ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।

— -ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮೀಡಿಯಾಕ್ರಿಟಿ_ಜಾತ್ರೆ

ಪವರ್ಕಟ್ಟು, ಸೂಪರ್ಪವರ್ರು, ಮೀಡಿಯಾಕ್ರಿಟಿ ಜಾತ್ರೆ.

"ಇಂದಿನ ಪೀಳಿಗೆಯವರು ಕೆಲ್ಸಾ ಹುಡ್ಕೋದಲ್ಲಾ , ಕೆಲ್ಸಾ ಕೊಡೋರಾಗ್ಬೇಕು. ನಮ್ಮಿಂಡಿಯಾ ದೇಶ ಸ್ವಾವಲಂಬನೆ ಸಾಧಿಸಬೇಕು. ನೀವೆಲ್ರೂ ಆಂತ್ರಪ್ರೆನ್ಯೂರ್ಗಳಾಗಿ. ಟೆಕ್ನಾಲಜಿ ಸಂಸ್ಥೆಗಳನ್ನು ಶುರುಮಾಡಿ. ನಾವು ಸಹಾಯ ಮಾಡ್ತೀವಿ!" ಅನ್ನೋ ಥರದ ಭಾಷ್ಣ ಕೇಳಿ ಯಾವನಾದ್ರೂ ಧೈರ್ಯ ಮಾಡಿ ವ್ಯವಹಾರ ಶುರು ಮಾಡ್ದಾಂತಿಟ್ಕೋಳಿ, ____ಮೋಚ್ಕೊಂಡು ಚಾಪೆ ಸುತ್ಕೊಂಢೋಗ್ತಾನೆ ಎರ್ಡ್ಮೂರ್ತಿಂಗ್ಳಲ್ಲೇ. ಯಾಕೆ? ಈಗಿನ ಟೆಕ್ನಾಲಜಿ ಉದ್ಯಮಗಳಿಗೆ ಮುಖ್ಯವಾಗಿ ಬೇಕಿರೋದು ವಿದ್ಯುತ್ತು. ದರಿದ್ರಾ ಇದನ್ನೇ ಸರಿಯಾಗಿ ಸರಬರಾಜು ಮಾಡೋಕ್ಕೆ ಹರಿಯೋಲ್ಲ, ಇನ್ನಿನ್ನೇನು ಬೇರೆ ಸಹಾಯ-ಸಾಮಗ್ರಿ ಕೊಟ್ಟಿದ್ದಾರು! ದಿನಕ್ಕೆ ಸಮಾ ಎಂಟ್ಗಂಟೆ ಪವರ್ಕಟ್ಟು. ರಾತ್ರಿ ಹತ್ರಿಂದ ಹನ್ನೊಂದಕ್ಕೂ ಪವರ್ಕಟ್ಟು! ಆಹಾ! ದಕ್ಷಿಣ ಕೊರಿಯಾ, ಫ್ರಾನ್ಸು, ಇಸ್ರೇಲು ಇಷ್ಟಿಷ್ಟೇ ಇವೆ. ಆದ್ರೂ ಅವು ಮೂಲಭೂತ ಸೌಕರ್ಯಗಳ ವಿಷಯದಲ್ಲಿ ನಮ್ಗಿಂತಾ ಒಂದಿನ್ನೂರ್ವರ್ಷ ಮುಂದೆ ಇದಾರೆ. ಕೋಟಿಗಟ್ಲೆ ಜನಕ್ಕೆ ಇಲ್ಲಿ ನೀರಿಲ್ಲಾ ಅಂದ್ರೂ ನಮ್ಮೋರು ಚಂದ್ರನ್ಮೇಲೆ ನೀರು ಹುಡ್ಕವ್ರೆ.ಏನ್ಜಾಣ್ಮೇ, ಏನ್ಮುಂದಾಲೋಚ್ನೇ!  ಮುಂದೆ ಓದಿ »

Syndicate content