ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಬರಹ

ನಾಲ್ಕನೆಯ ವರ್ಷ

ವರ್ಷಗಳು ಉರುಳುವುದೇ ತಿಳಿಯುತ್ತಿಲ್ಲ. ಸಂಪದ ದಲ್ಲಿ ಬರೆಯತೊಡಗಿ ಮೂರು ವರ್ಷ ಕಳೆದು ಹೋದದ್ದೇ ತಿಳಿಯಲಿಲ್ಲ! ಕಾಲ ಉರುಳುವುದಿಲ್ಲ, ಓಡುತ್ತದೆ ಅನ್ನುವುದೇ ದಿಟವೇನೋ.

ಆದರೆ ಕೆಲವು ಸಂಗತಿಗಳು ಮಾತ್ರ ಬದಲಾಗುವುದೇ ಇಲ್ಲ. ಅದರಲ್ಲಿ ಕೆಲವು ಒಳ್ಳೆಯವು. ಕೆಲವು ಕೆಟ್ಟವು. ಅಂತಹುದರಲ್ಲಿ ಮತ್ತೊಂದು ಗಲಭೆ ನಮ್ಮೂರಿನಲ್ಲಿ ನಡೆಯುತ್ತಿದೆಯಂತೆ. ಕೇಳಿದೊಡನೆಯೇ ಮನೆಗೆ ಮಾತನಾಡಿ, ಏನೂ ತೊಂದರೆಯಿಲ್ಲ ಅನ್ನುವುದನ್ನು ತಿಳಿಯುವವರೆಗೆ ಮನಸ್ಸು ತಡೆಯಲೇ ಇಲ್ಲ. ಇಂತಹ ಘಟನೆ ಹಿಂದೆಯೂ ಆಗಿದ್ದು, ನೋಡಿದ್ದು, ಯಾವುದೇ ತಪ್ಪು ಇಲ್ಲದವರೇ ತೊಂದರೆಗೊಳಗಾಗಿದ್ದು ಎಲ್ಲ ನೋಡಿದ್ದೇನೆ. ಇವಕ್ಕೆ ಕೊನೆ ಎಲ್ಲಿ?

ಇದನ್ನು ನೋಡಿದಾಗ ನನಗೆ ಮತ್ತೆ ಹಿಂದೊಮ್ಮೆ ಮಾಡಿದ್ದ ಅನುವಾದವೇ ಮತ್ತೆ ನೆನಪಿಗೆ ಬಂದಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ೬೦೦ ವರ್ಷಗಳ ಹಿಂದೆ ಇದ್ದ ಸಮಚಿತ್ತ ಈಗ ಅರವತ್ತು ವರ್ಷಗಳಿಂದ ಮರೆಯೇ ಆಗಿಬಿಟ್ಟಿದೆಯೇ? ಇದಕ್ಕೆ ನಮ್ಮ ರಾಜಕಾರಣಿಗಳ ಕುಮ್ಮಕ್ಕು ಎಷ್ಟು? ಗೊತ್ತಿಲ್ಲ.  ಮುಂದೆ ಓದಿ »

ಬರೆಯದವರ ಮನದ ತಲ್ಲಣ!

ಬರೆಯೋಣು ಅಂತ ಹೊರಟಾಗ ಏನೂ ಮನಸ್ಸಿಗೆ ಬಾರದೆ ಮತ್ತೆ ಯಾವಾಗಲೋ ಪುಸ್ತಕ ಹಿಡಿದು ಕುಳಿತಾಗ, ಫೋನಿನಲ್ಲಿ ಮಾತನಾಡುತ್ತಿರುವಾಗ ತಟ್ಟನೆ ಹೊಳೆಯುವುದು. ಆಗ ಬರೆಯಲಾಗದೆ ನಂತರಕ್ಕಿಟ್ಟು ಕೊನೆಗೆ ಏನೂ ಬರೆಯದೇ ಇರುವುದು ಒಂದು ವಿಚಿತ್ರ ರೀತಿಯದೇ ಆದ ತಮಾಷೆ.  ಮುಂದೆ ಓದಿ »

ಒಂದು ಮಾತು

ಕಳೆದ ಕೆಲವು ದಿನಗಳಿಂದ ಈ ಕೊಟೇಶನ್ ನನ್ನ ತುಂಬ ಕಾಡತೊಡಗಿದೆ. 

ಆಸ್ಕರ್ ವೈಲ್ಡ್ ಹೇಳಿದ ಮಾತುಗಳಿವು.

Most people are other people.Their thougts are someone else`s opinions, their lives a mimicry, their passions a quotation.

ಹೆಚ್ಚೇನು ಹೇಳುವುದಿಲ್ಲ. ಇದರ ಆಲೋಚನೆಯಲ್ಲೇ ಇದ್ದೇನೆ.  

 

ಬರೆಯಲು ವಿಷಯವಿಲ್ಲೆಂಬವರಿಗೆ!

ವಿಷಯವಿಲ್ಲವೆಂದೆನ ಬೇಡಿ ಸ್ವಾಮಿ, ವಿಷಯಗಳು ಸಾಕಷ್ಟಿವೆ
ನಿಮ್ಮ ಕಾರ್ಯಬಾಹುಳ್ಯದಿಂದ ಈಗ ಪುರುಸೊತ್ತಿಲ್ಲದಿರಬಹುದು

ಕೆಲಸವೆಷ್ಟೇ ಇದ್ದರೂ ಬರೆಯಬೇಕೆಂದಾಗ ಬರೆದೇ ಬರೆಯುವಿರಿ
ಹವ್ಯಾಸಗಳೇ ಹಾಗೆ ಸ್ವಾಮಿ, ನಮ್ಮನ್ನರಿವಿಲ್ಲದೇ ಬಂಧಿಸಬಹುದು

ಕೈಯಲ್ಲಿ ಕಾಸಿಲ್ಲದಿದ್ದರೂ ಕುಡುಕ ಕುಡಿಯದೇ ಉಳಿಯಲಾರ
ಬರೆಯುವ ಗೀಳು ಅಂಟಿಸಿಕೊಂಡವ ಬರೆಯದೇ ಇರಲಾರ  ಮುಂದೆ ಓದಿ »

ಆಮಂತ್ರಣ

ನಾನು ಈ ಹಿಂದೆ ಬರೆದ ಒಂದು ಪುಟ್ಟ ಬ್ಲಾಗ್ ಪುಟಕ್ಕೆ ಪ್ರತಿಕ್ರಿಯೆ ಬರೆದು ನಿಮ್ಮ ಅನಿಸಿಕೆ ತಿಳಿಸಿದ್ದೀರಿ. ಆ ಪ್ರತಿಕ್ರಿಯೆಗಳನ್ನು ಓದುವಾಗ ಆದ ಖುಷಿ, ತದನಂತರ ಅದಕ್ಕೆ ಪ್ರತಿಕ್ರಿಯೆ ಬರೆಯಲು ಸಮಯ ಮಾಡಿಕೊಳ್ಳಲಾಗಲಿಲ್ಲ ಎಂಬ ಅಳುಕಿನ ನಡುವೆ ಕೆಲವರು ಮುಂದಿಟ್ಟ ವಿಚಾರಗಳನ್ನು ಓದುವಾಗ, ಕೇಳುವಾಗ - "ಹೌದಲ್ವ, ಈ ಬಗ್ಗೆ ಯೋಚನೆ ಕೂಡ ಮಾಡಲಿಲ್ವಲ್ಲ" ಅನಿಸಿದ್ದುಂಟು.

ಅದರಲ್ಲಿ ಒಂದು ವಿಚಾರ - ಒಬ್ಬರು ಫೋನಿನಲ್ಲಿ ತಿಳಿಸಿದ್ದು, "ಎಂಥ ಒಳ್ಳೆಯ ಚಿತ್ರ ಹರಿ. ಎಷ್ಟು ಚೆನ್ನಾಗಿ ಏನೆಲ್ಲ ಬರೆಯಬಹುದಿತ್ತು" ಎಂಬುದು. ಚಿತ್ರ ಅಷ್ಟು ಚೆನ್ನಾಗಿದೆ ಎಂದು ನನಗನಿಸಲಿಲ್ಲವಾದರೂ ಬೇರೆ ರೀತಿಯಲ್ಲಿ ಬರೆಯಬಹುದಿತ್ತು ಎನ್ನುವ ಮಾತು ಹೌದೆನಿಸಿತು. ನನಗೆ ಮಾತ್ರ ಆ ಸಮಯ ಬೇರೆ ರೀತಿ ಬರೆಯುವುದಕ್ಕೆ ಆಗುತ್ತಿರಲಿಲ್ಲ. ಈಗಲೂ ಬಹುಶಃ ಆಗಲಿಕ್ಕಿಲ್ಲ. ಆದರೆ ನಾನಲ್ಲದಿದ್ದರೂ ಬೇರೆ ಯಾರಾದರೂ ಬೇರೆ ರೀತಿ ಬರೆಯಬಹುದು ಎನಿಸಿತು.  ಮುಂದೆ ಓದಿ »

ಮುಚ್ಚಳವಿಲ್ಲದ ಪೆನ್ನು

pen.jpg

ತುಂಬ ದಿನವಾಗಿತ್ತು ಪೆನ್ನು ಹೊರ ತೆಗೆದು ಬರೆಯಲು ಕೂತು.  ಮುಂದೆ ಓದಿ »

ದೆವ್ವ..............ದೆವ್ವ....................!

ಅದು ಸುಮಾರು ಮಧ್ಯರಾತ್ರಿ ಸಮಯ.ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ.ಸಾಮಾನ್ಯವಾಗಿ ನಾನು ರೈಲಿನಲ್ಲಿ ಚೆನ್ನಾಗಿ ನಿದ್ರಿಸುತ್ತೇನೆ.ಆದರೆ ಅದೇಕೋ ಅ೦ದು ನನಗೆ ನಿದ್ದೆ ಬರುತ್ತಿರಲಿಲ್ಲ.ಸುಮ್ಮನೆ ಆಕಳಿಕೆ.ಬೆಕ್ಕಿನ೦ತೆ ಆಕಳಿಸುತಾ ಕಿಟಕಿಯಿ೦ದ ಹೊರ ನೋಡಿದೆ.ಅಮವಾಸ್ಯೆಯ ಕತ್ತಲು’ ಹೊರಗಡೆಯ ದೃಶ್ಯಗಳು ಯಾವುದೂ ಕಾಣುತ್ತಿರಲಿಲ್ಲ.ಸಮಯ ನೋಡಿದೆ.ಹನ್ನೆರಡುವರೆ.ನ  ಮುಂದೆ ಓದಿ »

Syndicate content