ಮೂಕ ಮಾತು
ನೂರೊಂದು ಮಾತೇಕೆ ಬೇಕು
ನಿನ್ನ ಕಣ್ಣ ಕಿಟಕಿಯಿಂದ ನಿನ್ನ
ಒನಪೆಲ್ಲ ತೋರುತಿರಲು.
ಕಟ್ಟಲಾದೀತೇ ಆ ಬೆಡಗು
ಬಿನ್ನಾಣವನು ಮಾತಲ್ಲಿ,
ಕಣ್ಣಲ್ಲೇ ಹರಿಯಲಿ ಬಿಡು,ಜಗವೇ
ಮೂಕತನದಿ ಸಾಗುತಿರಲು. Read more about ಮೂಕ ಮಾತು
ನೂರೊಂದು ಮಾತೇಕೆ ಬೇಕು
ನಿನ್ನ ಕಣ್ಣ ಕಿಟಕಿಯಿಂದ ನಿನ್ನ
ಒನಪೆಲ್ಲ ತೋರುತಿರಲು.
ಕಟ್ಟಲಾದೀತೇ ಆ ಬೆಡಗು
ಬಿನ್ನಾಣವನು ಮಾತಲ್ಲಿ,
ಕಣ್ಣಲ್ಲೇ ಹರಿಯಲಿ ಬಿಡು,ಜಗವೇ
ಮೂಕತನದಿ ಸಾಗುತಿರಲು. Read more about ಮೂಕ ಮಾತು
ರಾತ್ರಿಯಾಗಿದೆ.
ಎಲೆಕ್ಟ್ರಾನಿಕ್ ಗಡಿಯಾರವಾದ್ದರಿಂದ ಟಿಕ್ ಟಿಕ್ ಸದ್ದಿಲ್ಲ. ಡಿಜಿಟಲ್ ಅಂಕೆಗಳಿರುವುದರಿಂದ ಮುಳ್ಳುಗಳು ಕಾಣುವುದಿಲ್ಲ. ಗಂಟೆಗೊಮ್ಮೆ ಸಂಗೀತ ಮೊಳಗಿಸಿ, ಗಂಟೆಯ ಸದ್ದು ಹೊರಡಿಸುವುದನ್ನು ಬಿಟ್ಟರೆ ಗಡಿಯಾರ ತನ್ನ ಗಡಿ ದಾಟಿ ತೊಂದರೆ ಕೊಡುವುದಿಲ್ಲ.
ಮಕ್ಕಳು ಮಲಗಿರುತ್ತವೆ. ಮಡದಿಗೂ ಗಾಢ ನಿದ್ರೆ. ಕಚೇರಿಯ ಉದ್ವೇಗವನ್ನು ಇಳಿಸಿಕೊಳ್ಳಲು ಮೌನವಾಗಿ ಕೂತವನಿಗೆ ಕಂಪ್ಯೂಟರ್ ತೆರೆಯುವುದು ಏಕೋ ಬೇಸರ.
ಸ್ವಲ್ಪ ಹೊತ್ತು ಸುಮ್ಮನೇ ಕೂಡುತ್ತೇನೆ. ಸಾವಿರ ನೆನಪುಗಳು ಮುಕುರಿಕೊಳ್ಳುತ್ತವೆ. ಬಾಲ್ಯ, ಹರೆಯ, ಓದಿನ ಗುಂಗು, ಬಡತನ, ಹಳ್ಳಿ, ಬೀಸುವ ಗಾಳಿ, ಕೆಟ್ಟ ಬಿಸಿಲು, ಹಸಿವು ನೆನಪಾಗುತ್ತವೆ. ಗದಗ ಜಿಲ್ಲೆ, ರೋಣ ತಾಲ್ಲೂಕಿನ ಕೋಡಿಕೊಪ್ಪ ಎಂಬ ಹಳ್ಳಿಯಲ್ಲಿ ಕಳೆದ ಮೂರು ವರ್ಷಗಳು ಕಣ್ಮುಂದೆ ಸುಳಿಯುತ್ತವೆ. ನನ್ನ ಬದುಕು ಯಾವತ್ತೂ ಬದಲಾಗುವುದಿಲ್ಲ ಬಿಡು ಅಂತ ಅದೆಷ್ಟು ಸಾವಿರ ಸಲ ಹೇಳಿಕೊಂಡಿದ್ದೆನೋ ಅಲ್ಲಿ. ಆದರೆ, ನೋಡನೋಡುತ್ತ ಬದುಕು ಬದಲಾಗುತ್ತಲೇ ಹೋಯಿತು. ಹೌದು: Things fall apart. ಏಕೆಂದರೆ, centre can not hold.
ಪುಸ್ತಕಗಳು ಸೆಳೆಯುತ್ತವೆ. ಇದ್ದ ಷೆಲ್ಫ್ ತುಂಬಿದ್ದರಿಂದ, ಡಬ್ಬದಲ್ಲಿರುವ ಪುಸ್ತಕಗಳನ್ನು ಹೊರತೆಗೆಯಲೇ ಆಗಿಲ್ಲ. ಬೇಂದ್ರೆಯವರ ಬಹುತೇಕ ಕವನ ಸಂಕಲನಗಳು ಒಂದೆಡೆ ಕೂತಿವೆ. ಬೇಂದ್ರೆ ಓದುತ್ತಿದ್ದರೆ ಮನಸ್ಸು ಹರಿಯುವ ನೀರಾಗುತ್ತದೆ. ಅಲ್ಲಮಪ್ರಭು ಹೇಳಿದ್ದಾರಲ್ಲ: ಹರಿವ ನೀರಿಗೆ ಮೈಯೆಲ್ಲಾ ಕೈಕಾಲು. ಎಂಥ ಉದಾತ್ತ ವಿಚಾರ!

ಅರಿವಿಲ್ಲದಿರುವುದ ಮುಚ್ಚಿಡಲೆಂದೇ
ಸರಸಿಜಭವ*ನು ಕೊಟ್ಟಿಹನಲ್ಲ!
ಧರಿಸುವುದೊಳಿತು ಮೌನದ ಒಡವೆಯ
ಅರಿತವರೆ ಸುತ್ತಲು ನೆರೆದಿರುವಲ್ಲಿ
ಸರಸಿಜಭವ = ತಾವರೆಯಲ್ಲಿ ಹುಟ್ಟಿದವನು, ಬ್ರಹ್ಮ
ಸಂಸ್ಕೃತ ಮೂಲ: (ಭರ್ತೃಹರಿಯ ನೀತಿಶತಕದಿಂದ) Read more about ಮೌನವೆಂಬ ಒಡವೆ

ಕಡಲ ಕೊರೆತಕೇನೋ
ಇಡಬಹುದು ಬಂಡೆಗಳ...
ನಿನ್ನ ಮೌನದಿಂದ
ಹೃದಯದಲುಂಟಾಗುವ ಕೊರೆತಕೆ
ಏನು ಮಾಡಲಿ, ಹೇಳೇ ಸಖೀ???
--ಶ್ರೀ
ಕ್ಲಾಸಿನ ಮೊದಲ ಬೆಂಚಿನ ಕೊನೆಯಲ್ಲಿ
ಪಾಠವನ್ನು ಎವೆಯಿಕ್ಕದೇ ಕೇಳಿಸಿಕೊಳ್ಳುತ್ತಿದ್ದ ನಿನ್ನನಲ್ಲವೇ ಮೆಚ್ಚಿದ್ದು?
ಹತ್ತು-ಹಲವಾರು ಹುಡುಗಿಯರ ಗುಂಪಿನಲ್ಲಿ
ನಿನ್ನಿರುವು ಯಾರಿಗೂ ಅರಿವಿಗೇ ಬಾರದೇ ಇದ್ದದ್ದಕ್ಕಲ್ಲವೇ ಮೆಚ್ಚಿದ್ದು?
ನಿನ್ನೊಳಗಿನ ಜಗವನ್ನು ಬಿಟ್ಟು ಹೊರಗೆ ಬಾರದೆ ಇದ್ದ ಅಂತರ್ಮುಖಿಯನ್ನಲ್ಲವೇ ನಾ ಮೆಚ್ಚಿದ್ದು?
ನನ್ನ ಮನದ ಮಾತು ನಿನಗೆ ತಲಪುವ ಮುನ್ನ ನಿನ್ನೊಳಗಿನ ಭಾವ ಹೇಗಿತ್ತೋ ಅರಿಯೆ...
ನನ್ನ ಪ್ರೇಮದ ಒಕ್ಕಣೆಗೂ ಮೌನವಾಗೆ ಸಮ್ಮತಿಸಿದ್ದೆಯಲ್ಲವೇ?
ಅಂದಿನಿಂದಲೇ ಶುರುವಾಯ್ತು ಹೊಸ ಅಧ್ಯಾಯ...
ನೀ ಬದಲಾದೆ ಗೆಳತಿ...
ಸಮ್ಮೋಹನಗಳಿಸಿದ ಆ ಮೌನ ಮಾಯವಾಯ್ತಲ್ಲ...
ಈಗ, ನನ್ನೊಡನಿದ್ದಾಗ ನಿನ್ನಧರಕೆ ಬಿಡುವಿಲ್ಲ! Read more about ಏಕೆ ಬದಲಾದೆ ಗೆಳತಿ?