21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಪದ್ಯಪಾನ

ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ

December 28, 2011 - 2:11am
hamsanandi

ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ ಮೇಲೆ, ಅಲ್ಲಿ ನಕ್ಷತ್ರಗಳು ಚೆಲ್ಲಿದ ರಾತ್ರಿಯಾಕಾಶ, ಬಣ್ಣ ಬಣ್ಣದ ಬೆಟ್ಟ ಸಾಲಿನಲ್ಲಿ ಸೂರ್ಯೋದಯ ಸೂರ್ಯಾಸ್ತಗಳ ಚೆಲುವನ್ನು ಕಂಡಾಗ ಹೊಳೆದ ಕೆಲವು ಭಾವಗಳು – ಕುಸುಮ ಷಟ್ಪದಿಯಲ್ಲಿ ಹೊಸೆದ ಎರಡು ಪದ್ಯಗಳು:

 

  Read more about ಡೆತ್ ವ್ಯಾಲಿ, ಕ್ಯಾಲಿಫೋರ್ನಿಯಾ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಸರಣಿ: 

ಚೊಚ್ಚಲ ಬಸಿರು

January 10, 2012 - 7:07am
hamsanandi

 ಕನ್ನಡ  ಕವಿತೆಗಳನ್ನು ಬರೆಯುವ ಆಸಕ್ತಿ ಉಳ್ಳವರಿಗೆ,   Read more about ಚೊಚ್ಚಲ ಬಸಿರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಬೇಡತಿಗೆರಡು ಕವಿತೆಗಳು

January 18, 2012 - 8:39am
hamsanandi

ಪಂಚಮಾತ್ರೆಯ ಚೌಪದಿಯಲ್ಲಿ:

ಭಿಲ್ಲರಾ ಹೆಣ್ಣೀಕೆ ಬಾಣವನು ಹೂಡಲಿಕೆ

ಬಿಲ್ಲ ಹಿಡಿಯುತ ಹೊಂಚಿಕಾಯ್ವಳೀಕೆ;

ಸಲ್ಲದಿದು! ತನ್ನೆರಡು ಕಣ್ಣಿನಾ ಕೂರಂಬಿ-

ನಲ್ಲೆ ಕೊಲುವುದನೀಕೆ ಮರೆತಳೇಕೆ?

 

 

 

 

 

 

ಭಾಮಿನಿ ಷಟ್ಪದಿಯಲ್ಲಿ:

ಬೇಡ! ಚೆಲುವೆಯೆ ನಿನ್ನ ಕರದ-

ಲ್ಲಾಡುತಿಹ ಶರ ಭಯವ ತರುವುದು!

ಬೇಡತಿಯು ನಾನೆಂದು ಮಿಗಗಳ ಕೊಲ್ಲಬೇಕಿಲ್ಲ;

ಕಾಡ ತೊರೆಯುತ ಹೊರಡು ಬೇಟೆಗೆ

ನಾಡ ಹೊಕ್ಕರೆ ಕಣ್ಣ ನೋಟದೆ

ಹಾಡು ಹಗಲಲೆ ಜನಗಳನ್ನೇ ಕೊಲ್ಲಬಹುದಲ್ಲ!

 

-ಹಂಸಾನಂದಿ Read more about ಬೇಡತಿಗೆರಡು ಕವಿತೆಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ?

January 24, 2012 - 6:41am
hamsanandi

ಪದ್ಯಪಾನದಲ್ಲಿ ಈ ಪಕ್ಷದಲ್ಲಿ ಕೇಳಿದ ಪ್ರಶ್ನೆ ಇದು: "ಕೀರ್ತಿಗೊಬ್ಬ ಮಗ ಆರತಿಗೊಬ್ಬ ಮಗಳು" ಎಂಬ ಕುಟುಂಬ ಯೋಜನೆಯ ಘೋಷಣೆಯ ಬಗ್ಗೆ ನಿಮ್ಮ ನಿಲುವೇನು? ಅಂತ. ಅದಕ್ಕೆ ನನ್ನ ಉತ್ತರ - ಎರಡು ಚೌಪದಿ ಮತ್ತೆ ಎರಡು ಷಟ್ಪದಿಗಳಲ್ಲಿ: Read more about ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ನನ್ನ ಹುಣ್ಣಿಮೆಗೆ

February 15, 2012 - 4:39am
hamsanandi
ಹೊನ್ನ ಬಣ್ಣದ ರವಿಯ ಉದಯದೊ-
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಶಿವನ ಪೂಜೆಯ ಹೂ

February 20, 2012 - 8:30am
hamsanandi

ಒಳಗೆ ನುಗ್ಗುತ ದಟ್ಟ ಕಾಡಿನ
ಕೊಳಗಳೊಳಗಡೆ ಮುಳುಗಿ ಪರ್ವತ
ಗಳನು ಏರುತ ಹುಡುಕುತಿರುವರು ಹೂವ ಕೊಯ್ಯಲಿಕೆ;
ತಿಳಿವೆ ಕಾಣದ ಜಡಮತಿಗಳಿವು
ತಿಳಿಯರಯ್ಯೋ ಮನದ ಕೊಳದಲ-
ರಳಿಹ ಕಮಲವ ಮುಡಿಸೆ ಶಿವನಿಗೆ ಬಹಳ ಮೆಚ್ಚಿಗೆಯು!

ಸಂಸ್ಕೃತ ಮೂಲ (ಆದಿಶಂಕರಾಚಾರ್ಯರ ಶಿವಾನಂದಲಹರಿ, ಶ್ಲೋಕ ೯):

ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ
ಸಮರ್ಪ್ಯೈಕಂ ಚೇತಃ ಸರಸಿಜಮುಮಾನಾಥ ಭವತೇ
ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಿಹೋ ||

-ಹಂಸಾನಂದಿ Read more about ಶಿವನ ಪೂಜೆಯ ಹೂ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ಗಜೇಂದ್ರ ಮೋಕ್ಷ

February 23, 2012 - 10:06am
hamsanandi

 ಸಮಸ್ಯಾ ಪೂರಣದ ಬಗ್ಗೆ ನೀವು ಕೇಳೇ ಇರಬೇಕು.  Read more about ಗಜೇಂದ್ರ ಮೋಕ್ಷ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ರಾಮಾಯಣದಲ್ಲೊಂದು ಮಹಾಭಾರತ!

March 18, 2012 - 11:00am
hamsanandi

 ರಾಮಾಯಣದ ಕಥೆ ಕೇಳದ ಕನ್ನಡಿಗರು ಯಾರಿದ್ದಾರೆ? ಹಾಗೇ ರಾಮಾಯಣವನ್ನ ಬರೆದ   ವಾಲ್ಮೀಕಿಯ ಕಥೆಯೂ ಸುಪರಿಚಿತವೇ. ಬೇಡನಾಗಿದ್ದವ ನಂತರ ಮನಃಪರಿವರ್ತನೆಗೊಂಡು ವಾಲ್ಮೀಕಿಯಾಗಿ ರಾಮಾಯಣದಂತಹ  ಮಹಾಕಾವ್ಯನ್ನೇ ಬರೆದ. ಅದರಲ್ಲೂ, ಈ ರಾಮಾಯಣಕ್ಕೆ ಮಂಗಳ  ಹಾಡಿದ್ದು ಜೋಡಿ  ಹಕ್ಕಿಗಳಲ್ಲಿ ಒಂದನ್ನು ಬೇಡನೊಬ್ಬ  ಬಾಣದಲ್ಲಿ  ಹೊಡೆದು ಕೊಂದಾಗಲೇ. ಆಗ ವಾಲ್ಮೀಕಿಯ ಬಾಯಲ್ಲಿ ಹೊರಬಂದದ್ದು ಈ ಶ್ಲೋಕ:

 

  Read more about ರಾಮಾಯಣದಲ್ಲೊಂದು ಮಹಾಭಾರತ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (6 votes)
To prevent automated spam submissions leave this field empty.

ಕಿವಿಮಾತುಗಳು

April 25, 2012 - 2:37am
hamsanandi

ಈ ಸುಂದರಿ ಶುಕಸಂದೇಶವನ್ನು ಕಳಿಸಿದಾಗಲೂ ಬಳಿ ಬಾರದ ಚೆನ್ನಿಗನ ಮೇಲೆ ಪ್ರೀತಿಯಿದ್ದರೂ, ತುಸು ಕೋಪವೂ ಬಾರದಿರದು. ಅಲ್ಲವೇ? ಅದಕ್ಕೇ ತುಸು ಪ್ರೀತಿಯಿಂದ ಮತ್ತೆ  ತುಸು ಹುಸಿ ಕೋಪದಿಂದ ಬರೆದ ಎರಡು ಷಟ್ಪದಿಗಳು  ಇಲ್ಲಿವೆ.

ಚಿತ್ರದಲ್ಲಿರದ ಚೆನ್ನಿಗನ ಮೇಲೆ ಪದ್ಯವಿದ್ದರೆ ಅದು ನನ್ನ ತಪ್ಪಲ್ಲ. ಎಷ್ಟೇ ಅಂದರೂ ಶುಕಭಾಷಿಣಿ ತನ್ನ ಗಿಣಿಯೊಂದಿಗೆ ಅವನಿಗೇ ತಾನೇ ಸಂದೇಶವಿತ್ತಿದ್ದು?  ಹಾಗಾಗಿ ತಪ್ಪೇನಿದ್ದರೂ ಅವಳದ್ದೇ, ಬಿಡಿ! Read more about ಕಿವಿಮಾತುಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪಾಡ್ಯದ ಚಂದಿರ

May 24, 2012 - 7:50pm
hamsanandi

 

 

ಹೊತ್ತು ಮುಳುಗಿತು ಸಂಜೆಯಾಯಿತು
ಮತ್ತೆ ಪೂರ್ವದಿ ಬಂದು ಚಂದಿರ
ನಿತ್ತಿಹನು ಗಗನದಲಿ ಜೊನ್ನದ ಸವಿಯ ಮಳೆಯನ್ನು
ಚಿತ್ತವಿನ್ನದರಿಂದ ಬೇರೆಡೆ
ಯೆತ್ತ ಪೋಪುದು? ಬಾನ ಹೆಣ್ಣಿನ
ಕುತ್ತಿಗೆಗೆ ಪದಕವದು ಮೇಣ್ ಪಾಡ್ಯಮಿಯ ಚಂದಿರನು!

- ಹಂಸಾನಂದಿ

 

ಕೊ: ಚಿತ್ರ ಕೃಪೆ - http://sandersonthir...
Read more about ಪಾಡ್ಯದ ಚಂದಿರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಜೊತೆ

July 17, 2012 - 11:13am
hamsanandi
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಕವಿರತ್ನ ಕಾಳಿದಾಸನಿಗೊಂದು ಭಾಮಿನಿ

July 31, 2012 - 11:06am
hamsanandi

 ವಿಚಿತ್ರವಾದ ತಲೆಬರಹ ಅಂತ ಅಂದ್ಕೂಂಡೇ ಇರ್ತೀರ ಗೊತ್ತು ಬಿಡಿ. ಅದಿರಲಿ. ಮೊದಲು ವಿಷಯಕ್ಕೇ ಬರ್ತೀನಿ.

  Read more about ಕವಿರತ್ನ ಕಾಳಿದಾಸನಿಗೊಂದು ಭಾಮಿನಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.

ಎಂಟು ಚಕ್ರ, ಒಂದು ಪದ್ಯ

September 14, 2012 - 1:38pm
hamsanandi

 ಇದೇನಪ್ಪ ಇಂತಹ ತಲೆ(ಕೆಟ್ಟ)ಬರಹ ಅಂದ್ಕೊಂಡ್ರಾ? ಅಥವಾ  ಚಿತ್ರ ನೋಡಿದಾಗ ಏನಾದರೂ ಹೊಳೀತಿದೆಯೋ? ಇಲ್ದಿದ್ರೂ ಪರವಾಗಿಲ್ಲ. Read more about ಎಂಟು ಚಕ್ರ, ಒಂದು ಪದ್ಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಉದುರೆಲೆಕಾಲ

September 26, 2012 - 10:48am
hamsanandi

 

ಸಾಗುತಿಹ ವರುಷದಲಿ ಬಂತು ಸೊಗಸಿನ ಕಾಲ

ಮಾಗಿ ಕಾಲಕೆ ಮೊದಲಿನೆಲೆಯುದುರುಗಾಲ;

ನೀಗಿ ಬಿರುಬೇಸಿಗೆಯ ಕೋಟಲೆಯ ದಿನಗಳ-

ನ್ನಾಗಿಸುತ ಮರಗಳನ್ನಿಳೆಯಮಳೆ ಬಿಲ್ಲು!

 

-ಹಂಸಾನಂದಿ

 

ಚಿತ್ರಕೃಪೆ: ಪೂರ್ಣಿಮಾ Read more about ಉದುರೆಲೆಕಾಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಶರತ್ಕಾಲ

October 16, 2012 - 8:12pm
hamsanandi

ಕೆಲವು ದಿನಗಳ ಹಿಂದೆ ಫ್ರಿಮಾಂಟ್ ನ ಕೊಯೊಟಿ ಹಿಲ್ಸ್ ಪಾರ್ಕ್ ಗೆ ಹೋದಾಗ ತೆಗೆದ ಚಿತ್ರವೊಂದು ಕಣ್ಣಿಗೆ ಬಿತ್ತು. Read more about ಶರತ್ಕಾಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕರುಣಾ ಪೂರ್ಣೆ

October 26, 2012 - 6:28am
hamsanandi

 

 

ತಿಳಿನಗೆಯ ಹೂಮೊಗದಿ ಕರುಣೆಯನು ಚೆಲ್ಲುತ್ತ

-ರಳಿದೆರಡು ತಾವರೆಯ ಹೋಲ್ವ ಕಣ್ಣುಗಳು

ಬಳಿ ಸಾರಿ ನಿಂದವರ ಕೂಗಿ ಹೇಳುತಲಿಹವು

ಅಳಿದಿರಲಿ ಮನದೊಳಗಿನೆಲ್ಲ ತಾಪಗಳು!

 

-ಹಂಸಾನಂದಿ

 

ಕೊ: ಈ ವಾರದ ಪದ್ಯಪಾನದಲ್ಲಿ ಕೊಟ್ಟ ಚಿತ್ರಕ್ಕೆ  ಉತ್ತರವಾಗಿ  ನಾನು ಬರೆದಿದ್ದಿದು. ಪಂಚಮಾತ್ರಾ ಚೌಪದಿ ಛಂದಸ್ಸಿನಲ್ಲಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪದ್ಯಪಾನದ ಅಮಲು

December 5, 2012 - 8:11pm
hamsanandi

ಬೆಂಗಳೂರಿನಲ್ಲಿ ಕಳೆದ ವಾರ ನಡೆದ ಡಾ.ರಾ.ಗಣೇಶರ ಶತಾವಧಾನ ನೋಡಿದ ನಂತರ ಮನದಲ್ಲಿ ಮೂಡಿ ಬಂದೆರಡು ಪದ್ಯಗಳು:

Read more about ಪದ್ಯಪಾನದ ಅಮಲು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮುಂಜಾವಿನ ಹೊಸ ಕಂಗ್ಲಿಷ್ ಹಾಡು

December 17, 2012 - 7:03am
hamsanandi

 

 

ಮಿಲ್ಪಿಟಸ್ಸೆನುವೂರಿನೊಂದು  ಫಾಲ್ಬೆಳಗಿನಲಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚಂದಿರನೆಡೆಗೆ

January 25, 2013 - 10:12pm
hamsanandi
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ!

April 22, 2013 - 5:43am
hamsanandi

ಸಮಸ್ಯಾಪೂರಣದ ಬಗ್ಗೆ ಈ ಹಿಂದೆಹಲವು ಬಾರಿ ಬರೆದಿದ್ದೆ - ಪದ್ಯದಲ್ಲಿ ಒಂದು ಸಾಲನ್ನು ಕೊಟ್ಟು, ಉಳಿದ ಸಾಲುಗಳನ್ನು ಕೊಟ್ಟ ಛಂದಸ್ಸಿಗೆ ಹೊಂದುವಂತೆ ಬರೆಯಬೇಕೆನ್ನುವುದೇ ಸವಾಲು. ಶತಮಾನಗಳ ಹಿಂದಿನಿಂದಲೂ ಬೆಳೆದು ಬಂದ ಈ ಕಲೆಯ ಬಗ್ಗೆ ನನಗೆ ಓದುವ ಆಸಕ್ತಿ ಇದ್ದರೂ ಈ ರೀತಿಯ ಸಮಸ್ಯೆಗಳನ್ನು ಬಿಡಿಸುವುದಕ್ಕೆ ಕೈ ಹಾಕುವುದನ್ನು ದೈರ್ಯ ನನಗೆ ಬಂದಿದ್ದು ಈಚೆಗೆ ಪದ್ಯಪಾನದಲ್ಲಿ ಕೆಲವು ಸಮಸ್ಯೆಗಳನ್ನು ನೋಡಿದ ಮೇಲೆಯೇ.

ಕೆಲವು ತಿಂಗಳ ಹಿಂದೆ ನಡೆದ ಶತಾವಧಾನದಲ್ಲಿ ಕೊಟ್ಟ ಸಮಸ್ಯೆಗೆ ಕೆಲವು ಪ್ರೇಕ್ಷಕರು 10-20 ಉತ್ತರಗಳನ್ನು ಕೊಟ್ಟಿದ್ದನ್ನು ನೋಡಿದಾಗಿನಿಂದ ನನಗೂ ಅಂತಹ ಪ್ರಯತ್ನ ಮಾಡಬೇಕಂತ ಅನ್ನಿಸಿತ್ತು. ಆದರೆ, ನನಗೆ ಸರಿಯಾಗಿ ಮನವರಿಕೆಯಾಗಿರುವ ಛಂದಸ್ಸುಗಳೇ ಒಂದೋ ಎರಡೋ! ಅಲ್ಲದೆ ಬಗೆಬಗೆಯ ಉತ್ತರ ಕೊಡುವಂತಹ ಸಮಸ್ಯೆಯೂ ಬೇಕಲ್ಲ!  

ಇವತ್ತು (ಅಂದರೆ ಏಪ್ರಿಲ್ 21ರಂದು) ಪುತ್ತೂರಿನಲ್ಲಿ ನಡೆದ ಅಷ್ಟಾವಧಾನದ ಆಯೋಜಕರಲ್ಲೊಬ್ಬರಾಗಿದ್ದ ನನ್ನ ಗೆಳೆಯರೊಬ್ಬರು ಈ ಅವಧಾನದಲ್ಲಿ ಹೀಗೊಂದು ಸಮಸ್ಯೆ ಕೊಡುವ ಉದ್ದೇಶವಿದೆ ಅಂತ ಆ ಸಾಲನ್ನು ನನಗೆ ಕೆಲದಿನಗಳ ಹಿಂದೆಯೇ ತೋರಿಸಿದ್ದರು:

ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ

ಕೃಷ್ಣ ಅರ್ಜುನನಿಗೆ ಸಾರಥಿಯಾಗಿದ್ದು ಗೊತ್ತಿರುವ ಸಮಾಚಾರವೇ. ಆದರೆ ಅರ್ಜುನ ಕೃಷ್ಣನಿಗೆ ಸಾರಥಿಯಾಗಿದ್ದು ಯಾವಾಗ? ಒಳ್ಳೇ ಸಮಸ್ಯೆಯೇ ಅನ್ನಿಸಿತು. ಜೊತೆಗೆ ಈ ಸಾಲು ಭಾಮಿನೀ ಷಟ್ಪದಿಯಲ್ಲಿದ್ದುದ್ದು ನನಗೆ ಖುಷಿಯಾಯ್ತು. ಏಕೆಂದರೆ ಸ್ವಲ್ಪ ಇದ್ದಿದ್ದರಲ್ಲಿ ನನಗೆ ಕೈಹಾಕಬಹುದಾದಂತಹ ಛಂದಸ್ಸು ಅದು. ಅಲ್ಲದೆ ಅವಧಾನವಾಗುದಕ್ಕೆ ಕೆಲ ಸಮಯ ಮೊದಲೇ ನಾನು ಈ ಸಾಲನ್ನು ನೋಡಿದ್ದರಿಂದ, ಇದಕ್ಕೆ ರಾ.ಗಣೇಶರ ಉತ್ತರವೇನಿರುತ್ತೋ ಗೊತ್ತಿಲ್ಲ. ಹಾಗಾಗಿ ಯೋಚಿಸುತ್ತಾ ಪರಿಹಾರವೊಂದನ್ನು ಬರೆದೆ. ಮತ್ತೆ ಅದೇ ರೀತಿ ಯೋಚಿಸುತ್ತಾ ಹೋದಂತೆ ಮತ್ತೆ ಕೆಲವು ಹೊಸ ಪೂರಣಗಳೂ ಹೊಳೆದವು. ಹೀಗೇ ಒಂದಾದಮೇಲೊಂದು ಒಟ್ಟು ಮೂವತ್ತು ಪರಿಹಾರಗಳಾದುವು. ಅವುಗಳನ್ನು ಇಲ್ಲಿ ಸೇರಿಸಲು ಇವತ್ತು ಕಾಲ ಬಂದಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಮನ್ಮಥನ ಹತ್ತು ಬಾಣಗಳು

April 24, 2013 - 10:41pm
hamsanandi
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಪದ್ಯಪಾನ