ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ರಗ್ಳೆಮಾತು

ಕೆಲವು ಜನ, ಹಲವು ಮಾತು

ಪತಿಯ (ಭೋರ್ಗರೆದುಕ್ಕಿ ಹರೀತಿರೋ) ಭಕ್ತಿ ಬಗ್ಗೆ ಹೆಂಡ್ರ ಉವಾಚ: ನಮೆಜ್ಮಾನ್ರು ಬಿಡಿ! ಏನ್ಭಕ್ತೀ ಏನ್ಸಂಸ್ಕಾರ! ಕೆಲ್ಸಕ್ಕೊಂದರ್ಧ ಗಂಟೆ ಲೇಟಾದ್ರೂ ಪರ್ವಾಗಿಲ್ಲಾ, ದಿನಾ ಸಹಸ್ರನಾಮ ಓದೋದು ತಪ್ಸೋದೇ ಇಲ್ಲ! ಒಂದರ್ಧಗಂಟೆ ಮುಂಚೇನೇ ಬಂದು ಪ್ರವಚನಕ್ಕೆ ತಪ್ದೇ ಹೋಗ್ತಾರೆ! ಏನ್ಭಕ್ತೀ, ಏನಾಚಾರಾ! ಅಯ್ಯೋ!
/* ಏನಾದ್ರೂ ಅವ್ನೇ ಎಲ್ಲಾ ನೋಡ್ಕೋತಾನೇ! ******ರ್ಪಣಮಸ್ತು! */  ಮುಂದೆ ಓದಿ »

Syndicate content