ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.

— ಋಗ್ವೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನೀರ ನಿಶ್ಚಿಂತೆ

ಆದಿಮ - ಒಂದಷ್ಟು ಚಿತ್ರಗಳು

ಹೋದವಾರ ಕೋಲಾರದಲ್ಲಿ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆಂದು ಹೋದಾಗ 'ಆದಿಮ'ಕ್ಕೂ ಭೇಟಿ ಕೊಟ್ಟಿದ್ದೆವು ಎಂದು ಬರೆದಿದ್ದೆ. ಅಲ್ಲಿಯ ಕೆಲವು ಚಿತ್ರಗಳು ಇಲ್ಲಿವೆ. ಇನ್ನೂ ನೂರಾರು ಫೋಟೋಗಳು ಕಂಪ್ಯೂಟರಿನಲ್ಲಿಯೇ ಕುಳಿತಿವೆ. ಅವಕಾಶವಾದಂತೆಲ್ಲ ಸೇರಿಸುತ್ತ ಹೋಗುತ್ತಿರುತ್ತೇವೆ.
ಆದರೆ ಕೆಳಗಿರುವ ಕಲಾಕೃತಿಗಳ ಕಲಾಮಯ ಜಗತ್ತು ಸಂಪದಿಗರ ಕಲೆಯ ಸಂಪತ್ತನ್ನು ಹೊರಗೆಳೆಯುವುದೋ ನೋಡೋಣ್ವ?
(ಇಂದು ಹುಣ್ಣಿಮೆ. 'ಆದಿಮ'ದಲ್ಲಿ ಇಂದು ನಾಟಕ, ಜಾನಪದ ಉತ್ಸವ ಮತ್ತಷ್ಟು! ಕೆಲಸದ ಪ್ರಯುಕ್ತ ಹೋಗಲಾಗದಿದ್ದರೂ ಈ ಜಾಗ ಆಗಲೇ ಮನಸ್ಸಿನಲ್ಲಿ ಅಚ್ಚಾಗಿ ಬೇರೂರಿವ ನೆನಪಿನ ಗುಂಗಿನಲ್ಲಿ ಈ ಚಿತ್ರಗಳನ್ನು ಸಂಪದಿಗರೊಂದಿಗೆ ಹಂಚಿಕೊಳ್ಳುತ್ತಿರುವೆ)

ಇವಳ್ಯಾರು ಗೊತ್ತ?  ಮುಂದೆ ಓದಿ »

ನೀರ ನಿಶ್ಚಿಂತೆ ಕಾರ್ಯಕ್ರಮ - ತುಮಕೂರು

ನೀರ ನಿಶ್ಚಿಂತೆ - ತುಮಕೂರು ಕಾರ್ಯಕ್ರಮದಲ್ಲಿ ಶಿವು

ನಿನ್ನೆ ನಾವೆಲ್ಲ ತುಮಕೂರಿಗೆ ಹೋಗಿದ್ವು. ಕಾರ್ಯಕ್ರಮ "ನೀರ ನಿಶ್ಚಿಂತೆ". ತುಮಕೂರಿಗೆ ಕಾಲಿಟ್ಟ ಕೂಡಲೆ ದುರ್ಗದ ನೆನಪಾಗಿಸುವ ವಾತಾವರಣ. ನಾನು, ಅನಿಲ, ಶಿವು, ವಸಂತ, ಮುರಳಿ ಎಲ್ರೂ ಅನಿಲನ ಕಾರಲ್ಲಿ ಹೊರಟಿದ್ದು. ಹೋಗುವಷ್ಟರಲ್ಲಿ ಆಗಲೇ ಸ್ವಲ್ಪ ಲೇಟಾಗಿತ್ತು. ಮಲ್ಲಿಕಾರ್ಜುನ ಹೊಸಪಾಳ್ಯ, ಭೂಷಣ್, ಆಗಲೇ ತುಮಕೂರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಕುರಿತು ಮಾತನಾಡುತ್ತಿದ್ದರು.

ಕಾರ್ಯಕ್ರಮದ ಕುರಿತು ಬರೆಯಲು ಹೋದರೆ ಬರೆಯುವುದು ಬಹಳಷ್ಟಿದೆ. ಇವತ್ತು ಉಳಿದ ಕೆಲಸಗಳು ಹಾಗೇ ಉಳಿದುಬಿಟ್ಟಾವು. ಹೀಗಾಗಿ ಕೆಲವು ಫೋಟೋಗಳನ್ನು ಹಾಕಿ ನಾನು ಇಂಗ್ಲೀಷಿನಲ್ಲಿ ಬರೆದ ಬ್ಲಾಗ್ ಪುಟದ ಲಿಂಕ್ ಹಾಕಿಬಿಡುವೆ.
ಒಟ್ಟಾರೆ ತುಮಕೂರಿನ ಆಸಕ್ತರೊಂದಿಗೆ ಮಾತನಾಡುತ್ತ ಕಳೆದ ಸಮಯ ಖುಷಿ ಕೊಟ್ಟಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ವಂದನೆಗಳು, ಕಾರ್ಯಕ್ರಮ ಆಯೋಜಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಸಂಪದಿಗರಾದ ಸಮೃದ್ಧಿ ಸಂಸ್ಥೆಯ ಭೂಷಣ್, ಧಾನ್ಯ ಸಂಸ್ಥೆಯ ಮಲ್ಲಿಕಾರ್ಜುನ್ ಹೊಸಪಾಳ್ಯ - ಇವರಿಗೆ ವಂದನೆಗಳು ಸಲ್ಲಬೇಕು. ಕಾರ್ಯಕ್ರಮ ನಡೆಸಿಕೊಡುವಲ್ಲಿ ಪಾಲ್ಗೊಂಡ ಸಂಪದಿಗರಾದ ಮುರಳಿ, ಶಿವು, ವಸಂತ, ಅನಿಲ - ಇವರಿಗೆ many thanks. ತಂತ್ರಜ್ಞಾನದ in-depth knowledge ಇರುವವರಿಗೆ ತೀರ ಸಾಧಾರಣ ವಿಷಯಗಳ ಬಗ್ಗೆ ಮಾತನಾಡುವುದು ಕಷ್ಟ. ಆದರೆ ಇದು ಬಹಳ ಸುಲಭವಾಗಿ ಸಾಧ್ಯ ಎನ್ನುವಂತೆ ಮಾಡಿದವರು ಇವರುಗಳು. ಕಾರ್ಯಕ್ರಮಕ್ಕೆ ಹಣಕಾಸಿನ ಸಹಾಯ ಒದಗಿಸಿದ ಅರ್ಘ್ಯಂ ಸಂಸ್ಥೆಗೆ ಕೂಡ ವಂದನೆ.  ಮುಂದೆ ಓದಿ »

Syndicate content