24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಶೃಂಗಾರಶತಕ

ಬಾಳಿನಿಂದ ಬೆಂಕಿಗೆ!

October 28, 2010 - 12:58am
hamsanandi

ಮದನನೆಂಬ ಬೆಸ್ತ ಭರದಿ ಹಾಕಿಹನು
ಹೆಣ್ಣೆಂಬ ಗಾಳವನು ಬಾಳಗಡಲಿನಲಿ;
ಅವಳ ತುಟಿಗಳ ಸೆಳೆತಕ್ಕೀಡಾದವರನು
ಹಾಕಿ ಹುರಿಯುವನು ಒಲವ ಬೆಂಕಿಯಲಿ!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)

ವಿಸ್ತಾರಿತಂ ಮಕರಕೇತನಧೀವರೇಣ
ಸ್ತ್ರೀಸಂಜ್ಞಿತಂ ಬಡಿಶಮತ್ರ ಭವಾಂಬುರಾಶೌ
ಯೇನಾಚಿರಾತ್ತಧರಾಮಿಷಲೋಲ ಮರ್ತ್ಯ-
ಮತ್ಸ್ಯಾಸ್ವಿಕೃಷ್ಯ ಸ ಪಚತ್ಯನುರಾಗವಹ್ನೋ

 

-ಹಂಸಾನಂದಿ

 

ಕೊ: ಮೂಲದಲ್ಲಿರುವ ’ಮಕರಕೇತನ’ = ಮೊಸಳೆಬಾವುಟದವನು = ಮನ್ಮಥ ಅನ್ನುವುದನ್ನು ಸುಲಭವಾಗಿ ತಿಳಿಯಲೆಂದು ’ಮದನ’ನೆಂದೇ ಇರಿಸಿದ್ದೇನೆ. Read more about ಬಾಳಿನಿಂದ ಬೆಂಕಿಗೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಜಿಂಕೆ ಕಣ್ಣವಳು ಮಾಡಿದ ತಪ್ಪು

February 10, 2011 - 7:36am
hamsanandi

ಅಲುಗುತಿಹ ಬಳೆಗಳಲಿ ಬಳುಕುವೊಡ್ಯಾಣದಲಿ
ಝಲ್ಲೆನುವ ಗೆಜ್ಜೆಯ ಹಂಸವ ನಾಚಿಸುವ ನಡೆಯಿರುವ
ತರಳೆಯರು ಅದಾರ ಮನವ ಅಂಕೆಗೆಡಿಸದೇ ಇಹರು
ತಮ್ಮಂಜಿದ ಮುಗುದೆ ಚಿಗರೆಯ ಹೋಲ್ವ ಕಣ್ಗಳಲಿ!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)

ಏತಾಶ್ಚಲದ್ವಲಯ ಸಂಹತಿ ಮೇಖಲೋತ್ಥ
ಝಂಕಾರನೂಪುರ ಪರಾಜಿತ ರಾಜಹಂಸ್ಯಃ |
ಕುರ್ವಂತಿ ಕಸ್ಯ ನ ಮನೋ ವಿವಶಂ ತರುಣ್ಯೋ
ವಿತ್ರಸ್ತ ಮುಗ್ಧಹರಿಣೀಸದೃಶೈಃ ಕಟಾಕ್ಷೈಃ ||

-ಹಂಸಾನಂದಿ

 

ಕೊ: ಪೂರ್ತಿ ಪದಶಃ ಅನುವಾದವಲ್ಲದಿದ್ದರೂ ಭಾವವನ್ನು ಉಳಿಸಿದ್ದೇನೆ ಎಂದುಕೊಂಡಿದ್ದೇನೆ. Read more about ಜಿಂಕೆ ಕಣ್ಣವಳು ಮಾಡಿದ ತಪ್ಪು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ಗಟ್ಟಿಗರ ಸೋಲು

February 19, 2011 - 2:23am
hamsanandi


ಸೊಕ್ಕಿದಾನೆಯ ಅಮಲನ್ನು ಇಳಿಸುವ ವೀರರು;
ಮೃಗರಾಜ ಸಿಂಹವ ಮಡುಹುವಲೂ ನಿಪುಣರು.
ಅಂಥ ಗಟ್ಟಿಗರೆದುರೇ ಸಾರಿ ಹೇಳುವೆ ನಾನು
ಆ ಮನ್ಮಥನ ಸೊಕ್ಕನ್ನು ಅಡಗಿಸುವರು ಸಿಗರು!

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ)

ಮತ್ತೇಭಕುಂಭದಲನೇ ಭುವಿ ಸಂತಿ ಶೂರಾಃ
ಕೇಚಿತ್ಪ್ರಚಂಡ ಮೃಗರಾಜವಧೇSಪಿ ದಕ್ಷಾಃ |
ಕಿಂತು ಬ್ರವೀಮಿ ಬಲಿನಾಂ ಪುರತಃ ಪ್ರಸಹ್ಯ
ಕಂದರ್ಪದರ್ಪದಲನೇ ವಿರಲಾ ಮನುಷ್ಯಾಃ||

-ಹಂಸಾನಂದಿ Read more about ಗಟ್ಟಿಗರ ಸೋಲು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕೊಂಕು ನೋಟದವಳ ಜಾಣ್ಮೆ

August 2, 2011 - 10:19am
hamsanandi

 ಮೋಡಿಗೊಳಿಸುವರು ಅಮಲೇರಿಸುವರು
ಮೇಲೆ ಕಟಪಟೆಯ ಕಟಕಿಯಾಡುವರು; Read more about ಕೊಂಕು ನೋಟದವಳ ಜಾಣ್ಮೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ವಸಂತನ ತಪ್ಪು

August 25, 2011 - 5:19am
hamsanandi

 ವಸಂತದಲಿಂಪಾದ ಕೋಗಿಲೆಗಳ ಗಾನ
ಮಲೆನಾಡ ಗಿರಿಗಳಲಿ ಸುಳಿವ ತಂಗಾಳಿ
ಅಗಲಿ ನೊಂದವರ ಜೀವವನೇ ಸೆಳೆದಾವು
ಕೇಡುಗಾಲದಲಮೃತವೂ ಆದೀತು ನಂಜು!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ )

ಮಧುರಯಂ ಮಧುರೈರಪಿ ಕೋಕಿಲಾ-
ಕಲರವೈರ್ಮಲಯಸ್ಯ ಚ ವಾಯುಭಿಃ |
ವಿರಹಿಣಃ ಪ್ರಹಿಣಸ್ತಿ ಶರೀರಿಣೋಂ
ವಿಪದಿ ಹಂತ ಸುಧಾSಪಿ ವಿಷಾಯತೇ ||

-ಹಂಸಾನಂದಿ
Read more about ವಸಂತನ ತಪ್ಪು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಕಾರ್ಗಾಲದ ಹಂಬಲ

August 26, 2011 - 1:38am
hamsanandi

ಕಾರಮೋಡಗಳು ; ನೆಲಮರೆಸಿರುವ ಹೂವುಗಳಹಾಸು;
ಅರಳಿದ ಕದಂಬ ಕಾಡುಮಲ್ಲೆಗಳ ಕಂಪ ಬೀರುವ ಗಾಳಿ;
ಮಾರುದನಿಸುವ ಕುಣಿವ ನವಿಲುಗಳ ಕೇಕೆಯ ಸೊಲ್ಲು -
ತರುವುವು ಹಂಬಲವ ಕೊರಗು ಸಂತಸದಲ್ಲಿಹರೆಲ್ಲರಿಗು

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)

ವಿಯದುಪಚಿತ ಮೇಘೋ ಭೂಮಯಃ ಕಂದಲಿನ್ಯೋ
ನವಕುಟಜ ಕದಂಬಾಮೋದಿನೋ ಗಂಧವಾಹಾಃ |
ಶಿಖಿಕುಲಕಲ ಕೇಕಾರವರಮ್ಯಾ ವನಾಂತಾಃ
ಸುಖಿನಮಸುಖಿನಂ ವಾ ಸರ್ವಮುತ್ಕಂಠಯಂತಿ ||

-ಹಂಸಾನಂದಿ Read more about ಕಾರ್ಗಾಲದ ಹಂಬಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಂಕೋಲೆಗಳು

September 23, 2011 - 4:12am
hamsanandi

ನಸುನಗೆ ತುಸುಲಜ್ಜೆ  ಜೊತೆಗಿನಿತು ದಿಗಿಲು
ತಿರುಗಿಸಿದ ಮೊಗ ಮತ್ತೆ ಅರಗಣ್ಣ ನೋಟಗಳು
ಮಚ್ಚರದ ಮಾತುಗಳು ಜಗಳಗಳು ಬೆಡಗುಗಳು
ಪರಿಪರಿಯ ಬಗೆಯಲ್ಲಿ ಸಂಕಲೆಯೇ ಹೆಣ್ಣುಗಳು!


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ):

ಸ್ಮಿತೇನ ಭಾವೇನ ಚ ಲಜ್ಜಯಾ ಭಯಾ
ಪರಾಙ್ಮುಖೈರರ್ಧ ಕಟಾಕ್ಷ ವೀಕ್ಷಣೈಃ |
ವಚೋಭಿರೀರ್ಷ್ಯಾ ಕಲಹೇನ ಲೀಲಯಾ
ಸಮಸ್ತ ಭಾವೈಃ ಖಲು ಬಂಧನಂ ಸ್ತ್ರೀಯಃ ||

-ಹಂಸಾನಂದಿ
Read more about ಸಂಕೋಲೆಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಸರಣಿ: 

ಹುಬ್ಬೆನುವ ಬಿಲ್ಲಿನ ಚುರುಕು ಬಾಣಗಳು

October 20, 2011 - 1:18am
hamsanandi

ಗಂಡು ಸರಿದಾರಿಯಲಿ ನಡೆವನು  ಇಂದ್ರಿಯಗಳನಂಕೆಯಲಿಡುವನು
ನಾಚಿಕೆಯನು ಬಿಡನು ವಿನಯದಾಸರೆಯಲಿರುವನು;  ಯಾವತನಕ?
ಬೆಡಗಿಯರ ಸೆಳೆವ ಕುಡಿಹುಬ್ಬು ಬಿಲ್ಲಿನಲಿ ಹೂಡಿದ ಬಟ್ಟಲು ಕಣ್ಣಿನಾ
ನೋಟದಂಬುಗಳು  ತಗುಲಿ ಅವನೆದೆಗಾರಿಕೆಯನೇ ಕದಿವ ತನಕ  ! 


ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕದಿಂದ*) :

ಸನ್ಮಾರ್ಗೇ ತಾವದಾಸ್ತೇ ಪ್ರಭವತಿ ಚ ನರಸ್ತಾವದೇವೇಂದ್ರಿಯಾಣಾಂ
ಲಜ್ಜಾಂ ತಾವದ್ವಿಧತ್ತೇ ವಿನಯಮಪಿ ಸಮಾಲಂಭತೇ ತಾವದೇವ |
ಭ್ರೂಚಾಪಾಕೃಷ್ಟ ಮುಕ್ತಾಃ ಶ್ರವಣಪಥಗತಾ ನೀಲ ಪಕ್ಷ್ಮಾಣ ಏತೇ
ಯಾವಲ್ಲೀಲಾವತೀನಾಂ ಹೃದಿ ನ ಧೃತಿ ಮುಷೋ ದೃಷ್ಟಿಭಾಗಾಃ ಪತಂತಿ ||


-ಹಂಸಾನಂದಿ
Read more about ಹುಬ್ಬೆನುವ ಬಿಲ್ಲಿನ ಚುರುಕು ಬಾಣಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ತರುಣಿಯರ ಬೆಡಗು

May 31, 2012 - 9:24am
hamsanandi

ಮೊಗದಲ್ಲಿ ಮುಗುಳುನಗೆ ಕುಡಿನೋಟದೋಲಾಟ
ಬಗೆ ಸೆಳೆವ ನುಡಿಯೊನಪು ಬೆಡಗು ವಯ್ಯಾರ
ಚಿಗುರಂತೆಸೆವ ನಡಿಗೆ ಹೊಸಹರೆಯ ಮುಟ್ಟಿರುವ
ಚಿಗರೆಗಣ್ಣಿಯರಲ್ಲದಾವ ಸೊಗಸಿರದು?

 

ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕ, ೬):

ಸ್ಮಿತಂ ಕಿಂಚಿದ್ವಕ್ತ್ರೇ ಸರಲತರಲೋ ದೃಷ್ಟಿ ವಿಭವಃ
ಪರಿಸ್ಪಂದೋ ವಾಚಾಮಾಭಿನವ ವಿಲಾಸೋಕ್ತಿ ಸರಸ: |
ಗತಾನಾವಾರಂಭಃ ಕಿಸಲಯಿತ ಲೀಲಾ ಪರಿಕರಃ
ಸ್ಪೃಶಂತ್ಯಾಸ್ತಾರುಣಂ ಕಿಮಿವ ನ ಹಿ ರಮ್ಯಂ ಮೃಗದೃಶಃ ||

-ಹಂಸಾನಂದಿ

ಕೊ: ಬಗೆ = ಮನಸ್ಸು ಅನ್ನುವುದಕ್ಕೊಂದು ಅಚ್ಚಕನ್ನಡದ್ದೇ ಪದ.
ಕೊ.ಕೊ : ಮೊದಲ ಸಾಲಿಗೆ "ಸ್ಮಿತಂ ಕಿಂಚಿನ್ಮುಗ್ಧಂ." ಎನ್ನುವ ಪಾಠಾಂತರವೂ ಇದೆ. ಅರ್ಥದಲ್ಲಿ ಬಹಳ ಹೆಚ್ಚಿನ ಬದಲಾವಣೆಯಾಗದು. Read more about ತರುಣಿಯರ ಬೆಡಗು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.
ಸರಣಿ: 

ಅರ್ಧನಾರೀಶ್ವರ

November 10, 2012 - 2:08am
hamsanandi

 


 

 

ಕಂಗೊಳಿಸುತಿಹನಾತ ಪ್ರೇಮಿಗಳ ನಡುವೆ ತ-

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಶೃಂಗಾರಶತಕ