ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

— ಡಿ.ವಿ.ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಭಾವಾನುವಾದ

ವಿಷದ ಗಿಡ

ಗೆಳೆಯನ ಮೇಲೆ ಏಕೋ ಮುನಿಸಾಯ್ತು
ಅವನೆದುರು ಹೇಳಿಕೊಂಡೆ, ಮುನಿಸು ಕರಗಿತು
ಶತ್ರವಿನ ಮೇಲೇಕೋ ಮುನಿಸಾಯ್ತು
ಅವನೆದುರು ಹೇಳಲಿಲ್ಲ, ಮುನಿಸು ಬೆಳೆಯಿತು

ಅವನ ಮೇಲಿನ ಭಯದ ನೀರುಣಿಸಿದೆ
ಹಗಲು-ರಾತ್ರಿ ಕಣ್ಣೀರು ಹನಿಸಿದೆ
ಹುಸಿ ನಗೆ ಹಾಗೂ ಕುತಂತ್ರಗಳ
ಬಿಸಿಲುಣಿಸಿ ಮುನಿಸು ಬೆಳೆಸಿದೆ

ದ್ವೇಷದ ಗಿಡ ಹಗಲು-ರಾತ್ರಿ ಬೆಳೆಯಿತು
ಕೊನೆಗೆ ಸುಂದರ ವಿಷ ಫಲ ಬಿಟ್ಟಿತು
ಅದು ಬೆಳಗುವುದನ್ನು ನನ್ನ ಶತ್ರು ನೋಡಿದ್ದ
ಆ ಫಲ ನನ್ನದೆನ್ನುವುದನ್ನು ಅವ ಅರಿತಿದ್ದ

ಕತ್ತಲಾವರಿಸಿದಾಗ, ಏನೂ ಕಾಣದಾದಾಗ
ಸದ್ದಿಲ್ಲದೇ ಬಂದ, ವಿಷ ಫಲವ ಕದ್ದು ಮೆದ್ದ
ಬೆಳಗಾದಾಗ ನನ್ನ ಹೃದಯ ಪುಟಿಯಿತು
ಮರದಡಿ ಅವ ಸತ್ತಿದ್ದ ಕಂಡು ನಲಿಯಿತು

ಮೂಲ: ವಿಲಿಯಂ ಬ್ಲೇಕ್‌
ಭಾವಾನುವಾದ: ಚಾಮರಾಜ ಸವಡಿ

ನಿನ್ನ ಮೇಲೆ ಬೇಸರವಿಲ್ಲೆನಗೆ!!!

ಹಿಂದೀ ಚಿತ್ರಗೀತೆಯೊಂದರ ಭಾವಾನುವಾದದ ಪ್ರಯತ್ನ ಇಲ್ಲಿದೆ.

ಚಿತ್ರ: ಮಾಸೂಮ್ (೧೯೮೩)
ನಿರ್ದೇಶಕ: ಶೇಖರ್ ಕಪೂರ್
ಸಾಹಿತ್ಯ: ಗುಲ್ಝಾರ್
ಸಂಗೀತ: ರಾಹುಲ್ ದೇವ್ ಬರ್ಮನ್
ಹಾಡಿದವರು: ಅನೂಪ್ ಘೋಶಾಲ್

ನಿನ್ನ ಮೇಲೆ ಬೇಸರವಿಲ್ಲೆನಗೆ
ಆಶ್ಚರ್ಯವಾಗಿದೆ ಈಗ ನನಗೆ
ಆಶ್ಚರ್ಯವಾಗಿದೆ ಈಗ ನನಗೆ

ನಿನ್ನ ಮುಗ್ಧ ಪ್ರಶ್ನೆಗಳಿಂದಾಗಿ
ನಾ ಸೋತು ಹೋಗಿದ್ದೇನೆ  ಮುಂದೆ ಓದಿ »

ಹೆಸರುವಾಸಿ ಆಗೋದು ಹೇಗೆ?

ಮಡಿಕೆ ಒಡೀತೀಯಾ?
ಪರ್ವಾಗಿಲ್ಲ.
ಬಟ್ಟೆ ಹರ್ರ್ಕೊಳ್ತೀಯಾ?
ಚಿಂತೇ ಇಲ್ಲ!
ಕತ್ತೆ ಸವಾರಿ ಮಾಡುವೆಯಾ?
ಅದಿನ್ನೂ ಒಳ್ಳೇದೇ.
ಹೆಸರುವಾಸಿ ಆಗ್ಬೇಕಿದ್ರೆ
ಮಾಡ್ತಿರ್ಬೇಕು ಸದ್ದು ಗದ್ಲ! 

ಸಂಸ್ಕೃತ ಮೂಲ:

ಘಟಮ್ ಭಿಂದ್ಯಾತ್ ಪಟಮ್ ಛಿಂದ್ಯಾತ್ ಕುರ್ಯಾತ್ ರಾಸಭಾರೋಹಣಮ್|
ಯೇನಕೇನ ಪ್ರಕಾರೇಣ  ಪ್ರಸಿದ್ಧ ಪುರುಷೋ ಭವೇತ್ ||  ಮುಂದೆ ಓದಿ »

ಕಾಯಲೆಮ್ಮೆಲ್ಲರನು ಮೂರುಲೋಕದ ಅರಸು

(ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ಕೇಳಿ, ಒಂದು ಸಾವಿರ ವರ್ಷಗಳ ಹಿಂದೆ, ಈ ಪದ್ಯವನ್ನು ಕಲ್ಲಿನಲಿ ಕೆತ್ತಿಸಿದ ನಮ್ಮೂರ ಅರಸರನ್ನು ನೆನೆಯದೇ ಇರಲಾಗಲಿಲ್ಲ - ಹಂಸಾನಂದಿ)  ಮುಂದೆ ಓದಿ »

Syndicate content