ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕೈಲಾಸಂ

ಭಾನುವಾರದ ಮಳೆ, ಪಾಟೀಲರ ನಾಟಕ

ಜಯಲಕ್ಷ್ಮಿ ಪಾಟೀಲರು 'ನನ್ನದೊಂದು ನಾಟಕ ಇದೆ' ಎಂದು ಬರೆದದ್ದು ಸಮುದಾಯದ ಹೊಸಬರಲ್ಲಿ ಅಚ್ಚರಿ ಮೂಡಿಸಿರಲಿಕ್ಕೂ ಸಾಕು. ನಾಟಕದ ಕುರಿತು ನಡೆಸಿಕೊಡುತ್ತಿರುವವರೇ ಬರೆದು ಆಮಂತ್ರಣ ನೀಡುವುದು ಹಲವರಿಗೆ ಹೊಸತೆನಿಸಬಹುದು. ಆದರೆ ಹಲವು ವರ್ಷಗಳ ಕಾಲ ಹಲವು ಸಮುದಾಯಗಳಲ್ಲಿ ಪಾಲ್ಗೊಂಡವರಿಗೆ ಗೊತ್ತಿರುತ್ತದೆ, ಎಲ್ಲರೊಂದಿಗೆ ಬೆರೆತು ಎಲ್ಲರನ್ನೂ ಆಮಂತ್ರಿಸುವ ಈ ರೀತಿ ಸಮುದಾಯಗಳಲ್ಲಿ ಹೊಸತೇನಲ್ಲ ಎಂಬುದು. ಸಮುದಾಯದಲ್ಲಿ ಸಮಾನತೆ ಕಾಣಿಸುವ ಹಲವು ವಿಷಯಗಳಲ್ಲಿ ಇದೂ ಒಂದು.

ಅಂದು 'ನಾಟಕ ಇದೆ, ಬನ್ನಿ' ಎಂದು ಬರೆದ ಲೇಖನ ಸರಿಯಾಗಿ ಪ್ರಕಟವಾಗಿಲ್ಲವೆಂದು ಜಯಲಕ್ಷ್ಮಿಯವರು ಸಂಪರ್ಕಿಸಿದಾಗ ಅದನ್ನು ಸರಿಪಡಿಸುವುದು ಹೇಗೆಂದು ತಿಳಿಸಿ "ನಾವೂ ಬರುತ್ತೇವೆ" ಅಂದಿದ್ದೆ. "ಬರ್ತೀರಾ?" ಎಂದು ಎರಡೆರಡು ಸಾರಿ ಕೇಳಿದ್ದರು, ಇವರೆಲ್ಲ ಕಂಪ್ಯೂಟರ್ ಬಿಟ್ಟು ಹೊರಗೆ ಹೋಗುವುದೇ ನಂಬಲಾಗದು ಎಂಬಂತೆ.

ಭಾನುವಾರ ಬಂತು, ನಾಟಕ ನೋಡೋಕೆ ಹೊರಟಿದ್ದೇನೋ ಸೈ, ಆದರೆ ಎಂದಿನಂತೆ ನಮ್ಮ ಪ್ರೋಗ್ರಾಮಿನಲ್ಲಿ twists ಎಂಡ್ turnsಉ. ಅರವಿಂದ ಮೈಸೂರಿನಿಂದ ಬಂದಿದ್ದ, ಅವ ಹಿಂದಿನ ದಿನ ಫೋನ್ ಮಾಡಿ "ಶ್ರೀನಗರದಲ್ಲಿದೀನಿ, ಸಿಗೋಣ್ವ?" ಅಂದಿದ್ದ.

ದಾರಿಯುದ್ದಕ್ಕು ಮಳೆ ಬೇರೆ ಭೋರ್ ಎಂದು ಹೊಡೆಯುತ್ತಿತ್ತು. ಪಾಲನಿಗೆ "ನೀನು ಆಶ್ರಮ ಬಸ್ ಸ್ಟಾಪಿಗೆ ಬಂದುಬಿಡು" ಎಂದು ಹೇಳಿ ಘಂಟೆಗಳೇ ಆಗಿಹೋಗಿತ್ತು. ಅವ ನಾಲ್ಕೈದು ಕಾಫಿ ಕುಡಿಯುತ್ತ, ನಮಗೆ ಕಾಯುತ್ತ ತಾಳ್ಮೆಯನ್ನು ಪರೀಕ್ಷೆಗೆ ಹಚ್ಚಿದ್ದ.  ಮುಂದೆ ಓದಿ »

...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!

ಪೂರ್ಣ ಆವೃತ್ತಿಗಾಗಿ ಕೆಳಗೆ (ಚಿತ್ರದ ಮೇಲೆ) ಕ್ಲಿಕ್ ಮಾಡಿ.
cartoon by HPNadig

"ಪೌಡರ್ ಗಿವ್ಡರ್ ಹಾಕಿಕೊಂಡ ಮನುಷ್ಯಳೊಬ್ಬಳು
ಕಣ್ಣು ಗಿಣ್ಣು ತಿರ್ಸಿ ಗಿರ್ಸಿ ಮಿಟುಗ್ಸಿ ಗಿಟುಕ್ಸಿ ನೋಡಿ ನಕ್ಕಾಗ...  ಮುಂದೆ ಓದಿ »

Syndicate content