19
June
2013

mobile

ಏ ಗಂಗೂ, ಈ ಬೈಕು ಕಲಿಸಿಕೊಡೋ ನಂಗೂ

April 9, 2009 - 9:40pm
abdul
ಈ ಹಾಡನ್ನು ಒಬ್ಬ "ಮೊಬೈಲ್ ಅಪ್ಪ" ಹೆಚ್ಚು ಕಡಿಮೆ ಪೂರ್ತಿ ಕೇಳಿಸಿದ ನನ್ನ ರೈಲು ಪ್ರಯಾಣದ ವೇಳೆ. ಅಕ್ಕ ಪಕ್ಕ ಕುಳಿತಿರುವವರ ಯಾವುದೇ ಪರಿವೆ ಇಲ್ಲದೆ ಎಲ್ಲರೂ ತನ್ನ creation ಮೆಚ್ಚಿ ತಲೆದೂಗುತ್ತಿದ್ದಾರೆನೋ ಅನ್ನೋ ಭಾವದಿಂದ ಆತ ಕೂತಿದ್ದ. ಭದ್ರಾವತಿಯಿಂದ ಬೆಂಗಳೂರು ತಲುಪುವವರೆಗೂ ಎಂಥೆಂಥ ಹಾಡು ಬೇಕು ನಿಮಗೆ. ಎಲ್ಲಾ ಲಭ್ಯ, ಸಹನೆ ಒಂದಿದ್ದರೆ. ಸಂಬಳ ೨ ಸಾವಿರ ಆದರೂ ೧೦ ಸಾವಿರದ ಮೊಬೈಲ್ ಇರುತ್ತೆ ಕೆಲವರ ಬಳಿ. ಮೊಬೈಲ್ ನಷ್ಟು ಸಾಮಾಜಿಕ ನ್ಯಾಯವನ್ನು ಬೇರಾವುದೇ ವ್ಯಕ್ತಿಯೂ, ವ್ಯವಸ್ಥೆಯೂ, ಉಪಕರಣವೂ ನೀಡಿರಲಾರದು. ಭಿಕ್ಷುಕರ ಕೈಯಲ್ಲೂ ಮೊಬೈಲ್. ನಾನಿರುವ ಜೆದ್ದಾಹ್ದಲ್ಲಿ ಒಂದು ತಮಾಷೆ ಕೇಳಿ. ಸೌದಿಗಳು (ಅರಬರು) ಬಾಂಗ್ಲಾದೇಶದ ರಸ್ತೆ ಗುಡಿಸುವ ಕೆಲಸಗಾರರಿಗೆ, ಮತ್ತು ಇತರ ನಾಡಿನವರಿಗೆ ದಾನ ಕೊಡುವ ಪದ್ಧತಿ ಇದೆ. ಹೀಗೆ ಒಮ್ಮೆ ಒಬ್ಬ ಅರಬ್ ರಸ್ತೆ ಬದಿ ನಿಂತಿದ್ದ ಬಂಗ್ಲದೆಶದವನನ್ನು ಕರೆದು ಹಣ ಕೊಡಲು ಹೋದಾಗ ಆ ಬಂಗಾಳಿಗೆ ಒಂದು ಕರೆ ಬಂತು. ಜೇಬಿನಿಂದ ಹೊರಗೆ ಬಂತು ಹೊಳೆಯುವ N 90 ಮೊಬೈಲು. ಇದನ್ನು ನೋಡಿದ ಸೌದಿ ಹೇಳಿದ ನನ್ನ ಹತ್ತಿರ ಇನ್ನೂ ಓಬೀರಾಯನ ಕಾಲದ ಮೊಬೈಲ್ ಇರೋದು, ನಿನಗೇಕೆ ಭಕ್ಷೀಸು ಎಂದು ಹೋಗಿಬಿಟ್ಟ. ಹೊಸ technology ಜೊತೆ ಒಂದಿಷ್ಟು ಸೋಶಿಯಲ್ ರೆಸ್ಪೋನಿಸ್ಬಿಲಿಟಿ ಸಹ ಬರಬೇಕು. ಪ್ರಪ್ರಥಮವಾಗಿ ವಾಹನ ಚಲಾವಣೆ ವೇಳೆ ದಯಮಾಡಿ ಮೊಬೈಲ್ ಉಪಯೋಗಿಸಬೇಡಿ. ಮೊನ್ನೆ ಅಮೆರಿಕಲ್ಲಿ ಒಬ್ಬಳು ಗಾಡಿ ಕಾರು ಚಲಾಯಿಸುತ್ತಾ ಮೆಸೇಜ್ ಮಾಡುತ್ತಿದ್ದಾಗ ನಿಂತ ವಾಹನಗಳ ಮೇಲೆ ಕಾರು ಚಲಾಯಿಸಿ ಒಬ್ಬ ವ್ಯಕ್ತಿಯನ್ನು ಕೊಂದಳು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಭವಿಷ್ಯದ ಮೊಬೈಲ್ ವಿನ್ಯಾಸಗೊಳಿಸಿ - ಹತ್ತು ಲಕ್ಷ ರೂ. ಬಹುಮಾನ ಗೆಲ್ಲಿರಿ

March 19, 2010 - 10:47am
arshad

ಇದು ಮೊಬೈಲ್ ಯುಗ, ಮೊಬೈಲ್ ಫೋನ್ ಇಲ್ಲದ ಒಂದು ದಿನವನ್ನೂ ಊಹಿಸುವುದು ಕಷ್ಟ. ಭಿಕ್ಷುಕನಿಂದ ಕೋಟ್ಯಾಧಿಪತಿಯ ಜೇಬಿಗೆ ತಕ್ಕನಾದ ಹತ್ತು ಹಲವು ಬಗೆಯ ವಿನ್ಯಾಸಗಳು. ಪ್ರತಿದಿನ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ನೂರಾರು ಹೊಸ ವಿನ್ಯಾಸಗಳು ಗ್ರಾಹಕನನ್ನು ತಬ್ಬಿಬ್ಬುಗೊಳಿಸುತ್ತವೆ. ಒಂದು ಮೊಬೈಲಿನಲ್ಲಿರುವ ವೈಶಿಷ್ಟ್ಯ ಇನ್ನೊಂದರಲ್ಲಿ ಇರುವುದಿಲ್ಲ. ನೂತನ ಮೊಬೈಲುಗಳಲ್ಲಿ ಅಡಕವಾಗಿರುವ ಎಷ್ಟೋ ವೈಶಿಷ್ಟ್ಯಗಳ ಬಗ್ಗೆ ಗ್ರಾಹಕನಿಗೆ ಅರಿವೇ ಇರುವುದಿಲ್ಲ. ಹಾಗಾಗಿ ಹೊಸ ಹೊಸ ಮೊಬೈಲುಗಳು ಮಾರುಕಟ್ಟೆಗೆ ಆಗಮಿಸುತ್ತಿದ್ದಂತೆ ಕೊಂಚ ಹಿಂದಿನ ದಿನ ಬಿಡುಗಡೆಯಾದ ಮೊಬೈಲ್ ಮಾರಾಟವಾಗದೇ ಉಳಿದು ನಷ್ಟವಾಗುವ ಸಾಧ್ಯತೆಗಳೇ ಹೆಚ್ಚು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to mobile