ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ತರಂಗ

ಇಂಬಕ್ಕ

ಗಗನಚುಂಬಿ
( ನನ್ನೀ ಪುಟ್ಟ ಕತೆಯನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ’ತರಂಗ’ ವಾರಪತ್ರಿಕೆಗೆ ಧನ್ಯವಾದಗಳು.)
"ತೇಜು ಇನ್ನ ಬೇಕಾದ್ರೆ ಎದ್ಕಳ್ಲಕ್ಕೇ ಮನೆ ಹತ್ರ ಬಂತು, ಇನ್ನು ಮನಿಗ್ಹೋಗೆ ಮಲ್ಗಲಕ್ಕೂ‌" ಎಂಬ ಅಪ್ಪನ ಎಚ್ಚರಿಸುವಿಕೆಯಿಂದಲೇ ನನಗರಿವಾದದ್ದು ನಾನಿರುವುದು ಕಾರಿನಲ್ಲಿ ಎಂದು. ಪ್ರಯಾಸದಿಂದ ಕಣ್ಣು ಬಿಟ್ಟು ವಾಚ್ ನೋಡಿದರೆ ಗಂಟೆ ಆರು ಆಗಿತ್ತು. ಮಧ್ಯಾಹ್ನ ಒಂದು ಗಂಟೆಗೇ ಮಂಗಳೂರಿನಿಂದ ಹೊರಟಿದ್ದರೂ ಶಿರಸಿ ಮುಟ್ಟುವಾಗ ಐದು ತಾಸು ಬೇಕಾಯಿತೇ ಎಂದು ಆಶ್ಚರ್ಯವಾಯಿತು. ಅಷ್ಟೂ ಹೊತ್ತು ಒಂದೇ ಭಂಗಿಯಲ್ಲಿ ಕುಳಿತಿದ್ದರಿಂದ ಮೈಯನ್ನೆಲ್ಲಾ ಒಂದು ತರಹ ಜಡತ್ವ ತುಂಬಿದಂತಾಗಿತ್ತು. ಅದನ್ನು ನೀಗಿಸಲು ಕಾರಿನ ಕಿಟಿಗಿ ಗಾಜನ್ನು ತೆಗೆದೆ,ಕೂಡಲೇ ಘಟ್ಟದ ತಂಪಾದ ಮುಸ್ಸಂಜೆ ಗಾಳಿ ರೊಯ್ಯನೆ ತೂರಿ ಬಂದು ಮೈ ಮನವನ್ನೆಲ್ಲಾ ಉಲ್ಲಾಸಗೊಳಿಸಿತು. ಆಗಲೇ ಕಾರು ಮನೆಯ ದಣಪೆಯ ಮುಂದೆ ನಿಂತಾಗಿತ್ತು.

'ಕಾಶ್ಮೀರ್ ಟು ಕನ್ಯಾಕುಮಾರಿ' - ನೀರಿನ ಸೆಲೆ ಹಿಡಿದು

ಸಿ ಎಸ್ ಶಾರದಾ ಪ್ರಸಾದ್ ನೀರಿನ ಸೆಲೆಗಳನ್ನು ಹುಡುಕಿಕೊಂಡು ಇಡಿಯ ದೇಶ ಬೈಕಿನಲ್ಲಿ ಸುತ್ತಲು ಹೊರಟದ್ದರ ಬಗ್ಗೆ ಈ ಹಿಂದೆ ಬರೆದಿದ್ದೆ. ಅವರು ೯೦ ದಿನಗಳಲ್ಲಿ ೧೯,೦೦೦ಕ್ಕೂ ಹೆಚ್ಚು ಕಿ.ಮಿ. ಪ್ರಯಾಣ ಮಾಡಿದರೂ ಟ್ರಿಪ್ ಯಶಸ್ವಿಯಾಗಿ ಮುಗಿಸಿಕೊಂಡು ಬಂದದ್ದು ಈಗ ಹಳೆಯ ಸುದ್ದಿ. ಆದರೆ ಈ ಯಾತ್ರೆಯಲ್ಲಿ ಅವರಿಗಾದ ಅನುಭವದ ಪುಟಗಳಲ್ಲಿನ ಭಾಗಗಳನ್ನು ಕೇಳಿ ತಿಳಿದು, ಜೋಡಿಸಿ ಕಳೆದ ವಾರದ ತರಂಗದಲ್ಲಿ ಮಾನ್ಯ ಶ್ರೀ ಪಡ್ರೆಯವರು ಒಂದು ಸಚಿತ್ರ ಲೇಖನ ಬರೆದಿದ್ದಾರೆ. ತರ‌ಂಗದ ಕಾಪಿ ಸಿಕ್ಕರೆ ಓದಿ.

ಶಾರದಾ ಪ್ರಸಾದ್ ಭಾರತುದ್ದಕ್ಕೂ ಅವರು ಭೇಟಿ ನೀಡಿದ ಸ್ಥಳಗಳಲ್ಲಿ ನೀರಿನ ಪರಿಸ್ಥಿತಿಯ ಫೋಟೋ ಲಾಗ್ ಮಾಡಿದ್ದಾರೆ. ಅದನ್ನು ಇಲ್ಲಿ ವೀಕ್ಷಿಸಬಹುದು.  ಮುಂದೆ ಓದಿ »

ಸುದ್ದಿ-ಸ್ವಾರಸ್ಯ?

ಸುಧಾ ವಾರಪತ್ರಿಕೆಯಲ್ಲಿ ಹಲವು ವರ್ಷಗಳಿಂದ ಕೊನೆಯ ಪುಟದ ಕಾಲಂ ಹೆಸರು ಇದು. ಕೊಂಚ ತರಲೆ, ಕೊಂಚ ಹಾಸ್ಯ, ಮತ್ತಷ್ಟು ಗೋಡೆಯಿಂದಾಚೆಗಿನ ಸುದ್ದಿ, ಸರಕು. ಆದರೆ ಈ combination ಎಷ್ಟು ಚೆನ್ನಾಗಿ ಒಗ್ಗಿಸಿಕೊಂಡಿದ್ದಾರೆಂದರೆ ಈ ವಿಭಾಗ ನನಗೆ ತಿಳಿದಂತೆ ತುಂಬಾ ಜನಪ್ರಿಯ!  ಮುಂದೆ ಓದಿ »

Syndicate content