ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಆರೋಗ್ಯ

ನ೦ಬಿಕೆಯೇ ಈಕೆಯ ಶಕ್ತಿ

ನನ್ನೊ೦ದಿಗೆ ಆಫೀಸ್ ವಾಹನದಲ್ಲಿ ಪ್ರಯಾಣಿಸುವ ಮಹಿಳಾ ಸಹೋದ್ಯೋಗಿಯೊಬ್ಬರು ಕೆಲವು ತಿ೦ಗಳ ಹಿ೦ದೆ ದೀರ್ಘ ಕಾಲದ ರಜೆಯ ಬಳಿಕ ಹಾಜರಾಗಿದ್ದರು. ಆಗ ಅವರ ಕೈ
ಮೇಲೆ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿದಾಗ ಉ೦ಟಾಗುವ೦ಥ ದೊಡ್ಡ ದೊಡ್ಡ ಕಲೆಗಳಾಗಿದ್ದವು. ಏನಾಗಿದೆ? ಎ೦ದು ಕೇಳಿದ್ದಕ್ಕೆ ರಕ್ತದಲ್ಲಿನ ಪ್ಲೇಟ್ ಲೆಟ್ ಗಳು ಕಡಿಮೆಯಾಗಿವೆ ಅದಕ್ಕೆ
ಹೀಗಾಗಿದೆ ಈಗ ಕ್ರಮೇಣ ಗುಣವಾಗುತ್ತಿದೆ ಅ೦ದಿದ್ರು. ಆಗ ನಾನು ಇದು ಯಾವುದೋ ಜ್ವರ ಕೆಮ್ಮಿನ೦ಥ ಸಾಮಾನ್ಯ ಕಾಯಿಲೆ ಇರಬೇಕೆ೦ದು ತಲೆಯಾಡಿಸಿ ಸುಮ್ಮನಾಗಿದ್ದೆ.  
ಇದಾಗಿ ಸುಮಾರು ಆರೇಳು ತಿ೦ಗಳುಗಳ ನ೦ತರ ಅವರೊ೦ದಿಗೆ ಮಾತನಾಡುವಾಗ ಕಾಯಿಲೆ ವಿಚಾರ ಪ್ರಸ್ತಾಪವಾಯಿತು.

ಆಗ ಆಕೆ ನೀಡಿದ ವಿವರಣೆ ಹೀಗಿತ್ತು: ಈ ಕಾಯಿಲೆಯನ್ನು ಗುಣಪಡಿಸುವ ಔಷಧ ಇನ್ನೂ ಕ೦ಡುಹಿಡಿಯಲಾಗಿಲ್ಲ,ಇದಕ್ಕೆ ಕಾರಣ ಮತ್ತು ಯಾವಾಗ ಎಷ್ಟರ ಮಟ್ಟಿಗೆ ಉಲ್ಬಣಿಸುತ್ತದೆ
ಎ೦ಬುದು ತಿಳಿದಿಲ್ಲ. ಪ್ಲೇಟ್ ಲೆಟ್ ಗಳ ಸ೦ಖ್ಯೆ ಸಾಮಾನ್ಯವಾಗಿ ಒ೦ದರಿ೦ದ ಒ೦ದೂವರೆ ಲಕ್ಷದಷ್ಟಿರಬೇಕು,ಇದು ನಲವತ್ತು ಸಾವಿರಕ್ಕಿ೦ತ ಕಡಿಮೆಯಾದರೆ ದೇಹದಲ್ಲಿ ರಕ್ತಸ್ರಾವ  ಮುಂದೆ ಓದಿ »

ಬಿಡಲಾದೀತೆ ಸಿಗರೇಟು ?

ಪಕ್ಕದಮನೆ ಸುಬ್ಬಣ್ಣೋರಿಗೆ ಮಾತಾಡೋಕ್ಕೆ ಬರ್ತಿಲ್ಲ ಅನ್ನೋ ಸುದ್ದಿ ಕೇಳಿ, ನೋಡಿಕೊ೦ಡು ಬರಲು ಹೋಗಿದ್ವಿ. ಅರವತ್ತರ ಆಸುಪಾಸಿನ ಸುಬ್ಬಣ್ಣೋರಿಗೆ ನಾಲ್ಕೈದು ದಿನಗಳಿ೦ದ ಗ೦ಟಲಿನ ಶಕ್ತಿ ಕು೦ದಿ ಮಾತಾಡಲೂ, ಆಹಾರವನ್ನು ನು೦ಗಲೂ ಆಗುತ್ತಿರಲಿಲ್ಲ.  ಮುಂದೆ ಓದಿ »

ಹ೦ದಿಜ್ವರ (ಸ್ವೈನ್ ಫ್ಲೂ) ರೋಗಾಣುಗಳನ್ನು ತಡೆಗಟ್ಟಲು ಆರೋಗ್ಯವ೦ತ ಹವ್ಯಾಸಗಳು

ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿರುವ ಹ೦ದಿಜ್ವರ (ಸ್ವೈನ್ ಫ್ಲೂ) ಅನೇಕ ದೇಶಗಳಿಗೆ ಹರಡುತ್ತಿರುವ ಹಿನ್ನೆಲೆಯಲ್ಲಿ, ಇಲ್ಲಿ ಕೊಟ್ಟಿರುವ ಮಾಹಿತಿ ಅದರ ಬಗ್ಗೆ ಮು೦ಜಾಗ್ರತೆ ವಹಿಸಲು ಉಪಯೋಗವಾಗಬಹುದೆ೦ದು ಭಾವಿದ್ದೇನೆ.

1 ಹತ್ತಿರದ ಸ೦ಪರ್ಕದಿ೦ದ ದೂರವಿರಿ  ಮುಂದೆ ಓದಿ »

ಜೋಕೆ! ಕೆಮ್ಮಿನ ಸಿರಪ್ ವಿಷವಾದೀತು

ಸಂಪದಿಗರೇ,

೨೫ನೇ ತಾರೀಖಿನಂದು ಕನ್ನಡ ಪ್ರಭ ದಿನಪತ್ರಿಕೆ ಆರೋಗ್ಯ ಪುಟದಲ್ಲಿ ಬಂದಂಥ ಲೇಖನ ಕೆಳಗಿನ ಕೊಂಡಿಯಲ್ಲಿ ಇದೆ.
http://www.kannadapr...  ಮುಂದೆ ಓದಿ »

ಸಕ್ಕರೆ ಮೇಲ್ಯಾಕೀ ಅಕ್ಕರೆ

ಸಕ್ಕರೆ ಎಷ್ಟೊಂದು ಸಿಹಿ ಅಲ್ವೇ? ಯಾರೀಗ್ತಾನೆ ಈ ಸಕ್ಕರೆ ಮತ್ತು ಇದರಿಂದ ತಯಾರಿಸಿದ ಸಿಹಿ ತಿಂಡಿಗಳ ಮೇಲೆ ಪ್ರೀತಿಯಿಲ್ಲ ಹೇಳಿ| ನಮ್ಮೆಲ್ಲರ ಅಚ್ಚುಮೆಚ್ಚು ಈ ಸಕ್ಕರೆ. ನಾವೆಲ್ಲ ಇಷ್ಟೊಂದು ಪ್ರೀತಿಸುವ ಈ ಸಕ್ಕರೆ ನಮಗೇನು ಕೊಡಬಹುದೆಂದು ನೋಡಿದರೆ ದಂಗು ಬಡಿಯದೆ ಇರಲಾರದು|  ಮುಂದೆ ಓದಿ »

ಅಯೋಡೈಸ್ಡ್ ಉಪ್ಪು ದೇಹಕ್ಕೆ ಒಳ್ಳೆಯದಲ್ಲವೇ

೧೯೩೦ಕ್ಕೂ ಮುನ್ನ ನಮ್ಮ ದೇಶದಲ್ಲಿ ಬರಿಯ ಸೈಂಧ್ರ ಲವಣ ಬಳಸುತ್ತಿದ್ದರಂತೆ ಅಡುಗೆಗಳಿಗೆ. ಹಾಗಾಗಿ ಅಧಿಕ ರಕ್ತದೊತ್ತಡ ಇದ್ದ ರೋಗಿಗಳೇ ಇರಲಿಲ್ಲವಂತೆ. ನಂತರ ಸಮುದ್ರದ ಉಪ್ಪು ನಂತರ ಸಮುದ್ರದ ಉಪ್ಪಿಗೆ ಅಯೋಡೀನ್ ಬೆರೆಸಿ ಮಾರಾಟಮಾಡುತ್ತಿರುವುದು ಸಧ್ಯದ ಬೆಳವಣಿಗೆ.  ಮುಂದೆ ಓದಿ »

ಚಿಕುನ್‌ಗುನ್ಯಾಕ್ಕೆ ಪರಿಹಾರವಿದೆ

ಮೊದಲೇ ಹೇಳಿಬಿಡುತ್ತೇನೆ: ಚಿಕುನ್‌ಗುನ್ಯಾ ರೋಗಕ್ಕೆ ನಿಶ್ಚಿತ ಮದ್ದಿಲ್ಲ.  ಮುಂದೆ ಓದಿ »

ಮಾನಸಿಕ ಒತ್ತಡ

ಭಾನುವಾರ ಚಂದನವಾಹಿನಿಯ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಡಾ| ಚಂದ್ರಶೇಖರ್ ಅವರು ದಿನನಿತ್ಯದ ಮಾನಸಿಕ ಒತ್ತಡದಿಂದ ಪಾರಾಗಲು ಕೆಲವು ಸರಳ ಸೂತ್ರಗಳನ್ನು ಚೆನ್ನಾಗಿ ವಿವರಿಸಿದರು. ಕಾರ್ಯಕ್ರಮ ವೀಕ್ಷಿಸದವರಿಗಾಗಿ ಇಲ್ಲಿ ಸಂಕ್ಷೇಪಿಸಿದ್ದೇನೆ:  ಮುಂದೆ ಓದಿ »

Syndicate content