ಮುಕುರಂ ಕೈಯೊಳಿರಲ್ಕೆ ನೀರ ನೆಳಲೇಕೈ ಕಾಮಧೇನಿರ್ದುಮೂ |
ಟಕೆ ಗೊಡ್ಡಾಕಳನಾಳ್ವರೇ ಗುಣಯುತರ್ ಪಾಲುಂಡು ಮೇಲುಂಬರೇ ||
ಶುಕನೋದಿಂಗುರೆ ಚೆಲ್ವೆ ಕಾಕರವ ರಂಭಾನೃತ್ಯಕಂ ಡೊಂಬರೇ |
ಸಖರಿಂದುನ್ನತ ವಸ್ತುವೇ ಹರ ಹರಾ ಶ್ರೀ ಚೆನ್ನಸೋಮೇಶ್ವರಾ ||

ಮುಕುರ - ಕನ್ನಡಿ, ಕಾಮಧೇನು - ಕೇಳಿದುದನ್ನು ಕೊಡುವ ದೇವಲೋಕದ ಆಕಳು, ಕಾಕರವ - ಕಾಗೆಯ ಕೂಗು.

— ೧೨ನೇ ಶತಮಾತದಲ್ಲಿದ್ದ ಪಾಲ್ಕುರಿಕೆ ಸೋಮ(*) ಎಂಬ ಕವಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಬಾಳು

ಬಾಳ ದಾರಿಯಲಿ ಸಾಗಿದೆ ಈ ಪಯಣವು ...

ತಿಳಿಯಲಾರದಾದೆನು ನಾನು ಈ ಬದುಕ ...


ತಿಳಿದು ತಿಳಿಯದಂತಾದೆನೊ ನಾನು?


ಎನೆಂದು ತಿಳಿಯದು ಎಂತೆದು ಅರಿಯದು


ಅರಿತು ಅರಿಯದಂತಾದೆನೊ ನಾನು??


 


ಬಾಳ ದಾರಿಯಲಿ ಸಾಗಿದೆ ಈ ಪಯಣವು ...


ಇದ್ದುದ ಬಿಟ್ಟು ಇರದುದರ ಕಡೆಗೆ!


ಆಸೆಯೆಂಬ ಬಿಸಿಲು ಕುದುರೆಯ ಬೆಂಬತ್ತಿ


ಮರಳುಗಾಡಿನಲ್ಲಿ ಮರಿಚಿಕೆಯ ಹಾಗೆ


 


ತಣಿಸಲಾರೆನು ನಾನು ಈ ಮನದ ಹಂಬಲವ ...


ಸುಡುವ ಬೆಂಕಿಗೆ ತುಪ್ಪವ ಸುರಿದು ಆರಿಸುವುದೆಂತು?


ಕಟ್ಟುತಿರಲು ನಾನು ಆಸೆಯೆಂಬ ಸೌಧವನು


ಹೆಣೆಯುತಿಹುದು ಜೇಡವು ತನ್ನಸುತ್ತ ಬಲೆಯ


   ಮುಂದೆ ಓದಿ »

ಈ ಬದುಕಿನ ಗುರಿ

ಸಂದೀಪನ ಬಗ್ಗೆ ಓದಿದಾಗ ಆತನ ತಂದೆತಾಯಿಯ ಬಗ್ಗೆ ಮರುಕವೆನ್ನಿಸಿದರೂ ಆತನ ಬಗ್ಗೆ ಆಹಾ! ಎಂತಹ ಅದೃಷ್ಟವಂತ ಎನ್ನಿಸಿತು. ಚಿಕ್ಕಂದಿನಲ್ಲೆ ಸೈನಿಕನಾಗಬೇಕೇಂಬ ಧ್ಯೇಯ, ದೇಶಕ್ಕಾಗಿ ಸಾಯಬೇಕೆಂಬ ಗುರಿ, ಇವನ್ನು ನೋಡಿದರೆ ಆತ ನಿಜಕ್ಕೂ ಬದುಕಿನ ಪ್ರತಿ ಕ್ಷಣವನ್ನೂ ತನಗೆ ಅತಿ ಹೆಚ್ಚು ಸಂತಸ ಕೊಡುವ ಕ್ರಿಯೆಯಲ್ಲೇ ಕಳೆದ ಅನ್ನಬಹುದು. ಈ ಮಾತು ಎಷ್ಟು ಜನರು ಹೇಳಲು ಸಾಧ್ಯ?  ಮುಂದೆ ಓದಿ »

Syndicate content