ಕೆಲವು ದಿನಗಳ ಹಿಂದೆ ಫೋನಾಯಿಸಿದ್ದ
ಶಿವಪ್ರಕಾಶ್ ಮಾತಿನ ನಡುವೆ ಕನ್ನಡ ಹಾಗೂ ಲಿನಕ್ಸ್ ಮಟ್ಟಿಗೆ ನಾವುಗಳು ಮಾಡಬೇಕು ಎಂದುಕೊಂಡಿದ್ದ ಕೆಲಸಗಳು ಹಾಗೇ ಉಳಿದುಕೊಂಡದ್ದು ನೆನಪಿಸಿದ್ದ. "ಈ ವಾರ ಒಂದು ದಿನ ಸೀರಿಯಸ್ಸಾಗಿ ಕುಳಿತು ಅವುಗಳಲ್ಲಿ ಕೆಲವನ್ನು ಮಾಡಿ ಮುಗಿಸಬೇಕು ಕಣೋ ಹರಿ" ಎಂದಿದ್ದ. ಅವನು ಹಾಗೆ ಹೇಳಿದ್ದು ನನಗೆ ಎಂದಿನಂತೆಯೇ ಕೇಳಿ ಬಂದಿತ್ತು. ಇತ್ತೀಚೆಗಷ್ಟೆ ಸರಿಯಾದ ಇಂಟರ್ನೆಟ್ ಕನೆಕ್ಷನ್ ಬಂದದ್ದಾಗಿ ಕೆಲಸಗಳ ಬ್ಯಾಕ್ ಲಾಗ್ ಇದ್ದದ್ದರಿಂದ ನಾನೂ ಹೆಚ್ಚು ಏನೂ ಹೇಳದೆ ಸುಮ್ಮನಿದ್ದೆ.
ವಾರ ಬಹುತೇಕ ಕಳೆದು ವಾರಾಂತ್ಯ ಬರುತ್ತಲೇ ಮಧ್ಯಾಹ್ನ ಮತ್ತೆ ಅವ ಫೋನಾಯಿಸಿದಾಗ "ಈಗ ತಾನೆ ಇಂಟರ್ನೆಟ್ ಕನೆಕ್ಷನ್ ಸಿಕ್ತು - ಕೆಲಸವಿದೆ, ನೀನೆ ಮನೆಗೆ ಬಾ. ಇಲ್ಲೇ ಕುಳಿತು ಚರ್ಚೆ ಮಾಡೋಣ" ಎಂದೆ. ಆ ಟ್ರಾಫಿಕ್ ನಲ್ಲಿ ಇಷ್ಟು ದೂರ ಬರಲಿಕ್ಕಿಲ್ಲ ಎಂದು ಎಣಿಸಿದ್ದೆ. ಬೇಸರ ಮಾಡಿಕೊಳ್ಳದೆ, ಅರ್ಧ ಊರು ಹಾದು ನೇರ ಮನೆಗೇ ಬಂದುಬಿಟ್ಟ. ಲಿನಕ್ಸಿನ ಕುರಿತು, ಲಿನಕ್ಸಿನಲ್ಲಿ ಕನ್ನಡ ಉತ್ತಮಪಡಿಸುವ ಕುರಿತು ಅವನಿಗಿರುವ ಆಸಕ್ತಿ ನೋಡಿ ನನಗಾಶ್ಚರ್ಯವಾಯಿತು.
ನಾವುಗಳು ಮಾಡುತ್ತಿದ್ದ ಕೆಲಸಗಳಿಗೆ ನೆಲೆಯಾದ
ವೆಬ್ಸೈಟು,
ಹಾಗೂ ವಿಕಿ ಎರಡೂ ಇತ್ತೀಚೆಗೆ ಹೆಚ್ಚು ಬಳಕೆಯಾಗದೆ ಹೋಗಿದ್ದರಿಂದ ಮೊದಲು ಅದನ್ನು ಸರಿಪಡಿಸಿ, ಚೊಕ್ಕಗೊಳಿಸಿ ಕೆಲವು ಚಿಕ್ಕ ಪುಟ್ಟ ಕೆಲಸಗಳನ್ನು ಮುಗಿಸಬೇಕು ಎಂದು ನಿರ್ಧರಿಸಿದೆವು. ಮಾಡಬೇಕಾದ ಕೆಲಸಗಳ
ಒಂದು ದೊಡ್ಡ ಪಟ್ಟಿಯೇ ಇದೆ. ಆ ಪಟ್ಟಿಯನ್ನೂ ಸರಿಯಾಗಿ ಮಾಡದೇ ಹೋದರೆ?
ಏನೇನು ಮಾಡಬೇಕೆಂಬ ಪಟ್ಟಿ ಮಾಡಿಟ್ಟರಾಯಿತು ಎಂದಿನಷ್ಟೇ ಆಸಕ್ತಿಯಿಂದ ಕೆಲಸ ಕೈಗೆತ್ತಿಕೊಳ್ಳುವ
ಮಿಶ್ರಿಕೋಟಿಯವರಂತಹ ಹಲವರು ಲೋಕಲೈಸೇಶನ್ ಕಾರ್ಯ ಎಲ್ಲಿಯವರೆಗೂ ಬಂತು ಎಂದು ಮತ್ತೆ ಮತ್ತೆ ವಿಚಾರಿಸುತ್ತಿರುವಾಗ ಬೇರೆಯ ಎಷ್ಟೇ ಕೆಲಸವಿದ್ದರೂ ಇದನ್ನು ಪುನಶ್ಚೇತನಗೊಳಿಸುವ ಯಾವುದೂ ಕಾರ್ಯವಾಗದಿದ್ದರೆ?
906 ಹಿಟ್ಸ್