ಇಂಡಿಯಾ ಬುಕ್ ಹೌಸ್

ಅಮರ ಚಿತ್ರ ಕಥೆಯ ಸುತ್ತ ನೆನಪಿನಲ್ಲೊಂದು ಸುತ್ತು

Amar Chitra Katha - Abhimanyu
ಚಿತ್ರ ಕೃಪೆ: AmarChitraKatha.com

Ajatashatru

ತನ್ನ ಹೆಸರಿಗೆ ತಕ್ಕಂತೆ ಅಮರ ಚಿತ್ರ ಕಥೆ ಇವತ್ತಿಗೂ ಭಾರತದ ಸಂಸ್ಕೃತಿಯ ಮಜಲುಗಳನ್ನು ಹೊತ್ತು ಎಂದಿನ ಕಳೆಯನ್ನು ಉಳಿಸಿಕೊಂಡಿದೆ. ಚಿಕ್ಕವನಿದ್ದಾಗ ನನಗೆ ಈ ಪುಸ್ತಕಗಳನ್ನು ಕೊಳ್ಳಲಾಗುತ್ತಿರಲಿಲ್ಲ. ಅಮ್ಮನ ಕೈಗೆ ಎಟುಕದ ಬೆಲೆ ಇರುತ್ತಿತ್ತು ಈ ಪುಸ್ತಕಗಳಿಗೆ (ಅಪ್ಪ ನನಗೆ ಎಂದಿಗೂ ಪುಸ್ತಕ ಕೊಡಿಸುವ ಗೋಜಿಗೆ ಹೋಗುತ್ತಿರಲಿಲ್ಲ). ಹೀಗಾಗಿ ಇವುಗಳು ಎಟುಕುತ್ತಿದ್ದುದು ಲೈಬ್ರೆರೀಲೆ. ಮಳೆ ಬರುತ್ತಿದ್ದರೂ ದೂರದ ಲೈಬ್ರೆರೀಗೆ ಛತ್ರಿ ಹಿಡಿದು ಅರ್ಧ ನೆಂದು ತೊಪ್ಪೆಯಾಗಿ ಹೋಗುತ್ತಿದ್ದೆ - ಅಷ್ಟೊಂದು ಹುಚ್ಚಿರುತ್ತಿತ್ತು. ಆದರೆ ನನ್ನ ಅಣ್ಣ ಅಕ್ಕನ ಮಕ್ಕಳಿಗೆ ಹೀಗಿಲ್ಲ - ನಾವೆಲ್ಲರೂ ಯಾವುದಾದರೊಂದು ಪುಸ್ತಕ ಕಂಡ ಕೂಡಲೆ ಕೊಂಡು ಮನೆಗೆ ತರುತ್ತಿರುತ್ತೇವೆ. ತಮಾಷೆಯೆಂದರೆ ನನ್ನ ಅಣ್ಣನ ಮಗನಿಗೆ ಈ ಪುಸ್ತಕ ಓದೋದಕ್ಕಿಂತ ನಿಕಲೋಡಿಯನ್ ಚ್ಯಾನಲ್ಲಿನಲ್ಲಿ ಬರೋ "ಹತ್ತೋರಿ", ಪೋಗೋ ಚ್ಯಾನಲ್ಲಿನಲ್ಲಿನ "ನಾಡ್ಡಿ", "ಮಿ. ಬೀನ್" ಮುಂತಾದವೇ ಬಲು ಇಷ್ಟ!
ಟಾಟಾ ಸ್ಕೈ ಹೊತ್ತು ತರುವ ಡಿಜಿಟಲ್ ಸಿಗ್ನಲ್ಲು ಕ್ಲಾರಿಟಿ ಇರುವ ಚೆಂದದ ಚಿತ್ರಗಳನ್ನು ಮೂಡಿಸಿ ಪುಸ್ತಕ ಓದು ಇನ್ನಷ್ಟು ದೂರ ಮಾಡಿಬಿಟ್ಟಿದೆ.  ಮುಂದೆ ಓದಿ »

Syndicate content