ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕಲ್ಕತ್ತಾ

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ

ನವರಾತ್ರಿಯ ಎಂಟನೇ ದಿನ ದುರ್ಗಾಷ್ಟಮಿ. ದುರ್ಗಿ ಎಂದರೇನು? ಕಾಳಿ ಎಂದರೇನು? ಗೌರಿ ಎಂದರೇನು? ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ಎನ್ನುವ ಭಾವನೆ ನಮಗಿದ್ದರೂ ಕೂಡ ಅದೇನೋ ನವರಾತ್ರಿಯ ಏಳನೇ ದಿನ ಸರಸ್ವತಿಗೂ, ಎಂಟನೇ ದಿನ ದುರ್ಗಿಗೂ, ಒಂಬತ್ತು ಹತ್ತನೇ ದಿನಗಳು ಚಾಮುಂಡಿಗೂ ಇರುವುದು ಹಳೇ ಮೈಸೂರಿನ ಸಂಪ್ರದಾಯವಿರಬಹುದು. ದುರ್ಗಾಷ್ಟಮಿಯ ದಿನ ಮನೆ ಚಿಕ್ಕ ಹುಡುಗಿಯರನ್ನು ಕರೆದು ಅವರನ್ನಾದರಿಸುವ ಸಂಪ್ರದಾಯವೂ ಎಷ್ಟೋ ಕುಟುಂಬಗಳಲ್ಲಿದೆ.

ನೆನ್ನೆ ಶೃಂಗೇರಿ ಶಾರದೆಯ ಮೇಲೆ ಒಂದು ಕನ್ನಡದಲ್ಲಿರುವ ಹಾಡನ್ನು ಕೇಳಿಸಿದ್ದೆ. ಹೇಗಿದ್ದರೂ ಈಗ ನವರಾತ್ರಿಯಲ್ಲವೇ, ಅದಕ್ಕೆ ಇವತ್ತು ’ನವರಸ’ಕನ್ನಡದ ಒಂದು ಹಾಡನ್ನು ಕೇಳಿಸೋಣ ಎಂದುಕೊಂಡೆ :). ಹೌದು, ನವರಸ ಕನ್ನಡ ಅನ್ನುವುದೊಂದು ರಾಗದ ಹೆಸರು. 

ಈ ರಚನೆ ಮುತ್ತಯ್ಯ ಭಾಗವತರದ್ದು. ನವರಾತ್ರಿಯ ಮೊದಲ ದಿನವೇ ಇವರದೊಂದು ದರು ವರ್ಣವನ್ನು ಕೇಳಿಸಿದ್ದೆನಲ್ಲ? ನೆನಪಿರಬಹುದು.  ಮುಂದೆ ಓದಿ »

Syndicate content