ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.

— ಕನ್‌ಫ್ಯೂಷಿಯಸ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಬರವಣಿಗೆ

ಬರೆಯದವರ ಮನದ ತಲ್ಲಣ!

ಬರೆಯೋಣು ಅಂತ ಹೊರಟಾಗ ಏನೂ ಮನಸ್ಸಿಗೆ ಬಾರದೆ ಮತ್ತೆ ಯಾವಾಗಲೋ ಪುಸ್ತಕ ಹಿಡಿದು ಕುಳಿತಾಗ, ಫೋನಿನಲ್ಲಿ ಮಾತನಾಡುತ್ತಿರುವಾಗ ತಟ್ಟನೆ ಹೊಳೆಯುವುದು. ಆಗ ಬರೆಯಲಾಗದೆ ನಂತರಕ್ಕಿಟ್ಟು ಕೊನೆಗೆ ಏನೂ ಬರೆಯದೇ ಇರುವುದು ಒಂದು ವಿಚಿತ್ರ ರೀತಿಯದೇ ಆದ ತಮಾಷೆ.  ಮುಂದೆ ಓದಿ »

ಚರ್ಚೆ: ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ

[ಸಂಪದ ಕಾರ್ಯಕ್ರಮ]

ಮ್ಮದೇ ಸಮುದಾಯದವರನ್ನು ತಲುಪುವುದು ತುಂಬ ಕಷ್ಟ ಎನ್ನುವುದು ನಿಜವಾದ ಸಂಗತಿ. ನಾವೆಲ್ಲ ಬೆಳೆದು ಬಂದ ಜಗತ್ತು ಈಗ ನಮ್ಮನ್ನೆಲ್ಲ ಹತ್ತಿರ ತಂದಿರುವ ಅದೇ ಭಾಷೆಯ ಸುತ್ತ ಪೋಣಿಸಿದ್ದು. ಹೀಗಾಗಿಯೇ ನಾವುಗಳು ಇಲ್ಲಿದ್ದೇವೆ, ನಮ್ಮ ಕೆಲಸಗಳಲ್ಲಿ ಬಳಸುವ ಭಾಷೆ ಬೇರೆಯದ್ದಾದರೇನು, ನಮ್ಮ ಭಾಷೆಯ ನಂಟು ಬಿಟ್ಟಿಲ್ಲ! ಸೂಕ್ಷ್ಮ ರೇಖೆಯಂತಿರುವ ಈ "ಭಾಷೆ" ಎಂಬ ಬಂಧ ಬೇರೆ ಬೇರೆ ಆಸಕ್ತಿ, ಬೇರೆ ಬೇರೆ ಅಭಿಪ್ರಾಯಗಳ ಬುತ್ತಿಯನ್ನು ಕಟ್ಟಿ ತರುವ ನಮ್ಮನ್ನೆಲ್ಲ ಅದು ಹೇಗೆ ಹಿಡಿದಿಟ್ಟಿದೆ ಎಂಬುದು ಒಮ್ಮೊಮ್ಮೆ ಆಶ್ಚರ್ಯ ಹುಟ್ಟಿಸುತ್ತದೆ.
ಕಾರ್ಯಕ್ರಮದ ದಿನದಂದು ಕಂಡುಬಂದ ಮುಖಗಳು ಸಂಖ್ಯೆಯ ಲೆಕ್ಕದಲ್ಲಿ ನಮಗೆ ಕೊಂಚ ಬೇಸರ ಮೂಡಿಸಿದರೂ, ಆ ದಿನ "ಕನ್ನಡದಲ್ಲಿ ವಿಜ್ಞಾನ ಹಾಗು ತಂತ್ರಜ್ಞಾನ ಕುರಿತ ಬರವಣಿಗೆ"ಯ ಸುತ್ತ ಒಂದು ಉತ್ತಮ ಚರ್ಚೆ ನಡೆದದ್ದು ಖುಷಿ ಕೊಟ್ಟಿತು. ಉದ್ದೇಶ ಇದ್ದದ್ದು ಹೀಗೆ ಬರೆಯಲು ಇಂಟರ್ನೆಟ್ ಬಳಸುವುದು ಹೇಗೆ? ಮತ್ತು ತದನಂತರ ಇಂಟರ್ನೆಟ್ಟಿನಿಂದ ಹೊರಗೆ, ಇಂಟರ್ನೆಟ್ ವ್ಯಾಪ್ತಿಯಿಲ್ಲದೆಡೆಗೆ ಅದನ್ನು ವಿಸ್ತರಿಸುವುದು ಹೇಗೆ ಎನ್ನುವುದರ ಸುತ್ತ. ಚರ್ಚೆ ನಡೆದದ್ದು ಭಾನುವಾರ ೨೯, ೨೦೦೯, ಸೆಂಟರ್ ಫಾರ್ ಇಂಟರ್ನೆಟ್ ಎಂಡ್ ಸೊಸೈಟಿ, ಕನ್ನಿಂಗ್ಹಾಮ್ ರೋಡಿನಲ್ಲಿ.

ಅಂದು ನಾವು ಕನ್ನಿಂಗ್ಹಾಮ್ ರೋಡಿಗೆ ಹೊರಟು ನಿಂತಾಗ ನಮಗದು 'ಮತ್ತೊಂದು ಭಾನುವಾರ'. ಆದರೂ ಎಷ್ಟು ಜನ ಬರುತ್ತಾರೋ, ಯಾರು ಯಾರು ಬರುವರು ಎಂಬ ಕುತೂಹಲ ನಮಗೆ! ನಾವುಗಳು ಎಲ್ಲರಿಗೂ ಆಮಂತ್ರಣ ಕಳುಹಿಸಿದ್ದೇ ಕೊಂಚ ತಡವಾಗಿ! ಕಾರ್ಯಕ್ರಮದ ಬಗ್ಗೆ ತಿಳಿಸಲು ಒಂದು ವಾರ ಕೂಡ ಇರಲಿಲ್ಲ. ಅದಕ್ಕೆ ಸೇರಿಕೊಂಡಂತೆ ಮೂರು ದಿನ ರಜೆ ಬೇರೆ - ಯುಗಾದಿ, ಶನಿವಾರ ಮತ್ತು ಭಾನುವಾರ!

ಆದರೆ ಆ ಭಾನುವಾರ ವಿಶೇಷ ದಿನವೆನಿಸಿದ್ದು ಹೌದು. ನಮ್ಮ ನೆಚ್ಚಿನ ವಿಷಯಗಳು - ತಂತ್ರಜ್ಞಾನ, ಕನ್ನಡ ಇವುಗಳೊಡನೆ - ಅಂತರ್ಜಾಲ ಕೂಡ ಬೆರೆತದ್ದಲ್ಲದೆ ಅವುಗಳ ಕುರಿತು ಉತ್ತಮ ಚರ್ಚೆ ನಡೆದದ್ದು ನಮ್ಮೆಲ್ಲರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುವ ನಿಮಿಷಗಳು.  ಮುಂದೆ ಓದಿ »

ಹೊರಟಿದೆ ಎತ್ತ, ನಮ್ಮ ಸಾಹಿತ್ಯ?

ಕನ್ನಡದಲ್ಲಿ ಕಾವ್ಯ ಸತ್ತಿದೆ.

ಇದರರ್ಥ ಕವಿತೆಗಳನ್ನು ಬರೆಯುವವರು ಇಲ್ಲವೆ೦ದಲ್ಲ. ಅವರ ಸ೦ಖ್ಯೆ ಮೊದಲಿಗಿ೦ತ ಹೆಚ್ಚಾಗಿದೆ. ಆದರೆ ಅವರು ಬರೆದಿದ್ದನ್ನೆಲ್ಲಾ ಕವಿತೆ ಎ೦ದು ಒಪ್ಪಿಕೊಳ್ಳುವುದು ಕಷ್ಟ. ಅದಕ್ಕೆ ಹೇಳಿದ್ದು ಕನ್ನಡದಲ್ಲಿ ಕಾವ್ಯ ಸತ್ತಿದೆ ಎ೦ದು.  ಮುಂದೆ ಓದಿ »

ನುಡಿ ಚಿತ್ರ ಬರೆಯಲು ಕಲಿತಿದ್ದು

ಒಂದೆರಡು ಘಟನೆಗಳನ್ನು ಹೇಳುವ ಮೂಲಕ ವಿಷಯಕ್ಕೆ ಬರುವುದು ಸುಲಭ ಅನ್ನಿಸುತ್ತಿದೆ.

ಪತ್ರಿಕೋದ್ಯಮಕ್ಕೆ ಬಂದ ಪ್ರಾರಂಭಿಕ ದಿನಗಳವು. ಅಪರಾಧ ಸುದ್ದಿಯನ್ನು ಬರೆದು ಅನುಭವವಿದ್ದ ನನ್ನನ್ನು, ನುಡಿ ಚಿತ್ರದತ್ತ ಹೊರಳಿಸಲು ಮಿತ್ರ ಆನಂದತೀರ್ಥ ಪ್ಯಾಟಿ ಯತ್ನಿಸುತ್ತಿದ್ದರು.  ಮುಂದೆ ಓದಿ »

ಬರವಣಿಗೆಯ ಕನ್ನಡದ ದಿಕ್ಕು

ಕನ್ನಡದಲ್ಲಿ ಸಂಸ್ಕೃತದ ಅತಿಬಳಕೆಯಿಂದ , ಸಂಸ್ಕೃತದ ಕಾಗುಣಿತ(ಸ್ಪೆಲ್ಲಿಂಗ್ಸ್ ) ನಿಂದಾಗಿ ಹಳ್ಳಿಗರಿಗೆ ಮತ್ತು ಸಂಸ್ಕೃತದ ಪರಿಚಯ ಇಲ್ಲದವರಿಗೆ ( ಅಂದರೆ ’ಕೆಳ’ ಎಂದು ತಿಳಿದಿರುವ ಜಾತಿಯ ಜನಕ್ಕೆ) ತೊಂದರೆ ಆಗಿದೆಯಂತೆ . ಅದಕ್ಕಾಗಿ ಮಹಾಪ್ರಾಣ , ಷ ಇತ್ಯಾದಿ ಅಕ್ಷರಗಳನ್ನು ತೆಗೆದು ಹಾಕಿ ಎಂಬ ವಾದ ಒಂದೆಡೆ ಎದ್ದಿದೆ .  ಮುಂದೆ ಓದಿ »

Syndicate content