24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಶಿವರಾತ್ರಿ

ಶಿವರಾತ್ರಿಗೊಂದು ಶಿವಸ್ತುತಿ

February 21, 2009 - 12:29am
hamsanandi

ಹೋಗದಿರು ಇಲ್ಲಿಂದ ಕಾಲ್ದೆಗೆಯದೇ ಓ ಶಿವನೆ ನನ್ನಲ್ಲೆ ನೀ ನೆಲೆಸಿರು
ಹಿರಿಬೇಟೆಗಾರನೇ!  ಮನಸೆನ್ನುವೀ  ಕಗ್ಗಾಡಿನಲಿ ನಿನಗುಂಟು ಬಲು ಸುಗ್ಗಿಯು
ಮೋಹ ಮಚ್ಚರ ಸೊಕ್ಕು ಮೊದಲಾದ ಮಿಕಗಳು ಬಲು ತಿರುಗಾಡುತಿರಲು
ಅವುಗಳನು ಕೊಂದು ಬೇಟೆಯಾನಂದವನು ಹೊಂದುವುದೇ ನಿನಗೆ ಸರಿಯು Read more about ಶಿವರಾತ್ರಿಗೊಂದು ಶಿವಸ್ತುತಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಶಿವರಾತ್ರಿಯಲ್ಲಿಷ್ಟು ಶಿವ ಸ್ಮರಣೆ

March 1, 2011 - 10:42pm
hamsanandi

ಶಿವರಾತ್ರಿಯ ಸಂದರ್ಭದಲ್ಲಿ ಈ ಹಿಂದೆ ಅನುವಾದಿಸಿದ್ದ ಕೆಲವು ಸ್ತುತಿಗಳನ್ನು ಹಾಕುತ್ತಿದ್ದೇನೆ. ಮತ್ತೆ ಯಾಕೆ ಅಂದಿರಾ? ಇವತ್ತಿಗೆ ಸಂಪದದ ನನ್ನ ಬ್ಲಾಗಿಗೆ ನಾಲ್ಕು ವರ್ಷಗಳು ಆದವು - ಈ ದಿನ ಏನನ್ನಾದರೂ ಹಾಕಬೇಕೆಂದು :) . ಅಷ್ಟೇ! ನಾಲ್ಕು ವರ್ಷಗಳಿಂದ ನನ್ನ ಬರಹಗಳನ್ನು ಓದಿದ, ಅಭಿಪ್ರಾಯ ತಿಳಿಸಿದ, ಸಲಹೆಗಳನ್ನು ಕೊಟ್ಟ ಎಲ್ಲ ಸಂಪದಿಗರಿಗೂ ನಾನು ಆಭಾರಿ.

 

ಹಣೆಬರಹ

ತಾನೆ ಲೋಕಕ್ಕೊಡೆಯ ಮಾವ ಬೆಟ್ಟಗಳೊಡೆಯ
ಗೆಳೆಯ ಸಿರಿಗೊಡೆಯ ಮಗನು ಗಣಗಳೊಡೆಯ
ಅದಕೇನು? ತಿರಿದು ತಿಂಬುದು ತಪ್ಪಲಿಲ್ಲವು ಶಿವಗೆ
ಅದಕೆ ಹೇಳುವೆನಿಂದು ವಿಧಿಯೆ ಬಲವೆಂದು!

ಸಂಸ್ಕೃತ ಮೂಲ: Read more about ಶಿವರಾತ್ರಿಯಲ್ಲಿಷ್ಟು ಶಿವ ಸ್ಮರಣೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಶಿವನ ಪೂಜೆಯ ಹೂ

February 20, 2012 - 8:30am
hamsanandi

ಒಳಗೆ ನುಗ್ಗುತ ದಟ್ಟ ಕಾಡಿನ
ಕೊಳಗಳೊಳಗಡೆ ಮುಳುಗಿ ಪರ್ವತ
ಗಳನು ಏರುತ ಹುಡುಕುತಿರುವರು ಹೂವ ಕೊಯ್ಯಲಿಕೆ;
ತಿಳಿವೆ ಕಾಣದ ಜಡಮತಿಗಳಿವು
ತಿಳಿಯರಯ್ಯೋ ಮನದ ಕೊಳದಲ-
ರಳಿಹ ಕಮಲವ ಮುಡಿಸೆ ಶಿವನಿಗೆ ಬಹಳ ಮೆಚ್ಚಿಗೆಯು!

ಸಂಸ್ಕೃತ ಮೂಲ (ಆದಿಶಂಕರಾಚಾರ್ಯರ ಶಿವಾನಂದಲಹರಿ, ಶ್ಲೋಕ ೯):

ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ
ವಿಶಾಲೇ ಶೈಲೇ ಚ ಭ್ರಮತಿ ಕುಸುಮಾರ್ಥಂ ಜಡಮತಿಃ
ಸಮರ್ಪ್ಯೈಕಂ ಚೇತಃ ಸರಸಿಜಮುಮಾನಾಥ ಭವತೇ
ಸುಖೇನಾವಸ್ಥಾತುಂ ಜನ ಇಹ ನ ಜಾನಾತಿ ಕಿಮಿಹೋ ||

-ಹಂಸಾನಂದಿ Read more about ಶಿವನ ಪೂಜೆಯ ಹೂ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.
Subscribe to ಶಿವರಾತ್ರಿ