ಒಂಟಿತನ
ಹೀಗೇ ಅತ್ತು, ಸುಮ್ಮನಾಗುವ ಹೊತ್ತು!
June 3, 2008 - 6:46pm — pallavi.dharwadನಿನ್ನೆ ಬೆಳಿಗ್ಗೆಯಿಂದ ಏಕೋ ಖಿನ್ನತೆ.
ಒಂದು ಸುತ್ತು ಅತ್ತು ಸುಮ್ಮನಾಗಿದ್ದರೂ ದುಃಖ ಮಡುಗಟ್ಟಿದಂತಿರುವ ಮೋಡ ಯಾವಾಗ ಬೇಕಾದರೂ ಅಳಲು ಸಿದ್ಧವಾಗಿದೆ. ಹೊರಗೆ ಮಂಕು ಆಕಾಶ. ವಸುಂಧರೆಗೆ ಬೈದ ನಾಚಿಕೆಯೇನೋ, ಸೂರ್ಯ ತಲೆ ಮರೆಸಿಕೊಂಡಿದ್ದಾನೆ. ಹಸಿರು ತುಂಬಿದ ರಸ್ತೆಗಳು ಮೋಡದ ಕಣ್ಣೀರಿಗೆ ತೋಯ್ದು ಕಪ್ಪಾಗಿ ಕಾಣುತ್ತಿವೆ. ಒಳಗೆ ಅವ್ವ ಒಗ್ಗರಣೆ ಕೊಡುವ ಸದ್ದು. ಗಾಳಿಯಲ್ಲಿ ಹಿತವಾದ ಘಮ. ಆಕಾಶವಾಣಿ ಧಾರವಾಡದಲ್ಲಿ ಚೌಡಿಕೆ ಪದದ ರಣನ. ಅಪ್ಪ ಪೇಪರ್ ಓದುತ್ತಿರಬೇಕು. ನಾನು ಮೌನವಾಗಿ ಕೂತು ಖಿನ್ನತೆಯನ್ನು ಅಕ್ಷರಗಳನ್ನಾಗಿಸುತ್ತಿದ್ದೇನೆ.
ಏಕೋ ಬೇಸರ. ಅಡಿಗರು ನೆನಪಾಗುತ್ತಾರೆ. ’ಮತ್ತದೇ ಬೇಸರ, ಏನೋ ಕಾಡಲು, ಏನೋ ತೀಡಲು ಹೊತ್ತಿ ಉರಿವುದು ಕಾತರ’ (ಪೂರ್ತಿ ನುಡಿ ನೆನಪಾಗುತ್ತಿಲ್ಲ). ನನ್ನ ಮನದಲ್ಲಿ ಬೇಸರವೊಂದಿದೆ. ಆದರೆ, ಕಾತರ ಇಲ್ಲವಾದಂತಿದೆ.
ಐ-ಪಾಡ್‌ನಿಂದ ಸೋಸಿ ಬರುತ್ತಿದೆ ’ಭಾವಸಂಗಮ’ದಲ್ಲಿಯ ಕವನ. ’ದೂರದೊಂದು ತೀರದಿಂದ, ತೇಲಿ ಪಾರಿಜಾತ ಬಂಧ, ದಾಟಿ ಬಂತು ಬೇಲಿ ಸಾಲ, ಮೀಟಿ ಹಳೆಯ ಮಧುರ ನೋವ’. ಮನಸ್ಸಿನೊಳಗಿಂದ ಖಿನ್ನತೆ ಮತ್ತಷ್ಟು ಒಸರುತ್ತದೆ. ’ಎಲ್ಲಿ ಜಾರಿತೋ ಮನವು...!’ ಮುಂದೆ ಓದಿ »





RSS: