ಇಂಟರ್ನೆಟ್
ನೆಟ್ ಸ್ಕೇಪ್ ಗೆ ಇನ್ನು ವಿದಾಯ
March 2, 2008 - 11:58pm — hpn
೯೦ರ ದಶಕದಲ್ಲಿ ಎಷ್ಟೋ ಮಂದಿ ಕಂಪ್ಯೂಟರ್ ಬಳಸುವವರಿಗೆ ನಿತ್ಯದ ಬಳಕೆಯ ತಂತ್ರಾಂಶವಾಗಿದ್ದ ನೆಟ್‌ಸ್ಕೇಪ್ ಗೆ ಈಗ ವಿದಾಯ ಹೇಳುವ ಸಮಯ. ಆಗೊಮ್ಮೆ ಎಲ್ಲರೂ ಬಳಸುತ್ತಿದ್ದ ಬ್ರೌಸರ್ ಇದು. ಹಲವು ಬಳಕೆದಾರರಿಗಂತೂ ಇದು ಸಾಕ್ಷಾತ್ ಇಂಟರ್ನೆಟ್ಟೇ ಆಗಿತ್ತು!
ಮೊಸಾಯ್ಕ್ ಎಂಬ ಮೊದಲ ಬ್ರೌಸರನ್ನು ಬರೆದ ಮಾರ್ಕ್ ಆಂಡರ್ಸನ್ ನೇತೃತ್ವದಲ್ಲೇ ನೆಟ್‌ಸ್ಕೇಪ್ ಮೊದಲ ಆವೃತ್ತಿ ೧೯೯೪ರಲ್ಲಿ ಹೊರಬಂದಿತ್ತು. ಒಂದು ಕಾಲದಲ್ಲಿ ಶೇಕಡಾ ೯೦ರಷ್ಟು ಇಂಟರ್ನೆಟ್ ಬಳಕೆದಾರರಿಂದ ಬಳಸಲ್ಪಡುತ್ತಿದ್ದ ಈ ಬ್ರೌಸರಿನ ಬಳಕೆ ವರ್ಷಗಳು ಕಳೆದಂತೆ ಕ್ರಮೇಣ ೦.೬% ಗೆ ಇಳಿಮುಖವಾಯಿತು.
ವಿಡಂಬನೆಯೆಂದರೆ ಇದೇ ನೆಟ್‍ಸ್ಕೇಪ್ ನ ಮತ್ತೊಂದು ರೂಪ ಮುಕ್ತ ತಂತ್ರಾಂಶವಾದ ಫೈರ್ ಫಾಕ್ಸ್ ನ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತ ಬಂದಿದೆ ಹಾಗು ಹೆಚ್ಚುತ್ತಲೇ ಇದೆ. ಫೈರ್ ಫಾಕ್ಸ್ ಜಗತ್ತಿನಾದ್ಯಂತ ೫೦೦ ಮಿಲಿಯನ್ ಗೂ ಹೆಚ್ಚು ಬಾರಿ ಡೌನ್ಲೋಡ್ ಮಾಡಲ್ಪಟ್ಟಿದೆ ಎಂದು ಇತ್ತೀಚೆಗಷ್ಟೆ ಈ ಯೋಜನೆಯನ್ನು ನಿರ್ವಹಿಸುತ್ತಿರುವ ಮಾಝಿಲ್ಲಾ ಫೌಂಡೇಶನ್ ಪ್ರಕಟಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತು. ಮುಂದೆ ಓದಿ »

- hpn ರವರ ಬ್ಲಾಗ್
- ೧ ಪ್ರತಿಕ್ರಿಯೆ
- 269 hits
- Email this blog



ಇಂಟರ್ನೆಟ್ ಗಾಗಿ ಏನೆಲ್ಲ (೨)
December 23, 2007 - 10:53pm — hpn
ರಿಲಯನ್ಸ್ ಕಸ್ಟಮರ್ ಕೇರ್ ನಂಬರುಗಳು ಯಾವ ನೆಟ್ವರ್ಕಿನಿಂದಲೂ ಸಿಗದಂತಾಗಿಬಿಟ್ಟಿದ್ದವು. ಬೈಸಿಕೊಳ್ಳಬೇಕಾಗುವುದು ಎಂದು ನಂಬರುಗಳನ್ನೇ "ಟೆಂಪರರಿಲಿ ಔಟ್ ಆಫ್ ಸರ್ವೀಸ್" ಮಾಡಿಕೊಂಡುಬಿಟ್ಟಿದ್ದರು ರಿಲಯನ್ಸಿನವರು! ಹಲವು ದಿನಗಳ ನಂತರ ಅದು ಹೇಗೋ ತಂತಾನೆ ಸರಿಹೋಗಿತ್ತು - ಸದ್ದಿಲ್ಲದೆ. ರಿಲಯನ್ಸಿನವರ ಕಸ್ಟಮರ್ ಕೇರ್ ನಂಬರುಗಳೂ ಪುನಃ ಲಭ್ಯವಾಗಿಬಿಟ್ಟಿದ್ದವು!
ತದನಂತರವಾದರೂ ಕೈಕೊಡದು ಎಂದೆಣಿಸಿದ್ದು ಸುಳ್ಳಾಯಿತು. ಒಂದು ವಾರವೂ ಕಳೆದಿರಲಿಲ್ಲ, ಆಗೀಗ ಕೈಕೊಡುತ್ತಿದ್ದ ನೆಟ್ವರ್ಕು ಮತ್ತೆ ದಿನಗಟ್ಟಲೆ ಮಾಯ. ವಿಚಾರಿಸಲಾಗಿ "ನಿಮ್ಮ ಅಕೌಂಟು ಕ್ರೆಡಿಟ್ ಲಿಮಿಟ್ ಮೀರಿದೆ, ದಯವಿಟ್ಟು ಕೂಡಲೆ ಮೂರೂವರೆ ಸಾವಿರ ಪಾವತಿ ಮಾಡಿ" ಎಂದು ರಿಲಯನ್ಸಿನಿಂದ ಉತ್ತರ ಬಂತು. ನನಗಾದ ಶಾಕ್ ಹೇಳತೀರದು. "ಸದ್ಯಕ್ಕೆ ನಿಮ್ಮ ಅಕೌಂಟು ಡಿಸೇಬಲ್ ಮಾಡಲಾಗಿದೆ" ಎಂದ ಕಸ್ಟಮರ್ ಕೇರ್ ಎಕ್ಸಿಕ್ಯುಟಿವ್ ಗೆ "ತೆಗೆದುಕೊಂಡು ಎರಡು ವಾರ ಕಳೆದಿಲ್ಲ, ಅಲ್ಲದೇ ತಾರೀಫ್ (tariff) ಇರೋದು unlimited plan ಎಂದು - ಅದು ಹೇಗೆ ಈಗಲೇ ದುಡ್ಡು ಕಟ್ಟುವಂತಾಯಿತು" ಎಂದು ಕೇಳಿದರೆ ಬದಲಿಲ್ಲ! ಮುಂದೆ ಓದಿ »

- hpn ರವರ ಬ್ಲಾಗ್
- Login or register to post comments
- 357 hits
- Email this blog



ಇಂಟರ್ನೆಟ್ ಗಾಗಿ ಏನೆಲ್ಲ (೧)
December 7, 2007 - 11:50pm — hpn
ಕಳೆದ ತಿಂಗಳು ಕಡಿಮೆ ಸಮಯದಲ್ಲೇ ಬನಶಂಕರಿಯ ಬಾಡಿಗೆ ಮನೆ ಖಾಲಿ ಮಾಡಿ ಹೊಸತೊಂದು ಬಾಡಿಗೆ ಮನೆಗೆ ಹೋಗುವ ಸನ್ನಿವೇಶ ಎದುರಾಯಿತು. ಹೆಚ್ಚು ಕಾಲ ಬಾಡಿಗೆ ಮನೆಗಳಲ್ಲೇ ಇದ್ದದ್ದರಿಂದ ಮನೆ ಬದಲಾಯಿಸುವುದು, ಸಾಮಾನು ಸಾಗಿಸುವುದು ಈಗ ಕಷ್ಟವೆನಿಸುವುದಿಲ್ಲ. ಕಷ್ಟವಾಗುವುದು ಹೊಸ ಜಾಗದಲ್ಲಿ ಇಂಟರ್ನೆಟ್ ಕನೆಕ್ಷನ್ ತೆಗೆದುಕೊಳ್ಳುವುದು!
ಹಿಂದಿದ್ದ ಮನೆಯಲ್ಲಿ ಏರ್ಟೆಲ್ ಬ್ರಾಡ್ ಬ್ಯಾಂಡ್ ಹಾಕಿಸಿಕೊಂಡಿದ್ದೆ. ಬಿ ಎಸ್ ಎನ್ ಎಲ್ ಶಿಫ್ಟ್ ಮಾಡೋದು ತಿಂಗಳುಗಟ್ಟಲೆ ಹಿಡಿಯಬಹುದೆಂದು ಅದರ ತರಲೆಯೇ ಬೇಡವೆಂದು ಅದರೊಂದಿಗೆ ಹಾಕಿಸಿಕೊಂಡಿದ್ದ ಬ್ರಾಡ್ ಬ್ಯಾಂಡ್ ಕನೆಕ್ಷನ್ ತೆಗೆಸಿಹಾಕಿಬಿಟ್ಟಿದ್ದೆ. ಈಗ ಹೊಸ ಜಾಗದಲ್ಲಿ ಏರ್ಟೆಲ್ ರವರ ಕವರೇಜ್ ಇಲ್ಲ. ಮರಳಿ .... ಪಾದಕ್ಕೆ ಎಂಬಂತೆ ಬಿ ಎಸ್ ಎನ್ ಎಲ್ ಗೆ ಹೊಸತೊಂದು ಅರ್ಜಿ ಹಾಕಿದೆ. ಅರ್ಜಿ ಹಾಕಿ ಒಂದು ತಿಂಗಳಾದರೂ ಏನೂ ಇಲ್ಲ.
ಈ ಮಧ್ಯೆ ಅನಿಲ್ ಅಂಬಾನಿ ಸಾರಥಿಯಾಗಿ ನಡೆಸುತ್ತಿರುವ ರಿಲಯನ್ಸ್ ನ (ವಿ)ಭಾಗ ಬೆಂಗಳೂರಿನಲ್ಲಿ Wimax ಹೊರತಂದಿದೆಯೆಂದು ಕೇಳಿದೆ. ಆ ದಿನವೇ ಹೋಗಿ ಅವರಿಗೊಂದು ಚೆಕ್ ಕೊಟ್ಟು, ಸಾಧ್ಯವಾದಷ್ಟು ಬೇಗ ಹಾಕಿಸಿಕೊಡಿ ಎಂದು ಕೇಳಿದೆ. ದುಡ್ಡು ಪಡೆದದ್ದಕ್ಕೆ ಚೀಟಿಯಿಲ್ಲ, ಪತ್ರವಿಲ್ಲ. ಒಂದು ವಾರದಲ್ಲೇ ಯಾವುದೋ ಕಂಪೆನಿಯ ಇಬ್ಬರು ನಾವು ರಿಲಯನ್ಸ್ ಕಂಪೆನಿಗೆ ಕಾಂಟ್ರಾಕ್ಟ್ ಮೇಲೆ ಕೆಲಸ ಮಾಡುವವರು ಎಂದು ಹೇಳಿಕೊಂಡು ಲ್ಯಾಪ್ ಟಾಪ್ ಹಿಡಿದು ಬಂದರು. ಬಂದವರು ಮೇಲೆ ಕೆಳಗೆ ಓಡಾಡುತ್ತ ಮಹಡಿಯ ಮೇಲೆ ಒಂದು ರಿಸೀವರ್ ಕುಳ್ಳಿರಿಸಿದರು. ಆ ರಿಸೀವರಿನಿಂದ ವೈರು ಕೆಳಗೆ ಎಳೆದು ತಂದು "ಸಿಗ್ನಲ್ ಸಿಗ್ತು, ಇಂಟರ್ನೆಟ್ ಬಂತು, ಹೋ" ಎಂದು ಕುಣಿದಾಡಿದರು. ರಿಲಯನ್ಸಿನ ಟವರ್ ಹತ್ತಿರವೇ ಇರೋದರಿಂದ ಬಹಳ ಒಳ್ಳೆಯ ಸಿಗ್ನಲ್ ಸಿಕ್ಕಿತ್ತಂತೆ. ಮುಂದೆ ಓದಿ »


RSS: