ತಿನಿಸು
ಸಬ್ಬಕ್ಕಿ/ಶಾಬಕ್ಕಿ/ಸೀಮೆಅಕ್ಕಿ ತಯಾರಿಕೆ
August 5, 2008 - 1:11pm — vikashegdeಕೆಲದಿನಗಳ ಹಿಂದೆ ನನ್ನ ಬ್ಲಾಗ್ ನಲ್ಲಿ ’ಸಬ್ಬಕ್ಕಿ’ ಬಗ್ಗೆ ಬರೆದಿದ್ದೆ. ಬಹಳಷ್ಟು ಜನರಿಗೆ ಈ ವಿಷಯ ಗೊತ್ತಿರಲಿಲ್ಲವೆಂದು ಅದಕ್ಕೆ ಬಂದ ಪ್ರತಿಕ್ರಿಯೆಗಳಿಂದ ತಿಳಿಯಿತು. ಆದ್ದರಿಂದ ಸಂಪದದ ಸದಸ್ಯರೊಡನೆಯೂ ಈ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. ಮುಂದೆ ಓದಿ »

ಭಕ್ರಿ ಸಮಾರಾಧನೆ
January 2, 2008 - 8:31am — aniljoshi(ಇತ್ತೀಚೆಗೆ ಬಹಳ ದಿನಗಳ ನಂತರ ಭಕ್ರಿ (ಜೋಳದ ರೊಟ್ಟಿ) ತಿಂದದ್ದರ ಪರಿಣಾಮ ಈ ಬರಹ - ಸಂಪದದಲ್ಲಿ ಮೊದಲ ಬ್ಲಾಗು ಕೂಡ!)
ಕೆಲವು ದಿವಸಗಳ ಹಿಂದೆ ನಮ್ಮ ಮನೆಯಲ್ಲಿ ಒಂದು ವಾರ ಪೂರ್ತಿ ಭಕ್ರಿ ಸಮಾರಾಧನೆ. ಹೆಚ್ಚು ಕಡಿಮೆ ಎರಡು ವರ್ಷಗಳಿಂದ ಭಕ್ರಿ ರುಚಿ ಕಾಣದ ನಾಲಿಗೆಗೆ ಭಕ್ರಿ ಔತಣ! ಇಲ್ಲಿ ಸ್ಯಾನ್ ಹೋಸೆಯಲ್ಲಿ ನನ್ನ ಹೆಂಡತಿ ಪಲ್ಲವಿ, ಬೆಂಗಳೂರಿನಲ್ಲಿ ಅವಳಣ್ಣ ರಮೇಶ ಮತ್ತು ಭಾರತ ಯಾತ್ರೆಯಿಂದ ಮರಳುತ್ತಿದ್ದ ಮಿತ್ರ ಪ್ರಮೋದ; ಇವರೆಲ್ಲರ coordination ಇಂದಾಗಿ ನನಗೆ ಭಕ್ರಿ ತಿನ್ನುವ ಯೋಗ ಒದಗಿ ಬಂದಿತ್ತು. ಆ ಭಕ್ರಿಗಳೋ ಕಟಿ ರೊಟ್ಟಿಗಳಾಗಿರದೆ ನನ್ನಮ್ಮನ ತೆಳು ಭಕ್ರಿಗಳಂತಿದ್ದು (ಹರವಿನಲ್ಲಿ ಅಮ್ಮನ ಭಕ್ರಿಗಿಂತ ಚಿಕ್ಕವಾಗಿದ್ದರೂ) ತಿನ್ನುತ್ತಿದ್ದಂತೆ ಒಮ್ಮಿಂದೊಮ್ಮೆಲೆ ೧೫-೨೦ ವರ್ಷಗಳಷ್ಟು ಹಿಂದಿನ ಗುಲ್ಬರ್ಗದ ನಮ್ಮ ಮನೆ, ಅಲ್ಲಿ ಅಡಿಗೆ ಮನೆಯಲ್ಲಿ ನೆಲದ ಮೇಲಿಟ್ಟ ಗ್ಯಾಸಿನ ಮುಂದೆ ಕುಳಿತ ಅಮ್ಮ ಜೋಳದ ಹಿಟ್ಟಿನ ಮಿನಿ ಗುಡ್ಡದಲ್ಲಿ ಒಂದು ತಗ್ಗು ಮಾಡಿ, ಅದೇ ಆಗ ಮರಳಿಸಿದ ಬಿಸಿನೀರ ಸುರಿದು, ಕೈ ಖಡಚಿಯಿಂದ ಚಕಚಕನೆ ಕಲಸಿ ಭಕ್ರಿ ಬಡಿಯಲಿಕ್ಕೆ ಸಿದ್ಧವಾಗುತ್ತಿದ್ದ ದೃಶ್ಯ ಕಂಡಾಗ ಪಲ್ಲವಿ ಮಾಡಿದ ಸೌತೆಕಾಯಿ ರಸಪಲ್ಯಕ್ಕೆ ಅಮ್ಮನ ನೆನಪೂ ಸೇರಿ ಮತ್ತಷ್ಟು ರುಚಿಯಾಯಿತು! ಮುಂದೆ ಓದಿ »





RSS: