ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ದ್ವೇಷ

ವಿಷದ ಗಿಡ

ಗೆಳೆಯನ ಮೇಲೆ ಏಕೋ ಮುನಿಸಾಯ್ತು
ಅವನೆದುರು ಹೇಳಿಕೊಂಡೆ, ಮುನಿಸು ಕರಗಿತು
ಶತ್ರವಿನ ಮೇಲೇಕೋ ಮುನಿಸಾಯ್ತು
ಅವನೆದುರು ಹೇಳಲಿಲ್ಲ, ಮುನಿಸು ಬೆಳೆಯಿತು

ಅವನ ಮೇಲಿನ ಭಯದ ನೀರುಣಿಸಿದೆ
ಹಗಲು-ರಾತ್ರಿ ಕಣ್ಣೀರು ಹನಿಸಿದೆ
ಹುಸಿ ನಗೆ ಹಾಗೂ ಕುತಂತ್ರಗಳ
ಬಿಸಿಲುಣಿಸಿ ಮುನಿಸು ಬೆಳೆಸಿದೆ

ದ್ವೇಷದ ಗಿಡ ಹಗಲು-ರಾತ್ರಿ ಬೆಳೆಯಿತು
ಕೊನೆಗೆ ಸುಂದರ ವಿಷ ಫಲ ಬಿಟ್ಟಿತು
ಅದು ಬೆಳಗುವುದನ್ನು ನನ್ನ ಶತ್ರು ನೋಡಿದ್ದ
ಆ ಫಲ ನನ್ನದೆನ್ನುವುದನ್ನು ಅವ ಅರಿತಿದ್ದ

ಕತ್ತಲಾವರಿಸಿದಾಗ, ಏನೂ ಕಾಣದಾದಾಗ
ಸದ್ದಿಲ್ಲದೇ ಬಂದ, ವಿಷ ಫಲವ ಕದ್ದು ಮೆದ್ದ
ಬೆಳಗಾದಾಗ ನನ್ನ ಹೃದಯ ಪುಟಿಯಿತು
ಮರದಡಿ ಅವ ಸತ್ತಿದ್ದ ಕಂಡು ನಲಿಯಿತು

ಮೂಲ: ವಿಲಿಯಂ ಬ್ಲೇಕ್‌
ಭಾವಾನುವಾದ: ಚಾಮರಾಜ ಸವಡಿ

ಅವನ ತಲೆ ಕಂಡರೆ ಆಗುವುದಿಲ್ಲ..

ಯಡ್ಡಿಯನ್ನು ಕಂಡ್ರೆ ಗೌಡ್ರಿಗೆ ಆಗುವುದಿಲ್ಲ.


ಗೌಡ್ರನ್ನು ಕಂಡ್ರೆ ರೆಡ್ಡಿಗಾಗುವುದಿಲ್ಲ.


___________ಕಂಡ್ರೆ ______________ಆಗುವುದಿಲ್ಲ.(ಬಿಟ್ಟ ಸ್ಥಳದಲ್ಲಿ ಕರ್ನಾಟಕದ ಯಾವುದೇ ಶಾಸಕರ ಹೆಸರನ್ನು ತುಂಬಿಸಿ)


ಇವರೆಲ್ಲರ ನಾಟಕ ಯಾರಿಗೆ ಗೊತ್ತಿಲ್ಲ..


ನಿನ್ನೆ "ಬ್ಲ ಬಾ ಯಡ್ಡಿ"ಅಂದಿದ್ದ ಗೌಡ್ರು , ನಾಳೆ "ಆತ ನನ್ನ ದೊಡ್ಡ ಮಗನಿದ್ದಂತೆ..."ಅನ್ನುವರು.


ನಾಡದು "ಅಪ್ಪಾಜೀ....." ಎಂದು ಅಳುತ್ತಾ ಯಡ್ಡಿ ಗೌಡ್ರ ಮನೆಗೆ ಹೋಗಿ ಜತೆಯಲ್ಲೇ ಫೋಟೋಗೆ ಪೋಸ್ ಕೊಡಬಹುದು.


ರಾಜಕೀಯ...ಹೀಗೇನೇ...


ನಮಗೆ ಯಾಕೆ ಇವರ ತರಹ ನಾಟಕ ಮಾಡಲು ಆಗುವುದಿಲ್ಲ? ಯಾರನ್ನೇ ಆಗಲಿ "ಕಂಡರೆ ಆಗುವುದಿಲ್ಲ" ಅಂದರೆ ಮುಗಿಯಿತು.ಅವರ ಸ್ವರ ಕೇಳಿದರೂ ಆಗುವುದಿಲ್ಲ. ಅವರ ನೆರಳು ಬೀಳುವಲ್ಲಿಯೂ ಸಂಚರಿಸುವುದಿಲ್ಲ. ಟಿ.ವಿ.ಯಲ್ಲೂ ಅವರ ಮುಖ ಕಂಡರೆ ಸಿಟ್ಟಾಗುತ್ತೇವೆ-  ಮುಂದೆ ಓದಿ »

Syndicate content