23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

cliche ಹಾಸ್ಯ

ಮದುವೆ ಕರೆಯೋಲೆ ತಯಾರಿ !!

June 24, 2008 - 11:17pm
ಗಣೇಶ

ಹರಿ : ಹಲೋ ಗಣೇಶ್, ಸ್ವಲ್ಪ ಬಿಡುವು ಮಾಡಿಕೊಂಡು ಟೌನ್‌ಹಾಲ್ ಎದುರು ಬರಲು ಸಾಧ್ಯವೇ ?

 ನಾನು : ಅದಕ್ಕೇನಂತೆ.. .. .. ಏನು ವಿಷಯ?

ಹರಿ : ಏನಿಲ್ಲಾ.. .. ಮಹೇಶನಿಗೆ ಕನ್ನಡದಲ್ಲೊಂದು ಮದುವೆ ಕರೆಯೋಲೆ ತಯಾರಿ ಮಾಡೋಣವೆಂದು ನಾವೆಲ್ಲಾ ಇಲ್ಲಿ ಸೇರಿದ್ದೇವೆ. ಹಂಸಾನಂದಿಯವರು ಗ್ರಹ ನಕ್ಷತ್ರಗಳ ಕಡೆ ಗಮನಿಸುತ್ತಿದ್ದಾರೆ. ಸುನಿಲ್,ಸವಿತೃ,ವೈಭವ್,ಕನ್ನಡಕಂದ.. ... ಎಲ್ಲಾ ಸೇರಿ ಕನ್ನಡದಲ್ಲಿ ಕರೆಯೋಲೆ ತಯಾರಿ ಮಾಡುತ್ತಿದ್ದಾರೆ..

ನಾನು : ಫೈನ್. ನಾನು ಸಹ ೨ ಕರಡು ಪ್ರತಿ ಬರೆದಿದ್ದೇನೆ.ಅದನ್ನೂ ತರುತ್ತೇನೆ.

ಹರಿ : ಅಯ್ಯೋ..ಬೇಡ ಬೇಡ..ದಯವಿಟ್ಟು ತರಬೇಡಿ.ಕರೆಯೋಲೆ ಸಾಂಪ್ರದಾಯಿಕವಾಗಿರಬೇಕು ಎಂದು ಹೇಳಿದ್ದರಿಂದ, ಅದನ್ನು ಗಮನಿಸಲು ಒಬ್ಬರು ಹಿರಿಯರು ಬೇಕಿತ್ತು ಅಷ್ಟೇ. ಬೇಗ ಬನ್ನಿ... Read more about ಮದುವೆ ಕರೆಯೋಲೆ ತಯಾರಿ !!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರೀ ಮತ್ತು ಸಾರೀ ಮತ್ತು ಸುರೆ

July 18, 2008 - 11:42pm
ಗಣೇಶ
ಸಹವಾಸ ದೋಷ. ಯಾವುದೇ ಶಬ್ದ ಸಿಕ್ಕಿದರೂ- ಅದು ಹೇಗೆ ಬಂದಿರಬಹುದು? ಕನ್ನಡವೋ? ಇಂಗ್ಲೀಷೋ? ಯಾಕೆ ಕನ್ನಡಕ್ಕೆ ಬಂತು? ಯಾರು ತಂದರು? ಇದೇ ಕೆಲಸ ಈಗ ಸುರುಮಾಡಿದ್ದೇನೆ. ಹೆಂಡತಿ ‘ರೀ..’ ಎಂದು ಕರೆದರೂ..ಉತ್ತರ ಕೊಡುವ ಬದಲು- ‘ರೀ’ ಇಂಗ್ಲೀಷ್‌ನಿಂದ ಬಂದುದೋ? ಸಂಗೀತದಿಂದಲೋ? ‘ಸಾ..ರೀ..’ ಶಾಸ್ತ್ರೀಯ ಸಂಗೀತಕ್ಕೂ ಸಾರಿ(saree)ಗೂ ಸಂಬಂಧವಿದೆಯೋ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಕ್ಕಾ..ಅಕ್ಕಾ..ನಾನೂ ಬತ್ತೀನಿ...

August 21, 2008 - 11:44pm
ಗಣೇಶ
ಅಕ್ಕ ಸಮ್ಮೇಳನಕ್ಕೆ ನಮ್ಮ ರಾಜಕಾರಣಿಗಳು ಮಜ ಮಾಡಲು ಹೋಗುತ್ತಾರೆಂದು ಪ್ರಚಾರ ಮಾಡುತ್ತಿದ್ದಾರೆ. ಯಾವ ಒಳ್ಳೆಯ ಕೆಲಸ ಮಾಡಲು ಹೊರಡುವಾಗಲೂ ಅಡ್ಡಕಾಲಿಡುವುದು ಕೆಲವರ ಅಭ್ಯಾಸ. ನಿಜ ಸಂಗತಿ ಅದಲ್ಲ.. ಹತ್ತಿರ ಬನ್ನಿ.. ಗುಟ್ಟಿನ ವಿಚಾರ.. ಇನ್ನೂ ಹತ್ತಿರ ಬನ್ನಿ.. ಶ್.. ಬುಶ್‌ಗೆ ಕೇಳಿಸೀತು. ಅಪರೇಷನ್!! ಹೌದೂ. ‘ಆಪರೇಷನ್ ಅಕ್ಕ’!!
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬ್ರಹ್ಮಾಂಡ ಸೃಷ್ಠಿ!!

September 11, 2008 - 4:38pm
ಗಣೇಶ
ಬ್ರಹ್ಮಾಂಡ ಸೃಷ್ಠಿ ಹೇಗಾಯಿತು ಎಂಬ ಒಗಟನ್ನು ನಮ್ಮಂತಹ ಸೈಂಟಿಸ್ಟ್‌ಗಳನ್ನು ಬಿಟ್ಟು ಮಾಡಿದರೆ ನೀರಲ್ಲಿ ಹೋಮ ಮಾಡಿದಂತೆ. ಆದರೆ ನಾವೂ ಸುಮ್ಮನೆ ಕುಳಿತು ಕೊಳ್ಳುವುದಿಲ್ಲ. ೫೦ ಬಿಲಿಯನ್ ಡಾಲರುಗಳ ಯೋಜನೆಯ ಕರಡು ಪ್ರತಿ ಸಿದ್ಧವಾಗುತ್ತಿದೆ. ಅದರ ಬಗ್ಗೆ ಸಂಕ್ಷಿಪ್ತವಾಗಿ ಹೇಳುವೆನು:-
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಾಂಬು ತಯಾರಿಸುವ ವಿಧಾನ

September 15, 2008 - 11:57pm
ಗಣೇಶ
ಛೇ..ನೀವು.. ನೀವು!!..ಬಾಂಬು ತಯಾರಿಸುವುದು ಹೇಗೆ ಎಂದು ಕಲಿಯಲು ಹೊರಟಿರಾ? ದೇವರೇ.. ಬೇಡಾ ಸ್ವಾಮಿ, ಕಣ್ಣಿಗೆ ಕಣ್ಣು, ಬಾಂಬಿಗೆ ಬಾಂಬು ಇದೆಲ್ಲಾ ನಮ್ಮ ಮಣ್ಣಿನ ಗುಣಕ್ಕೆ ಹೇಳಿಸಿದ್ದಲ್ಲ. ಬಾಂಬಿಗೆ ತಲೆ ಕೊಟ್ಟೇವು ಹೊರತು ಭಯೋತ್ಪಾದಕರ ಮೇಲೆ ಮಾತಿನ ಬಾಂಬು ಸಹ ಎಸೆಯೆವು. ಮುಂದಿನ ಸಲ ಬಾಂಬ್ ಸ್ಫೋಟಕ್ಕಿಂತ ಮೊದಲು ಸರಕಾರವೇ ಏನಾದರೂ ಮಾಡೀತೆಂದು ಕಾಯುವ ಕೆಲಸ ನಮ್ಮದು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಡ್ರೈವಿಂಗ್- ಮಜ,ತಲೆಬಿಸಿ ಇತ್ಯಾದಿ

October 23, 2008 - 12:03am
ಗಣೇಶ

ಐದನೇ ವಯಸ್ಸಿನಲ್ಲೇ ನನಗೆ ಡ್ರೈವಿಂಗ್ ಬರುತಿತ್ತು. ಬಸ್ ಬಿಡುತ್ತಿದ್ದೆ!! ಗಾಬರಿಯಾಗಬೇಡಿ. ಮನೆಯಲ್ಲಿದ್ದ ಹೊಲಿಗೆ ಮೆಷಿನ್‌ಏ ನನ್ನ ‘ಭಾರತ ಬಸ್’. ಈ ಡ್ರೈವಿಂಗ್ ಹುಚ್ಚು ಈಗಲೂ ಬಿಟ್ಟಿಲ್ಲ. ಪೆಟ್ರೋಲ್ ರೇಟ್ ಮತ್ತು ಟ್ರಾಫಿಕ್‌ನಿಂದಾಗಿ ಸ್ವಲ್ಪ ಕಮ್ಮಿಯಾಗಿದೆ.

ಬೆಂಗಳೂರು-ಮೈಸೂರು ರಸ್ತೆಯಲ್ಲಿ ಕೆಂಗೇರಿ ದಾಟಿದ ಮೇಲೆ ಎಕ್ಸಿಲರೇಟರ್ ಮೇಲೆ ಕಾಲಿಟ್ಟು ಹಾಯಾಗಿ ಮಲಗಿದರೂ ಮೈಸೂರು ತಲುಪಿರುತ್ತೀರಿ. ಅದೇ ಘಾಟ್ ರಸ್ತೆಯಲ್ಲಿ ವಾಹನ ಓಡಿಸುವ ಮಜವೇ ಬೇರೆ. Read more about ಡ್ರೈವಿಂಗ್- ಮಜ,ತಲೆಬಿಸಿ ಇತ್ಯಾದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆಮೀರ್‍ಗೆ ಧಿಕ್ಕಾರ

December 19, 2008 - 11:50pm
ಗಣೇಶ
ಮೊನ್ನೆ ಏನಾಯ್ತು ಗೊತ್ತಾ? ಬೆಳಗ್ಗೆ ಕಣ್ಣು ತೆರೆಯುತ್ತಿರುವಂತೆ ಎದುರಿಗೆ ಭಯೋತ್ಪಾದಕ !! ಯಾವಾಗಲೂ ಭಯೋತ್ಪಾದಕಿಯನ್ನು ನೋಡಿ ಅಭ್ಯಾಸವಿದ್ದುದರಿಂದ ನಾನು ಭಯಬೀಳಲಿಲ್ಲ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಿಂದೂ (ಇಂಡಿಯಾ) ವಿರೋಧಿ ಪಕ್ಷ

December 30, 2008 - 11:50pm
ಗಣೇಶ

ಇದರಲ್ಲಿ ಮುಚ್ಚುಮರೆ ಇಲ್ಲ. ಜನತೆಯ ಪಕ್ಷ, ಬಡವರ ಪಕ್ಷ,ಭಾರತೀಯ ಜನತೆಯ ಪಕ್ಷ ಇತ್ಯಾದಿ ಎಲ್ಲಾ ಪಕ್ಷಗಳನ್ನು ನೋಡಿದ್ದೀರಿ. ಹೇಳುವುದು ಒಂದು, ಮಾಡುವುದು ಇನ್ನೊಂದು.. ನಮ್ಮದು ಅಕ್ಷರಶಃ ಹಿಂದೂ (ಇಂಡಿಯ) ವಿರೋಧಿ ಪಕ್ಷ.ಅಥವಾ HIV ಪಕ್ಷ. HIV ಯಂತೆ ದೇಶಾದ್ಯಂತ ಬೇಗನೆ ಹರಡುವುದು ಎಂಬ ಗ್ಯಾರಂಟಿ ನಮಗೆ ಇದೆ. Read more about ಹಿಂದೂ (ಇಂಡಿಯಾ) ವಿರೋಧಿ ಪಕ್ಷ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೃತಿಕ್ ನನ್ನ ಮಗನ ಫ್ಯಾನ್..

January 22, 2009 - 4:13pm
ಗಣೇಶ
‘ಹೃತಿಕ್ !! ಅಲ್ರೀ..ನಿಮ್ಮ ಮಗ..’ನನ್ನ ಮಾತನ್ನು ಅರ್ಧಕ್ಕೆ ಕತ್ತರಿಸಿ (ಈ ಹೆಂಗಸರು ನಮಗೆ ಪೂರ್ತಿ ಮಾತನಾಡಲು ಅವಕಾಶ ಎಲ್ಲಿ ಕೊಡುತ್ತಾರೆ) “ ಹೃತಿಕ್ ಅಂಕ್‌ಲ್, ಕೃಶ್ ಫಿಲ್ಮ್ ನೋಡಿಲ್ವಾ ಅಂಕ್‌ಲ್, ಡಿಟೋ ಚಿಂಟೂ ತರಾನೆ ಡ್ಯಾನ್ಸ್ ಮಾಡ್ತಾನೆ... ಅಂಕ್‌ಲ್..... :).. ..ಅಂಕ್‌ಲ್ :( .. ;) ..ಅಂಕ್‌ಲ್.. }:) .. :D ... ”
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸರ್ವಗುಣ ಸಂಪನ್ನ ಕನ್ಯೆ.

January 29, 2009 - 6:29pm
anil.ramesh
ಒಬ್ಬ ಮದುವೆ ವಯಸ್ಸಿನ ಯುವಕ ಕೇಳಿದ "ಮಾನ್ಯರೇ, ನಿಮ್ಮ ಮಗಳು ಒಳ್ಳೇ ಗುಣಗಳನ್ನು ಹೊಂದಿರುವುದರ ಜೊತೆಗೆ ನೋಡಲು ತುಂಬಾ ಸುಂದರವಾಗಿದ್ದಾಳಂತೆ. ನಿಜವಾ?"

ಹುಡುಗಿಯ ತಂದೆ ಉತ್ತರಿಸಿದರು "ಹೌದು! ನನ್ನ ಮಗಳು ಸುಂದರವತಿ, ಜೊತೆಗೆ ಗುಣವತಿ"

"ಆದರೆ, ನಿಮ್ಮ ಮಗಳು ಅಡುಗೆ ಮಾಡಿ, ಮನೆಯನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಾಳೆಯೇ?"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚೋಕರೀ ಫ್ರಂ ಉಸ..ಡಿಫರೆಂಟ್ ಸಿನೆಮಾ!!

February 3, 2009 - 11:55pm
ಗಣೇಶ

ಹೌದು. ಇದೂ ಡಿಫರೆಂಟ್ ಸಿನಿಮಾಗಳ ಸಾಲಲ್ಲಿ ಒಂದು ಸಿನಿಮಾ. ನಾಯಕಿ, ಕೋಟ್ಯಾಧೀಶ...(ಇಂತಹ ಕತೆಗಳು ಸಾವಿರಾರು ಬಂದಿದೆ ಎಂದಿರಾ?.. ಪೂರ್ತಿ ಕೇಳಿ..)

ಅಮೆರಿಕಾ(USA-ಉಸಾ)ಅಧ್ಯಕ್ಷನ ಒಬ್ಬಳೇ ಮಗಳು!! ಹೇಗಿದೆ :) ? -ನಮ್ಮದು ಡಿಫರೆಂಟೂ.. ನಾಯಕಿ,ಟು ಪೀಸ್ ಡ್ರೆಸ್‌ನಲ್ಲಿ.. ‘ಸೂರ್ಯಗ್ರಹಣ’ದ ಬಗ್ಗೆ (ಡಿಫರೆಂಟೂ) ಹಾಡು ಹೇಳುತ್ತಾ.., ಪೆಂಗ್ವಿನ್ ಜತೆ (ಅಪ್ಪ ಅಂಟಾರ್ಟಿಕಾದಿಂದ ತಂದು, ಮಗಳಿಗೆ ೧೮ನೇ ವರ್ಷಕ್ಕೆ ಉಡುಗೊರೆ ಕೊಟ್ಟ ಪೆಟ್ ಪ್ರಾಣಿ).. ಎಮ್.ಜಿ.ರೋಡಲ್ಲಿ ಬರುತ್ತಾಳೆ.. ಬೆವರಿಂದ ಪೂರ್ತಿ ಒದ್ದೆ.. ಕ್ಯಾಮರ ಗ್ರಹಣದಿಂದ ಹಿಡಿದು ಎಲ್ಲೆಲ್ಲಾ ಏಂಗ್‌ಲ್‌ಗಳು ಇಲ್ಲವೋ ಅಲ್ಲೆಲ್ಲಾ ಓಡಾಡುತ್ತದೆ.

ಈಗ ನಾಯಕನ ಎಂಟ್ರಿ.. ನಾಯಕ ಡಾಕ್ಟ್ರು?..ಊಹೂಂ

ಇಂಜಿನಿಯರ್? ಸಾಫ್ಟ್ವೇರ್? ..ಊಹೂಂ Read more about ಚೋಕರೀ ಫ್ರಂ ಉಸ..ಡಿಫರೆಂಟ್ ಸಿನೆಮಾ!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪಬ್‌ಗೆ ಹೊರಟ ಚಲುವಿಯರೆ,

February 10, 2009 - 11:38pm
ಗಣೇಶ
ಪ್ರೇಮಿಗಳ ದಿನಕ್ಕೆ ಇನ್ನೆರಡೇ ದಿನ ಬಾಕಿ ಇದೆ. ಫೆ.೧೪ ಈ ವರ್ಷದಿಂದ ಪ್ರೇಮಿಗಳ ದಿನದ ಬದಲು ಪಬ್ ದಿನವಾಗಿ ಆಚರಿಸಲ್ಪಡುವುದು. ಪಬ್ (ನಮಗೆ) + ವರಿ (ರಾಮಸೈನ್ಯಕ್ಕೆ)= ಪಬ್ರವರಿ. ಹುಡುಗೀರೆ, ‘ಪಬ್‌ಗೆ ಹೋಗೋಣ ಬನ್ನಿರೇ ರೇಣುಕಮ್ಮ ಹೇಳಿದಂತೆ ಮಾಡಿರೆ’ ಎಂದು ಹೊರಟ್ಟಿದ್ದೀರಿ ಸರಿ- ಅಲ್ಲಿ ಹೋದಾಗ ಏನು ಕುಡಿಯುವುದು? ಎಷ್ಟು ಕುಡಿಯುವುದು? ಯಾವ ರೀತಿ ಕುಡಿಯುವುದು?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಕ್ಕಿ ಹಾರುತಿದೆ ಹಾಡು ಕೇಳಿದಿರಾ?

March 14, 2009 - 12:07am
ಗಣೇಶ
ಹಕ್ಕಿ ಹಾರುತಿದೆ ಹಾಡು ಕೇಳಿದಿರಾ? -ಕೇಳೇ ಇರುತ್ತೀರಾ. ಆದ್ರೆ, ನಾನು ಹಾಡಿದ್ದು!? -ಹೇಗೆ ಕೇಳಲು ಸಾಧ್ಯ? ಮುಂದಿನ ಮೀಟಿಂಗ್‌ನಲ್ಲಿ (ನಿಮ್ಮೆಲ್ಲರ ಕೋರಿಕೆ ಮೇರೆಗೆ) ಹಾಡುವೆ.:) ನಾನು ಸ್ಕೂಲಲ್ಲಿರುವಾಗ ಈ ಹಾಡು ಹಾಡಲು-ಸುರುಮಾಡಿದರೆ.. ಚಪ್ಪಾಳೆಯೋ ಚಪ್ಪಾಳೆ! ಒನ್ಸ್ ಮೋರ್‌ಗಳ ಸುರಿಮಳೆ!!
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಡಬ್ಲ್ ಸೆಂಚುರಿ ಹೊಡೆದ ಅಶೋಕ್ ಸಂದರ್ಶನ

March 22, 2009 - 12:13am
ಗಣೇಶ
ಅಶೋಕ್ ಡಬಲ್ ಸೆಂಚುರಿ ಹೊಡೆದು ತ್ರಿಬ್‌ಲ್ಸೆಂಚುರಿಗೆ ಮುನ್ನುಗ್ಗುತ್ತಿದ್ದಾರೆ.. ನಾನೇ ಮೊದಲು ಅವರ ಸಂದರ್ಶನ ತೆಗೆದುಕೊಂಡರೆ ಹೇಗೇ.. ಅನಿಸಿತು. ಫೋನ್ ಮಾಡಿ ಕೇಳಿದೆ. ಮೊದಲ ಪತ್ರಿಕೆ ಬಂದು ಬೀಳುವ ಮೊದಲೇ ಬಂದರೆ ಮಾತ್ರ ಸಂದರ್ಶನ ಕೊಡುವೆ ಅಂದರು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಲವೇರಿಯಾ..ಪಬೇರಿಯಾ..

March 26, 2009 - 11:34pm
ಗಣೇಶ
‘ಸರ್ದಿ ಖಾಂಸೀ ನ ಮಲೇರಿಯಾ ಹುವಾ.. ಲವೇರಿಯಾ ಹುವಾ..ಲವೇರಿಯಾ ಹುವಾ..’ ಹಾಡು ನೆನಪಿದೆಯಾ? ಮಲೇರಿಯಾ- ಒಂದು ರೋಗ. ಲವೇರಿಯಾ?-ಲವ್ ಮಾಡುವವರನ್ನು ಬಿಟ್ಟು ಉಳಿದವರಿಗೆ ಅದು ರೋಗದಂತೆ ಕಾಣುವುದು. ಮಗ/ಮಗಳು ಲವ್ ಮಾಡುವುದು ಗೊತ್ತಾದ ಕೂಡಲೇ ‘ಕ್ರಿಮಿ’ ತರಹ ನೋಡುವರು. ಅಪ್ಪ, ಅಮ್ಮ, ಆಂಟಿಬಯೋದಿ(ಟಿ)ಕ್ ಸುರು..
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಳೆ ಪಾತ್ರೆ..ಹಳೆ ಕಬ್ಬಿಣ...

April 19, 2009 - 9:55pm
ಗಣೇಶ
ಹಳೆ ಪಾತ್ರೆ..ಹಳೆ ಕಬ್ಬಿಣ..ಹಳೆ ದೀಪ.. ಅರೆ ಓಯ್..ಹಾಡು ಹೇಳುತ್ತಾ ಇದ್ದರೆ ನನ್ನ ಕತೆ ಸುರುಮಾಡುವುದು ಯಾವಾಗ? ಈ ಹಳೇ ಐಟಮ್‌ಗಳು ಎಲ್ಲಿ ಸಿಕ್ಕಿದರೂ ಕೈಯಿಂದ ಉಜ್ಜುತ್ತಿದ್ದೇನೆ. ಹಳೇ ಬಾಟಲ್‌( :) ) ಗಳ ಬಿರಡೆ ತೆಗೆದು ನೋಡುತ್ತಿದ್ದೇನೆ. ಒಮ್ಮೆ ಜೀನೀ ನನ್ನ ಕೈವಶವಾದರೇ.. .. .. ಯಾಕೆ ಅಂತೀರಾ -‘ಸಮಾಜ ಸೇವೆಗೆ’ ನಗಬೇಡಿ..ಈ ಜನರೇ ಹೀಗೆ-
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಬ್ ನೆ ಬನಾದಿ ಮೀಸೆ

May 17, 2009 - 8:35pm
ಗಣೇಶ

ಹೇರ್‌ಸ್ಟೈಲ್ ಬದಲಿಸಿ ಮೀಸೆ ತೆಗೆದಾಗ ಹೆಂಡತಿಗೆ/ವಿಲನ್‌ಗೆ/ಬಾಸ್‌ಗೆ ಮಾತ್ರ ಗೊತ್ತಾಗದ ಅನೇಕ ಸಿನೆಮಾಗಳು ಬಂದಿವೆ.ಇತ್ತೀಚೆಗೆ ಬಂದ ಸಿನೆಮಾ 'ರಬ್ ನೆ ಬನಾದಿ ಜೋಡಿ'. ಅದರಲ್ಲಿ ಚಿತ್ರದಕೊನೆಯವರೆಗೆ ಹೀರೋಯಿನ್‌ ಮೀಸೆ ತೆಗೆದ ಶಾರುಕ್ ಖಾನ್ ಬೇರೇ ಅಂದು ತಿಳಿದಿದ್ದಳು. ಮೀಸೆ ಇದ್ದವನಿಗಿಂತ ಇಲ್ಲದವನನ್ನು ಬಹಳ ಇಷ್ಟಪಡುತ್ತಿದ್ದಳು. 

 ಕೆಲ ಹೀರೋಗಳು ಕತೆ, ನಿರ್ದೇಶಕರನ್ನೇ ಬದಲಿಸಿಯಾರು, ಆದರೆ ಕೂದಲಿಗೆ ಕತ್ತರಿ ತಾಗಿಸುವುದಿಲ್ಲ. ನಾನೂ ಹಾಗೇ ಇದ್ದೆ! ಕಿವಿಯಿಂದ ಕೆಳಗೆ ಇಳಿಬಿದ್ದ ನನ್ನ ಕೂದಲನ್ನು ಒಂದು ಇಂಚೂ ಜಾಸ್ತಿ ಕಟ್ ಮಾಡಲು ಬಿಡುತ್ತಿರಲಿಲ್ಲ.ಮೀಸೆ ಗಡ್ಡ ೨ ನಿಮಿಷಕ್ಕೊಮ್ಮೆಯಾದರೂ ಹೆಮ್ಮೆಯಿಂದ ಮುಟ್ಟುತ್ತಿದ್ದೆ. Read more about ರಬ್ ನೆ ಬನಾದಿ ಮೀಸೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.4 (7 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕದನ ಕುತೂಹಲ

November 21, 2009 - 8:18am
ಗಣೇಶ

ಬೆಳ್ಳಂಬೆಳಗ್ಗೆ ಬಿಟ್ಟಿ ಮನರಂಜನೆ!

ಯಾರಾದರೂ ಬಿಟ್ಟಾರಾ..?

ಹಿಂದಿನ ಮನೆಯಾಕೆ ತನ್ನ ಗಂಡನಿಗೆ ಜೋರುಮಾಡುತ್ತಿದ್ದಳು. ಎರಡೂ ಕಿವಿಯನ್ನು ಅತ್ಲಾಗೆ ತಿರುಗಿಸಿದೆ.

ಆಆಹಾಹಾ...ಅದೇನು ಸಂತೋಷ..

ರಸ್ತೆಯಲ್ಲಿ ಯಾರಾದರು ಇಬ್ಬರು ಏರುಸ್ವರದಲ್ಲಿ ಮಾತನಾಡಲು ಶುರುಮಾಡಲಿ..., ಜನರೊಂದಿಗೆ ನಾನೂ ನನ್ನ ಕೆಲಸವೆಲ್ಲಾ ಬದಿಗೊತ್ತಿ ಜಗಳ ನೋಡುತ್ತಿರುತ್ತೇನೆ.

ಏನೋ ಒಂದು ತರಹ ಖುಷಿ... Read more about ಕದನ ಕುತೂಹಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವ್ಯಾಕಾರಣ

December 2, 2009 - 12:11am
ಗಣೇಶ

ಸಂಪದದಲ್ಲಿ ನಾನು ವ್ಯಾಕಾರಣ ಪಾಠ ಸುರುಮಾಡುವ ಆಲೋಚನೆಯಲ್ಲಿದ್ದೇನೆ.

ಮೊದಲಿಗೆ ಒಂದು ಸಣ್ಣ ಕತೆ ಹೇಳಿ ನಂತರ ಪಾಠ ಸುರುಮಾಡುವೆನು-

ಒಂದು ಊರಲ್ಲಿ ಒಂದು ಸರಕಾರೀ ಸ್ಕೂಲ್ ಇತ್ತು. ಅಲ್ಲಿನ ಮಕ್ಕಳು ದಿನವೂ ಸ್ಕೂಲಿಗೆ ಹೊರಡುವ ಮೊದಲು ಲೆಕ್ಕ,ಗಣಿತ,ಸಮಾಜ ಪಾಠ ಕಲಿಸುವ ಗುರುಗಳು ರಜೆ ಮಾಡುವುದು ಬೇಡ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು.

ಯಾಕೆಂದರೆ-

ಅದೇ ಸ್ಕೂಲಿನ ಕನ್ನಡ ಗುರುಗಳು ಮತ್ತು ಇಂಗ್ಲೀಷ್ ಮೇಸ್ಟ್ರುಗಳಿಬ್ಬರಿಗೂ ಪಾಠ ಕಲಿಸುವುದರಲ್ಲಿ ಪೈಪೋಟಿ. ಉಳಿದ ಗುರುಗಳು ರಜೆ ಮಾಡಿದ್ದಾರೆಂದು ತಿಳಿದ ಕೂಡಲೇ ಇವರು ಕ್ಲಾಸ್‌ಗೆ ನುಗ್ಗಿ ವ್ಯಾಕಾರಣ/ಗ್ರಾಮರ್ ಪಾಠ ಮಾಡುತ್ತಿದ್ದರು. ಇಬ್ಬರೂ ಬಹಳ ಸ್ಟ್ರಿಕ್ಟ್. ಹಗಲೂ ರಾತ್ರಿ ಮಕ್ಕಳು ಬರೀ ವ್ಯಾಕಾರಣ/ಗ್ರಾಮರ್ ಕಲಿಯುತ್ತಿದ್ದರು. ವ್ಯಾಕಾರಣ,ಅಕ್ಟಿವ್ ವಾಯ್ಸ್,ಪೇಸಿವ್ ವಾಯ್ಸ್.. ಎಲ್ಲಾ ವಾಯ್ಸ್‌ಗಳು ಬಂದರೂ ಅವರೆದುರು ನಿಂತು ಉತ್ತರಿಸಲು ವಾಯ್ಸೇ ಬರುತ್ತಿರಲಿಲ್ಲ.

ಆ ಸ್ಕೂಲಲ್ಲಿ ಕಲಿತು ಬಂದವನು ನಾನು!

ಈಗ ಪಾಠ ಸುರುಮಾಡೋಣ- Read more about ವ್ಯಾಕಾರಣ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಪಘಾತ-ಕಾರಣ- ಅಗಲ ರಸ್ತೆ

December 7, 2009 - 11:39pm
ಗಣೇಶ

ಚಾರಣ ಎಲ್ಲರಿಗೂ ಗೊತ್ತು.

ಕಾರಣ=?

ಕಾರಣ=ಕಾರಲ್ಲಿ +ಪಯಣ.

ಪೂರ್ವಪದದ ಕೊನೆಯ ಅಕ್ಷರ ಹಾಗೂ ಉತ್ತರಪದದ ಮೊದಲೆರಡು ಅಕ್ಷರಗಳು ಲೋಪವಾಗುವ ಝೆನ್ ಸಂಧಿ ಇದು.

ಇನ್ನೊಂದು ಕಾರಣವೂ ಇದೆ. ಕಾರಿನ+ರಣ=ಕಾರಣ.(ಭಜ್ಜಿ ಸಂಧಿ)

(ರಣ=ಆಸೆ.ತುಳುವಿನಿಂದ ಕನ್ನಡಕ್ಕೆ ಆಮದಾದ ಶಬ್ದ).ಮನೆಯಲ್ಲಿ ರಾಶಿ ಕಾರುಗಳಿದ್ದರೂ ಯಾವುದೇ ಹೊಸ ಕಾರು ಬಂದರೂ, ಕೊಂಡು ಪ್ರದರ್ಶನ ಮಾಡುವುದು.

ಸಿಬ್ಬಂದಿಯನ್ನು ಓಡಿಸಿ, ತಾನೇ ಕಾರನ್ನು ಓಡಿಸಿದಾಗ ಇದೇ "ರಾಹು ಸಂಧಿ"ಯಾಗುವುದು.

’ಋಣ’(loan)ಮಾಡಿ ಕಾರು ತೆಗೆದುಕೊಳ್ಳುವುದು- ’ಕಾಋಣ’. ’ಋ’ ಣ  ಕಷ್ಟವಾದವರು ಕಾರಣ ಎನ್ನುತ್ತಾರೆ. ತಪ್ಪಲ್ಲ. ಆದರೆ-

"ರಾಜಕಾರಣಿ" ಪದ ಪ್ರಯೋಗ ತಪ್ಪು.

ಹಿಂದೆ ರಾಜರಂತೆ ಕಾರಲ್ಲಿ ಪಯಣಿಸುತ್ತಿದ್ದವರನ್ನು-ರಾಜಕಾರಣಿ ಎನ್ನುತ್ತಿದ್ದರು. ಆ ಕಾಲಕ್ಕೆ ಅದು ಸರಿ. ಈಗ?

ಕೊನೆಯದಾಗಿ "ಹೇಳಿ ಹೋಗು-ಕಾರಣ"= Read more about ಅಪಘಾತ-ಕಾರಣ- ಅಗಲ ರಸ್ತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಿರಿಯನಾದರೆ ಏನು ಶಿವಾ..

December 27, 2009 - 11:33pm
ಗಣೇಶ

೨೦೧೦!

ನಂಬಲಿಕ್ಕೇ ಆಗುತ್ತಿಲ್ಲಾ!!

೨ಕೆ-೨ಕೆ ಅನ್ನುತ್ತಿದ್ದೆವು.. ಆಗಲೇ ೨೦೧೦...ಸಾಧ್ಯವೇ ಇಲ್ಲ!!

ಲೆಕ್ಕದಲ್ಲಿ ಜಾಣರಿರುವವರು, ಈ "ಲೀಪ್ ಇಯರ್"ನಿಂದಾಗಿ ಯಾವ ಯಾವ ಇಯರ್‌ಗಳನ್ನೆಲ್ಲಾ ಬಿಟ್ಟಿದ್ದಾರೆಂದು ಒಮ್ಮೆ ನೋಡಿ ಹೇಳುವಿರಾ?

ಎರಡು ಲೈನ್..ಬರೀ ಎರಡು ಲೈನ್, ನನ್ನಾಕೆಗೆ-ನೆನಪಿಡಿ ನನ್ನಾಕೆಗೇ, ಲವ್ ಲೆಟರ್ ಬರೆಯಲು ಶಬ್ದಗಳು ಸಿಗದೇ ಒದ್ದಾಡುತ್ತಿದ್ದುದು ನಿನ್ನೆ ಮೊನ್ನೆ ಆದಂತೆ ಇದೆ! ಆಗಲೇ ಮದುವೆಯಾಗಿ, ಮಕ್ಕಳಾಗಿ..ಮುದುಕನಾಗುವತ್ತ....ನಂಬಕ್ಕಾಗುತ್ತಿಲ್ಲ..

ಬಹುಷ:..

ಹೆಚ್ಚಿನಂಶ...

ಅಲ್ಲ.. ಗ್ಯಾರಂಟೀ.. "ಹಿಪ್"ನಾಟಿಸಂ ಮಾಡಿ ಹಿಂದೆ ಹೋಗುವ ತರಹ, ಯಾರೋ ನನ್ನ ಮೇಲೆ "ಮುಪ್ಪ್"ನಾಟಿಸಂ ಮಾಡಿದ್ದಾರೆ.

ಹಾಗೆಂದು ಮುಪ್ಪು ಬರುತ್ತಿರುವುದಕ್ಕೆ ಬೇಸರವೇನಿಲ್ಲ. ಚಿಕ್ಕವನಿದ್ದಾಗಿನಿಂದಲೇ ಬಯಸುತ್ತಿದ್ದೆ:

ಬಿಳಿ ತಲೆಕೂದಲು ಹಿಂದೆ ಬಾಚಿ, ಬಿಳಿ ಮೀಸೆ ತಿರುಗಿಸಿ, ಪಂಚೆ ಎಡಕೈಯಲ್ಲಿ ಎತ್ತಿ ಹಿಡಿದು, ನಾನೂ ಹುಡುಗರಿಗೆ ಜೋರುಮಾಡಬೇಕೆಂದು.... Read more about ಹಿರಿಯನಾದರೆ ಏನು ಶಿವಾ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದ್ಯಾಡೇಬ್ರಶ್ Vs ಬೇವಿನಕಡ್ಡಿ

February 9, 2010 - 11:59pm
ಗಣೇಶ

ಚಳಿ ಕಮ್ಮಿಯಾಗುತ್ತಾ ಬಂತು..

ಈಗ ಯಾವ ಸೀಸನ್?

..

..ಮದುವೆ ಸೀಸನ್!

ಇನ್ನು ೩-೪ ತಿಂಗಳು ನಾನು busy!

ಮದುವೆಗೆ ಸಂಬಂಧಿಸಿ ನಿಶ್ಚಯ ಇತ್ಯಾದಿ ಎಲ್ಲಾ ಸಮಾರಂಭಗಳಲ್ಲಿ ಇರಲೇಬೇಕಾದ, (ಇದ್ದಾಗ ಲೆಕ್ಕಕ್ಕಿಲ್ಲದ) ಇರದಿದ್ದರೆ ದೊಡ್ಡ issue ಆಗುವ (ನ)ಗಣ್ಯರ ಪಟ್ಟಿಯಲ್ಲಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಉಪವಾಸ

February 22, 2010 - 12:18am
ಗಣೇಶ

ದೇವರ ಧ್ಯಾನದಲ್ಲೇ ಮುಳುಗಿದವನಿಗೆ ಹಸಿವಿನ ಯೋಚನೆಯೇ ಇರುವುದಿಲ್ಲ. ಈ ಉಪವಾಸ ನನ್ನಿಂದ ಸಾಧ್ಯವೇ ಇಲ್ಲ.

ಯಾವಾಗಲೂ "ಅಮ್ಮಾ..ಅಮ್ಮಾ..." ಎಂದು ರಚ್ಚೆ ಮಾಡುವ ಮಕ್ಕಳಿಗೆ ಅಮ್ಮ ಎರಡೇಟು ಕೊಟ್ಟು ದಬ್ಬುವಂತೆ,ದೇವರೂ ದೂರ ಮಾಡಿಯಾರು. ಅದಕ್ಕೆ ಟೈಮ್ ಸಿಕ್ಕಾಗ ದೇವರ ಮುಂದೆ ಮಿನಿಮಮ್ ಬೇಡಿಕೆಗಳ ಪಟ್ಟಿ ಇಟ್ಟು, ಕಾಲಕಾಲಕ್ಕೆ ರಿನೀವಲ್ ಮಾಡುತ್ತಿರುವೆನು.

ಇನ್ನೊಂದು ಉಪವಾಸ- ಊಟ ಇತ್ಯಾದಿ ತಿನ್ನದೇ ಹೊಟ್ಟೆ ಖಾಲಿ ಇಡುವುದು. "ಎಲ್ಲಾರೂ ಮಾಡುವುದು ಹೊಟ್ಟೆಗಾಗಿ"ದಾಸರು ಹೇಳಿಲ್ವೇ?

ನಾನಂತೂ ಹೊಟ್ಟೆ ಪಕ್ಷದವ-

ಬೆಳಗ್ಗೆ "ಟೀ" ವಾಸನೆ ಬಂದಾಗಲೇ ನನಗೆ ಎಚ್ಚರವಾಗುವುದು. ನೆಕ್ಸ್ಟ್ "ನಾಸ್ಟಾ"..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಾಷ್ಟ್ರ ಪ್ರಾಣಿ-ಆನೇನಾ?

February 25, 2010 - 11:58pm
ಗಣೇಶ

ಅಡವಿಯ ರಾಜನಾಗಿ ಮೆರೆಯುತ್ತಿದ್ದ ಸಿಂಹಕ್ಕೆ ಮಾಡಿದಷ್ಟು ಅವಮಾನ ಬೇರೆ ಯಾವ ಪ್ರಾಣಿಗೂ ಮಾಡಿರಲಿಕ್ಕಿಲ್ಲ.

ಅದೇನೂ ಕೇಳಿರಲಿಲ್ಲ. ಆದರೂ ಅದನ್ನು ರಾಷ್ಟ್ರ ಪ್ರಾಣಿಯಾಗಿ ಮಾಡಿದರು. ಕೊನೆಗೆ ವಿನಾಕಾರಣ ಆ ಪದದಿಂದ ಕಿತ್ತೂ ಹಾಕಿದರು.

ಸಿಂಹಾಸನ, ಸಿಂಹಘರ್ಜನೆ, ಸಿಂಹಾವಲೋಕನ ಪದಗಳಿಗಿದ್ದ ಮರ್ಯಾದೆಯನ್ನೂ, ಸಾಮಾನ್ಯ ರಾಜಕಾರಣಿಗಳ ಸೀಟು, ಮಾತು,ವರ್ತನೆಗೆ ಹೋಲಿಸಿ ತೆಗೆದರು. Read more about ರಾಷ್ಟ್ರ ಪ್ರಾಣಿ-ಆನೇನಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಏನು ಮಾತು..ಏನು ಮಾತಮ್ಮಾ...

June 7, 2010 - 11:55pm
ಗಣೇಶ

ನಿನ್ನೆ ಸಂಜೆ ಪಾರ್ಕ್‌ನಲ್ಲಿ ಒಂದು ಸುತ್ತು ಜಾಗಿಂಗ್ ಹೋಗಿ, ಕುಳಿತು ಕೊಳ್ಳುವಾ ಎಂದರೆ ಒಂದೇ ಒಂದು ಕಲ್ಲುಬೆಂಚು ಖಾಲಿ ಇರಲಿಲ್ಲ- ಪ್ರೇಮಿಗಳು ಭರ್ತಿ.

ನಡೆದುಕೊಂಡು ಎರಡನೇ ಸುತ್ತು ಹಾಕಿದೆ. ಬೆಂಚ್ ಖಾಲಿಯಾಗುವ ಲಕ್ಷಣವೇ ಇಲ್ಲಾ...

ಇನ್ನೊಂದು ರೌಂಡ್ ಓಡಲು ಬೇಕಾದಷ್ಟು ತ್ರಾಣ ಉಳಿಸಿ...ಒಂದು ಬೆಂಚಲ್ಲಿ ಪ್ರೇಮಿಗಳ ಪಕ್ಕ ಹೋಗಿ ಕುಳಿತೆ :) ಆಕೆ "ಕಿಚ ಪಿಚ ಕಿಚ ಪಿಚ" ಅಂತಾ ಪ್ರೇಮಿಯನ್ನು ಕೊರೀತಾ ಇದ್ಳು ಕೊರಿತಾ ಇದ್ಳು... ಅಬ್ಬಾ.. ಅದೇನು ನಾಲಗೆನೋ? ಮೆಷಿನ್ನೋ? ಮಾತನಾಡುತ್ತಿರುವ ವೇಗ ನೋಡಿದರೆ, ಆ ನಾಲಗೆಗೆ ಒಂದು ಮಿನಿ ಜನರೇಟರ್ ಸಿಕ್ಕಿಸಿದರೆ ಇಡೀ ಪಾರ್ಕ್‌ಗೆ ಬೇಕಾದಷ್ಟು ಬೆಳಕು ಸಿಗಬಹುದು!! ಹೀಗೇ ಪಾರ್ಕ್‌ನ ಅಷ್ಟೂ ಪ್ರೇಮಿಗಳ ನಾಲಗೆಯಿಂದ ಇಡೀ ಕರ್ನಾಟಕದ ಕರೆಂಟು ಸಮಸ್ಯೆ ನೀಗಿಸಬಹುದು :)

ನೀವು ಗಮನಿಸಿದ್ದೀರಾ.........?

ಸಾಮಾನ್ಯವಾಗಿ ಈ "ಕ್‌ರ್‌ರ್‌ರ್.."ಎಂದು ಗಂಡಿನ ಕಿವಿಯನ್ನು ಡ್ರಿಲ್ ಮಾಡುವ ಹೆಣ್ಣು ತೆಳ್ಳಗೆ ಸುಂದರವಾಗಿರುತ್ತಾಳೆ. Read more about ಏನು ಮಾತು..ಏನು ಮಾತಮ್ಮಾ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಾ... ಕವಿತೆ

June 19, 2010 - 12:26am
ಗಣೇಶ

 ಸಂಮಿಲನಕ್ಕೆಂದು ತುದಿಗಾಲಲ್ಲಿ ತಿಂಗಳಿಂದ ಕಾದಿದ್ದೆ.  ಒಂದು ವಾರ ಮೊದಲೇ ಕರೆಮಾಡಿ "ನಾನು ಸಾಮೆಕಾಳು ಹಾಗು ಪ್ರೀತಿಹಕ್ಕಿಗಳ ಬಗ್ಗೆ ಲೇಖನ ಬರೆದಿದ್ದೇನೆ. ಅಲ್ಲಿ ಓದಲಾ" ಎಂದು ಕೇಳಿದೆ.

"ಬೇಡ ಬೇಡ..ಅರ್ಥವಾಗುವಂತಹದ್ದೇನಾದರೂ ಬರಕೊಂಡು ಬನ್ನಿ.  ಅಂದ್ರೆ.., ನಾಲ್ಕು ಸಾಲು ಕವಿತೆ ಬರ್ಕೊಂಡು ಬನ್ನಿ ಸಾಕು. ಕವನ ವಾಚನದಲ್ಲಿ ತಮ್ಮ ಹೆಸರು ಸೇರಿಸ್ಕೋತೀನಿ" ಅಂದು ಫೋನು ಇಟ್ಟೇ ಬಿಟ್ಟರು.

ಮರ,ಗಿಡ,ಹೂ,ಹಣ್ಣುಗಳ ಬಗ್ಗೆ ಗೂಗ್‌ಲ್‌ನಿಂದ ಹುಡುಕಿ ಕದ್ದು ಬರೆಯಬಹುದು.ಆದರೆ ಕವಿತೆ??

ಸಯಿಂದ ಸಾನಿಯಾವರೆಗೆ,ಕ್ರಿಯೆ,ಪ್ರತಿಕ್ರಿಯೆ,ಮಾತುಮಾತಿಗೆ ಕವಿತೆ ಬರೆಯುವವರ ಕವನ ಕದ್ದರೆ ಹೇಗೆ!!!? "ಪಾಪ, ಗಣೇಶರಲ್ವಾ" ಎಂದು ಅವರು ಸುಮ್ಮನಿದ್ದಾರು. ಉಳಿದ ಅವರ ಅಭಿಮಾನಿಗಳು ಬಿಟ್ಟಾರಾ?

ಬೇಡ, ಕದಿಯುವ ಸಂಗತಿ...

ಸಂಪದ ತೆರೆದು,  ಕವಿತೆ ಹುಟ್ಟುವ ಸ್ಥಳಗಳ ಬಗ್ಗೆ ಗುರುತಿಸಿಕೊಂಡು ಹೊರಟೆ-ಪಾರ್ಕ್ ಸುತ್ತಿದೆ... ಬಸ್ ಹತ್ತಿದೆ...ವಾಹನ ಓಡಿಸುವಾಗಲೂ ಕವನದ ಬಗ್ಗೆ ಯೋಚಿಸಿದೆ.. Read more about ಬಾ... ಕವಿತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

"ಕವಲು" ಕಾದಂಬರಿಯ ವಿಮರ್ಶೆ

June 21, 2010 - 4:52pm
ಗಣೇಶ

ಗೋಮಾಂಸ ಜಗಿದೂ ಜಗಿದೂ ಜಿಹ್ವಾ(ನಾಲಗೆ) ಜಡ್ಡು ಹಿಡಿದು ಹೋಗಿತ್ತು. ಯಾವತ್ತು ಭೈರಪ್ಪನವರ "ಕವಲು" ಕೃತಿ ಬಿಡುಗಡೆ ಬಗ್ಗೆ ಪತ್ರಿಕಾ ವರದಿ ಓದಿದೆನೋ, ಮೊದಲು ನಾಲಗೆ ಸಾಣೆ ಹಿಡಿಸಿ ಬಂದಿರುವೆ. ಫಸ್ಟ್ ಕ್ಲಾಸ್ ಹರಿತವಾಗಿದೆ. ಇನ್ನು ೨೮ರವರೆಗೆ( ಕೃತಿ ಬಿಡುಗಡೆ ದಿನಾಂಕ) ಕಾಯಲು ಸಾಧ್ಯವಿಲ್ಲ.

ಕಾದಂಬರಿ ಬಿಡುಗಡೆಗೂ ಮೊದಲು ವಿಮರ್ಶೆ ಹೇಗೆ ಸಾಧ್ಯ ಅಂದಿರಾ?

ನನ್ನಿಂದ ಸಾಧ್ಯವಿಲ್ಲದ್ದು ಯಾವುದೂ ಇಲ್ಲಾ-

ಸಿನಿಮಾ ಹಾಗೂ ನಟನ ಹೆಸರು ಕೊಡಿ ಸಾಕು, ವಿಮರ್ಶೆ ೫ ನಿಮಿಷದಲ್ಲಿ ರೆಡಿ.

ರಂಗಮಂದಿರ ಮತ್ತು ನಿರ್ದೇಶಕ ಯಾರೆಂದು ಗೊತ್ತಾದರೆ ನಾಟಕ ವಿಮರ್ಶಿಸಬಲ್ಲೆ!

ಬಾಂಬ್ ಬಿದ್ದ ಪ್ಲೇಸ್ ಹೇಳಿ, ಉಳಿದದ್ದು ನನಗೆ ಬಿಡಿ..

ಇನ್ನು..ಈ ಕೃತಿ...ಏನಂತೀರಿ..........ಥತ್..ಆಂ.. "ಕವಲು".... ನನ್ನಂತಹವರು ಚರ್ಚಿಸಲು ತಕ್ಕುದಾದ ಪುಸ್ತಕವೇ ಅಲ್ಲ.. ಹೆಸರಲ್ಲೇ "ಕಮಲ"ದ ವಾಸನೆ ಹೊಡೆಯುವುದು. ಹೆಚ್ಚೆಂದರೆ ಇದನ್ನು ಕೋಮುವಾದಿ ಪಕ್ಷದ ಪ್ರಣಾಳಿಕೆ ಎನ್ನಬಹುದು. Read more about "ಕವಲು" ಕಾದಂಬರಿಯ ವಿಮರ್ಶೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೋಮದಿಂದಲೇ ಮಳೆಯೇ? ಅಥವಾ..

August 5, 2010 - 11:58pm
ಗಣೇಶ

ಕೆಲವರು ಇರುತ್ತಾರೆ-ಎಲೆಮರೆಯ ಕಾಯಿಯಂತೆ-ಅವರು ಮಾಡುತ್ತಿರುವ "ಸಮಾಜ ಸೇವೆ" ಜಗತ್ತಿಗೆ ಬಿಡಿ, ಜತೆಯಲಿ ಇರುವವರಿಗೂ ಗೊತ್ತೇ ಆಗುವುದಿಲ್ಲ!

ಕಳೆದವಾರ "ಪರ್ಜನ್ಯ ಹೋಮ"ದ ಬಗ್ಗೆ ನಮ್ಮ ರಾಘವೇಂದ್ರರು ಬರೆದ ಲೇಖನ http://sampada.net/article/27187 ಓದಿರುವಿರಿ. ಮಳೆ ಬರಲು ಹೋಮ ಮಾಡಬೇಕಾದರೆ ಬಹಳಷ್ಟು ವಿಧಿವಿಧಾನಗಳಿವೆ. ಖರ್ಚೂ ಜಾಸ್ತಿಯಾಗುವುದು. ಮಳೆ ಬರಿಸಿದರೂ ನಂಬುವವರು ಕಮ್ಮಿ, ವಾದಿಸುವವರು ಜಾಸ್ತಿ, ಮಾರ್ಚ್-ಎಪ್ರಿಲ್ ಬೇಸಿಗೆಯಲ್ಲಿ ಮಳೆಬರಿಸಲಿ ಎಂದು ಚಾಲೆಂಜ್ ಸಹ ಮಾಡುವರು.

ನಾನು, ಹೋಮ ಹವನದ ಹಂಗಿಲ್ಲದೇ, ನಯಾಪೈಸೆ ಖರ್ಚಿಲ್ಲದೇ ಮಳೆಬರಿಸಬಲ್ಲೆ...

ಪುನ: ಸೀಟಿನಲ್ಲಿ ಸರಿಯಾಗಿ ಕುಳಿತುಕೊಳ್ಳಿ...ಇನ್ನು ಮುಂದುವರಿಸುವೆ- Read more about ಹೋಮದಿಂದಲೇ ಮಳೆಯೇ? ಅಥವಾ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗೌಡರ ಮನೆಯಿಂದ ಕೆರೆಗೆ ಎಷ್ಟು ದೂರ?

October 1, 2010 - 11:55pm
ಗಣೇಶ

ನಡುರಾತ್ರಿ.........

ನೆಟ್‌ನಲ್ಲಿ "ಶ್ರೀಗಂಧ"ದ ಮರ ಕದಿಯಲು ಗೂಗ್‌ಲ್ ಬೆಳಕಲ್ಲಿ ಹೊರಟಿದ್ದೆ.

"ಪಿಯಾ ತೂ....ಅಬ್ ತೊ ಆಜಾ...." ದಡಬಡ ಎದ್ದು ಬಿದ್ದು ಮೊಬೈಲ್ ಹುಡುಕಿ, ಆಫ್ ಮಾಡುವಾಗ ಮನೆಯಾಕೆಗೆ ಎಚ್ಚರವಾಯಿತು.

"ಯಾರದ್ರೀ ಅದು?" "ಅಲಾರ್ಮ್ ಕಣೇ.. ನೀನು ಮಲಗು, ಟೀ ಮಾಡಿ ಕರೀತೇನೆ" ಎಂದೆ. ಪಕ್ಕಕ್ಕೆ ತಿರುಗಿ ಹಾಯಾಗಿ ಮಲಗಿದಳು. ಅಬ್ಬಾ..

ಕೋಣೆಯಿಂದ ಹೊರಬಂದು ಮೊಬೈಲ್ ನೋಡಿದೆ-ಗೋಪಿನಾಥರು ಫೋನ್ ಮಾಡಿದ್ದು. ರಿಂಗ್ ಮಾಡಿದೆ. " ನಾಳೆ ಬೆಳಗ್ಗೆ ೬ ಗಂಟೆಗೆ ಸುರೇಶ್ ಮನೆಗೆ ಬನ್ನಿ. ಅಲ್ಲಿಂದ ಕೋಮಲ್ ಹಳ್ಳಿಗೆ ಹೋಗಲಿಕ್ಕಿದೆ. ವಿಷಯ ಅಲ್ಲೇ ಹೇಳ್ತೇನೆ." ಎಂದು ಫೋನ್ ಇಟ್ಟರು.

ಬೆಳಗ್ಗೆದ್ದು ಮನೆಗೆಲಸ ಎಲ್ಲಾ ಮುಗಿಸಿ ಹೊರಡುವಾಗ ೭ ಗಂಟೆನೇ ಆಯಿತು. ಸುರೇಶ್ ಮನೆ ತಲುಪುವಾಗ ಗೋಪಿನಾಥರು ಕೋಪಿನಾಥರಾಗಿದ್ದರು.ಸ್ಟಾರ್ಟ್ ಮಾಡಿ ರೆಡಿಯಾಗಿದ್ದ ಕಾರೊಳಗೆ ತಳ್ಳಿದರು. ಕಾರೊಳಗೆ ನೋಡಿದರೆ ನಾವು ೩ ಜನ ಅಷ್ಟೇ.. " ಸೀಟು ಖಾಲಿಯಿತ್ತು. ನನ್ನ ಹೆಂಡತಿಯನ್ನೂ ಕರಕೊಂಡು ಬರುತ್ತಿದ್ದೆ." ಅಂದೆ. Read more about ಗೌಡರ ಮನೆಯಿಂದ ಕೆರೆಗೆ ಎಷ್ಟು ದೂರ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಶ್ರೀರಾಮ ದರ್ಶನ ಹಾಗೂ ಗೌಡರ ಭೇಟಿ

October 3, 2010 - 12:17am
ಗಣೇಶ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ, ಜನತೆಗೆ ಮುಕ್ತ ಪ್ರವೇಶವಿತ್ತು. ಎಪ್ರಿಲ್ ರಜೆಯಲ್ಲಿ ನಾನೂ ಮನೆಮಂದಿ ಜತೆ ಅಯೋಧ್ಯೆಗೆ ಹೋದೆ. ಬಹಳ ಸುಂದರ ಮಂದಿರ. ಸಂಪದದಲ್ಲಿ ಹಾಕಲೆಂದು ೫-೬ ಫೋಟೋಗಳನ್ನೂ ಮೊಬೈಲಲ್ಲಿ ತೆಗೆದೆ. ಇನ್ನೇನು ರಾಮನ ದರ್ಶನಕ್ಕೆ ದೇವಸ್ಥಾನದ ಒಳಗೆ ಹೊರಟಾಗ "ಗಣೇಶರೆ, ಏಳ್ರೀ, ಏಏಳ್ರೀ.." ಅನ್ನುವುದು ಕೇಳಿಸಿತು. ಸ್ವರ ಎಲ್ಲೋ ಕೇಳಿಸಿದಂತಿದೆಯಲ್ಲಾ..ನಮ್ಮ ಗೋಪೀನಾಥರದ್ದು..ಓ...ನಾವೆಲ್ಲಾ ಕಾರಲ್ಲಿ ಕೋಮಲ್ ಹಳ್ಳಿಗೆ ಹೊರಟಿದ್ದಲ್ವಾ...( http://sampada.net/blog/%E0%B2%97%E0%B2%A3%E0%B3%87%E0%B2%B6/01/10/2010/28253 )

ಹಾಗಿದ್ದರೆ ರಾಮಮಂದಿರ ನೋಡಿದ್ದು ಕನಸಲ್ಲಿ! ಮೆಲ್ಲನೆ ಕಣ್ಣು ತೆರೆದು ನೋಡುತ್ತೇನೆ!! ಎದುರಲ್ಲಿ ಸಾಕ್ಷಾತ್ ಶ್ರೀ ರಾಮಚಂದ್ರ!!!

ಕಿರೀಟ ಬಿಲ್ಲು ಬಾಣಗಳ ಸಹಿತ ಕಾರಿನ ಕಿಟಕಿಯಿಂದ ನನ್ನನ್ನೇ ನೋಡುತ್ತಿರುವರು! Read more about ಶ್ರೀರಾಮ ದರ್ಶನ ಹಾಗೂ ಗೌಡರ ಭೇಟಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಡೆಯರು ಯಾರಿರಬಹುದು?

October 26, 2010 - 11:39pm
ಗಣೇಶ

ಮುಂಜಾನೆದ್ದು, ಮನೆಹೊರಗಿನ ಕಾಂಪೌಂಡ್ ಕಟ್ಟೆಯಲ್ಲಿ ಕುಳಿತು ಪೇಪರ್ ಓದುತ್ತಿದ್ದೆ. ( ಪಕ್ಕದ ಮನೆಯವರ ಪೇಪರ್ ನಮ್ಮ ಮನೆಯೊಳಗೆ ತೆಗೆದುಕೊಂಡು ಹೋಗಿ ಓದುವುದು ಸಭ್ಯರ ಲಕ್ಷಣವಲ್ಲ..ಅದಕ್ಕೆ)

ಪೇಪರ್ನಲ್ಲಿ ಪೇಟೆ ಧಾರಣೆ ನೋಡುವುದು ನನ್ನ ಈಗಿನ ಹವ್ಯಾಸ. ಯಾವ ಏರಿಯಾದ MLA ರೇಟು ಎಷ್ಟು ಏರಿತು/ಎಷ್ಟಕ್ಕೆ ಇಳಿಯಿತು... ತುಂಬಾ ಕೆಳಗೆ ಇಳಿದರೆ ಒಂದು ೩-೪ ಶೇರ್(ಕೆಲವರು ಕತ್ತೆ, ಗುಳ್ಳೆನರಿ..ಅಂತಾರೆ) ಖರೀದಿ ಮಾಡಿ ಇಟ್ಟುಕೊಳ್ಳುವುದು, ಮುಂದೆ(ಕೋರ್ಟು ಕೇಸೆಲ್ಲಾ ಮುಗಿದಾಗ) ಒಳ್ಳೆ ರೇಟು ಬಂದರೆ ಮಾರುವುದು ಅಂತ ಇದ್ದೇನೆ.

ಆಗಲೇ ಒಂದು ಕಾಗೆ ಹತ್ತಿರ ಬಂದು "ಕಾವ್ ಕಾವ್" ಎಂದಿತು. ಓಡಿಸಿದೆ.

"ಒಡೆಯರು ಕರೀತಿದ್ದಾರೆ. ಬೇಗ.." "ಹಾಳಾದವ, ನಾನು ಪೇಪರ್ ಓದಿ ಮುಗಿಸುವುದರೊಳಗೆ ಎದ್ದನಾ" ಎಂದಾಲೋಚಿಸಿ ಪೇಪರ್ ಮಡಚಿ ಪಕ್ಕದ ಮನೆಯ ಕೆಲಸದವನಿಗೆ ಕೊಡಲು ಹೊರಟರೆ....... ಅಲ್ಲಿ ಯಾರೂ ಇಲ್ಲಾ!!

ಪುನಃ - "ಒಡೆಯರು ಕರೀತಿದ್ದಾರೆ. ಬೇಗ ಬನ್ನಿ." !! Read more about ಒಡೆಯರು ಯಾರಿರಬಹುದು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಡೆಯರು ಸಿಕ್ಕಿದರು!

October 28, 2010 - 12:07am
ಗಣೇಶ

ಒಡೆಯರು ಬಂಗಾರಪ್ಪ ಇರಬಹುದೇ?

-just ಈಗ ಅವರಿರುವ ಪಕ್ಷವನ್ನು ನಾನಲ್ಲ, ಪರಮೇಶ್ವರನಿಂದಲೂ ಸರಿಪಡಿಸಲು ಸಾಧ್ಯವಿಲ್ಲ. ಅದಲ್ಲದೇ ಅವರಿರುವುದು ಸೊರಬದಲ್ಲಿ, ನಾನು ಹೋಗುತ್ತಿರುವುದು ಸಾಗರ ಕಡೆಗೆ...ಸಾಗರದ MLA? ಛೇ..ಕಾಗೆಗೆ ಅಷ್ಟೂ ಬುದ್ಧಿಯಿಲ್ಲವಾ? Read more about ಒಡೆಯರು ಸಿಕ್ಕಿದರು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಲಯನ್ ಸಫಾರಿ ಲಯನ್ಸ್ ವರಿ

November 21, 2010 - 8:37pm
ಗಣೇಶ

"ಅವು ಮಕ್ಕಳಾ....ಥೇಟ್ ಕೋತಿಗಳು. ಬಾಲ ಒಂದಿಲ್ಲ ಅಷ್ಟೇ.." ಅನ್ನುತ್ತಾರೆ, ಚೇಷ್ಟೆ ಮಾಡುವ ಮಕ್ಕಳಿಗೆ.

"೯ ಗಂಟೆಯವರೆಗೆ ಹಾಸಿಗೆಯಲ್ಲಿ ಹೊರಳಾಡುತ್ತಾನೆ, ಕೋಣ" ಮಗನ ಗುಣಗಾನ ತಾಯಿಯಿಂದ.

ಮಂಗನಿಂದ ಮಾನವ ಹೌದೋ ಅಲ್ಲವೋ, ಆದರೆ ಪ್ರಾಣಿಗಳ ಒಂದಿಲ್ಲೊಂದು ಗುಣವನ್ನು ಮಾನವನಿಗೆ ಹೋಲಿಸಿ ಹೊ(ತೆ)ಗಳುವರು. ನಾಯಕ ಯಾವಾಗಲೂ "ಸಿಂಹ". ಆದರೆ ಈಗಿನ ನಾಯಕರ ಬಗ್ಗೆ ಹಾಗೆ ಹೇಳಲು ಸಾಧ್ಯವಿಲ್ಲ.

"ಕುಮಾರಣ್ಣನವರಿಂದ ಸಿಂಹಘರ್ಜನೆ"

"ಕಾಂಗೈ ವರಿಷ್ಠರಿಂದ ಪಕ್ಷದ ಗೆಲುವಿನ(!) ಸಿಂಹಾವಲೋಕನ"

"ಎದುರಾಳಿಗಳಿಗೆ ಯಡ್ಡಿ ಸಿಂಹಸ್ವಪ್ನ" ಈ ತರಹ ಹೇಳಿದರೆ ಅವರವರ ಪಕ್ಷದವರೇ ಬಿದ್ದುಬಿದ್ದು ನಗುವರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚೀಟಿ ಮಹಾತ್ಮೆ..

November 28, 2010 - 8:52pm
ಗಣೇಶ

ಪರೀಕ್ಷಾ ಕೊಠಡಿ. ಸೈನ್ಸ್ ಪರೀಕ್ಷೆ ದಿನ. ಮೇಲ್ವಿಚಾರಕರು ಪ್ರಶ್ನೆಪತ್ರಿಕೆಗಳನ್ನು ಕೊಡುತ್ತಾ ಬಂದರು. ಜೀರೋದಿಂದ ನೂರು ಕಿ.ಮೀ.-ಐದೇ ಸೆಕೆಂಡುಗಳಲ್ಲಿ ಎಂದು ಬೈಕುಗಳಿಗೆ ಪ್ರಚಾರ ಮಾಡುತ್ತಾರಲ್ಲ, ಹಾಗೇ ಪ್ರಶ್ನೆ ಪತ್ರಿಕೆ ಕೈಗೆ ಸಿಕ್ಕ ಮಕ್ಕಳ ಮುಖ ಐದೇ ಸೆಕೆಂಡುಗಳಲ್ಲಿ ಜೀರೋಗೆ ಇಳಿದಿರುತ್ತಿತ್ತು. ಬಹಳ ಟಫ್ ಇರಬೇಕು.

ಮೇಲ್ವಿಚಾರಕರು ನನ್ನ ಬಳಿ ಬಂದಾಗ ನಗುತ್ತಾ ಪ್ರಶ್ನೆಪತ್ರಿಕೆ ತೆಗೆದುಕೊಂಡೆ. ಪೂರ್ತಿ ತಯಾರಾಗಿ ಬಂದವರಿಗೆ ಯಾವುದೇ ಭಯವಿರುವುದಿಲ್ಲ . ಪ್ರಶ್ನೆ ಪತ್ರಿಕೆ ಮೇಲೆ ಕಣ್ಣಾಡಿಸುವ ಮೊದಲು ಪ್ಯಾಂಟ್‌ನ ಎಡಕಿಸೆಗೆ ಕೈಹಾಕಿ ಚೀಟಿ ತೆಗೆದು ಪ್ರಶ್ನೆ ಪತ್ರಿಕೆಯ ಅಡಿಯಲ್ಲಿ ಇಟ್ಟು ನೋಡಿಕೊಂಡು ಬರೆಯಲು ಆರಂಭಿಸಿದೆ. Read more about ಚೀಟಿ ಮಹಾತ್ಮೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಪದದ ಕವಿಗಳು ಮೊದಲು ನಿರ್ಧರಿಸಲಿ..

December 9, 2010 - 11:51pm
ಗಣೇಶ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಾಹಿತಿ ಸಹವಾಸ..

December 23, 2010 - 11:54pm
ಗಣೇಶ

"ನಮಸ್ಕಾರ ರೀ.. ಮಾರ್ಕೆಟ್‌ಗೆ ಹೊರಟಿರಾ?"

ತಿರುಗಿ ನೋಡಿ- "ನಮಸ್ತೆ, ನಮಸ್ತೆ. ತಮ್ಮ ಪರಿಚಯವಾಗಲಿಲ್ಲ.."ಅಂದೆ.

"ಹೋ.. ನೀವು ಈ ಬೀದಿಗೆ ಹೊಸದಾಗಿ ಬಂದವರಲ್ವಾ? ಪತ್ರಿಕೆ ಓದುವವರಾಗಿದ್ದರೆ ನನ್ನ ಪರಿಚಯವಿರುತ್ತಿತ್ತು. ನಾನು ಪ್ರೇಮಕವಿ ತಮ್ಮಣ್ಣ. ಅಲ್ಲೊಂದು, ಅದೇ..ದೊಡ್ಡ ಬಂಗ್ಲೆ ಕಾಣಿಸುತ್ತಾ..ಅದರ ಪಕ್ಕದ ಶೀಟ್ ಮನೇನೆ ನನ್ನದು. ಬಾಗಿಲಲ್ಲೇ ದೊಡ್ಡ ಬೋರ್ಡ್ ಇದೆ. "ಪ್ರೇಮಕವಿ ತಮ್ಮಣ್ಣ, ಸಾಹಿತಿ". ಈ ಬೀದಿ ಜನ ಶಾರ್ಟ್ ಅಂಡ್ ಸ್ವೀಟಾಗಿ ಪ್ರೇತ ಸಾಹಿತಿ ಅಂತಾರೆ. ಹ್ಹ ಹ್ಹ ಹ್ಹ.."

ಒಳ್ಳೆ ಬಕರಾ ಸಿಕ್ಕಿದ. ಹೇಗೂ ಕ್ರಿಸ್‌ಮಸ್ ರಜೆಗೆಂದು ನನ್ನ ಮನೆಯಾಕೆ ಮಕ್ಕಳೊಂದಿಗೆ ಊರಿಗೆ ಹೋಗಿದ್ದಾಳೆ. ಪತ್ರಿಕೆಗೆಗಾಗಿ ತಮ್ಮ ಸಂದರ್ಶನ ಕೊಡಿ ಎಂದು ಇವರ ಮನೆಗೆ ಹೋದರೆ ಒಂದು ಹೊತ್ತಿನ ಕಾಫಿ, ತಿಂಡಿ, (ಸಂದರ್ಶನ ಜಾಸ್ತಿ ಹೊತ್ತಾದರೆ) ರಾತ್ರಿಯ ಊಟಾನೂ ಅಲ್ಲೇ ಮುಗಿಸಿ ಬಿಡಬಹುದಲ್ವಾ! ತಡಯಾಕೆ, ಕೇಳಿಯೇಬಿಟ್ಟೆ .. Read more about ಸಾಹಿತಿ ಸಹವಾಸ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತೆರೆಯೋ ಬಾಗಿಲನು..

December 26, 2010 - 11:34pm
ಗಣೇಶ

"ಪ್ರೇಮಕವಿ ತಮ್ಮಣ್ಣ"ನವರು ಮಧ್ಯರಾತ್ರಿ ಹನ್ನೆರಡು ಗಂಟೆಗೆ ಸಂದರ್ಶನಕ್ಕೆ ಟೈಮ್ ಕೊಟ್ಟಿದ್ದರಲ್ವಾ.. ೧೨ ಗಂಟೆಗೆ ಸರಿಯಾಗಿ ಅವರ ಮನೆಗೆ ಹೋದೆ...ಬಾಗಿಲು ಬಡಿದೆ...ಬಾಗಿಲು ತೆರೆದ ಕೂಡಲೇ ಕಿಟಾರನೆ ಕಿರುಚಿ ಬಿದ್ದೆನು..

ನನ್ನ ಕೈಲಿದ್ದ ಚೀಲದಿಂದ ಬಾಟಲನ್ನು ತೆಗೆದು ಅದರಲ್ಲಿದ್ದ ದ್ರವವನ್ನೇ ಮುಖಕ್ಕೆ ಚಿಮುಕಿಸಿ, ಕುಡಿಸಿ, ನನ್ನನ್ನು ಎಬ್ಬಿಸಿದರು. ಮಸುಕು ಮಸುಕಾಗಿ ಒಂದೊಂದೇ ಗೋಚರಿಸಿತು. ಪೂರ್ತಿ ಕೋಣೆಯಲ್ಲಿ ಬೀಡಿಹೊಗೆ ತುಂಬಿತ್ತು. ಟೇಬಲ್ ಮೇಲೆ ಕ್ಯಾಂಡ್‌ಲ್ ಉರಿಯುತ್ತಿತ್ತು. ಆ ಬೆಳಕಲ್ಲಿ ಪ್ರೇಮಕವಿ ಪ್ರೇತದಂತೆ ಕಂಡದ್ದರಿಂದ ಭಯಗೊಂಡಿದ್ದೆ.

"ತಮ್ಮಣ್ಣನವರೆ, ಕರೆಂಟು ಹೋಯಿತಾ?" ಎಂದು ಕೇಳಿದೆ.

"ಹೋಗಿಲ್ಲ, ಕರೆಂಟು ಉಳಿತಾಯ ಮಾಡುತ್ತಿದ್ದೇನೆ. ರಾಜ್ಯಕ್ಕಾಗಿ!! ’ಕ್ಯಾಂಡ್‌ಲ್ ಉರಿಸಿ, ಕರೆಂಟು ಉಳಿಸಿ’ ನನ್ನ ಕವನ ಓದಿಲ್ವಾ? ಇದರಿಂದಇನ್ನೂ ಒಂದು ಲಾಭವಿದೆ. ಬೀಡಿ ಮುಗಿದ ಹಾಗೆ ಹೊತ್ತಿಸಲು ಬೆಂಕಿಪಟ್ನ ಹುಡುಕುವ ತಾಪತ್ರಯವಿಲ್ಲ." ಎಂದರು. Read more about ತೆರೆಯೋ ಬಾಗಿಲನು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತಮ್ಮಣ್ಣನವರ ದಿನಚರಿ

January 2, 2011 - 10:31pm
ಗಣೇಶ

ಪ್ರೇಮಕವಿ ತಮ್ಮಣ್ಣನವರು ತಮ್ಮ ದಿನಚರಿಯನ್ನು ನನ್ನ ಬಳಿ ಹೇಳಲು ಶುರು ಮಾಡಿದರು."ಅದೊಂದು ಕಾಲವಿತ್ತು...ಒಂದ್ನಿಮಿಷ..." ಎಂದು, ಎರಡು ಗ್ಲಾಸ್ ತೆಗೆದು ನಮ್ಮ ನಡುವೆ ಇಟ್ಟು, ಬಾಟಲು ಬಗ್ಗಿಸಿದರು. Read more about ತಮ್ಮಣ್ಣನವರ ದಿನಚರಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೊಸ ವರುಷದ ಹೊಸ ಕ್ಯಾಲೆಂಡರ್..

January 6, 2011 - 11:49pm
ಗಣೇಶ

"ಯಾರೂ ನೋಡದ ಸ್ಥಳದಲ್ಲಿ ಬಾಳೆಹಣ್ಣು ತಿಂದು ಬರಬೇಕು" ಎಂದು ಈ ಕಾಲದಲ್ಲಿ, ಅದೂ ನಮ್ಮ ಮನೆಯಲ್ಲಿ, ಗುರು ವ್ಯಾಸರು ತಮ್ಮ ಶಿಷ್ಯರಿಗೆ ಹೇಳಿದ್ದರೆ..............

ಅವರ ಎಲ್ಲಾ ಶಿಷ್ಯರು ಕನಕದಾಸರಾಗಿರುತ್ತಿದ್ದರು!!!!!

ನಮ್ಮ ಮನೆಯಲ್ಲಿ ಶಿಷ್ಯರು ಎಲ್ಲೇ ಅಡಗಿ ಕುಳಿತರೂ, ಅಲ್ಲೊಂದು ಫೋಟೋ/ಕ್ಯಾಲೆಂಡರ್ ಅವರನ್ನು ದಿಟ್ಟಿಸಿ ನೋಡುತ್ತಿರುತ್ತದೆ!

ಹಾಗೆಂದು ನಾನು ಕ್ಯಾಲೆಂಡರ್ ಪ್ರಿಯನೂ ಅಲ್ಲ. ಮಹಾನ್ ದೈವಭಕ್ತನೂ ಅಲ್ಲ. ಬಾಬಾರನ್ನು ನಂಬದಿದ್ದರೂ ಆಳೆತ್ತರದ ಕ್ಯಾಲೆಂಡರ್‌ನಲ್ಲಿರುವ ಬಾಬಾ ನಾವು ಊಟಮಾಡುವುದನ್ನು ೩ ವರ್ಷದಿಂದ ಗಮನಿಸುತ್ತಿದ್ದಾರೆ. Read more about ಹೊಸ ವರುಷದ ಹೊಸ ಕ್ಯಾಲೆಂಡರ್..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನ್ಯೂಸ್ ಏನಿರಬಹುದು?

February 16, 2011 - 11:52pm
ಗಣೇಶ

ಈ ದಿನದ ಪೇಪರ್ ನೋಡಿ ನಾನಂತೂ ಕುಣಿದದ್ದೇ ಕುಣಿದದ್ದು!! ಕನ್ನಡ ಫಿಲ್ಮ್‌ನ ಕೊರಿಯೋಗ್ರಾಫರ್ಸ್‌ಗಳು ನನ್ನ ಕುಣಿತ ನೋಡಿದ್ದರೆ ಕಮ್ಮಿಯಲ್ಲಿ ೬-೭ ಹೊಸ ಸ್ಟೆಪ್ ಕಲಿತು ದರ್ಶನ್ "ಕೈಯಲ್ಲಿ" ಮಾಡಿಸುತ್ತಿದ್ದರು!

"ಅಲ್ರೀ, ಕುಣಿಯುವಂತಹ ಸುದ್ದಿ ಪತ್ರಿಕೆಯಲ್ಲಿ ನಮಗೇನೂ ಕಾಣಿಸಲಿಲ್ಲವಲ್ಲಾ..?" ಅಂದ್ರಾ..

ಹೇಗೆ ಕಾಣಿಸಲು ಸಾಧ್ಯ? ಅದಿರುವುದು ೧೬ನೇ ಪುಟದ ಕೊಟ್ಟಾಕೊನೆಯಲ್ಲಿ!

ಸುದ್ದಿ ಏನು ಎಂದು ಹೇಳುವ ಮೊದಲು ನಿಮಗೆ ನನ್ನ ಕಷ್ಟದ ಪರಿಚಯ ಮಾಡಿಸದಿದ್ದರೆ, ಆ ಸುದ್ದಿ ಎಷ್ಟು ಮಹತ್ವದ್ದು ಎಂದು ನಿಮಗೆ ಗೊತ್ತಾಗದು- ನೋಡಿ, ಬೆಂಗಳೂರಲ್ಲಿ ಬಾಡಿಗೆಗೆ ಮನೆ ಹುಡುಕುವುದು ಎಷ್ಟು ಕಷ್ಟ ಎಂದು ಎಲ್ಲರಿಗೂ ಗೊತ್ತಿದ್ದದ್ದೇ. ಬೆಡ್‌ರೂಂ ದೊಡ್ಡದಿದ್ದರೆ- ಅಡುಗೆ ಕೋಣೆ ಚಿಕ್ಕದು, ಕಿಚನ್ ಚೆನ್ನಾಗಿದ್ದರೆ- ನೀರು ಸಪ್ಲೈ ಇಲ್ಲ, ವರಾಂಡ ಸರಿಯಾಗಿದ್ದರೆ-ವಠಾರ ಸರಿಯಿಲ್ಲ...ಹೇಗೋ ಎಲ್ಲಾ ಅಡ್ಜಸ್ಟ್ ಮಾಡಿ, ೫-೬ ತಿಂಗಳು ಹುಡುಕಾಡಿ, ಒಂದು ಮನೆ ಸಿಲೆಕ್ಟ್ ಮಾಡಿ ನುಗ್ಗಿದೆ-೧೫ ವರ್ಷಗಳ ಹಿಂದೆ!! ಮನೆ ಸ್ವಲ್ಪ ಹಳೇದಾದರೂ, ನನ್ನ ಕಣ್ಣಿಗೆ ಅರಮನೆನೇ! Read more about ನ್ಯೂಸ್ ಏನಿರಬಹುದು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗಣೇಶ Vs ಇಲಿ

February 21, 2011 - 11:49pm
ಗಣೇಶ

ಟಾಮ್ ಅಂಡ್ ಜೆರ್ರಿ ಕಾರ್ಟೂನನ್ನು ಮಕ್ಕಳಿಂದ ಮುದುಕರವರೆಗೆ ಎಲ್ಲರೂ ಕಣ್ಣುಬಾಯಿ ಬಿಟ್ಟು ನೋಡುವರು. ಅದರಲ್ಲಿ ಎಲ್ಲವನ್ನೂ ಹಾಳು ಮಾಡುವ, ಕೀಟಲೆ ಸ್ವಭಾವದ, ಜೆರ್ರಿ (ಇಲಿ) ಎಲ್ಲರಿಗೂ ಇಷ್ಟ. ಆ ಟಾಮ್ ಬೆಕ್ಕಿನ ಬಗ್ಗೆ ಮರುಕಪಡುವವರು ಒಬ್ಬರಾದರೂ ಇದ್ದಾರಾ? ಇದ್ದಾರೆ... Read more about ಗಣೇಶ Vs ಇಲಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸೂಪರ್ ಮೂನ್ ಅಪಾಯಕಾರಿ

March 21, 2011 - 11:48pm
ಗಣೇಶ

ನನ್ನ ಬಹುದಿನದ ಕನಸು

ನಾನೂ ಕವಿಯಾಗಬೇಕು

ನನ್ನ ಕವಿತೆ ಕ್ಯಾಸೆಟ್ ಆಗಿ

ಜನ ಕೇಳಿ ಹುಚ್ಚೆದ್ದು ಕುಣಿಯಬೇಕು.

ಪೂರ್ಣ ಚಂದಿರ ಭೂಮಿಗೆ ಅತೀ ಸಮೀಪ

ಇದಕ್ಕಿಂತ ಶುಭಮುಹೂರ್ತ ಬೇರೆ ಬೇಕೆ?

ಚಂದ್ರನಿಗೆ ಇನ್ನೂ ಸಮೀಪವಾಗಲು ಟೆರೇಸ್‌ಗೆ ಹೋದೆ

ಸ್ಫೂರ್ತಿಗೆ ಅರ್ಧಾಂಗಿಯನ್ನು ಜತೆಯಲ್ಲಿ ಕರೆದೆ

ಚೇರ್‌ನಲ್ಲಿ ಎದುರುಬದುರು ನಾನು ನನ್ನಾಕೆ

ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ

ನೆನಪಾಯಿತು..."ಎಲ್ಲೇ ಕನ್ನಡಕ?

Read more about ಸೂಪರ್ ಮೂನ್ ಅಪಾಯಕಾರಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕರೀಕೋಟು

March 3, 2012 - 11:54pm
ಗಣೇಶ

ಮದುವೆ ಸಮಯದಲ್ಲಿ ಹೊಲಿಸಿದ "ಕರಿ ಕೋಟು" ನಂತರ ಯಾವುದೋ ಕಪಾಟಿನ ಮೂಲೆಯಲ್ಲಿ ಭದ್ರವಾಗಿ ಇತ್ತು. ಕಳೆದ ತಿಂಗಳು ಮನೆ ಶಿಫ್ಟ್ ಮಾಡುವಾಗ ಸಿಕ್ಕಿತು. ಸಾವಿರಾರು ರೂಪಾಯಿ ಖರ್ಚು ಮಾಡಿ ಹೊಲಿಸಿದ ಕೋಟನ್ನು ಮೂಲೆಯಲ್ಲಿ ಇಟ್ಟದ್ದಕ್ಕೆ ಮನೆಯಾಕೆಗೆ ಸಿಕ್ಕಾಪಟ್ಟೆ ಬೈದು (ಮನಸ್ಸಲ್ಲೇ), ನೀಟಾಗಿ ಇಸ್ತ್ರಿ ಮಾಡಿ ರೆಡಿ ಮಾಡಿ ಇಟ್ಟಿದ್ದೆ. ಈ ದಿನ ಬೆಳಗ್ಗೆ ಹಾಕಿಕೊಂಡು ಟ್ರಿಮ್ಮಾಗಿ ಆಫೀಸಿಗೆ ಹೊರಟೆನು.

ಆಶ್ಚರ್ಯ!

ಎದುರು ಸಿಕ್ಕವರೆಲ್ಲಾ ನಮಸ್ಕಾರ ಮಾಡುತ್ತಿದ್ದರು. ನನ್ನ ಲಟಾರಿ ಸ್ಕೂಟರ್‌ಗೆ ಭಾರಿ ಭಾರಿ ಕಾರಿನವರೇ ಸೈಡು ಕೊಟ್ಟು ಮುಂದೆ ಹೋಗಲು ಬಿಡುತ್ತಿದ್ದರು.

ಮಂತ್ರಿಗಳ ಕಾರು! ... ರಿವರ್ಸ್ ಸಾಂಗ್ ಹೇಳುತ್ತಾ ಹಿಂದೆ ಹೋಯಿತು!

ಸಿಗ್ನಲ್‌ನಲ್ಲಿ ನಿಂತಿದ್ದಾಗ, ಎಲ್ಲರ ಮುಗುಳ್ನಗೆ, ಸಲ್ಯೂಟ್, ಸಲಾಮು! Read more about ಕರೀಕೋಟು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (8 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇನ್ನೂ ಒಂದು ... ಕತೆ.

April 25, 2012 - 12:09am
ಗಣೇಶ

ಪಾರ್ಥಸಾರಥಿ : ಹಲೋ.. ರಾಮಮೋಹನರೇ...ನಿಮಗೂ ಫೋನ್ ಬಂದಿತ್ತಾ?

ರಾಮೋ : ಹೌದ್ರೀ..ಆಶ್ಚರ್ಯ! ಏರ್‌ಟೆಲ್ ಕಸ್ಟಮರ್ ಕೇರ್‌ಗೆ ಫೋನ್ ಮಾಡಿ, ಅದು ಗಣೇಶರದ್ದೇ ಅಂತ ಕನ್‌ಫರ್ಮ್ ಮಾಡಿಕೊಂಡೆ.

ಪಾ ಸಾ : ಅವರನ್ನು ಭೇಟಿಯಾಗುವುದು ನನಗೂ ಇಷ್ಟ. ಆದರೆ ರಾತ್ರಿ ಹನ್ನೊಂದುವರೆಗೆ ಬರಬೇಕು ಅಂದಿದ್ದಾರಲ್ಲಾ?

ರಾಮೋ : ಹೋಗೋಣಾರೀ..ಒಂದು ರಾತ್ರಿಯ ಮಟ್ಟಿಗೆ ನಿದ್ರೆ ಬಿಟ್ಟರಾಯಿತು. ನೀವು ಮೆಜೆಸ್ಟಿಕ್‍ಗೆ ೯ಗಂಟೆಗೆ ಸರಿಯಾಗಿ ಬನ್ನಿ. ಕಾರು ಕಳುಹಿಸುತ್ತೇನೆ ಎಂದು ಗಣೇಶರೇ ಹೇಳಿದ್ದಾರಲ್ಲಾ..

ಪಾಸಾ : ಅದು ಸರೀರೀ..ಹಿಂದೆ ಬರುವುದು..?

ರಾಮೋ : ಅದಕ್ಕೂ ಗಣೇಶರು ಏನಾದರೂ ವ್ಯವಸ್ಥೆ ಮಾಡಿಯಾರು. ಈಗ್ಯಾಕೆ ಅದರ ಯೋಚನೆ. ಉಳಿದವರಿಗೂ ಫೋನ್ ಮಾಡಿ ವಿಚಾರಿಸಿದಿರಾ? Read more about ಇನ್ನೂ ಒಂದು ... ಕತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತಿಂಬಟ್ ಸ್ವಾಮಿಯ ಉದ್ಗಾರಗಳು

May 5, 2012 - 11:56pm
ಗಣೇಶ

(ತಿಂಬಟು ಸ್ವಾಮಿ = ತಿನ್ನುವುದರಲ್ಲಿ ಎಕ್ಸ್‌ಪರ್ಟು ಸ್ವಾಮಿ = ಅಂಡಾಂಡಭಂಡ ಸ್ವಾಮಿ)

ಎಡೆಬಿಡದೇ ವರ್ಷಾನುಗಟ್ಟಲೆ "ಡೈನಿಂಗ್ ರೂಮಲ್ಲಿ" ತಿನ್ನುತ್ತಾ ಇದ್ದಾಗ, ಸ್ವಾಮೀಜಿಗೆ ಜ್ಞಾನೋದಯವಾಯಿತು. ಅವರು ಪ್ರವಚನ/ಉಪದೇಶ ಕೊಡುವ ಕ್ರಮವಿಲ್ಲ. ಯಾವಾಗಲೂ ಧ್ಯಾನದ(ತಿನ್ನುವುದರ)ಲ್ಲಿ ಮಗ್ನರಾಗಿರುವುದರಿಂದ, ಎಡೆ‌ಎಡೆಯಲ್ಲಿ ಅವರು ಹೇಳಿದ ಮಾತುಗಳನ್ನು ಸಂಗ್ರಹಿಸಿ, ಸರ್ಫ್‌ನಲ್ಲಿ ತೊಳೆದು, ಒಣಗಿಸಿ, ಇಸ್ತ್ರಿ ಹಾಕಿ ಇಲ್ಲಿ ಕೊಡಲಾಗಿದೆ-

ದೇವರು :

ಮಾನವ ಜೀವನದಲ್ಲಿ ಹೇಗೆ ಬಾಲ್ಯ, ಕೌಮಾರ್ಯ, ಯೌವನ್ಯ, ವೃದ್ಧಾಪ್ಯ ಎಂದು ನಾಲ್ಕು ಹಂತಗಳಿರುವುದೋ (ಯೌವನ್ಯ-ಪ್ರಾಸಕ್ಕಾಗಿ "ಯ" ಅಡಿ ಒತ್ತುಕೊಟ್ಟಿರುವರು), ಹಾಗೇ ದೇವರ ವಿಷಯದಲ್ಲೂ ನಾಲ್ಕು ಹಂತಗಳಿವೆ. Read more about ತಿಂಬಟ್ ಸ್ವಾಮಿಯ ಉದ್ಗಾರಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)

May 13, 2012 - 12:46am
ಗಣೇಶ

ತಿಂಬಟ್ ಸ್ವಾಮಿಗಳ ಉದ್ಗಾರಗಳನ್ನು ಓದಿದ ಅನೇಕರು ಸ್ವಾಮಿಗಳ ಶಿಷ್ಯರಾಗಲು ಮುಂದೆ ಬಂದಿದ್ದಾರೆ ಎಂದು ಸ್ವಾಮಿಗಳ ಬಳಿ ಹೇಳಿದೆ. "ಈ ದಿನ ಗುರು-ಶಿಷ್ಯರ ಆಯ್ಕೆ ಬಗ್ಗೆ ಹೇಳುವೆ. ಓದಿದ ನಂತರ ಎಷ್ಟು ಜನ ಶಿಷ್ಯರಾಗುವರೋ ನೋಡೋಣ" ಎಂದರು.

ಗುರುವಿನ ಆಯ್ಕೆ :

ನಿಮ್ಮ ಸಂಪದಿಗರೇ ಆದ ಆಸುಹೆಗ್ಡೆಯವರು ತಮ್ಮ ಲೇಖನದಲ್ಲಿ  ಸ್ವರಗಳ ಏರಿಳಿತ ಸಹಿತ ನ್ಯೂಸ್ ಓದುವ ನ್ಯೂಸ್ ರೀಡರ್‌ಗಳ ಅಭಿಮಾನಿಯಾಗಿರುವ ಬಗ್ಗೆ ಬರೆದಿರುವರು. ಅದೂ...ಎಷ್ಟೋ ವರ್ಷಗಳ ಹಿಂದೆ.. ಬರೀ ನ್ಯೂಸ್ ಓದುವವರನ್ನೇ ಮರೆಯಲಾಗುತ್ತಿಲ್ಲ.
Read more about ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to cliche ಹಾಸ್ಯ