ಡಿವಿಜಿ
ಏನೀ ಮಹಾನಂದವೇ? ಓ ಭಾಮಿನಿ!
September 26, 2008 - 5:24am — hamsanandiಕೆಲವು ದಿನಗಳ ಹಿಂದೆ 'ಭಾಮೆಯ ನೋಡಲು ತಾ ಬಂದ' ಅನ್ನೋ ಬರಹದಲ್ಲಿ ಹಿಂದೋಳ ರಾಗದ ಬಗ್ಗೆ ಸ್ವಲ್ಪ ಹೇಳಿದ್ದೆ. ಇವತ್ತು ಇನ್ನೊಂದು ಸ್ವಲ್ಪ ಮುಂದುವರೆಸೋಣವೇ?
ಹಿಂದೋಳದಲ್ಲಿ ಬೇಕಾದಷ್ಟು ಚಿತ್ರಗೀತೆಗಳಿವೆ ಅಂತ ಹೇಳಿದ್ದೆ. ಕಳೆದ ಬರಹಗಳಲ್ಲಿ ಇಲ್ಲದೇ ಇರೋ ಕೆಲವು ಒಳ್ಳೇ ಉದಾಹರಣೆಗಳು ಅಂದರೆ, ರಾಜ್‍ಕುಮಾರ್ ಮತ್ತೆ ವಾಣಿ ಜಯರಾಂ ಅವರು ಹಾಡಿರೋ ಶ್ರಾವಣ ಬಂತು ಚಿತ್ರದ ಬಾನಿನ ಅಂಚಿಂದ ಬಂದೆ ಅನ್ನೋ ಹಾಡು; ಹಾಗೇನೇ ಮಲಯಮಾರುತ ಚಿತ್ರದಲ್ಲಿ ಏಸುದಾಸ್ ಅವರು ಹಾಡಿರೋ ನಟನವಿಶಾರದ ನಟಶೇಖರ ಅನ್ನೋ ಗೀತೆ; ಮತ್ತೆ ರವಿಚಂದ್ರನ್ ಅವರು ನಟಿಸಿರೋ ಒಂದು ಚಿತ್ರ (ಹೆಸರು ಮರೆತಿದ್ದೇನೆ)ದಲ್ಲಿನ ನೀನು ನೀನೇ ಅಲ್ಲಿ ನಾನು ನಾನೇ ಅನ್ನೋ ಹಾಡು - ಇಂತಹವುಗಳನ್ನ ನೆನೆಯಬಹುದು.
ನಾನು ಮೊದಲೇ ಹೇಳಿದಂತೆ, ಹಿಂದೋಳ ರಾಗದಲ್ಲಿ ಬರುವುದು ಐದು ಸ್ವರಗಳು ಮಾತ್ರ. ಷಡ್ಜ, ಸಾಧಾರಣ ಗಾಂಧಾರ, ಶುದ್ಧ ಮಧ್ಯಮ, ಶುದ್ಧ ಧೈವತ ಮತ್ತು ಕೈಶಿಕಿ ನಿಷಾದ. ಇದನ್ನು ಕರ್ನಾಟಕ ಸಂಗೀತ ಲಿಪಿಯಲ್ಲಿ ಹೀಗೆ ಸೂಚಿಸುವುದು ರೂಢಿ. ಮುಂದೆ ಓದಿ »

ಕರ್ಮಯೋಗದಲ್ಲಿ ಒಂದು ಸಂಜೆ
February 6, 2008 - 3:07pm — Sunil Jayaprakashಸಂಜೆ, ಭಗವದ್ಗೀತೆಯ ಬಗ್ಗೆ ಶತಾವಧಾನಿ ಡಾ.ಆರ್. ಗಣೇಶರ ಒಂದು ಉಪನ್ಯಾಸ ಇದೆ ಎಂಬುದು ತಿಳಿದಿತ್ತಷ್ಟೇ. ಕಛೇರಿಯ ನಂತರ ಸಂಜೆ ನೇರವಾಗಿ ಮನೆಗೆ ತೆರಳುವ ಬದಲು, ಗೋಖಲೆ ಸಾರ್ವಜನಿಕ ವಿಚಾರ ಸಂಕೀರ್ಣದೆಡೆಗೆ ಗಾಡಿ ತಿರುಗಿಸಿದೆ. ಹೋಗಿ ನೋಡಿದರೆ ಇದ್ದವರಲ್ಲಿ ೯೯% ಬರೀ ವಯಸ್ಸಾದವರೇ. ಕಡೆ ಕಡೆಯಲ್ಲಿ, ನಾನೂ ಸೇರಿದಂತೆ ೪ ಮಂದಿ ಯುವಕರು ಇದ್ದೆವೋ ಏನೋ ? ಮುಂದೆ ಓದಿ »





RSS: