟಿಯೆ ಕುರುಡಾಗುವುದು ಜಾಹಿರಾತು ಜಗತ್ತಿನಲ್ಲಿ ಮಾತ್ರ! Read more about ಸ್ವರ್ಗಸುಖಕ್ಕಾಗಿ ಸ್ವರ್ಗವಾಸಿಗಳಾಗುವುದು ನರಕವಾಸವೇ - ಗಾದೆಗೊಂದು ಗುದ್ದು--೭೩

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾನು ಮರೆಯಬೇಕೆನ್ನುತ್ತಿರುವುದು ನಿನ್ನನ್ನೇ ಅಲ್ಲವೆ? ಗಾದೆಗೊಂದು ಗುದ್ದು--೭೪

March 26, 2011 - 8:16pm
anilkumar

 (೩೭೬) ಅಕ್ಕಪಕ್ಕವಿರುವ ಎರಡು ಬೃಹದಾಕಾರದ ಬೆಟ್ಟಗಳ ನಡುವಿನ ಪರಸ್ಪರ ಸಾಮರಸ್ಯದ ಕೊರತೆಗೆ ಮನುಷ್ಯ ನೀಡಿದ ಪರಿಹಾರವೆಂಬ ಬೆಸುಗೆಯನ್ನು ಸೇತುವೆ ಎನ್ನುತ್ತೇವೆ!

(೩೭೭) ಎಲ್ಲರಲ್ಲೂ ಹರಿಯುತ್ತಿರುವುದು ಒಂದೇ ತೆರನಾದ ರಕ್ತವಲ್ಲವೆಂಬ ಐತಿಹಾಸಿಕ ಸತ್ಯವು ವೈದ್ಯಕೀಯವಾಗಿ ನಿರ್ಧರಿತವಾದ ಕಾಲಕ್ಕೇ ಅದು ವೈದ್ಯಕೀಯ ಸತ್ಯವೆಂಬುದು ಐತಿಹಾಸಿಕವಾಗಿ ನಿರೂಪಿತವಾದುದು ಖಂಡಿತ ಕಾಕತಾಳೀಯವಲ್ಲ.

(೩೭೮) ನಾನು ಮರೆಯಬೇಕೆಂದು ಯತ್ನಿಸುತ್ತಿರುವ ವ್ಯಕ್ತಿ ನೀವೇ ಅಲ್ಲವೆ?

(೩೭೯) ನಮ್ಮ ಭವಿಷ್ಯದ ಬಗ್ಗೆ ಅದೆಷ್ಟು ಬರವಣಿಗೆಗಳು ಮೂಡಿಬಂದುಬಿಟ್ಟಿವೆಯೆಂದರೆ ಅವುಗಳ ಗತ ನೆನಪಿನ ಬಾದೆಯಿಂದ ಈಗಾಗಲೆ ನಾವುಗಳು ನರಳಲು ಆರಂಭಿಸಿ, ಭವಿಷ್ಯವನ್ನು ಭೂತದಂತೆ ಭಾವಿಸತೊಡಗಿಬಿಟ್ಟಿದ್ದೇವೆ! Read more about ನಾನು ಮರೆಯಬೇಕೆನ್ನುತ್ತಿರುವುದು ನಿನ್ನನ್ನೇ ಅಲ್ಲವೆ? ಗಾದೆಗೊಂದು ಗುದ್ದು--೭೪

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜಗತ್ತು ಅಂತ್ಯವಾಗುತ್ತದೆಂದರೆ ಅಲ್ಲಿಯವರೆಗೂ ಬದುಕಿರುತ್ತೇವೆ ಎಂದರ್ಥಃ ಗಾದೆಗೊಂದು ಗುದ್ದು--೭೫

March 30, 2011 - 2:43pm
anilkumar

 (೩೮೧) ಬದುಕಿನ ಅನಿರ್ದಿಷ್ಟತೆಯು ಅದೆಷ್ಟು ನಿರ್ದಿಷ್ಠವಾದುದೆಂದರೆ, ವೈರುಧ್ಯಗಳೊಂದಿಗೆ ಪ್ರೀತಿಯಲ್ಲಿ ಬೀಳುವುದು ನಮಗೆ ಅನಿವಾರ್ಯವಾಗಿದೆ!

(೩೮೨) ಆರೋಗ್ಯಕರವಾದ ಆಹಾರವು ಅನಿಯಮಿತವಾಗಿ ದೊರಕುವ ಕಾರಣದಿಂದಾಗಿ ಅದನ್ನೇ ನಾವು ಭವಿಷ್ಯದಲ್ಲಿ ಔಷದದ ರೂಪದಲ್ಲಿ ಭಕ್ಷಿಸುತ್ತೇವೆ!

(೩೮೩) ೨೦೧೨ರಲ್ಲಿ ಜಗತ್ತು ಅಂತ್ಯವಾಗಲಿದೆ ಎಂಬುದು ನಮ್ಮ ಭೀತಿ. ಇದರ ಒಳಾರ್ಥವೇನೆಂದರೆ ಅದನ್ನು ವೀಕ್ಷಿಸಲು ಅಲ್ಲಿಯವರೆಗೂ ನಾವು ಬದುಕಿರುತ್ತೇವೆಂಬ ಆಶಾವಾದ!

(೩೮೪) ಜಗಜ್ಜಾಹೀರಾಗಿರುವ ಗುಟ್ಟುಗಳ ಬಗ್ಗೆ ಮಾತ್ರ ತಾನು ವಾಚಾಳಿ ಎಂಬ ಸತ್ಯವನ್ನು ಗುಟ್ಟಾಗಿರಿಸುವ ಮುತ್ಸದ್ಧಿಯನ್ನು ಬಹಿರ್ಮುಖಿ ಎನ್ನುತ್ತೇವೆ. ಆ ಗುಟ್ಟನ್ನು ತನಗೆ ಮಾತ್ರ ಬಹಿರಂಗಗೊಳಿಸುವವನನ್ನು ಅಂತರ್ಮುಖಿ ಎನ್ನುತ್ತಾರೆ.  Read more about ಜಗತ್ತು ಅಂತ್ಯವಾಗುತ್ತದೆಂದರೆ ಅಲ್ಲಿಯವರೆಗೂ ಬದುಕಿರುತ್ತೇವೆ ಎಂದರ್ಥಃ ಗಾದೆಗೊಂದು ಗುದ್ದು--೭೫

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನದಿ-ತಟಾಕದಲ್ಲಿ ಹರಿವ ನೀರೇ ನದಿಃ ಗಾದೆಗೊಂದು ಗುದ್ದು--೭೭

April 9, 2011 - 11:06am
anilkumar

 (೩೯೧) ಕಾರಿನ ಮೇಲ್ಛಾವಣೆ ಮತ್ತು ಚಾಲಕನ ನಡುವಣ ವ್ಯತ್ಯಾಸವನ್ನು ಅತ್ಯಂತ ಕಡಿಮೆಗೊಳಿಸಿ, ಚಾಲಕನ ಶಿರದ ಆಕಾರಕ್ಕೆ ಆ ಮೇಲ್ಛಾವಣೆಯನ್ನು ಬಾಗಿಬಗ್ಗಿಸಿದಾಗ ದೊರಕುವುದನ್ನು ಶಿರಸ್ತ್ರಾಣ (ಹೆಲ್ಮೆಟ್) ಎನ್ನುತ್ತೇವೆ.

(೩೯೨) ಸಿಗರೇಟು ಸೇವನೆಯೊಂದೇ ನೇತ್ಯಾತ್ಮಕ-ಧೂಮಪಾನವೆಂಬ (ಪ್ಯಾಸಿವ್ ಸ್ಮೋಕಿಂಗ್) ದುಶ್ಚಟವನ್ನು ತಡೆಯಲಿರುವ ಸೂಕ್ತ ಪರಿಯಾರ!

(೩೯೩) ಸೂಕ್ತಕಂಡ ಮಾನವ ದೇಹವನ್ನು ಆಯ್ದ ಭಂಗಿಗಳಲ್ಲಿ, ವಿವಸ್ತ್ರಿತ ರೂಪದಲ್ಲಿ ಕಲ್ಪಿಸಿಕೊಳ್ಳುವುದೇ ಕಾಮ. ಮಿಕ್ಕುಳಿದ ಇಂತಹದ್ದೇ ಕ್ರಿಯೆಗಳ ಭೌತಿಕ ಆಯಾಮವನ್ನು ಲೈಂಗಿಕತೆ ಎನ್ನುತ್ತೇವೆ.

(೩೯೪) ಎಂದೂ ಸಾಧಿಸಲಾಗದೆ ಕೇವಲ ’ಕೊಡಮಾಡಿರುವುದು’ ಅಥವ ’ಸ್ವೀಕರಿಸಲ್ಪಟ್ಟಿರುವುದನ್ನು’ ಪ್ರಶಸ್ತಿ ಎನ್ನುತ್ತೇವೆ.  Read more about ನದಿ-ತಟಾಕದಲ್ಲಿ ಹರಿವ ನೀರೇ ನದಿಃ ಗಾದೆಗೊಂದು ಗುದ್ದು--೭೭

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇತರರ ಬಯಕೆಯ ನಾಶದಲ್ಲೂ ತುರಿಯಾನಂದವಿದೆ - ಗಾದೆಗೊಂದು ಗುದ್ದು - ೭೮

April 14, 2011 - 12:41pm
anilkumar

 (೩೯೬) ಅಳತೆಮಾಪಕವು ದೇಹವೊಂದರ ಎತ್ತರ, ಅಗಲಗಳನ್ನು ಅಳೆಯಬಹುದೇ ವಿನಃ ಅದರೊಳಗೆ ಅಡಕವಾಗಿರುವ ಅಹಂಕಾರವನ್ನಲ್ಲ.

(೩೯೭) ನೀವು ಅವರಿಗಾಗಿಯೇ ಮುಡಿಪಾಗಿಟ್ಟ ಮೆಚ್ಚುಗೆಯ ನುಡಿಗಳನ್ನು ಉಚ್ಛರಿಸುವ ಮುನ್ನವೇ ಅದನ್ನು ನಿರಾಕರಿಸುವಾತನೇ ಸಿನಿಕ.

(೩೯೮) ತುರಿಯಾನಂದವೆಂಬುದು ಯಾವಾಗಲೂ ಇಂದ್ರೀಯ ಬಯಕೆಯನ್ನು ತೃಪ್ತಿಪಡಿಸುವುದೇನಲ್ಲ. ಇತರರ ಇಂದ್ರೀಯ ಬಯಕೆಗಳನ್ನು ನಾಶಮಾಡುವುದೂ ಅದರ ಯೋಜನೆಯ ಒಂದು ಭಾಗವೇ.

(೩೯೯) ಇತರರ ಖರ್ಚಿನಲ್ಲಿ ನಮ್ಮ ಇಂದ್ರೀಯ ಸುಖವನ್ನು ಹುಡುಕುವಲ್ಲಿಂದ ಪ್ರೀತಿಯು ಆರಂಭಗೊಂಡು, ನಮ್ಮದೇ ಖರ್ಚಿನಲ್ಲಿ ಇತರರನ್ನು ಖುಷಿಯಾಗಿಡುವುದರಲ್ಲಿ ಅದು ಅಂತ್ಯಗೊಳ್ಳುತ್ತದೆ. Read more about ಇತರರ ಬಯಕೆಯ ನಾಶದಲ್ಲೂ ತುರಿಯಾನಂದವಿದೆ - ಗಾದೆಗೊಂದು ಗುದ್ದು - ೭೮

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅನೇಕ ವಸ್ತುಗಳಿಂದ ಸ್ವಾದವಾದರೆ ದೇಹದಿಂದ ಮಾತ್ರ ನೋವುಃ ಗಾದೆಗೊಂದು ಗುದ್ದು - ೭೯

April 17, 2011 - 12:15am
anilkumar

 (೪೦೧) ಶಕ್ತಿವಂತರಾಗಬೇಕೆಂಬ ಕಾರಣಕ್ಕೇ ಯಾರೂ ಅಧಿಕಾರವನ್ನು ಬಯಸರು. ಭಯ ಮತ್ತು ಕಾರ್ಗತ್ತಲ ಭೀತಿಯನ್ನು ಹೊಡೆದೋಡಿಸುವ ಸುಲಭೋಪಾಯವದು ಎಂದು ಭಾವಿಸಿದವರ ಹಕ್ಕು ಆ ಬಯಕೆ.

(೪೦೨) ಒಂದು ಹೊಳಹು ನಿಮ್ಮ ಬದುಕನ್ನೇ ಬದಲಿಸಿಬಿಡಬಹುದು. ಆದರೆ ನಿಮ್ಮ ಬದುಕು ಅಂತಹ ಅನೇಕ ಹೊಳಹುಗಳನ್ನೇ ರೂಪಾಂತರಿಸಿಬಿಡಬಲ್ಲದು.

(೪೦೩) ಎಲ್ಲರೂ ಬೇರೆ ಬೇರೆ ವಸ್ತುಗಳಿಂದ ಸ್ವಾದ, ಸೊಬಗು, ಭೋಗಗಳನ್ನು ಆಸ್ವಾದಿಸಿದರೂ ದೇಹವೆಂಬ ಒಂದೇ ವಸ್ತುವಿನಿಂದ ನೋವನ್ನು ಅನುಭವಿಸುತ್ತಾರೆ.

(೪೦೪) ಪ್ರತಿಯೊಬ್ಬ ಮಾನವಜೀವಿಗೂ ’ಜೀರೋ ಫಿಗರ್’ ಇರುತ್ತದೆ. ಫಾಂಟ್ ಸೈಜು ಮಾತ್ರ ವ್ಯತ್ಯಾಸಗೊಂಡಿರುತ್ತದೆ.

(೪೦೫) ರಜನೀಕಾಂತ್ ಇನ್ನೂ ಸಾಧಿಸಲಾಗದ, ಮುಂದೆಂದೂ ಸಾಧಿಸಲಾಗದ ಕೆಲಸವೆಂದರೆ ತನ್ನ ಹೆಸರನ್ನು ಬದಲಿಸಿಕೊಳ್ಳುವುದು!

 

  Read more about ಅನೇಕ ವಸ್ತುಗಳಿಂದ ಸ್ವಾದವಾದರೆ ದೇಹದಿಂದ ಮಾತ್ರ ನೋವುಃ ಗಾದೆಗೊಂದು ಗುದ್ದು - ೭೯

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಗಾದೆಗೊಂದು ಗುದ್ದು