ಓದಿದ್ದು ಕೇಳಿದ್ದು ನೋಡಿದ್ದು-81 ಬಾಣ;ವಿನೂತನ ಕನ್ನಡ ಚಿತ್ರ
-----------------------------------
ಫೋನ್, ಎಸ್ ಎಂ ಎಸ್ ಮೂಲಕ ಪಂಪ್ ಚಾಲೂ Read more about ಓದಿದ್ದು ಕೇಳಿದ್ದು ನೋಡಿದ್ದು-81 ಬಾಣ;ವಿನೂತನ ಕನ್ನಡ ಚಿತ್ರ
-----------------------------------
ಫೋನ್, ಎಸ್ ಎಂ ಎಸ್ ಮೂಲಕ ಪಂಪ್ ಚಾಲೂ Read more about ಓದಿದ್ದು ಕೇಳಿದ್ದು ನೋಡಿದ್ದು-81 ಬಾಣ;ವಿನೂತನ ಕನ್ನಡ ಚಿತ್ರ
ಕೊಡಲಿಯೇಟು ಬಿದ್ದರೂ
ಮರವು ಚಿಗುರಬಹುದು;
ಅಂಬಿನೇಟು ಬಿದ್ದ ಮೇಲೂ
ಗಾಯ ಮಾಯಬಹುದು;
ಕೆಡುಕರ ಕಹಿ ನುಡಿಯ
ಘೋರ ಮಾತಿನೇಟು
ಬಿದ್ದರೆಂದೂ ಮಾಯದು
ಮನಕೆ ಆದ ಏಟು.
ಸಂಸ್ಕೃತ ಮೂಲ:
ಸಂರೋಹತಿ ಶರೈರ್ವಿದ್ಧಂ ವರಂ ಪರಶುನಾ ಹತಂ |
ವಾಚಾ ದುರುಕ್ತಂ ಭೀಭತ್ಸಂ ನ ಸಂರೋಹತಿ ವಾಕ್‍ಕ್ಷತಮ್ ||
-ಹಂಸಾನಂದಿ
ಹಲವು ಬಿಲ್ಲಾರರು ಇರುವರು ಜಗದಲ್ಲಿ
ಅಂಬಿನಲಿ ಒಂದನೆರಡಾಗಿ ಸೀಳುವವರು;
ಕಮ್ಮಗೋಲ*ನೋರ್ವ ಬೇರೆತೆರದ ಬಿಲ್ಲಾಳು
ಗುರಿಯಿಟ್ಟು ಇಬ್ಬರನು ಒಂದಾಗಿಸುವವನು!
ಸಂಸ್ಕೃತ ಮೂಲ:
ಏವಸ್ತುಂ ದ್ವಿಧಾ ಕರ್ತುಮ್ ಬಹವಃ ಸಂತಿ ಧನ್ವಿನಃ ।
ಧನ್ವೀ ಸ ಮಾರ ಏವೈಕೋ ದ್ವಯೋಃ ಐಕ್ಯಃ ಕರೋತಿ ಯಃ ॥
एकवस्तुम् द्विधा कर्तुम् बहवः सन्ति धन्विनः ।
धन्वी स मार एवैको द्वयोः ऐक्यः करोति यः ॥
-ಹಂಸಾನಂದಿ
Read more about ಕಮ್ಮಗೋಲನ ಚತುರ ಬಿಲ್ಗಾರಿಕೆ
ಚೆಲುವೆ! ನಿನ್ನಂಥ ಬಿಲ್ಗಾರ್ತಿ
ಸುಲಭದಲಿ ಕಾಣಸಿಗುವುದಿಲ್ಲ;
ಬಾಣ ಹೂಡದೆ ಬರಿ ಸೆಳೆತದಲೇ**
ಮನಸುಗಳನು ಸೀಳಿಬಿಡುವೆಯಲ್ಲ!
ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರಶತಕದಿಂದ)
ಮುಗ್ಧೇ ಧಾನುಷ್ಕತಾ ಕೇಯಮಪೂರ್ವಾ ದೃಶ್ಯತೇ ತ್ವಯಿ |
ಯದಾ ವಿಧ್ಯಸಿ ಚೇತಾಂಸಿ ಗುಣೇರೈವ ನ ಸಾಯಕೈಃ ||
-ಹಂಸಾನಂದಿ
Read more about ಬಿಲ್ಲುಗಾರ್ತಿಗೆ
ಚುರುಕು ಬುದ್ಧಿಯವರು
ಮೊನಚು ಅಂಬಿನಂತೆ;
ತುಸು ಸೋಂಕಿದರೂ
ನೇರ ಒಳ ಹೊಗುವರು.
ಮೊಂಡ ಬುದ್ಧಿಯವರೋ
ಬೀರಿದ ಕಲ್ಲಿನಂತೆ;
ಎಷ್ಟು ತಗುಲಿದರೂ
ಹೊರಗೇ ಉಳಿವರು!
ಸಂಸ್ಕೃತ ಮೂಲ (ಶಿಶುಪಾಲವಧ , ೨-೭೮) :
ಸ್ಪೃಶಂತಿ ಶರವತ್ತೀಕ್ಷ್ಣಾಃ ಸ್ತೋಕಮಂತರ್ವಿಶಂತಿ ಚ |
ಬಹುಸ್ಪೃಶಾSಪಿ ಸ್ಥೂಲೇನ ಸ್ಥೀಯತೇ ಬಹಿರಶ್ಮವತ್ ||
-ಹಂಸಾನಂದಿ Read more about ಮೊಂಡು ಬುದ್ಧಿಯವರು