ಇದೇ ಮಹಾ ಸುದಿನ...
October 21, 2008 - 11:23pm
ನನ್ನ ಮಟ್ಟಿಗೆ :-) ಕಣ್ಣು ಬಿಟ್ಟೊಡನೆ ಗಂಡನಿಂದ ಹುಟ್ಟುಹಬ್ಬದ ಶುಭಾಶಯ ಮತ್ತು ಮುತ್ತು ಸಿಕ್ತು. ಕಂಬಳಿಯೊಳಗೆ ನುಸುಳಿದ ಪುಟ್ಟ ಮಗನ ಗುಂಗುರು ಕೂದಲಿನ ಎಣ್ಣೆ ವಾಸನೆ ಕುಡಿಯುತ್ತ, ಅವನ ಸೊಂಟದ ಸುತ್ತ ಕೈ ಬಳಸಿ ಅಪ್ಪಿಕೊಂಡು ಮಲಗುವ ಮಜ ಸಿಕ್ತು. ಆಮೇಲೆ, ಅಪ್ಪ ಜ್ಞಾಪಿಸಿದ ಮೇಲೆ ದೊಡ್ಡವನಿಂದಲೂ ಒಂದು ಹ್ಯಾಪಿ ಬರ್ತ್ಡೇ ಅಮ್ಮ ಅನ್ನುವ ಸಂದೇಶ ಸಿಕ್ತು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
