ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಟಾಲ್ಸ್‌ಟಾಯ್ -ಕಥೆ

ಫಾದರ್ ಸೆರ್ಗಿಯಸ್ ಅಧ್ಯಾಯ ಮೂರು

December 1, 2007 - 4:00pm — olnswamy

ಮೂರು


ಇತರರ ಪರವಾಗಿ ಮಾತೆ ಮೇರಿಯನ್ನು ಪ್ರಾರ್ಥಿಸುವ ಹಬ್ಬದ ದಿನ ಸ್ಟೆಪಾನ್ ಮಠಕ್ಕೆ ಸೇರಿಕೊಂಡ. ಆ ಮಠದ ಹಿರಿಯ ಸನ್ಯಾಸಿ ಹುಟ್ಟಿನಿಂದ ಉನ್ನತ ವರ್ಗಕ್ಕೆ ಸೇರಿದವನು, ವಿದ್ವಾಂಸ, ಲೇಖಕ ಮತ್ತು ಗುರುಸ್ಥಾನ*ದಲ್ಲಿದ್ದವನು. ವಲಾಛಿಯಾ* ದಿಂದ ಬಂದ ಸನ್ಯಾಸಿಗಳ ಪರಂಪರೆಗೆ ಸೇರಿದವನು. ಈ ಸನ್ಯಾಸಿಗಳು ಗುರುಗಳಿಗೆ ಅತೀವ ನಿಷ್ಠೆಯಿಂದ ಇದ್ದು ತಮ್ಮ ಗುರುಪರಂಪರೆಯನ್ನು ಸತತವಾಗಿ ಮುಂದುವರೆಸಿಕೊಂಡು ಬಂದವರಾಗಿದ್ದರು. ಈ ಮಠದ ಗುರುವು ಪಾಸ್ಸಿ ವೆಲಿಚ್ಕೊವ್ಸ್‌ಕಿಯ ಶಿಷ್ಯನಾದ ಲಿಯೊನಿಡ್‌ನ ಶಿಷ್ಯನಾದ ಮಾಕಾರಿಯಸ್‌ನ ಶಿಷ್ಯನಾದ, ಪ್ರಸಿದ್ಧ ಗುರು ಆಂಬ್ರೋಸನ ಶಿಷ್ಯನಾಗಿದ್ದ. ಈ ಅಬಾಟನಿಗೆ ಶರಣಾಗಿ ಸ್ಟೆಪಾನ್ ಅವನನ್ನು ತನ್ನ ಮಾರ್ಗದರ್ಶಕ ಗುರು ಎಂದು ಒಪ್ಪಿಕೊಂಡ.

ಮಠಕ್ಕೆ ಸೇರಿದ್ದರಿಂದ ತನ್ನ ಬದುಕು ಮಿಕ್ಕ ಲೌಕಿಕರಿಗಿಂತ ಮಿಗಿಲು ಎಂಬ ಭಾವ ಸ್ಟೆಪಾನ್ಸ್‌ಕಿಯಲ್ಲಿ ಮೂಡಿತ್ತು. ಕೈಗೆತ್ತಿಕೊಂಡ ಎಲ್ಲ ಕಾರ್ಯಗಳಲ್ಲಿ ಪರಿಪೂರ್ಣತೆಯನ್ನು ಸಾಧಿಸಬೇಕೆಂಬ ಹಂಬಲ ಈಗ ಅಂತರಂಗದ ಮತ್ತು ಬಹಿರಂಗದ ಪರಿಪೂರ್ಣತೆಯನ್ನು ಸಾಧಿಸುವ ಛಲದ ರೂಪತಳೆದಿತ್ತು. ಅವನು ಸೈನಿಕನಾಗಿದ್ದಾಗ ಯಾರೂ ನನ್ನತ್ತ ಬೆಟ್ಟು ತೋರಿಸದಿದ್ದರೆ ಸಾಕು ಅಂದುಕೊಳ್ಳುವ ಅಧಿಕಾರಿಯಷ್ಟೇ ಆಗಿರಲಿಲ್ಲ. ಕರ್ತವ್ಯದ ಪರಿಧಿಯನ್ನು ವಿಸ್ತರಿಸಿಕೊಂಡು ಬೇರೆಯ ಜವಾಬ್ದಾರಿಗಳನ್ನೂ ನಿರ್ವಹಿಸುತ್ತಾ ಇತರರಿಗೆ ಮಾದರಿಯಾಗಿದ್ದ ಹಾಗೆಯೇ ಈಗ ಪರಿಪೂರ್ಣ ಸನ್ಯಾಸಿಯಾಗಲು ಬಯಸಿದ. ಕಠಿಣ ದುಡಿಮೆ, ಚಾಪಲ್ಯಗಳ ನಿಯಂತ್ರಣ, ವಿಧೇಯತೆ, ವಿನಯಶೀಲತೆ ಮತ್ತು ಕಾರ್ಯಗಳಲ್ಲೂ ಆಲೋಚನೆಗಳಲ್ಲೂ ಪರಿಶುದ್ಧತೆಗಳನ್ನು ಸಾಧಿಸುವುದಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದ. ಅದರಲ್ಲೂ ವಿಧೇಯತೆ ಎಂಬ ಗುಣ, ಅಥವ ಸದ್ಗುಣ ಅವನಲ್ಲಿರದಿದ್ದರೆ ಮಠದ ಬದುಕು ಸಹ್ಯವೂ ಸುಲಭವೂ ಆಗುತ್ತಲೇ ಇರಲಿಲ್ಲ.  ಮುಂದೆ ಓದಿ »

  • ಟಾಲ್ಸ್‌ಟಾಯ್ -ಕಥೆ
~.~
  • olnswamy ರವರ ಬ್ಲಾಗ್
  • Login or register to post comments
  • 411 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
Syndicate content

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಕಾಶ್ಮೀರದ ಹುಡುಗಿಯ ಕತೆ
    July 4, 2008 - 7:20pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:51pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:50pm
  • ವೈಭವ
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:33pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:31pm
  • cmariejoseph
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 4, 2008 - 6:20pm
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 6:07pm
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 5:59pm
ಇನ್ನಷ್ಟು


ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator