ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹೈಮವತಿ

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ತದಿಗೆ

ಹಬ್ಬದ ಸಂಭ್ರಮವಿರಬೇಕಾದ ಸಮಯದಲ್ಲಿ ಏಕೋ ಎಲ್ಲೆಲ್ಲೂ ಅಶಾಂತಿಯ ವಾತಾವರಣ. ನೂಕು-ನುಗ್ಗಲಿನಲ್ಲಿ ನೂರಾರು ಮಂದಿಯ ಮರಣ. ಬೀಳುತ್ತಿರುವ ಶೇರು ಮಾರುಕಟ್ಟೆ. ಮತ್ತೆ ಅದರಿಂದ ತೊಂದರೆಗೊಳಗಾಗುತ್ತಿರುವ ಸಾಮಾನ್ಯ ಜನತೆ. ಕೆಲವು ತಡೆಯಲಾರದ ದುರಂತಗಳಾದರೆ, ಕೆಲವು ಸ್ವಯಂಕೃತಾಪರಾಧಗಳು. ಈಗ ಗಾಂಧೀಜಿಯವರು ಹೇಳುವಂತೆ ’ಸಬ್ ಕೋ ಸನ್ಮತಿ ದೇ ಭಗವಾನ್’ ಎಂದು ಹೇಳಿಕೊಳ್ಳುತ್ತ ಮುನ್ನಡೆವುದೊಂದೇ ದಾರಿಯೋ ಏನೋ ಎನ್ನಿಸುತ್ತೆ. ಕಾಲದ ಪ್ರವಾಹದಲ್ಲಿ ತಡೆದು ನಿಲ್ಲಬಲ್ಲವರಾರು?

ಅದೇ ರೀತಿ, ಸಂಗೀತ ಅನ್ನುವುದೂ ನಿಂತ ನೀರಲ್ಲ. ಅದರಲ್ಲಿಯೂ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಸಂಗೀತ ಹೇಗೆ ಒಂದು ಕಲಾಪ್ರಕಾರವೋ, ಅದೇ ರೀತಿ ಒಂದು ಗಣಿತದ ಬುನಾದಿಯಮೇಲೂ ನಿಂತಿದೆ. ಹೇಗೆ ಹೊಸ ಹೊಸ ರಸಾಯನಗಳನ್ನು ಪ್ರಯೋಗಶಾಲೆಯಲ್ಲಿ ತಯಾರಾಗುತ್ತಿರುತ್ತವೋ, ಅದೇ ರೀತಿ ಹೊಸ ಹೊಸರಾಗಗಳೂ ಸಂಗೀತ ಪ್ರಪಂಚಕ್ಕೆ ಸೇರುತ್ತಲೇ ಹೋಗುತ್ತವೆ. ಅದರಲ್ಲಿ ಜಳ್ಳು ಯಾವುದು, ಒಳ್ಳೆಯದು ಯಾವುದು ಎನ್ನುವುದನ್ನು ಕಾಲವೇ ಹೇಳುತ್ತೆ.  ಮುಂದೆ ಓದಿ »

Syndicate content