ಭರವಸೆ

ಭರವಸೆ

ಕವನ

ಕವಿಯಾಗಲು
ಏನು ಮಾಡಬೇಕೋ
ತಿಳಿಯದು ನನಗೆ
ಕವಿಯಾಗಬೇಕೆಂದು ಕೇಳುತ್ತಿಲ್ಲ
ಕವಿಯಾದವರು ಏನು
ಮಾಡಿದರೋ
ಅದೂ ತಿಳಿಯದು
ಶಿಕ್ಷಕನಾಗಲು ಏನು
ಮಾಡಬೇಕೆಂದು
ಗೊತ್ತಿರಲಿಲ್ಲ
ಆದರೂ ಶಿಕ್ಷಕನಾಗಿರುವೆ
ಹಾಗೆಯೇ ಕವಿಯೂ
ಆಗಬಹುದೇನೋ
ಆಸೆಗೆಲ್ಲಿಯ ಮಿತಿ....
ತಡರಾತ್ರಿಯಾದರೂ
ನಿದ್ರೆ ಬರುತ್ತಿಲ್ಲ
ಕವಿತೆ ಬರಲಿಲ್ಲವೆಂಬ
ಬೇಜಾರಿನಲ್ಲಿ
ಆದರೂ ಮಲಗುತ್ತೇನೆ
ಕನಸ್ಸಿನಲಿ ಕವಿತೆಯೊಂದು
ಬರಬಹುದೆಂಬ
ಭರವಸೆಯಿಂದ