ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ವಿಷ

ಮುಖ ನೋಡಿ ಮಣೆ ಹಾಕೋದು

ಉಡುಪು ತೊಡುವುದರಲ್ಲಿ ಇರಲಿ ತುಸು ಗಮನ
ಮಟ್ಟಕ್ಕೆ ತಕ್ಕುಡುಗೆ ಇದ್ದರದು ವಯಿನ*;
ಹಳದಿ ರೇಸಿಮೆಯುಟ್ಟವಗೆ ಮಗಳನೇ ಕೊಟ್ಟ
ಕಡಲೊಡೆಯ ತೊಗಲುಟ್ಟವಗೆ ನಂಜುಣಿಸಿಬಿಟ್ಟ!

ಸಂಸ್ಕೃತ ಮೂಲ:

ಕಿಂ ವಾಸಸೇತ್ಯತ್ರ ವಿಚಾರಣೀಯಮ್ ವಾಸಃ ಪ್ರಧಾನಂ ಖಲು ಯೋಗ್ಯತಾಯಾಃ
ಪೀತಾಂಬರಂ ವೀಕ್ಷ್ಯ ದದೌ ಸ್ವಕನ್ಯಾಂ ಚರ್ಮಾಂಬರಂ ವೀಕ್ಷ್ಯ ವಿಷಂ ಸಮುದ್ರಃ ||

किम् वाससॆत्यत्र पिचारणीयम् वासः प्रदानम् खलु यॊग्यतायाः |
पीतांबरम् वीक्ष्य ददौ स्वकन्यां चर्मांबरम् वीक्ष्य विषम् समुद्रः ||

-ಹಂಸಾನಂದಿ

ಕೊಸರು: ವಯಿನ, ವೈನ : ಸೊಗಸು, ತಕ್ಕದ್ದು, ಅಚ್ಚುಕಟ್ಟು

ಕೇಡಿಗನ ನಂಜು

ಚೇಳಿನ ನಂಜೋ ಬಾಲದ ತುದಿಯಲಿ
ನೊಣಕ್ಕದುವೆ ಬಾಯಲ್ಲೆಲ್ಲಾ!
ಹಾವಿನ ಹಲ್ಲಲಿ ತುಂಬಿರುವುದು ವಿಷ
ಕೇಡಿಗನಿಗೋ ಮೈಯಲ್ಲೆಲ್ಲಾ!

ಸಂಸ್ಕೃತ ಮೂಲ:

ವೃಶ್ಚಿಕಸ್ಯ ವಿಷಂ ಪುಚ್ಛೇ ಮಕ್ಷಿಕಾಯಾಶ್ಚ ಮಸ್ತಕೇ |
ತಕ್ಷಕಸ್ಯ ವಿಷಂ ದಂತೇ ಸರ್ವಾಂಗೇ ದುರ್ಜನಸ್ಯ ಚ ||

-ಹಂಸಾನಂದಿ

ಕೊ.ಕೊ: ಚಾಮರಾಜ ಸವಡಿಯವರ ’ವಿಷದ ಗಿಡ’ ಮತ್ತೆ, ಅದಕ್ಕೆ ಬಂದ ಅಡಿಟಿಪ್ಪಣಿಗಳನ್ನು ಓದಿದಾಗ, (http://sampada.net/b...) ಎಂದೋ ಮಾಡಿದ್ದ ಈ ಅನುವಾದ ನೆನಪಾಯ್ತು. ಒಂದೆರಡು ಚಿಕ್ಕ ಬದಲಾವಣೆಗಳೊಡನೆ ಹಾಕಿರುವೆ.

Syndicate content