ಹಣ
ಕುರುಡು ಕಾಂಚಾಣ
ಕುರುಡು ಕಾಂಚಾಣ-2
ಹಣವೇ ಗುಣವೆ?
ಹಣವಿಲ್ಲದೇ ಈ ಜಗದಲ್ಲಿ ಬಾಳಲಾರೆವು ಎಂಬುದೇನು ಸುಳ್ಳಲ್ಲ. ಅಂದಹಾಗೆ, ಇದೇನು ಇವತ್ತಿನ ಮಾತೂ ಅಲ್ಲ - ಅನಾದಿ ಕಾಲದಿಂದಲೇ ನಡೆದುಕೊಂಡು ಬಂದಿರುವಂತಹದ್ದೇ. ವೇದಗಳಲ್ಲೇ, ಹಣವನ್ನು ಜೂಜಾಡಿ ಕಳೆದುಕೊಂಡ ವ್ಯಕ್ತಿ ಹೇಗೆ ತನ್ನ ಕುಟುಂಬದವರಿಂದಲೇ ಅನಾದರಕ್ಕೆ ಒಳಗಾಗುತ್ತಾನೆ ಅನ್ನುವುದರ ಪ್ರಸ್ತಾಪ ಬಂದಿದೆ. Read more about ಹಣವೇ ಗುಣವೆ?
ಹೊತ್ತಿಗೆ-ಹಣ-ಹುಡುಗಿ
ಹೊತ್ತಿಗೆ - ಹಣವು - ಹುಡುಗಿ
ಬರುವುದುಂಟೇ ತಿರುಗಿ
ಕಂಡವರ ಕೈ ಸೇರಿದ ಮೇಲೆ?
ಬಾರವು ಬಾರವು!
ಒಂದುವೇಳೆ ಬಂದರೂ
ಹರಿದು ಕಿಲುಬಿ ನಲುಗಿ!
ಸಂಸ್ಕೃತ ಮೂಲ:
ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ ಗತಂ
ಅಥವಾ ಪುನರಾಯಾತಿ ನಷ್ಟಂ ಭ್ರಷ್ಟಂ ಚ ಖಂಡಿತಂ
Read more about ಹೊತ್ತಿಗೆ-ಹಣ-ಹುಡುಗಿ
ಗಳಿಕೆ ಹೇಗಿರಬೇಕು?
ಗಳಿಸುತಿರಬೇಕು ಹಣವ
ಉಳಿಸುತಲೂ ಜೊತೆಗೆ
ಬೆಳೆಸುತಲೂ ಇರಬೇಕು!
ಗಳಿಸದೇ ಮುಕ್ಕುತಿರೆ
ಅಳಿವುದದು ನಿಕ್ಕುವದಿ
ಮಲೆಯೆತ್ತರದೈಸಿರಿಯೂ!!
ಸಂಸ್ಕೃತ ಮೂಲ:
ಅರ್ಥಾನಾಮರ್ಜನಂ ಕಾರ್ಯಂ ವರ್ಧನಂ ರಕ್ಷಣಂ ತಥಾ
ಭಕ್ಷ್ಯಮಾಣೋ ನಿರಾದಾಯಃ ಸುಮೇರುರಪಿ ಹೀಯತೇ
-ಹಂಸಾನಂದಿ
ಬೆಲೆಯಿರದ ನಿಧಿ
ಹೊತ್ತಿಗೆಯೊಳಗಡೆ ಅಡಗಿದ ಅರಿವು
ಕಂಡವರ ಕೈ ಸೇರಿದ ಹಣವು
ಬೇಕಾದೊಡನೆ ಸಿಗದಂತಿರಲು
ಅದಲ್ಲ ಅರಿವು! ಅದಲ್ಲ ಹಣವು!
ಸಂಸ್ಕೃತ ಮೂಲ:
ಪುಸ್ತಕಸ್ತಾತು ಯಾ ವಿದ್ಯಾ ಪರಹಸ್ತಂ ಗತಂ ಧನಂ|
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ||
-ಹಂಸಾನಂದಿ
Read more about ಬೆಲೆಯಿರದ ನಿಧಿ
ದುಡ್ಡಿದ್ದವನೇ ದೊಡ್ಡಪ್ಪ
ಅರಿವೂ ಮನೆತನವೂ ತರಲಾರವು ಹಿರಿಮೆ
ಎಂದಿಗೂ ಹಣವುಳ್ಳವರಲೇ ಜನರ ಒಲುಮೆ;
ಶಿವನು ತಲೆಯ ಮೇಲೆ ಹೊತ್ತಾಡಿದರೇನು?
ಗಂಗೆ ಸೇರುವುದು ರತ್ನಾಕರ*ನಲ್ಲವೇನು?
ಸಂಸ್ಕೃತ ಮೂಲ:
ನ ವಿದ್ಯಯಾ ನೈವ ಕುಲೇನ ಗೌರವಂ
ಜನಾನುರಾಗೋ ಧನಿಕೇಷು ಸರ್ವದಾ |
ಕಪಾಲಿನಾ ಮೌಲಿ ಧೃತಾಪಿ ಜಾಹ್ನವೀ
ಪ್ರಯಾತಿ ರತ್ನಾಕರಮೇವ ಸರ್ವಾದಾ ||
-ಹಂಸಾನಂದಿ
* ಕೊ.ಕೊ: ರತ್ನಾಕರ = ಮುತ್ತು ರತ್ನಗಳಿಗೆ ಆಗರವಾದ ಸಾಗರ Read more about ದುಡ್ಡಿದ್ದವನೇ ದೊಡ್ಡಪ್ಪ
ಗಳಿಸುವ ರೀತಿ
ಜಾಣರು ಮುಪ್ಪು ಸಾವಿಲ್ಲವದರ ತೆರದಿ
ಹಣವನ್ನೂ ಅರಿವನ್ನೂ ಗಳಿಸುತಿರಬೇಕು;
ಮುಂದಲೆಯನೇ ಯಮನು ಹಿಡಿದೆಳೆದಿರುವಂತೆ
ಒಳ್ಳೆಯ ಕೆಲಸಗಳನೇ ಮಾಡುತಿರಬೇಕು!
ಸಂಸ್ಕೃತ ಮೂಲ:
ಅಜರಾಮರವತ್ ಪ್ರಾಜ್ಞೋ ವಿದ್ಯಾಮರ್ಥಂ ಚ ಸಾಧಯೇತ್|
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್ ||
-ಹಂಸಾನಂದಿ Read more about ಗಳಿಸುವ ರೀತಿ
ಕೂಡಿಡುವ ಮೊದಲು ..
ಹಣವ ಬರಿದೆ ಕೂಡಿಡದಲೇ
ನೀಡು,ಬಳಸು,ಮತ್ತೇನಾದರೂ ಮಾಡು;
ಬಂಡನ್ನು ಸೇರಿಸುತ ಜೇನ್ದುಂಬಿಗಳು
ಮಾಡಿಟ್ಟ ಜೇನು ಕದ್ದು ತಿಂದವರ ಪಾಲು!
ಸಂಸ್ಕೃತ ಮೂಲ:
ದಾತವ್ಯಂ ಭೋಕ್ತವ್ಯಂ ಧನವಿಷಯೇ ಸಂಚಯೋ ನ ಕರ್ತವ್ಯಃ |
ಪಶ್ಯೇಹ ಮಧುಕರೀಣಾಂ ಸಂಚಿತಾರ್ಥಂ ಹರಂತ್ಯನ್ಯೇ ||
-ಹಂಸಾನಂದಿ Read more about ಕೂಡಿಡುವ ಮೊದಲು ..
ಕೊಡುಗೈ ದಾನಿ
ಜಿಪುಣನಿಗಿಂತಲು ಕೊಡುಗೈ ದಾನಿ
ಹಿಂದಿರಲಿಲ್ಲ ಮುಂದೆ ಬರಲಾರ
ತಾ ಮುಟ್ಟದ ಹಣಕಾಸೆಲ್ಲವನೂ
ಕಂಡವರಿಗುಳಿಸಿ ಹೋಗುವನಲ್ಲ!
ಸಂಸ್ಕೃತ ಮೂಲ:
ಕೃಪಣೇನ ಸಮೋ ದಾತಾ ನ ಭೂತೋ ನ ಭವಿಷ್ಯತಿ|
ಅಸ್ಪೃಶನ್ನೇವ ವಿತ್ತಾನಿ ಯಃ ಪರೇಭ್ಯಃ ಪ್ರಯಚ್ಛತಿ ||
-ಹಂಸಾನಂದಿ Read more about ಕೊಡುಗೈ ದಾನಿ
ಗಳಿಕೆ
ಗಳಿಸಬಹುದೆಷ್ಟು ಹಣವನು? ಬೊಮ್ಮ ಹಣೆಯಲಿ ಬರೆದಷ್ಟು!
ಮರುಭೂಮಿಯಲಾದರೂ ಮೇರುಗಿರಿಗೆ ಹೋದರೂ ಹೆಚ್ಚು ಸಿಗುವುದಿಲ್ಲ;
ಸಿರಿವಂತ ಜಿಪುಣರ ಮುಂದೆರಗದೇ ನೀನು ದಿಟ್ಟನಾದರೆ ಲೇಸು.
ಬಾವಿಯೇನು? ಕಡಲೇನು? ಕೊಡದಲ್ಲಿ ಹೆಚ್ಚು ತುಂಬುವುದಿಲ್ಲ!
ಸಂಸ್ಕೃತ ಮೂಲ:
ಯದ್ಧಾತ್ರಾ ನಿಜಫಾಲಪತ್ರಲಿಖಿತಂ ಸ್ತೋಕಂ ಮಹದ್ವಾ ಧನಮ್
ತತ್ಪ್ರಾಪ್ನೋತೀ ಮರುಸ್ಥಲೋSಪಿ ನಿತರಾಮ್ ಮೇರೌ ತತೌ ನಾಧಿಕಂ |
ತದ್ಧೀರೋ ಭವ ವಿತ್ತವತ್ತ್ಸು ಕೃಪಣಂ ವೃತ್ತಿಂ ವೃಥಾ ಮಾ ಕೃಥಾಃ
ಕೂಪೇ ಪಶ್ಯ ಪಯೋನಿಧಿವಾಪಿ ಘಟಃ ಪ್ರಾಪ್ನೋತಿ ತುಲ್ಯಂ ಜಲಂ ||
यद्वात्रा निजफालपट्टलिखितं स्तोकं महद्वा धनं Read more about ಗಳಿಕೆ
ಕೊರತೆ ಮರೆಯಿಸುವ ಗುಣಗಳು
ಎಣಿಯಿರದ ರತುನಗಳ ಹೆತ್ತ ಪರ್ವತದ
ಸುತ್ತ ತುಂಬಿರುವ ಭಾರಿ ಹಿಮರಾಶಿಯೂ
ಅದರ ಹಿರಿಮೆಯ ಇನಿತೂ ಕುಂದಿಸದು;
ಒಳಿತಾದ ಗುಣಗಳೇ ತುಂಬಿ ತುಳುಕಿರಲು
ಮರೆಸಿ ಹೋದೀತು ಇರಲೊಂದು ಕುಂದು
ಬೆಳುದಿಂಗಳು ಚಂದಿರನ ಕಲೆ ಮರೆಸುವಂತೆ!
ಸಂಸ್ಕೃತ ಮೂಲ (ಕಾಳಿದಾಸನ ಕುಮಾರ ಸಂಭವದಿಂದ):
ಅನಂತರತ್ನ ಪ್ರಭವಸ್ಯ ಯಸ್ಯ
ಹಿಮಂ ನ ಸೌಭಾಗ್ಯವಿಲೋಪಿ ಜಾತಂ |
ಏಕೋ ಹಿ ದೋಷೋ ಗುಣಸನ್ನಿಪಾತೇ
ನಿಮಜ್ಜತೀಂದೋಃ ಕಿರಣೇಷ್ವಿವಾಂಕಃ ||
-ಹಂಸಾನಂದಿ
Read more about ಕೊರತೆ ಮರೆಯಿಸುವ ಗುಣಗಳು
