ಚೊಚ್ಚಲ ಬಸಿರು
ಕನ್ನಡ ಕವಿತೆಗಳನ್ನು ಬರೆಯುವ ಆಸಕ್ತಿ ಉಳ್ಳವರಿಗೆ, Read more about ಚೊಚ್ಚಲ ಬಸಿರು
ಕನ್ನಡ ಕವಿತೆಗಳನ್ನು ಬರೆಯುವ ಆಸಕ್ತಿ ಉಳ್ಳವರಿಗೆ, Read more about ಚೊಚ್ಚಲ ಬಸಿರು
ಪಂಚಮಾತ್ರೆಯ ಚೌಪದಿಯಲ್ಲಿ:
ಭಿಲ್ಲರಾ ಹೆಣ್ಣೀಕೆ ಬಾಣವನು ಹೂಡಲಿಕೆ
ಬಿಲ್ಲ ಹಿಡಿಯುತ ಹೊಂಚಿಕಾಯ್ವಳೀಕೆ;
ಸಲ್ಲದಿದು! ತನ್ನೆರಡು ಕಣ್ಣಿನಾ ಕೂರಂಬಿ-
ನಲ್ಲೆ ಕೊಲುವುದನೀಕೆ ಮರೆತಳೇಕೆ?
ಭಾಮಿನಿ ಷಟ್ಪದಿಯಲ್ಲಿ:
ಬೇಡ! ಚೆಲುವೆಯೆ ನಿನ್ನ ಕರದ-
ಲ್ಲಾಡುತಿಹ ಶರ ಭಯವ ತರುವುದು!
ಬೇಡತಿಯು ನಾನೆಂದು ಮಿಗಗಳ ಕೊಲ್ಲಬೇಕಿಲ್ಲ;
ಕಾಡ ತೊರೆಯುತ ಹೊರಡು ಬೇಟೆಗೆ
ನಾಡ ಹೊಕ್ಕರೆ ಕಣ್ಣ ನೋಟದೆ
ಹಾಡು ಹಗಲಲೆ ಜನಗಳನ್ನೇ ಕೊಲ್ಲಬಹುದಲ್ಲ!
-ಹಂಸಾನಂದಿ Read more about ಬೇಡತಿಗೆರಡು ಕವಿತೆಗಳು
ಒಳಗೆ ನುಗ್ಗುತ ದಟ್ಟ ಕಾಡಿನ
ಕೊಳಗಳೊಳಗಡೆ ಮುಳುಗಿ ಪರ್ವತ
ಗಳನು ಏರುತ ಹುಡುಕುತಿರುವರು ಹೂವ ಕೊಯ್ಯಲಿಕೆ;
ತಿಳಿವೆ ಕಾಣದ ಜಡಮತಿಗಳಿವು
ತಿಳಿಯರಯ್ಯೋ ಮನದ ಕೊಳದಲ-
ರಳಿಹ ಕಮಲವ ಮುಡಿಸೆ ಶಿವನಿಗೆ ಬಹಳ ಮೆಚ್ಚಿಗೆಯು!
ಸಂಸ್ಕೃತ ಮೂಲ (ಆದಿಶಂಕರಾಚಾರ್ಯರ ಶಿವಾನಂದಲಹರಿ, ಶ್ಲೋಕ ೯):
ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ
ಸಮರ್ಪ್ಯೈಕಂ ಚೇತಃ ಸರಸಿಜಮುಮಾನಾಥ ಭವತೇ
ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಿಹೋ ||
-ಹಂಸಾನಂದಿ Read more about ಶಿವನ ಪೂಜೆಯ ಹೂ
ಚಿಗುರು ತುಂಬಿರೆ ಸುತ್ತ ಮುತ್ತಲು
ಮುಗುಳು ತುಂಬಿರೆ ಸಾಲುಮರ ಮ-
ಲ್ಲಿಗೆಯ ಕಂಪಿನ ನೆನಪ ತಂದಿರೆ ಕನ್ನಡಿಗರಲ್ಲಿ
ನಗುವ ತಾರಲು ಮುದವ ತೋರಲು
ಸೊಗವ ತೋರುತ ಮನವನೊಮ್ಮೆಲೆ
ಹಗುರವಾಗಿಸೆ ಮತ್ತೆ ಬಂದಿದೆ ನಾಟಕದ ಚೈತ್ರ!
ಚಿತ್ರ ಕೃಪೆ: ಪೂರ್ಣಿಮಾ Read more about ಮತ್ತೆ ಬಂದಿದೆ ನಾಟಕ ಚೈತ್ರ!
ಈ ಸುಂದರಿ ಶುಕಸಂದೇಶವನ್ನು ಕಳಿಸಿದಾಗಲೂ ಬಳಿ ಬಾರದ ಚೆನ್ನಿಗನ ಮೇಲೆ ಪ್ರೀತಿಯಿದ್ದರೂ, ತುಸು ಕೋಪವೂ ಬಾರದಿರದು. ಅಲ್ಲವೇ? ಅದಕ್ಕೇ ತುಸು ಪ್ರೀತಿಯಿಂದ ಮತ್ತೆ ತುಸು ಹುಸಿ ಕೋಪದಿಂದ ಬರೆದ ಎರಡು ಷಟ್ಪದಿಗಳು ಇಲ್ಲಿವೆ.
ಚಿತ್ರದಲ್ಲಿರದ ಚೆನ್ನಿಗನ ಮೇಲೆ ಪದ್ಯವಿದ್ದರೆ ಅದು ನನ್ನ ತಪ್ಪಲ್ಲ. ಎಷ್ಟೇ ಅಂದರೂ ಶುಕಭಾಷಿಣಿ ತನ್ನ ಗಿಣಿಯೊಂದಿಗೆ ಅವನಿಗೇ ತಾನೇ ಸಂದೇಶವಿತ್ತಿದ್ದು? ಹಾಗಾಗಿ ತಪ್ಪೇನಿದ್ದರೂ ಅವಳದ್ದೇ, ಬಿಡಿ! Read more about ಕಿವಿಮಾತುಗಳು
ಹೊತ್ತು ಮುಳುಗಿತು ಸಂಜೆಯಾಯಿತು
ಮತ್ತೆ ಪೂರ್ವದಿ ಬಂದು ಚಂದಿರ
ನಿತ್ತಿಹನು ಗಗನದಲಿ ಜೊನ್ನದ ಸವಿಯ ಮಳೆಯನ್ನು
ಚಿತ್ತವಿನ್ನದರಿಂದ ಬೇರೆಡೆ
ಯೆತ್ತ ಪೋಪುದು? ಬಾನ ಹೆಣ್ಣಿನ
ಕುತ್ತಿಗೆಗೆ ಪದಕವದು ಮೇಣ್ ಪಾಡ್ಯಮಿಯ ಚಂದಿರನು!
- ಹಂಸಾನಂದಿ
ಕೊ: ಚಿತ್ರ ಕೃಪೆ - http://sandersonthir...
Read more about ಪಾಡ್ಯದ ಚಂದಿರ
ವಿಚಿತ್ರವಾದ ತಲೆಬರಹ ಅಂತ ಅಂದ್ಕೂಂಡೇ ಇರ್ತೀರ ಗೊತ್ತು ಬಿಡಿ. ಅದಿರಲಿ. ಮೊದಲು ವಿಷಯಕ್ಕೇ ಬರ್ತೀನಿ.
ಇವತ್ತು ಕ್ರಿಸ್‍ಮಸ್. ಯೇಸು ಹುಟ್ಟಿದ ದಿನವೆಂದು ಆಚರಿಸುವ ಹಬ್ಬ. ಹೆಚ್ಚು ಜನರಿಗೆ ತಿಳಿಯದ ವಿಷಯವೆಂದರೆ, ಈ ಡಿಸೆಂಬರ್ ೨೫ರಂದು ಕ್ರಿಸ್ತಹುಟ್ಟಿದ್ದು ಎನ್ನುವುದರ ಆಚರಣೆ, ಕ್ರಿಸ್ತನ ನಂತರ ಹಲವು ಶತಮಾನಗಳಾದ ಮೇಲೆ ಬಂದದ್ದು. ಬೈಬಲ್ಲಿನ ಹೊಸ ಒಡಂಬಡಿಕೆ (New Testament) ನಲ್ಲಿ, ಇಂತಹದ್ದೇ ದಿನ ಕ್ರಿಸ್ತ ಹುಟ್ಟಿದ್ದು ಅನ್ನುವುದಕ್ಕೆ ಸರಿಯಾದ ಆಧಾರಗಳಿಲ್ಲವಂತೆ. ಅಲ್ಲದೇ, ಬೈಬಲ್ಲಿನಲ್ಲಿ ವಿವರಿಸಿರುವ ಘಟನೆಗಳನ್ನು ನೋಡಿದರೆ, ಡಿಸೆಂಬರ್ ಕೊನೆಯ ಚಳಿಗಾಲದಲ್ಲಿ ಕ್ರಿಸ್ತ ಹುಟ್ಟಿರುವುದು ಸಾಧ್ಯವಿಲ್ಲವೆಂದೂ, ಆ ದಿನ ವಸಂತದಲ್ಲೋ, ಹೇಮಂತದಲ್ಲೋ ಆಗಿರಬೇಕೆಂದೂ ಅಂತ ಕೆಲವು ಬೈಬಲ್ ವಿದ್ವಾಂಸರ ಅಭಿಪ್ರಾಯ ಕೂಡ ಇದೆ. ಪಂಚಾಗ ನೋಡಿ, ಇಂತಹ ತಿಥಿ ವಾರ ನಕ್ಷತ್ರ ಎಂದು ಬರೆದಿಟ್ಟಿದ್ದರೆ ನೋಡಿ, ಸರಿಯಾಗಿರುತ್ತಿತ್ತು, ಅಲ್ವೇ? Read more about ಯೇಸು ಜನನ