ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನೆನಪುಗಳು

ಕಾಲಕೆಳಗೆ ಕವಿಗಳು

ನಿಧಾನ, ನಿಧಾನ. ಶೀರ್ಷಿಕೆ ನೋಡಿ ಯಾವುದೋ ಭಾಷೆಯ ಕವಿಗಳನ್ನು ಇವನು ಕೀಳಾಗಿ ಕಾಣುತ್ತಿದ್ದಾನೆ ಅನ್ನೋ ಆತುರದ ನಿರ್ಧಾರಕ್ಕೆ ಬರಬೇಡಿ. ಇದೊಂದು ತಮಾಷೆಯ ಪ್ರಸಂಗ. ಒಂದು ಮುಜುಗರದ ಪ್ರಸಂಗಾನೂ ಹೌದು.  ಮುಂದೆ ಓದಿ »

ಹೀಗೊಂದು ಅಪರೂಪದ ಸಂಜೆ (ಸಂಪದಿಗರ ಸ್ನೇಹ ಮಿಲನ )

ಶನಿವಾರ ಮೈಲ್ ಓದುತ್ತಿದ್ದಂತೆ ಅಯ್ಯೋ ಸ್ನೇಹ ಮಿಲನದ ಸ್ಥಳ ಬೇರೆಯಾಯ್ತಲ್ಲ ಹೋಗೋದಾ ಬೇಡವಾ ಅಂತ ಯೋಚಿಸುತ್ತಿದ್ದೆ . ಜೊತೆಗೆ ಬರ್ತೀನಿ ಅಂದಿದ್ದ ನನ್ನಕ್ಕ ನೂ ಬರೋದಿಲ್ಲ ಎಂದು ಕೈಕೊಟ್ಟಳು
ಬಸವನಗುಡಿ ಒಂಥರಾ ನಮ್ಮ ಮನೆ ಇದ್ದ ಹಾಗೆ, ಕನ್ನಿಂಗ್ಹ್ಯಾಮ್ ಶಿವಾಜಿ ನಗರ ಯಾವುದೋ ಪರದೇಶ ಇದ್ದ ಹಾಗೆ
ಯೋಚಿಸಿ ಯೋಚಿಸಿ ಕೊನೆಗೆ ಹೊರಡುವ ನಿರ್ಧಾರ ಮಾಡಿದೆ.  ಮುಂದೆ ಓದಿ »

ಮಾಲ್ಗುಡಿ ಡೇಸ್...ಶಂಕರ್ ನಾಗ್ ನೆನಪುಗಳು

ಶಂಕರ್ ನಾಗ್

ನನ್ನ ಬಹುದಿನದ ಆಸೆಯಂತೆ...ನೆನ್ನೆ ಅರ್.ಕೆ. ನಾರಾಯಣರ ಎಲ್ಲ ಪುಸ್ತಕಗಳನ್ನ ಮನೆಗೆ ತಗೊಂಡು ಬಂದೆ. "ಮಾಲ್ಗುಡಿ ಡೇಸ್" ಬಹು ಇಷ್ಟವಾದದ್ದು. ಚಿಕ್ಕಂದಿನಲ್ಲಿ ನಾನು ಮತ್ತು ನನ್ನ ತಮ್ಮ ನಮ್ಮಮ್ಮನ ಹತ್ತಿರ ಬೈಸಿಕೊಂಡಾದ್ರೂ ಸರಿ ಪಕ್ಕದ ಮನೆಗೆ ಹೋಗಿ ಮಾಲ್ಗುಡಿ ಡೇಸ್ ಧಾರವಾಹಿಯನ್ನು ನೋಡಿಬರ್ತಿದ್ವಿ.

ಆ ಧಾರವಾಹಿ ನಿರ್ಮಿಸಿದ ನಮ್ಮ ಮೆಚ್ಚಿನ ನಟ ಶಂಕರ್ ನಾಗ್ ನಮ್ಮನ್ನಗಲಿದ ದಿನ ಇಂದು. ನಾಟಕ,ರಂಗಭೂಮಿ,ದೂರದರ್ಶನ,ಚಲನ ಚಿತ್ರರಂಗವನ್ನ ಶ್ರೀಮಂತಗೊಳಿಸಿದ ಅವರ ಸಾಧನೆಗೆ, ನೆನಪಿಗೆ ನನ್ನ ನಮನ.

ಗಿರೀಶ್ ಕಾರ್ನಾಡರ 'ಒಂದಾನೊಂದು ಕಾಲದಲ್ಲಿ' ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ನಂತರದ ೧೨ ವರ್ಷಗಳಲ್ಲಿ ಕನ್ನಡದ ಸುಮಾರು ೯೦ಕ್ಕೊ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.ಸೆಪ್ಟೆಂಬರ್ ೩೦, ೧೯೯೦ ರಂದು ಶಂಕರ್ ನಾಗ್ ರಸ್ತೆ ಅಪಘಾತದಲ್ಲಿ ಮರಣ ಹೊಂದಿದರು. ನಿಗೂಡ ರಹಸ್ಯ ಶಂಕರ್ ನಾಗ್ ಅಭಿನಯದ ಕೊನೆಯ ಚಿತ್ರ.  ಮುಂದೆ ಓದಿ »

ಕೌಮಾರೀ ಗೌರೀ ವೇಳಾವಳಿ

ಗೌರಿ ಹಬ್ಬ ಕನ್ನಡ ನಾಡಿನ ದೊಡ್ಡ ಹಬ್ಬ. ವರ್ಷಾವಧಿ ಹಬ್ಬಗಳಲ್ಲಿ ಅತಿ ಹೆಚ್ಚಿನ ಹಿರಿಮೆ ಇರುವ ಹಬ್ಬ. ಹೆಣ್ಣು ಮಕ್ಕಳಿರುವ ಮನೆಯಲ್ಲಂತೂ ಬಹಳ ಹೆಚ್ಚಾಯದ್ದೇ. ನಮ್ಮ ನೆರೆಯ ನಾಡುಗಳಲ್ಲಿ ಗೌರಿ ಹಬ್ಬಕ್ಕೆ ಅಷ್ಟು ಪ್ರಾಶಸ್ತ್ಯವಿಲ್ಲದ್ದೂ, ನಮ್ಮಲ್ಲಿ ಇರುವುದೂ ಏಕೆ ಎನ್ನುವುದು ನನಗೆ ಗೊತ್ತಿಲ್ಲ.

ನಾನು ಚಿಕ್ಕವನಾಗಿದ್ದಾಗ, ಮಳೆಗಾಲದ, ಅದರಲ್ಲೂ ಸೋನೆಮಳೆಗಾಲದಲ್ಲಿ ಬರುವ ಈ ಹಬ್ಬಗಳ ಮುನ್ನಾದಿನ, ಅಷ್ಟಾಗಿ ದುರಸ್ತಿಯಲ್ಲ ರಸ್ತೆಯ ಆಚೀಚೆ ಕುಳಿತ ವ್ಯಾಪಾರಸ್ಥರ  ನಡುವೆ ಹೋಗಿ ಪೇಟೆ ಬೀದಿಯಲ್ಲಿ ಸುತ್ತಿ ಹೂವು ಹಣ್ಣು ಖರೀದಿಸುವ ಆ ಅನುಭವ ಮಾತ್ರ ಇನ್ನೂ ಮರೆತಿಲ್ಲ.

ಅದೆಲ್ಲಾ ಇರಲಿ; ಸಂಪದಿಗರೆಲ್ಲರಿಗೂ ಹಬ್ಬಗಳು ಚೆನ್ನಾಗಿ ಕಳೆಯಲಿ ಎನ್ನುವ ಹಾರೈಕೆಗಳೊಂದಿಗೆ ಒಂದು ಒಳ್ಳೆ ಹಾಡನ್ನು ಕೇಳಿಸಹುದು ಎನ್ನಿಸಿತು.  ಮುಂದೆ ಓದಿ »

ಬಾಡಿಗೆ ಮನೆ

ನಾನು ಚಿಕ್ಕವನಾಗಿದ್ದಾಗಿನ ಮಾತು. ತಿಂಗಳು ತಿಂಗಳೂ ಮನೆಗೆ ಬರುವ ಮಯೂರವನ್ನು ಓದಲು ನಾನು ಕಾಯುತ್ತಿರುತ್ತಿದ್ದೆ. ಅದರಲ್ಲಿ ಬರುತ್ತಿದ್ದ ಸಣ್ಣ ಕಥೆಗಳು ಸೊಗಸಾಗಿರುತ್ತಿದ್ದವು. ಕೆಲವೊಮ್ಮೆ ನೀಳ್ಗತೆಗಳೂ ಪ್ರಕಟವಾಗುತ್ತಿದ್ದವು. ಟಿ.ಕೆ.ರಾಮರಾವ್ ಮೊದಲಾದವರ ಕುತೂಹಲಕಾರಿ ಕಥೆಗಳು ಎರಡು ಮೂರು ಕಂತುಗಳಲ್ಲಿ ಬರುತ್ತಿದ್ದವು.  ಮುಂದೆ ಓದಿ »

ಜಿ ಟಿ ಎನ್ ಹಾಗೂ ನೆನಪುಗಳು

ನೆನ್ನೆ ಸಂಜೆ ಸಂಪದ ನೋಡಿದಾಗ ಕಂಡದ್ದು ಇದು.

ಇಸ್ಮಾಯಿಲ್ ಬರೆದ ಅತೀ ದುಃಖದ ಸಮಾಚಾರ.

ಜಿಟಿಎನ್ ಇನ್ನಿಲ್ಲ.

ಅವರ ಆತ್ಮಕ್ಕೆ ಶಾಂತಿ ಸಿಗಲಿ ಅನ್ನಲೇ? ಅದು ಕೇವಲ ಔಪಚಾರಿಕವಾಗುತ್ತೆ. ಅಷ್ಟೇ.

ಕನ್ನಡದಲ್ಲಿ ವೈಜ್ಞಾನಿಕ ಬರಹಗಳು ಎಂದಾಗ ಮೊತ್ತಮೊದಲು ಮನಸ್ಸಿಗೆ ಬರುವ ಹೆಸರೇ ಜಿಟಿನಾರಾಯಣರಾಯರದ್ದು.  ಸುಧಾ ಮೊದಲಾದ ಪತ್ರಿಕೆಗಳಲ್ಲಿ ಅವರ ಹಲವು ಬರಹಗಳು ಬೆಳಕು ಕಾಣುತ್ತಿದ್ದವು.

ಆಗ ಪ್ರಕಟವಾಗುತ್ತಿದ್ದ ಕನ್ನಡ ವಿಶ್ವಕೋಶ ಸ್ವಂತಕ್ಕೆ ಕೊಳ್ಳಲು ಬೆಲೆ ಕೈಗೆಟುಕುವಂತಿರಲಿಲ್ಲ.  ಲೈಬ್ರರಿಯಲ್ಲಿ ಸಿಗುವುದರ ಮಾತಂತೂ ಸ್ವಲ್ಪ ಕಷ್ಟವೇ! ಮತ್ತೆ ಐದನೇ ತರಗತಿಯವರೆಗೆ ಇಂಗ್ಲಿಷ್ ಕಲಿತಿಲ್ಲದ ಕಾರಣ ಎನ್ಸೈಕ್ಲೋಪಿಡಿಯಾ ಬ್ರಿಟಾನಿಕಾ ಅಂತಾಹವಂತೂ ನನಗೆ ಸ್ವಲ್ಪ ದೂರವೇ. ಇದೆಲ್ಲಾ ಸೇರಿ, ನಾನು  ಜಿಟಿಎನ್ ಅವರ ಬರಹಗಳು ಎಲ್ಲಿ ಕಂಡರೂ ತುಂಬ ಆಸಕ್ತಿಯಿಂದ ಓದುತ್ತಿದ್ದೆ.  ಮುಂದೆ ಓದಿ »

ನೆನಪುಗಳು, ನೆನಪಿನಂಗಳದ ಹೊರಗೆ

ಸಣ್ಣ ಮನೆ, ಆಗ. ಬೆಳಗಾದರಾಯ್ತು, ಅಪ್ಪ ಸ್ವಿಚ್ ಆನ್ ಮಾಡಿದ ರೇಡಿಯೋ ನಮ್ಮೆಲ್ಲರನ್ನೂ ಎಚ್ಚರಿಸಿಬಿಡುತ್ತಿತ್ತು. ಪಿಟೀಲು ಚೌಡಯ್ಯನವರ ವಯೋಲ ಟ್ಯೂನು ನಮಗೆಲ್ಲ ಸುಪ್ರಭಾತ. ನಂತರ ರೇಡಿಯೋ ವಂದೇ ಮಾತರಂ ಗುನುಗುತ್ತಿದ್ದರೆ ನಮಗೆಲ್ಲ ಮುಖ ತೊಳೆಯದೆಯೇ ಫ್ರೆಶ್ ಆದಂತೆ! (ಆದರೂ ಮುಖ ತೊಳೆಯದಿದ್ದರೆ ಕಾಫಿ ಸಿಗೋದಿಲ್ಲ ಅನ್ನೋ ಕಾರಣಕ್ಕೆ ಕಣ್ಣು ಮುಚ್ಚಿಕೊಂಡೇ ಹಲ್ಲುಜ್ಜಿ ಬರುತ್ತಿದ್ದೆ).
ಅದಾಗಿ ಅಡುಗೆ ಮನೆಯಲ್ಲಿ ಗೋಡೆಗೊರಗಿ, ಕಾಲು ಚಾಚಿ ನೆಲದ ಮೇಲೆ ಕುಳಿತು ನಾನು ನಮ್ಮಣ್ಣ ಅಮ್ಮನ ಜೊತೆ ಮೆಲ್ಲನೆ ಮಾತನಾಡುತ್ತಿರುವಂತೆ ಸರಿಯಾಗಿ ರೇಡಿಯೋಲಿ ಸಿನಿಮಾ ಹಾಡುಗಳು ಪ್ರಾರಂಭವಾಗಿಬಿಟ್ಟಿರುತ್ತಿದ್ದವು. ನಾವು ಅಮ್ಮನ ಹತ್ತಿರ ಹಠ ಮಾಡಿ ಕಾಫಿಗೆ ಸಿಕ್ಕಾಪಟ್ಟೆ ಸಕ್ಕರೆ ಹಾಕಿಸಿಕೊಂಡು ಮೆಲ್ಲನೆ ಸಿನಿಮಾ ಹಾಡುಗಳನ್ನು ಕೇಳುತ್ತ ಚಮ್ಮಚದಲ್ಲಿ ಕಾಫಿ ಕುಡಿಯುತ್ತಿರುವಂತೆ (ಅಥವ ತಿನ್ನುತ್ತಿರುವಂತೆ) ಅತ್ತ ಕಡೆ ಅಕ್ಕ ಇನ್ನು ಮುಸುಕು ಹೊದ್ದಿಕೊಂಡು ಮಲಗಿರುತ್ತಿದ್ದಳು!

ಅದ್ಯಾಕೋ ವರ್ಷಗಳು ಕಳೆದಂತೆ, ಅಪ್ಪ ನಲವತ್ತರ ಬೌಂಡರಿ ದಾಟಿದಂತೆ ಚೌಡಯ್ಯನವರ ಟ್ಯೂನು ಹಾಗು ಸಿನಿಮಾ ಹಾಡುಗಳು ಹೋಗಿ ನಿಜವಾದ ಸುಪ್ರಭಾತ ಹಾಗೂ ಭಕ್ತಿ ಗೀತೆಗಳು ಶುರುವಾದವು (ಅಷ್ಟರಲ್ಲಿ ನಮ್ಮ ಮನೆಯಲ್ಲೊಂದು ಟೇಪ್ ರೆಕಾರ್ಡರ್ರು, ಜೊತೆಗೆ ನೂರಾರು ಕ್ಯಾಸೆಟ್ಟುಗಳು ಬಂದುಬಿಟ್ಟಿದ್ದವು. ರೇಡಿಯೋ ಕಡಿಮೆಯಾಗಿತ್ತು). ಆಗಲೂ ನಮಗೆ ಸಿನಿಮಾ ಹಾಡುಗಳು ಕೇಳಲು ಸಿಗುತ್ತಿದ್ದವು. ನಮ್ಮ ತಂದೆಯವರು ಇನ್ನೂ 'ತರುಣ'ರಿದ್ದಾಗ ಕೊಂಡಿದ್ದ ಕ್ಯಾಸೆಟ್ಟುಗಳು ಒಂದು ಡಬ್ಬದಲ್ಲಿ ಇನ್ನೂ ಇದ್ದವು. ಅವುಗಳಲ್ಲಿ ಸಿನಿಮಾ ಹಾಡುಗಳಿರುತ್ತಿದ್ದವು. ಉಳಿದಂತೆ ಭಕ್ತಿ ಗೀತೆಗಳೆ. ರೆಕಾರ್ಡರ್ರು ಕೈಗೆ ಸಿಕ್ಕಾಗಲೆಲ್ಲ ಆ ಕ್ಯಾಸೆಟ್ಟುಗಳನ್ನು ಹಾಕಿ ಕೇಳೋದೇ ಮಜ. ಕೆಲವು ಹಳೇ ಕ್ಯಾಸೆಟ್ಟುಗಳು ಸರಿಯಾಗಿ ಪ್ಲೇ ಆಗದೆ ಮೆಲ್ಲ ಮೆಲ್ಲನೆ ಅಪಸ್ವರ ಹಾಡುತ್ತಿದ್ದವು. ಅದನ್ನು ಕೇಳಿ ಹೋ ಅನ್ನೋದು. ಆಗೀಗ ಒಂದೊಂದು ಬಹಳ ಹಳೆಯ ಹಾಡುಗಳು ನಾವು ಹಾಕಿದ ಕ್ಯಾಸೆಟ್ಟಿನಿಂದ ಶುರುವಾದಾಗ ಅಮ್ಮ ಕೂಡ ಅಡುಗೆ ಮನೆಯಿಂದ ಆಚೆ ಬಂದು ಒಂದೆರಡು ಕ್ಷಣ ಕೇಳಿಸಿಕೊಂಡು "ಇದು ಕಲ್ಪನಾ ಮಾಡಿರೋ ಚಿತ್ರದ್ದು", "ಇದು ಘಂಟಸಾಲಾ ಹಾಡಿರೋದು", ಇದು ಆ ಚಿತ್ರದ್ದು, ಇದು ಈ ಚಿತ್ರದ್ದು ಅಂತೆಲ್ಲ ನೆನಪಿಸಿಕೊಂಡು ಮರುಕ್ಷಣ ಕೆಲಸವಿದೆಯೆಂದು ಹೇಳಿ ಒಳಗೆ ಹೋಗಿಬಿಡುತ್ತಿದ್ದರು ("ಈ ಹಾಡುಗಳು ಎಷ್ಟೊಂದು ಇಷ್ಟ ಅಮ್ಮನಿಗೆ - ಅಡುಗೆ ಆಮೇಲೆ ಮಾಡಿಕೊಳ್ಳಬಹುದು, ಅಡುಗೆ ಬಿಟ್ಟು ಬಂದು ಕೇಳಬಾರದ?" ಅಂತ ಆಗ ನನಗನ್ನಿಸುತ್ತಿತ್ತು. ಈಗ ಅದರ ಹಿಂದಿದ್ದ ತುಡಿತ ಚೆನ್ನಾಗಿ ಅರ್ಥವಾಗುತ್ತೆ)  ಮುಂದೆ ಓದಿ »

Syndicate content