ಗ್ನು/ಲಿನಕ್ಸ್ ಹಬ್ಬ
ಗ್ನು/ಲಿನಕ್ಸ್ ಹಬ್ಬ ವಾಲಂಟೀರ್ಸ್ ಬಳಗ
April 28, 2008 - 1:00pm — hpnಗ್ನು/ಲಿನಕ್ಸ್ ಹಬ್ಬ ಹೇಗಾಯಿತು ಎಂದು ಎಲ್ಲರೂ ಕೇಳುತ್ತಿದ್ದೀರಿ. ಸವಿವರವಾಗಿ ಬರೆಯಲು ಬಿಡುವಾಗಿಲ್ಲ.
ಕಾರ್ಯಕ್ರಮ ಬಹಳ ಚೆನ್ನಾಗಿ ನಡೆಯಿತು. ಮೊದಲ ಪ್ರಯತ್ನಕ್ಕೆ ಅಂದುಕೊಂಡದ್ದಕ್ಕಿಂತ ಯಶಸ್ವಿಯಾಯಿತು ಎಂದೇ ಹೇಳಬಹುದು.
ಎಂದಿನ ಕೆಲಸದ ನಡುವೆ ಇನ್ನೂ ಕಾರ್ಯಕ್ರಮ ನಂತರದ ಅಳಿದುಳಿದ ಕೆಲವು ಜವಾಬ್ದಾರಿಗಳು ಇನ್ನೂ ಮುಗಿಯದೆ ಹಾಗೇ ಇರುವುದರಿಂದ ಸದ್ಯಕ್ಕೆ ಈ ಚಿತ್ರ:
ಮುಂದೆ ಓದಿ »

- hpn ರವರ ಬ್ಲಾಗ್
- Login or register to post comments
- 198 hits
- Email this blog



ಪ್ರತಿಕ್ರಿಯೆ ಮುಗಿಲು ಮುಟ್ಟಿದಾಗ...
April 26, 2008 - 2:00am — hpn
ನಾವಂದುಕೊಂಡದ್ದು ೫೦ ಜನ. ವಾರವೊಂದರಲ್ಲೇ ನೂರಾಯ್ತು. ನಮಗೆಲ್ಲ ಆಶ್ವರ್ಯವಾಗಿತ್ತು. ಬಹಳ ಖುಷಿಯಾಗಿತ್ತು! ಎರಡು ಸೆಶ್ಶನ್ ಇಟ್ಟುಕೊಳ್ಳೋಣ ಅಂತ ಮಾತನಾಡಿಕೊಂಡಿದ್ದೆವು.
ಇವತ್ತು ನೂರಾರು ನೋಂದಣಿಗಳು. ನಮಗೆಲ್ಲ ಒಮ್ಮೆ ಭಯವಾಯ್ತು. ಗ್ನು/ಲಿನಕ್ಸ್ ಬಗ್ಗೆ ಇಷ್ಟೊಂದು ಜನ ಆಸಕ್ತಿ ವಹಿಸುವರೆಂಬುದನ್ನು ಕನಸು ಮನಸ್ಸಿನಲ್ಲೂ ನಾವುಗಳು ಎಣಿಸಿರಲಿಲ್ಲ.
ಇಂದು ಬೆಳಿಗ್ಗೆ ವಿ.ಕ ಹಾಗೂ ಕನ್ನಡಪ್ರಭದಲ್ಲಿ ಕಾರ್ಯಕ್ರಮದ ಕುರಿತು ಬಂದ ಲೇಖನಗಳಿಂದ ಕೆಲವೇ ಘಂಟೆಗಳಲ್ಲಿ ನೋಂದಣಿ ಇಮ್ಮಡಿಯಾಗಿ ೩೦೦ ದಾಟಿ ಹೋಯ್ತು!
ಆದರೆ ಕಾರ್ಯಕ್ರಮ ಇಟ್ಟುಕೊಂಡಿರುವ ಜಾಗದಲ್ಲಿ ಹೆಚ್ಚು ಜನರಿಗೆ ಅನುವು ಮಾಡಿಕೊಡುವುದಕ್ಕೆ ಅನುಮತಿ ನಮಗಿಲ್ಲ. ನಮ್ಮೆಲರ ದುಗುಡ ಹೇಳತೀರದು! ಹೀಗಾಗಿ ನಿಜವಾಗಲೂ installationನಲ್ಲಿ ಭಾಗವಹಿಸುವವರು ಮಾತ್ರ ಬನ್ನಿ ಎಂದು ಎಲ್ಲರಿಗೂ ಕೊನೆ ಘಳಿಗೆಯಲ್ಲಿ ತಿಳಿಸಿದೆವು.
ಈ ಬಗ್ಗೆ ನಮ್ಮೆಲ್ಲರ ಪರಿಸ್ಥಿತಿ ಅರಿತು ಸ್ಪಂದಿಸಿದ ಎಲ್ಲರಿಗೂ ಅನಂತ ವಂದನೆಗಳು.

ಗ್ನು/ಲಿನಕ್ಸ್ ಹಬ್ಬಕ್ಕೊಂದು ತನ್ನದೇ ವೆಬ್ಸೈಟ್
April 17, 2008 - 3:31am — hpnಗ್ನು/ಲಿನಕ್ಸ್ ಹಬ್ಬಕ್ಕೆ ಇಗ ತನ್ನದೇ ಆದ ಒಂದು ವೆಬ್ಸೈಟ್. ಭೇಟಿ ಕೊಡಿ:
ಹೊಸ ವೆಬ್ಸೈಟು ಈ ರೀತಿಯ ಇನ್ನೂ ಹಲವು ಕಾರ್ಯಕ್ರಮಗಳಿಗೆ ನಾಂದಿ ಹಾಡಲಿ ಎಂಬ ಕನಸು ಹೊತ್ತು, ಈ ರೀತಿಯ ಕಾರ್ಯಕ್ರಮಗಳು ಕರ್ನಾಟಕದಲ್ಲಿ ಎಲ್ಲಿ ನಡೆದರೂ ಈ ವೆಬ್ಸೈಟಿನಲ್ಲಿ ಆ ಕಾರ್ಯಕ್ರಮಕ್ಕೆ ಅಂತರ್ಜಾಲದಲ್ಲಿ ಬೇಕಾಗುವ ಜಾಗವನ್ನೂ, ಚಟುವಟಿಕೆಗೆ ಬೇಕಾದ ಸರಕನ್ನೂ ಒದಗಿಸುತ್ತ ಹೋಗುವ ಉದ್ದೇಶದಿಂದ ಈ ಹೊಸ ತಾಣ ಪ್ರಾರಂಭಿಸಿದ್ದೇವೆ. ಸದುಪಯೋಗವಾಗಬಹುದೆಂಬ ಆಶೆ ನಮ್ಮದು.
ಇಲ್ಲಿಯವರೆಗೂ ವಾಲಂಟೀರ್ಸ್ ಸಂಖ್ಯೆ ಸುಮಾರು ೧೫, ಕಾರ್ಯಕ್ರಮಕ್ಕೆ ನೋಂದಾಯಿಸಿದವರ ಸಂಖ್ಯೆ ಸುಮಾರು ೧೧೦ಕ್ಕೂ ಹೆಚ್ಚು! ಮುಂದೆ ಓದಿ »

ಗ್ನು/ಲಿನಕ್ಸ್ ಹಬ್ಬ - Volunteers meet ಫೋಟೋಗಳು
April 14, 2008 - 2:07am — hpnನಿನ್ನೆ (ಭಾನುವಾರ) ನಾವುಗಳು ಇಟ್ಟುಕೊಂಡಿದ್ದ Volunteers meetನಲ್ಲಿ ನನ್ನ ಕ್ಯಾಮೆರಾದಿಂದ ತೆಗೆದ ಫೋಟೋಗಳು ಇಲ್ಲಿವೆ.
ನಾವು ಮಾತನಾಡಿಕೊಂಡ ವಿಷಯಗಳು ಹಾಗೂ ಇದೇ ತಿಂಗಳು ೨೬ನೇ ತಾರೀಖು ಇರುವ "ಗ್ನು/ಲಿನಕ್ಸ್ ಹಬ್ಬ"ದ ಕುರಿತು ಮತ್ತಷ್ಟು ವಿವರ ಮುಂದಿನ ಬ್ಲಾಗ್ ಪೋಸ್ಟಿನಲ್ಲಿ. ನಿರೀಕ್ಷಿಸಿ!
ಮುಂದೆ ಓದಿ »


RSS: