ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಶಾಮಾಶಾಸ್ತ್ರ್ರಿ

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಚೌತಿ

ಲಲಿತಾ! ಆ ಪದವೇ ಒಂದು ಇನಿದಾದ ಹೆಸರು!

ಲಲಿತಾ! ಆ ಹೆಸರೇ ಒಂದು ಸವಿಯಾದ ನೆನಪು!!

..

..

..

..

..

(ಕ್ಷಮಿಸಿ - ನಾನು ’ಎರಡು ಕನಸು’ ಸಿನೆಮಾದಿಂದ ಹೇಳ್ತಾ ಇರೋ ಸಾಲುಗಳಲ್ಲ ಇವು!)

ದೇವಿಯ ಬೇರೆ ಹೆಸರುಗಳಾದ ಪಾರ್ವತಿ,ಶೈಲಜಾ,ಶಂಕರಿ,ಕಾಳಿ, ದುರ್ಗಾ,ಗೌರಿ ಮೀನಾಕ್ಷಿ,ವಿಶಾಲಾಕ್ಷಿ ಇಂತಹವೆಲ್ಲ ಒಂದೋ ದೇವಿಯು ಪರ್ವತರಾಜನ ಮಗಳು, ಶಿವನ ಹೆಂಡತಿ ಎನ್ನುವುದನ್ನೋ, ಅಥವಾ ಅವಳ ಬಣ್ಣವನ್ನೋ, ಕಣ್ಣನ್ನೋ ವರ್ಣಿಸುತ್ತವೆ. ಆದರೆ ಅವಳ ಎಲ್ಲ ಗುಣಗಳನ್ನೂ ಒಟ್ಟುಸೇರಿಸುವಂತಹ ಒಂದು ಹೆಸರಿದ್ದರೆ, ಅದು ಲಲಿತಾ ಎಂಬ ಹೆಸರೇ ಆಗಿರಬೇಕು.  ಮುಂದೆ ಓದಿ »

Syndicate content