19
June
2013

ಕೆಲಸ

ಕಚೇರಿ ಎಂಬ ನರಕ-೧

August 24, 2008 - 11:42pm
pallavi.dharwad
ನನ್ನ ಬರಹಕ್ಕೆ ಪ್ರತಿಕ್ರಿಯೆ ಹಾಕುತ್ತಾ ಶ್ರೀದೇವಿ ಕಳಸದ ಅವರು ಒಂದು ಸವಾಲು ಒಡ್ಡಿದ್ದಾರೆ. ಅದು ಸವಾಲೆಂದರೇ ಸರಿ. ಏಕೆಂದರೆ, ಅವರ ಪ್ರಕಾರ ನಾನು, ಜಿಟಿಜಿಟಿ ಮಳೆಯಲ್ಲಿ ಬೆಚ್ಚಗೇ ಕೂತು, ಭಾವನಾತ್ಮಕ ಪ್ರಪಂಚದಲ್ಲಿ ವಿಹರಿಸುತ್ತಿದ್ದೇನಂತೆ. ಲೋಕದ ಕಷ್ಟಗಳ ಬಗ್ಗೆ ನನಗೆ ಗೊತ್ತಿಲ್ಲವಂತೆ. ’ನಾವಾದರೆ, ಕಚೇರಿಯಲ್ಲಿ ಕೆಲಸ ಮಾಡಿ, ಹೈರಾಣಾಗಿ ಮನೆಗೆ ಬರುತ್ತೇವೆ. ಹೀಗಾಗಿ, ಬರವಣಿಗೆಯಲ್ಲಿ ಪೂರ್ತಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ’ ಎಂಬುದು ಅವರ ದೂರು. ಈ ದೂರಿಗೆ ಅಥವಾ ಅಸಮಾಧಾನಕ್ಕೆ ನಾನೊಬ್ಬಳೇ ಉತ್ತರ ಬರೆಯುವುದು ಸೂಕ್ತವಲ್ಲ ಅಂದುಕೊಂಡಿದ್ದೇನೆ. ಸಂಪದದ ನಿಯಮಿತ ಬರಹಗಾರ್ತಿಯರಾದ ಕಲ್ಪನಾ, ರೂಪಾ, ಜಯಲಕ್ಷ್ಮೀ ಕೂಡಾ ಈ ಪ್ರಶ್ನೆಯನ್ನು ತಮಗೇ ಸಂಬಂಧಿಸಿದ್ದು ಎಂಬಂತೆ ತೆಗೆದುಕೊಂಡು ಉತ್ತರ ನೀಡಬೇಕೆಂದು ನನ್ನ ವಿನಂತಿ. ಕಚೇರಿಯಲ್ಲಿ ನಾನು ಕೆಲಸ ಮಾಡಿಲ್ಲ. ಅಲ್ಲಿಯ ಸಮಸ್ಯೆಗಳ ಬಗ್ಗೆ ನನಗೆ ನೇರ ಅನುಭವವಿಲ್ಲ. ಆದರೆ, ಕಚೇರಿಯ ವಾತಾವರಣ ಗೊತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ, ಕಾಲೇಜಿನ ದಿನಗಳಲ್ಲಿ ಆಗಷ್ಟು, ಈಗಷ್ಟು ಕಚೇರಿಯ ರಗಳೆಯನ್ನು ಅನುಭವಿಸಿದ್ದಾಗಿದೆ. ಅಡ್ಮಿಶನ್‌ ಸಮಯದಲ್ಲಂತೂ ಗುಮಾಸ್ತರು ಜೀವ ಹಿಂಡುತ್ತಿದ್ದರು. ನಮ್ಮವೇ ಮಾರ್ಕ್ಸ್‌‌ಕಾರ್ಡ್‌‌ಗಳ ಮೇಲೆ ಮುಖ ಗೊತ್ತಿಲ್ಲದ ಗೆಜೆಟೆಡ್‌ ಆಫೀಸರ್‌ನ ಅಟೆಸ್ಟೇಶನ್‌ ಮಾಡಿಸಿ ತರಬೇಕಿತ್ತು. ಸರಕಾರಿ ಕಚೇರಿಗಳ ಕ್ರೂರತೆ ಮತ್ತು ಕೆಟ್ಟ ವೃತ್ತಿಪರತೆ ಹೇಗಿರುತ್ತದೆ ಎಂಬುದು ನನ್ನ ಅನುಭವಕ್ಕೆ ಬಂದಿದ್ದು ಆಗ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇದು ಕರ್ನಾಟಕವಲ್ಲ ಕಾಣಿರೋ

September 23, 2008 - 11:31am
Chetan.Jeeral
ನಮಸ್ಕಾರ,
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಹಕರಿಸಿ - ಶಾರ್ಜದಲ್ಲಿ ಕೆಲಸ

December 3, 2008 - 4:45pm
ಅರವಿಂದ್
ಪ್ರೀತಿಯ ಗೆಳೆಯರೆ, ಮಧ್ಯಾಹ್ನ ಒಂದು ಕನ್ಸಲ್ಟೆಂಟ್ಸ್ ಮುಖಾಂತರ ಶಾರ್ಜಾದಲ್ಲಿನ ಡಿ.ಎ. ಡೆಸ್ಕ್ ಎಂಬ ಕಂಪನಿಯಲ್ಲಿ ನನಗೊಂದು ಕೆಲಸದ ಅವಕಾಶ ಬಂದಿದೆ. ಈ ಮಂಗಳವಾರ ಆದರ ಸಂದರ್ಶನ ಇದ್ದು, ನನಗೆ ತಿಳಿದವರು ಕೆಳಗಿನ ಪ್ರಶ್ನೆಗಳಿಗೆ ಸಮಾಧಾನ ನೀಡುತ್ತೀರಾ....... ಅಥವಾ ನಿಮ್ಮ ಸ್ನೇಹಿತರು ಯಾರಾದರು ಕೆಲಸ ಮಾಡುತ್ತಿದ್ದರೆ ಅವರ ಈ-ಅಂಚೆ ವಿಳಾಸವನ್ನು ತಿಳಿಸಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೆಮ್ಮದಿ

December 5, 2008 - 8:19am
Aravinda

ಆಫೀಸಿನಿಂದ ಮನೆಗೆ ಬಂದ ಮೇಲೆ ರಾತ್ರಿ ಬಹಳ ಸಮಯದವರೆಗೂ ನನ್ನ ವೆಬ್ ಸೈಟ್ ಕೆಲಸ ಮಾಡುತ್ತಾ ಇದ್ದೆ. ಕೊನೆಗೂ ಅದು ಒಂದು ಹಂತಕ್ಕೆ ತಲುಪಿದ್ದು ಮೊದಲ ಆವೃತ್ತಿ  ಬಿಡುಗಡೆಗೊಂಡಿದೆ. ಹಾಗಾಗಿ ಇವತ್ತು ಮನೆಗೆ ಬಂದಾಗ ಮಾಡಲು ಏನೂ ಕೆಲಸ ಇಲ್ಲ ಅಂತ ಅನ್ನಿಸುತ್ತಿತ್ತು, ಏನೋ ಕಳೆದು ಕೊಂಡಂತಹ ಅನುಭವ, ಜೊತೇಗೆ ನಂದೂ ಒಂದು ವೆಬ್ ಸೈಟ್ ಆಯ್ತು ಅಂತ ಖುಷಿನೂ ಆಗ್ತಿತ್ತು.
Read more about ನೆಮ್ಮದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

wanted

December 24, 2008 - 4:26pm
ಅರವಿಂದ್

ಕೆಲಸ ಬೇಕು ................ ಕೆಲಸ

ಇದೇ ಜೊತೆಗೆ ಡಿಗ್ರಿ ಕಳಸ,

ಮುಗ್ಸಿದೀವಿ ಬಿಎ, ಬಿಎಸ್ಸಿ, ಬಿಕಾಂ

ಸಿಗ್ಲಿ ಅಂತ ಯಾವ್ದಾದ್ರೂ ಕಾಮು,

 

ಕೊಡದೇ ಇದ್ರೆ ಇನಾಮು

ದೊರಕೊದಿಲ್ವಂತೆ ರೂಮು,

ಕೊಡೋಣ ಅಂದ್ರೆ ಸಂthing

ನಮ್ಮಲ್ಲೀಗ ನthing

  Read more about wanted

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೆಲಸ ಬೇಗ ಮುಗಿಸಿದಾಗ

March 5, 2009 - 7:51pm
Aravinda

ನಂಗಂತೂ ಸರಿಯಾಗೇ ನೆನಪಿದೆ, ಒಂದು ಗಂಟೆ ಬೇಕಾಗಿದ್ದ ಆ ಮ್ಯಾನುಯಲ್ ಕೆಲಸಕ್ಕೆ ಸ್ಕ್ರಿಪ್ಟ್ ಬರೆದು ರನ್ ಮಾಡಿದಾಗ ಹತ್ತು ನಿಮಿಷ ತಗೊಂಡಿತ್ತು ಅಷ್ಟೆ. ಆ ಕೆಲ್ಸ ಮುಗಿದು ಎಷ್ಟೋ ದಿನ ಆಯ್ತು , ಅವಾಗ ೫೦ ನಿಮಿಷ ಉಳಿಸಿದ್ದುದರ ಡೀಟೈಲ್ಸ್ ಈಗ ಬೇಕಂತೆ.. ಅದೂ ಸ್ಟಾಟಿಸ್ಟಿಕ್ಸ್ ಸಮೇತ ಬೇಕಂತೆ. ಕಳೆದ ಎರಡು ಗಂಟೆಯಿಂದಾ ಹುಡುಕ್ತಾ ಇದೀನಿ ಆ ಸ್ಕ್ರಿಪ್ಟೇ ಸಿಕ್ತಿಲ್ಲ...
Read more about ಕೆಲಸ ಬೇಗ ಮುಗಿಸಿದಾಗ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ವೃತ್ತಿ/ಕೆಲಸ/ಕಾರ್ಯ, ಕಾಲೇಜಿಂದ ಕ್ಯೂಬಿಗೆ, ವೃತ್ತಿಯ ಮಹತ್ವದ ಪರಿಚಯ ಮತ್ತಿತರ ವಿಚಾರಗಳು

May 27, 2009 - 12:44am
raghava
ನಾವೆಲ್ರೂ ಕೆಲ್ಸ ಮಾಡ್ತೀವಿ. ಬೆಳ್ಗೆ ಎದ್ದು ರೆಡಿ ಆಗಿ ಆಫೀಸಿಗೆ ಹೋಗ್ತೀವಿ. ಹತ್ಹನ್ನೊಂದ್ಗಂಟೆ ಆಫೀಸಲ್ಲಿ ಕಳೀತೀವಿ. ಎರ್ಡ್ಮೂರ್ಟೀ/ಕಾಫೀ ಬ್ರೇಕು, ಒಂದ್ಲಂಚ್ಬ್ರೇಕು ಅಂತ ಕಳ್ದು ಕೆಲ್ಸ ಮುಗೀತು ಅಂತ ಬರ್ತೀವಿ ವಾಪಸ್ಸು ಮನೆಗೆ. ಆದ್ರೆ ದಿನಾ ಮನೇಗೆ ಬರೋ ಮುಂಚೆ ದಿನ್ವಿಡೀ ದುಡಿದಿದ್ದರ ಪ್ರತಿಫಲ (tangible end result, at least in part) ಕಾಣ್ತೀವಾ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಉದ್ಯೋಗವಕಾಶ

February 11, 2010 - 3:14pm
Nagaraj.G

ಚಿತ್ರದುರ್ಗದಲ್ಲಿ ಹೊಸದಾಗಿ ಪ್ರಾರಂಭವಾಗುತ್ತಿರುವ ವಸತಿ ಶಾಲೆಗೆ ಬೋಧನೆ ಮಾಡಲು ಉಪಾದ್ಯಾಯರು ಬೇಕಾಗಿದ್ದಾರೆ. ಇಂಗ್ಲೀಶ್ ಮಾದ್ಯಮದವರಾದರೆ  ಉತ್ತಮ. ಕನ್ನಡ ಮಾದ್ಯಮದವರಾಗಿದ್ದರೂ ಪರವಾಗಿಲ್ಲ ಇಂಗ್ಲೀಶ್ ಬಲ್ಲವರಾಗಿರಬೇಕು ಏಕೆಂದರೆ ಇದು ಇಂಗ್ಲೀಶ್ ಮಾದ್ಯಮ ಶಾಲೆ. ಬ್ಯಾಚಲರ್ಸ್ ಆದ್ರೆ ವಸತಿ ಮತ್ತು ಊಟ ಕೊಡುತ್ತಾರೆ. ವಿವಾಹಿತರಾದರೆ ಕೋಟ್ರಸ್ ಕೊಡ್ತಾರೆ. ಯಾರಾದರು ಇದ್ರೆ ಅವರ ಪೂರ್ಣ ವಿಳಾಸ ಮತ್ತು ಸಂರ್ಕಿಸಬೇಕಾದ ದೂರವಾಣಿ ಸಂಖ್ಯೆಯನ್ನು ನೀಡಿ. ಸೆಲೆಕ್ಷನ್ ಮತ್ತು ಇಂಟರ್ಯ್ಯೂಗೆ ಬೆಂಗಳೂರಲ್ಲೆ ಇರುತ್ತದೆ. ಡಿ.ಎಡ್ ಮಾಡಿರುವವರಿಗೆ  6000 ದಿಂದ 7000 ಬಿ.ಎಡ್ ಮಾಡಿರುವವರಿಗೆ 7000 ರಿಂದ 8000  ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 9902535473 ಅಥವಾ 9916165217.

 

  Read more about ಉದ್ಯೋಗವಕಾಶ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬರ್ತೀರಾ ಚೆನ್ನೈಗೆ??

April 14, 2010 - 2:37pm
rennie606
ವೆಬ್‌ದುನಿಯಾ: ಉಪಸಂಪಾದಕರು/ಅನುವಾದಕರು ಬೇಕು  
 
ಆನ್‌ಲೈನ್ ಪತ್ರಿಕೋದ್ಯಮದಲ್ಲಿ ಹಾಗೂ ತಾಂತ್ರಿಕ ಭಾಷಾಂತರವನ್ನೇ ತಮ್ಮ ವೃತ್ತಿಯನ್ನಾಗಿಸಿಕೊಳ್ಳಲು ಕನಸು ಕಾಣುತ್ತಿರುವವರಿಗಾಗಿ ಇದೋ ಒಂದು ಅವಕಾಶ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೆಲಸವಿದೆ, ಅರ್ಹ ಅಭ್ಯರ್ಥಿಗಳು ಸಿಗ್ತಿಲ್ಲ

April 29, 2010 - 10:03pm
prasca

ಸ್ನೇಹಿತರೆ,

ವೈದ್ಯಕೀಯ ವಿದ್ಯುನ್ಮಾನ (ಮೆಡಿಕಲ್ ಎಲೆಕ್ಟ್ರಾನಿಕ್ಸ್) ಉಪಕರಣಗಳನ್ನು ತಯಾರಿಸುವ ನನ್ನ ಸ್ನೇಹಿತನ ಸಂಸ್ಥೆಯಲ್ಲಿ ೨೦೦೯ರ ಡಿಪ್ಲೊಮ  ಪದವಿಧರನ ಅವಶ್ಯಕತೆಯಿದೆ.   ಕನ್ನಡಿಗರನ್ನೆ ತೆಗೆದುಕೊಳ್ಳಬೇಕೆನ್ನುವುದು ಅವನ ಹಂಬಲ ಆದರೆ ಅರ್ಹ ಕನ್ನಡ ಅಭ್ಯರ್ಥಿಗಳು ಇದುವರೆಗೂ ಸಿಕ್ಕಿಲ್ಲ. ದಯವಿಟ್ಟು ನಿಮ್ಮಲ್ಲಿ ಅರ್ಹ ಕನ್ನಡಿಗ ಅಭ್ಯರ್ಥಿಗಳಿದ್ದರೆ ಅವರ ಜಾತಕವನ್ನು  prasannakannadiga[at]gmail.com ಗೆ ಕಳುಹಿಸಿ.

ಇಂತಹ ವಿಷಯಗಳನ್ನು ಸಂಪದದಲ್ಲಿ ಸೇರಿಸಬಹುದೋ ಇಲ್ಲವೊ ಗೊತ್ತಿಲ್ಲ. ತಪ್ಪೆನಿಸಿದರೆ ಕ್ಷಮೆಯಿರಲಿ Read more about ಕೆಲಸವಿದೆ, ಅರ್ಹ ಅಭ್ಯರ್ಥಿಗಳು ಸಿಗ್ತಿಲ್ಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನ್ನಡಿಗ ಇಂಜಿನಿಯರುಗಳೆ ಭಾರತ್ ಎಲೆಕ್ಟ್ರಾನಿಕ್ಸ್ ಗೆ ಬನ್ನಿ

May 1, 2010 - 9:16am
prasca

ಭಾರತ್ ಎಲೆಕ್ಟ್ರಾನಿಕ್ಸ್ ದೇಶದ ಹೆಮ್ಮೆಯ ನವರತ್ನ ಸಂಸ್ಥೆಗಳಲ್ಲಿ ಒಂದು. ದೇಶದ ರಕ್ಷಣೆಗೆ ವಿದ್ಯುನ್ಮಾನ ಉಪಕರಣಗಳನ್ನು ತಯಾರಿಸುವುದರಲ್ಲಿ ಮುಂಚೂಣಿಯಲ್ಲಿರುವ ನಾಡಿನ ಹೆಮ್ಮೆಯ ಉದ್ಯಮ ೧೫೮ ವಿವಿಧ ಕ್ಷೇತ್ರಗಳ ೨೦೦೯ರ ಇಂಜಿನಿಯರುಗಳಿಗಾಗಿ ಬೇಡಿಕೆಯಿಟ್ಟಿದೆ. ಪ್ರತಿ ಬಾರಿಯೂ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಕನ್ನಡಿಗರನ್ನು ಆಯ್ಕೆ ಮಾಡಿ ಎಂಬ ಕನ್ನಡ ಸಂಘಟನೆಗಳ ಬೇಡಿಕೆ ಆಡಳಿತ ಮಂಡಳಿಯ ಉತ್ತರ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದಿಲ್ಲ ಎಂಬ ಸಬೂಬು. ಅದಕ್ಕಾಗಿ ಅವರ ಹುನ್ನಾರವನ್ನು ಒಡೆಯಲು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ವಿವರಗಳಿಗೆ www.bel-india.com ನೋಡಿ. Read more about ಕನ್ನಡಿಗ ಇಂಜಿನಿಯರುಗಳೆ ಭಾರತ್ ಎಲೆಕ್ಟ್ರಾನಿಕ್ಸ್ ಗೆ ಬನ್ನಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಕೆಲಸ