ಈಗಿನಂತೆ 2 ಸದಸ್ಯರು ಮತ್ತು 70 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ನಾಟಕ ಚೈತ್ರ ೨೦೧೦
hamsanandi's picture
ಹಂಸಾನಂದಿ
25
May
2010
ಬ್ಲಾಗ್ ಬರಹ

ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦!

ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ...

ಪ್ರತಿಕ್ರಿಯೆಗಳು: 9
ಹಿಟ್ಸ್ : 844
ಮಳೆಗಾಲದ ಒಂದು ಸಂಜೆ - ಪ್ರಬಂಧ
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
16
Aug
2011
ಬ್ಲಾಗ್ ಬರಹ

 

 

ಮಳೆಗಾಲದ ಆ ಸಂಜೆ ಅಪೂರ್ವವಾಗಿತ್ತು. ಅಪೂರ್ವ...

ಪ್ರತಿಕ್ರಿಯೆಗಳು: 8
ಹಿಟ್ಸ್ : 444
ನನ್ನ ಸಂಪದ-ಸಂಪದ
nagarathnavinayakajoshi's picture
nagarathna vinayaka joshi
28
Jan
2011
ಲೇಖನ

ಸಂಪದಕ್ಕೆ ಸೇರಿ ಕೆಲವೇ ದಿನಗಳಾದರೂ ಸಂಪದದ ಬಗ್ಗೆ ಬರೆಯಬೇಕೆಂಬ ಅದಮ್ಯ ಅಭಿಲಾಷೆ.ಇದೀಗ ಸೇರಿದವಳು ಸಂಪದದ ಬಗ್ಗೆ ಇನ್ನೇನು ಬರೆದಾಳು ಎಂದಿರೆ?ಅದೂ ನಿಜ ಅನ್ನಿ...

ಪ್ರತಿಕ್ರಿಯೆಗಳು: 5
ಹಿಟ್ಸ್ : 645
ಪದವಿ ತರಗತಿಗಳಲ್ಲಿ ಕನ್ನಡ ಶಿಕ್ಶಣ
H.S.R.Raghavendra Rao's picture
30
Jan
2007
ಪುಟ

ಕನ್ನಡವನ್ನು ಕಲಿತವರಿಗೆ, ಕಲಿಸುವವರಿಗೆ ಮತ್ತು ಇತರ ಆಸಕ್ತರಾದವರಿಗೆಂದು ಈ ಲೇಖನವನ್ನು ಇಲ್ಲಿ ಹಾಕಿದ್ದೇನೆ. ಪ್ರತಿಕ್ರಿಯೆಗಳಿಗೆ ಸ್ವಾಗತ.

...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,574
ಮಳೆ ಬಂದಾಗ ಮಳೆಬಿಲ್ಲೂ ಇರಲಿ
aananda's picture
ಆನಂದ
11
Nov
2009
ಪುಟ

ಯುಕಿ ಉರುಶಿಬಾರ ಬರೆದಿರುವ...

ಪ್ರತಿಕ್ರಿಯೆಗಳು: 10
ಹಿಟ್ಸ್ : 1,067
ವೃತ್ತಿ ಜೀವನದಲ್ಲಿ ಒಂದು ದಿನ ...
bhalle's picture
ಶ್ರೀನಾಥ್ ಭಲ್ಲೆ
02
Dec
2009
ಪುಟ

 

ಬೆಳಿಗ್ಗೆ ಅಲಾರಂ ಹೊಡೆದುಕೊಳ್ಳಲಾರಂಭಿಸಿತು. ಅದರ ತಲೆ ಮೇಲೆ ಕುಟ್ಟಿ ಸ್ವಲ್ಪ ಹೊತ್ತು ಹಾಗೇ ಮಿಸುಕಾಡಿ, ಏಳಲು ಮನಸ್ಸಿಲ್ಲದಿದ್ದರೂ ಕೊನೆಗೂ ಎದ್ದ ಪ್ರತಾಪ ಸಿಂಹ...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,376
ಪಿಲಾರು ಖಾನ ಮತ್ತು ಅಜ್ಞಾತ ಕೆರೆ [ನನ್ನೂರು ಮತ್ತು ನಾಸ್ಟಾಲ್ಜಿಯಾ ಭಾಗ ೩]
santhosh_87's picture
ಸಂತೋಷ್ ಎನ್. ಆಚಾರ್ಯ
19
Jul
2010
ಬ್ಲಾಗ್ ಬರಹ


ಎರಡನೇ ಕ್ಲಾಸಿನಿಂದಲೂ ಶಾಲೆಗೆ ಹೋಗುತ್ತಿರುವಾಗ ಪಿಲಾರುಖಾನದ ಒಳಗಿನಿಂದ ಬಸ್ಸು ಹೊರಟಾಗ ಆಗುವ ಸುಂದರ ಅನುಭವ ಈಗಲೂ ಊರಿಗೆ ಹೋದಾಗಲೆಲ್ಲಾ ಕೆಲವೊಮ್ಮೆ ಆಗುವುದುಂಟು. ಅದೂ...

ಪ್ರತಿಕ್ರಿಯೆಗಳು: 11
ಹಿಟ್ಸ್ : 959
" ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ " ಚಿಟ್ಟಾಣಿ ರಾಮಚಂದ್ರ ಹೆಗಡೆ
sada samartha's picture
ಸದಾನಂದ
24
Jan
2011
ಲೇಖನ

ಸಾವಿರಾರು ಸನ್ಮಾನಗಳ ಸರದಾರ

" ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ "...

ಪ್ರತಿಕ್ರಿಯೆಗಳು: 14
ಹಿಟ್ಸ್ : 675
ಮರೆಯಾದ 'ಎವರ್ ಗ್ರೀನ್ ಹೀರೋ' ದೇವ ಆನಂದ
H A Patil's picture
ಹನುಮಂತ ಪಾಟೀಲ
04
Dec
2011
ಲೇಖನ

     2011 ರ ಡಿಸೆಂಬರ್ 4 ರ ಬೆಳಗು ವಿಷಾದದ ರಾಗವೊಂದನ್ನು ಹೊತ್ತು ತಂದ ಬೆಳಗು ಆಯಿತು. ಮಾಮೂಲಿನಂತೆ ಇಂದು ಬೆಳಿಗ್ಗೆ ಟೆಲಿವಿಜನ್ ಆನ್ ಮಾಡಿದಾಗ ಚಾನಲ್...

ಪ್ರತಿಕ್ರಿಯೆಗಳು: 8
ಹಿಟ್ಸ್ : 133
ಬದುಕಿದ್ದರೆ ಎಂಭತ್ತು ವಸಂತಗಳನ್ನು ಪೂರೈಸಲಿದ್ದ ಶಮ್ಮಿ
H A Patil's picture
ಹನುಮಂತ ಪಾಟೀಲ
22
Oct
2011
ಲೇಖನ

    ಅಕ್ಟೋಬರ್ ೨೧ ಅನೇಕ ಐತಿಹಾಸಿಕ ಘಟನೆಗಳನ್ನು ತನ್ನ ಒಡಲಾಳದಲ್ಲಿ ಇರಿಸಿ ಕೊಂಡಿದೆ. ಈ ದಿನದಂದು ೧೭೭೨ ರಂದು ಇಂಗ್ಲೀಷ್ ಕವಿ ಸ್ಯಾಮೆವೆಲ್...

ಪ್ರತಿಕ್ರಿಯೆಗಳು: 10
ಹಿಟ್ಸ್ : 122

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಭೀಮೇಶ್ವರದ ತುಪ್ಪದ ಕೊಡ

ಭೀಮೇಶ್ವರದ ತುಪ್ಪದ ಕೊಡ

ಭೀಮೇಶ್ವರದ ತುಪ್ಪದ ಕೊಡ :
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮರಗುಡಿ ಸೀಮಾ ವ್ಯಾಪ್ತಿಯ, ಕಾರ್ಗಲ್ - ಭಟ್ಕಳ ಮಾರ್ಗದ ಶರಾವತಿ ಅಭಯಾರಣ್ಯ ದಟ್ಟ ಕಾನನದ ನಡುವೆ ಅವಿತುಕೊಂಡಿದ್ದ ಭೀಮಲಿಂಗೇಶ್ವರ ದೇವಾಲಯ ಇತ್ತೀಚೆಗೆ ನಾಡಿನಾದ್ಯಂತ ತನ್ನನ್ನು ತೆರೆದುಕೊಳ್ಳುತ್ತಿದೆ.
ಒಂದು ಕಾಲದಲ್ಲಿ ಅಂದರೆ ಸುಮಾರು 15ವರ್ಷಗಳ ಹಿಂದಿನ ವರೆಗೂ ಈ ದೇವಾಲಯ ನಾಡಿಗೆ ಅಜ್ಷಾತವಾಗಿಯೆ ಇದ್ದು ಸುತ್ತ ಮುತ್ತಲಿನ ಜನರಿಗೆ ಮಾತ್ರಾ ಚಿರಪರಿಚಿತವಾಗಿತ್ತು. ಮರಗುಡಿ ಸೀಮೆಯ ಜನರೆಲ್ಲರ ಆರಾಧ್ಯ ದೈವವಾದ ಭೀಮಲಿಂಗೇಶ್ವರನಿಗೆ ವರ್ಷದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ಮಾತ್ರಾ ಪೂಜೆ ನಡೆಯುತ್ತಿತ್ತು. ಶಿವರಾತ್ರಿ ಸಂದರ್ಭದಲ್ಲಿ ಪೂಜೆ, ಯಕ್ಷಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದವು. ಈಗ ನಿತ್ಯವೂ ಪೂಜೆ ನಡೆಯುತ್ತದೆ. ಖಾಯಂ ಅರ್ಚಕರಿದ್ದಾರೆ, ಭಕ್ತಾದಿಗಳೂ ಇದ್ದಾರೆ.


ಇಲ್ಲಿ ಲಕ್ಷ್ಮಣನ ಬಾಣದಿಂದ ಉದ್ಭವಿಸಿದೆ ಎನ್ನಲಾದ ಸರಳ ಹೊಳೆ ಇದೆ. ತಾಟಕಾ ವನ ಇದೆ ಹೀಗೆ ರಾಮಾಯಣಕ್ಕೆ ತಳುಕು ಹಾಕುವ ಅನೇಕ ವೈಶಿಷ್ಟ್ಯಗಳೂ, ಮಹಾಭಾರತಕ್ಕೆ ತಳುಕು ಹಾಕುವ ಪಾಂಡವ ಸಂಬಂಧಿ ಕಥೆಗಳೂ ಇಲ್ಲಿ ಹರಿದಾಡುತ್ತವೆ. ಹಾಗೆಯೇ ಈ ಬಗ್ಗೆ ಅನೇಕ ಲೇಖನಗಳೂ ಬಂದಿವೆ.


ಆದರೆ ಇದೆಲ್ಲಕ್ಕೂ ಮಿಗಿಲಾಗಿ ನಾವು ಚಿಕ್ಕವರಿದ್ದಾಗಲೂ
(ಅಂದರೆ ಸುಮಾರು 50ವರ್ವಕ್ಕೂ ಹಿಂದಿನಿಂದ) ಕೇಳಿಸಿಕೊಂಡ ವೈಶಿಷ್ಯ್ಯವಿದೆ. ಅದೇ ಭೀಮೇಶ್ವರದ ತುಪ್ಪದ ಕೊಡ! ಈ ಹಿಂದೆ ಭೀಮೇಶ್ವರಕ್ಕೆ ಹೋಗಿದ್ದರೂ ಈ ಬಗ್ಗೆ ನನಗೆ ಜ್ಞಾಪಕವಿಲ್ಲದೇ ಗಮನ ಹರಿಸಿರಲಿಲ್ಲ. ಈ ಬಾರಿ (15-1-2011) ಅದೇಕೋ ದೇವಾಲಯದ ಒಳಗೆ ಪ್ರವೇಶಿಸಿದಾಗ ಅದು ನೆನಪಾಗಿ ಅದನ್ನು ಹುಡುಕಿದಾಗ ಅದು ತನ್ನಷ್ಟಕ್ಕೆ ತಾನು ಒಂದು ಮೂಲೆಯಲ್ಲಿ ಕಲ್ಲಿನ ಮೇಲೆ ಕುಳಿತಿತ್ತು. ಅದನ್ನು ನನ್ನ ಕ್ಯಾಮರಾದಲ್ಲಿ ಕ್ಲಿಕ್ಕಿಸಿ ಇದರೊಡನೆ ಇಟ್ಟಿದ್ದೇನೆ.


ಈ ತುಪ್ಪದ ಕೊಡ ನಾನು ಕೇಳಿದ್ದಕ್ಕಿಂತಲೂ ಹಿಂದಿನಿಂದಲೂ ಸಂರಕ್ಷಿಸಿಕೊಂಡು ಬರಲಾಗಿದೆ. ಅಷ್ಟು ಹಿಂದಿನಿಂದಲೂ (ಎಷ್ಟು ಎಂದು ನನಗೂ ಗೊತ್ತಿಲ್ಲ - ನನಗೆ ಹೇಳಿದವರಿಗೂ ಗೊತ್ತಿಲ್ಲ) ಇರುವ ಇದರಲ್ಲಿರುವ ತುಪ್ಪ ಜನ ಜಾನುವಾರುಗಳಿಗೆ ನೀಡುವ ನಾಟಿ ವೈದ್ಯದಲ್ಲಿ ಬಳಕೆಯಾಗುತ್ತಿದೆ. ಎನ್ನುವುದೇ ಇದರ ವೈಶಿಷ್ಟ್ಯ. ಸುತ್ತಮುತ್ತಲಿನ ಜನ - ಜಾನುವಾರುಗಳು ಕೈ - ಕಾಲುಗಳ ಮೂಳೆ ಮುರಿದುಕೊಂಡಾಗ ಅದರ ಚಿಕಿತ್ಸೆಗಾಗಿ ನೀಡುವ ನಾಟಿ ವೈದ್ಯದಲ್ಲಿ ಈ ತುಪ್ಪವೇ ಶ್ರೇಷ್ಟ ಎಂದು ಹೇಳುತ್ತಾರೆ.
ಔಷಧಕ್ಕಾಗಿ ಈ ತುಪ್ಪದ ಅವಶ್ಯಕತೆ ಇರುವವರು ತಮಗೆ ಬೇಕಾಗಬಹುದಾದಷ್ಟು ಪ್ರಮಾಣದ ಆಕಳ ಹಾಲಿನ ತುಪ್ಪವನ್ನು ಕೊಂಡೊಯ್ದು ಅದೇ ಪ್ರಮಾಣದ ತುಪ್ಪವನ್ನು ಕೊಡದಿಂದ ತೆಗೆದುಕೊಂಡು ತಾವು ತಂದಿರುವ ಆಕಳ ಹಾಲಿನ ತುಪ್ಪವನ್ನು ಆ ಕೊಡಕ್ಕೆ ಸುರಿದು ಬರುವುದು ವಾಡಿಕೆ. ಹೀಗೆ ಅನೇಕ ವರ್ಷಗಳ ಹಳೆಯ ತುಪ್ಪವಾಗಿ ಮಾರ್ಪಟ್ಟ ಈ ತುಪ್ಪವನ್ನು ವನಸ್ಪತಿಯಿಂದ ತಯಾರಿಸಿದ ಔಷಧಕ್ಕೆ ಸೇರಿಸಿ ಮಿಲಾಕತ್ ಮಾಡಿ ಮೂಳೆ ಮುರಿತಕ್ಕೊಳಗಾದ ಜನ-ಜಾನುವಾರುಗಳಿಗೆ ತಿನ್ನಿಸುವ ಪದ್ಧತಿ ಇಂದಿಗೂ ಈ ಪ್ರದೇಶದಲ್ಲಿ ಇದೆ.


ಜನರೂ ಸಹ ಇಂದಿನ ಆಸ್ಪತ್ರೆ ಔಷಧಕ್ಕೆ ಮೊರೆ ಹೋಗಿದ್ದರೂ ಸಹ ಅದಕ್ಕೆ ಸಮಾನಾಂತರವಾಗಿ ಈ ಔಷಧ ಮಾಡುವುದರಿಂದ ಶೀಘ್ರವಾಗಿ ಗುಣ ಹೊಂದಬಹುದೆಂದು ಹೇಳುತ್ತಾರೆ
ಈ ಬಾರಿ ಭೀಮೇಶ್ವರದಲ್ಲಿ ಸ್ಥಳೀಯ ಆಡಳಿತ ಮಂಡಳಿಯವರು 2011ರ ಮಾರ್ಚ್ ತಿಂಗಳ 2ನೇ ತಾರೀಖಿನಿಂದ 8ದಿನಗಳ ಕಾಲ ಸಾಂಗ ಅತಿರುದ್ರ ಮಹಾಯಾಗವನ್ನೂ ಹಮ್ಮಿಕೊಂಡಿರುತ್ತಾರೆ. ಆಸಕ್ತರೆಲ್ಲರಿಗೂ ಆಹ್ವಾನವಿತ್ತಿದ್ದಾರೆ. ತನು-ಮನ- ಧನದ ಸಹಕಾರ ಕೋರಿದ್ದಾರೆ.

No votes yet
783 ಹಿಟ್ಸ್

ಪ್ರತಿಕ್ರಿಯೆಗಳು

kamalap09's picture
18
Jan
2011
10:44

ನಾವು ಎರಡು ಬಾರಿ ಭೀಮೇಶ್ವರಕ್ಕೆ ಹೋಗಿದ್ದೇವೆ. ಮೆಟ್ಟಲೇರಿ ದೇವಾಲಯದವರೆಗೂ ಹೋಗಿ ಭಟ್ರು ಇರದ ಕಾರಣ (ದೇವಸ್ಥಾನದ ಬಾಗಿಲು ತೆಗೆಯದೆ), ಹಾಗೆಯೇ ಹಿಂದಿರುಗಿದ್ದೇವೆ.
ಮಾಹಿತಿಗೆ ಧನ್ಯವಾದಗಳು.

csomsekraiah's picture
18
Jan
2011
2:22

ಹಳೆಯ ತುಪ್ಪ ಅಪರೂಪವಾದುದು, ಶರೀರದ ಮೇಲಣ ಗಾಯಗಳಿಗೆ -ಅದು ಎಷ್ಟೇ ಹಳೆಯದಾಗಿರಲಿ- ಬಹುಬೇಗ ಗಾಯವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಅದರ ಜೊತೆಗೆ ಕೆಲವು ಗಿಡಮೂಲಿಕೆಗಳು ಸೇರಿದರಂತೂ ಉದಾ: ನಂಜುನಾರಾಯಣಿಸೊಪ್ಪು , ವಾಸಿಯಾಗದ ಗಾಯಗಳೇ ಇಲ್ಲ . ಆದರೆ ಇದನ್ನು ಮನುಷ್ಯರಾಗಲೀ ಜಾನುವಾರುಗಳಾಗಲೀ ಹೊಟ್ಟೆಗೆ ತೆಗೆದುಕೊಳ್ಳುವಂತಿಲ್ಲ , ಏಕೆಂದರೆ ಇದು ಶರೀರಕ್ಕೆ ವಿಷವಾಗಿ ಪರಿಣಮಿಸುತ್ತದೆ . ಇದು ಕೇವಲ ಶರೀರದ ಹೊರ ಉಪಯೋಗಕ್ಕೆ ಮಾತ್ರ , ಈ ಬಗ್ಗೆ ಎಚ್ಚರವಿರುವುದು ಒಳ್ಳೆಯದು . ಹಳೆಯ ತುಪ್ಪದ ಜೊತೆಗೆ ಹೊಸದನ್ನು ಸೇರಿಸಿದರೂ ಅದಕ್ಕೆ ಹಳೆಯದರ ಗುಣವೇ ಬರುತ್ತದೆ .